ಪತಿ ಅಕ್ಕನನ್ನೇ ಸವತಿ ಮಾಡಿ, ಕೋರ್ಟನ್ನೇ ಯಾಮಾರಿಸಿ ಡಿವೋರ್ಸ್​ ಪಡೆದಳು! ಕಿತಾಪತಿ ಪತ್ನಿ ರೋಚಕ ಸ್ಟೋರಿ

Published : Apr 27, 2026, 12:18 PM IST
Family Court

ಸಾರಾಂಶ

ವಿಚ್ಛೇದನ ಪಡೆಯಲು, ಪತ್ನಿಯೊಬ್ಬಳು ತನ್ನ ಗಂಡನ ಸ್ವಂತ ಅಕ್ಕನೊಂದಿಗಿನ ಫೋಟೋವನ್ನು ನ್ಯಾಯಾಲಯಕ್ಕೆ ನೀಡಿ, ಆಕೆಯೇ ತನ್ನ ಗಂಡನ ಎರಡನೇ ಪತ್ನಿ ಎಂದು ಸುಳ್ಳು ಹೇಳಿದ್ದಾಳೆ. ಈ ಆಧಾರದ ಮೇಲೆ ನ್ಯಾಯಾಲಯವು ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿದೆ. ಈಗ ಪತಿ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ.

ಡಿವೋರ್ಸ್​ ಪಡೆಯುವುದಕ್ಕಾಗಿ ಕೋರ್ಟ್​ಗೆ ಏನಾದರೂ ಒಂದು ಸೂಕ್ತ ಕಾರಣ ಕೊಡಲೇಬೇಕು. ಆದರೆ ಪತಿಯ ವಿರುದ್ಧ ಕೊಡಲು ಏನೂ ಕಾರಣವಿಲ್ಲವೆಂದು ಇಲ್ಲೊಬ್ಬ ಪತ್ನಿ, ಖತರ್ನಾಕ್​​ ಐಡಿಯಾ ಮಾಡಿದ್ದಾಳೆ. ತನ್ನ ಗಂಡ ಮತ್ತು ಆತನ ಅಕ್ಕ ಒಟ್ಟಿಗೇ ಇರುವ ಫೋಟೋ ಕೋರ್ಟ್​ಗೆ ತೋರಿಸಿ, ಅವರಿಬ್ಬರು ಗಂಡ-ಹೆಂಡತಿ ಎಂದು ಬಿಂಬಿಸಿ, ತನಗೆ ಗೊತ್ತಲ್ಲದೇ ತನ್ನ ಗಂಡ ಮತ್ತೊಂದು ಮದುವೆಯಾದ ಎಂದು ಸುಳ್ಳು ಹೇಳಿ ಈ ಹೆಂಡ್ತಿ ಡಿವೋರ್ಸ್ ಪಡೆದುಕೊಂಡಿದ್ದಾಳೆ. ವಿಚ್ಛೇದನ ಪ್ರಕರಣದಲ್ಲಿ ಎರಡೂ ಕಡೆಗಳ ವಾದವನ್ನು ಆಲಿಸಿದ ಬಳಿಕ ತೀರ್ಪು ಕೊಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಪತ್ನಿಯ ಮಾತನ್ನಷ್ಟೇ ಆಲಿಸಿರುವ ಕೋರ್ಟ್​ ಏಕಪಕ್ಷೀಯವಾಗಿ, ಡಿವೋರ್ಸ್ ಕೊಟ್ಟುಬಿಟ್ಟಿದೆ!

ಹೀಗೆ ಮಾಡೋದಾ ಪತ್ನಿ?

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಈ ಘಟನೆ ನಡೆದಿದೆ. ಅಲ್ಲಿ 40 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಸ್ವಂತ ಅಕ್ಕನನ್ನೇ ಗಂಡನ ಎರಡನೆಯ ಹೆಂಡತಿ ಎಂದು ದಾಖಲೆ ತೋರಿಸಿದ್ದಾಳೆ ಕೋರ್ಟ್​ಗೆ. ಅವರಿಬ್ಬರೂ ಒಟ್ಟಿಗೇ ಇರುವ ಫೋಟೋ ತೋರಿಸಿ, ತನ್ನ ಗಂಡ ನನಗೆ ಮೋಸ ಮಾಡಿ ಮತ್ತೊಂದು ಮದುವೆಯಾಗಿದ್ದಾನೆ. ಆದ್ದರಿಂದ ದೌರ್ಜನ್ಯದ ಆಧಾರದ ಮೇಲೆ ತನಗೆ ಡಿವೋರ್ಸ್​ ಬೇಕು ಎಂದು ಕೇಳಿಕೊಂಡಿದ್ದಾಳೆ. ಆ ಕೌಟುಂಬಿಕ ಕೋರ್ಟ್​ ನ್ಯಾಯಾಧೀಶರು, ಇನ್ನೊಂದು ಕಡೆಯ ವಾದವನ್ನು ಆಲಿಸಲೇ ಇಲ್ಲ. ಹೆಣ್ಣೊಬ್ಬಳಿಗೆ ಅನ್ಯಾಯ ಆಗಿದೆ ಎಂದು ಭಾವಿಸಿ ಡಿವೋರ್ಸ್​ ಕೊಟ್ಟೇ ಬಿಟ್ಟಿದ್ದಾರೆ. ತಮಗೆ ಡಿವೋರ್ಸ್​ ಆಗಿರು ದಾಖಲೆ ಪತ್ನಿ ತೋರಿಸಿದಾಗ ಆತ ಕಕ್ಕಾಬಿಕ್ಕಿಯಾಗಿದ್ದಾನೆ.

ಅಷ್ಟಕ್ಕೂ ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಇವರ ಮದುವೆ 1998 ರಲ್ಲಿ ನಡೆದಿದೆ. ಮಾರ್ಕೆಟಿಂಗ್ ಕಂಪೆನಿಯಲ್ಲಿ ಕಾರ್ಯನಿರ್ವಾಹಕರಾಗಿರುವ ಆಕೆ ಪತಿ ಆಗಾಗ್ಗೆ ಕೆಲಸದ ನಿಮಿತ್ತ ದೂರ ಹೋಗುತ್ತಿದ್ದರು. ಇದು ಇಬ್ಬರ ನಡುವೆ ಹೆಚ್ಚುತ್ತಿರುವ ಘರ್ಷಣೆಗೆ ಕಾರಣವಾಯಿತು, ಪದೇ ಪದೇ ಜಗಳ ಆಗುತ್ತಲೇ ಇತ್ತು. ಇದೇ ಕಾರಣಕ್ಕೆ ಪತ್ನಿ 2015 ರಲ್ಲಿ ಮನೆ ಬಿಟ್ಟು ಬಂದು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಾಳೆ. ಯಾವುದೇ ಬೆಲೆ ತೆತ್ತಾದರೂ ತನ್ನ ಪತಿಯಿಂದ ವಿಚ್ಛೇದನವನ್ನು ಬಯಸಿದ್ದಳು ಆಕೆ. ಆದರೆ ತನಗೆ ಡಿವೋರ್ಸ್​ ಕೊಟ್ಟು ಆಕೆ ಖುಷಿಯಿಂದ ಇರುವುದು ಈ ಪತಿಮಹಾಶಯನಿಗೆ ನೋಡಲು ಆಗಲಿಲ್ಲವೋ ಏನೋ. ಆದ್ದರಿಂದ ದೂರ ಇದ್ದರೂ ಪರವಾಗಿಲ್ಲ, ಡಿವೋರ್ಸ್​ ಕೊಡಲ್ಲ ಎಂದು ಪಟ್ಟು ಹಿಡಿದಿದ್ದ. ಆದ್ದರಿಂದ ಪತಿಯ ವಿರುದ್ಧ ಏನಾದರೂ ಮಾಡಿ ಸಾಕ್ಷಿ ಸಂಗ್ರಹಿಸಿ ಡಿವೋರ್ಸ್ ಕೊಡಲು ಮುಂದಾಗಿದ್ದಳು ಈ ಪತಿ.

ಯಾರ ಐಡಿಯಾನೋ ಗೊತ್ತಿಲ್ಲ!

ಅವಳಿಗೆ ಅದ್ಯಾವ ಲಾಯರ್​​ ಈ ಐಡಿಯಾ ಕೊಟ್ಟರೋ ಅಥ್ವಾ ಈಕೆನೇ ಈ ಐಡಿಯಾ ಮಾಡಿದಳೋ ಗೊತ್ತಿಲ್ಲ. 2021 ರಲ್ಲಿ, ಮಹಿಳೆ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದಳು, ತನ್ನ ಪತಿ ಮರುಮದುವೆಯಾಗಿದ್ದಾನೆ ಎಂದು ಹೇಳಿ ಆತ ಅವನ ಅಕ್ಕನ ಜೊತೆ ಇರುವ ಫೋಟೋ ಹಾಜರುಪಡಿಸಿದಳು. ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವಾಗ ತನ್ನ ಪತಿ ತನ್ನ ಸಹೋದರಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ನಿಂತಿರುವ ಫೋಟೋವನ್ನು ಸಾಕ್ಷಿಯಾಗಿ ಪ್ರಸ್ತುತಪಡಿಸಿದಳು. ಫೋಟೋದಲ್ಲಿರುವ ತನ್ನ ಅತ್ತಿಗೆ ಅವನ ಅಕ್ಕ ಹೆಂಡತಿ ಎಂದು ಅವಳು ಹೇಳಿಕೊಂಡಳು. ಡಿವೋರ್ಸ್​ ಕೂಡ ಸಿಕ್ಕಿತು.

ಪತ್ನಿಗೆ ಕಾದಿದೆ ಗ್ರಹಚಾರ

ತನ್ನ ಅನುಪಸ್ಥಿತಿಯಲ್ಲಿ ಡಿವೋರ್ಸ್​ ಪಡೆದದ್ದು ಕೇಳಿ ಗಂಡ ಹೌಹಾರಿಹೋದ. ಅದು ಹೇಗೆ ಸಾಧ್ಯ ಎಂದು ದಾಖಲೆ ಪರಿಶೀಲಿಸಿದಾಗ ಸತ್ಯ ತಿಳಿದಿದೆ. ಆದ್ದರಿಂದ ಜಪ್ಪಯ್ಯ ಎಂದರೂ ನಾನು ಡಿವೋರ್ಸ್​ ಕೊಡಲ್ಲ ಎಂದಿರೋ ಗಂಡ, ಮೋಸ ಮಾಡಿರೋ ಪತ್ನಿಗೆ ಬುದ್ಧಿ ಕಲಿಸಲು ಈಗ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಕೋರ್ಟ್​ಗೇ ಮೋಸ ಮಾಡಿರುವುದು ಅಪರಾಧವೂ ಆಗುತ್ತದೆ. ಆದ್ದರಿಂದ ಪತ್ನಿಗೆ ಇನ್ನೇನು ಗ್ರಹಚಾರ ಕಾದಿದ್ಯೋ ನೋಡಬೇಕಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Aarti Fierce Response: ಜಯಂ ರವಿ ಕಣ್ಣೀರಿಗೆ ಆರತಿಯ ಖಾರವಾದ ಪೊಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ಖಡಕ್ ವಾರ್ನಿಂಗ್!
ವರ್ಜಿನ್ ಹೆಣ್ಣುಮಗಳ ಮೌನವೇ ಮದುವೆಗೆ ಸಮ್ಮತಿ, ಅಫ್ಘಾನ್‌ನಲ್ಲಿ ಬಾಲ್ಯ ವಿವಾಹಕ್ಕೆ ಕಾನೂನು ಜಾರಿ