58 ಗಂಟೆ ಚುಂಬಿಸಿ ಗಿನ್ನೆಸ್‌ ದಾಖಲೆ ಮಾಡಿದ ಜೋಡಿ ಈಗ ಗುಡ್‌ಬೈ!

Published : Feb 28, 2025, 09:51 PM ISTUpdated : Mar 01, 2025, 06:38 AM IST
58 ಗಂಟೆ ಚುಂಬಿಸಿ ಗಿನ್ನೆಸ್‌ ದಾಖಲೆ ಮಾಡಿದ ಜೋಡಿ ಈಗ ಗುಡ್‌ಬೈ!

ಸಾರಾಂಶ

ಥಾಯ್ಲೆಂಡ್‌ನ ಗಿನ್ನೆಸ್ ದಾಖಲೆ ಬರೆದ ಚುಂಬನ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ. 58 ಗಂಟೆ 35 ನಿಮಿಷಗಳ ಕಾಲ ಚುಂಬಿಸಿ ದಾಖಲೆ ಬರೆದಿದ್ದ ಈ ಜೋಡಿಯ ಕಥೆ ಕುತೂಹಲಕಾರಿಯಾಗಿದೆ.

ಒಂದು ಗಂಡು-  ಹೆಣ್ಣು ಹೆಚ್ಚು ಹೊತ್ತು ಅಂದರೆ ಎಷ್ಟು ಹೊತ್ತು ಚುಂಬಿಸುತ್ತಾ ಇರಬಹುದು? ಹತ್ತು ನಿಮಿಷ, ಇಪ್ಪತ್ತು ನಿಮಿಷ? ಊಹೂಂ, ಥಾಯ್ಲೆಂಡ್‌ನ ಒಂದು ಜೋಡಿ ಸುದೀರ್ಘ 58 ಗಂಟೆ 35 ನಿಮಿಷಗಳ ಕಾಲ ತಮ್ಮ ಲಿಪ್‌ಗಳನ್ನು ಲಾಕ್‌ ಮಾಡಿಕೊಂಡು ಗಿನ್ನೆಸ್‌ ದಾಖಲೆ ಬರೆದಿದ್ದರು. ಇದು ಹಳೇ ಸುದ್ದಿ. ಹೊಸ ಸುದ್ದಿ ಏನಪ್ಪಾ ಅಂದರೆ, ಅದೇ ಜೋಡಿ ತಮ್ಮ ದಾಂಪತ್ಯಕ್ಕೆ ಈಗ ಗುಡ್‌ಬೈ ಹೇಳುತ್ತಿದೆ! ಇದೊಂದು ವಿಪರ್ಯಾಸ ಎಂದೇ ಹೇಳಬಹುದು. ಹೇಗಿದ್ರು ಹೇಗಾದ್ರು ಗೊತ್ತಾ ಅಂತನೂ ಹೇಳಬಹುದು. ಆದ್ರೆ ಏನಿವರ ಕಥೆ?

ಒಂದು ಕಾಲದಲ್ಲಿ ಅತಿ ಸುದೀರ್ಘ ಚುಂಬನಕ್ಕಾಗಿ ಗಿನ್ನೆಸ್ ದಾಖಲೆ ಬರೆದಿದ್ದ ಜೋಡಿ ಈಗ ಬೇರ್ಪಡುತ್ತಿರೋದು ಖಚಿತವಾಗಿದೆ. ಥಾಯ್ಲೆಂಡ್‌ನ ಎಕ್ಕಾಚಾಯ್ ತಿರನಾರತ್ ಮತ್ತು ಅವನ ಹೆಂಡತಿ ಲಕ್ಷನಾ ಅವರು 2013ರಲ್ಲಿ 58 ಗಂಟೆ 35 ನಿಮಿಷಗಳ ಕಾಲ ತಮ್ಮ ಲಿಪ್‌ಗಳನ್ನು ಲಾಕ್ ಮಾಡುವ ಮೂಲಕ ದಾಖಲೆಯನ್ನು ಸ್ಥಾಪಿಸಿದರು. ತಮ್ಮ ಈ ಸಾಧನೆಯ ಬಗ್ಗೆ ಜೋಡಿ ಬಹಳ ಹೆಮ್ಮೆ ಪಟ್ಟುಕೊಂಡಿತ್ತು. ಗಾಢವಾದ ಬಾಂಧವ್ಯ ಇಲ್ಲದೆ ಇಷ್ಟೊಂದು ಹೊತ್ತು ಚುಂಬಿಸುತ್ತಾ ಇರೋದು ಕಷ್ಟ. 

ಇವರ ಚುಂಬನ ಸ್ಪರ್ಧೆಯ ಬಗ್ಗೆ ಸ್ವಾರಸ್ಯಕರ ಸಂಗತಿಗಳಿವೆ. ಅದೊಂದು ಸ್ಪರ್ಧೆಯಾಗಿತ್ತು. ಅದಕ್ಕೆ ಕಟ್ಟುನಿಟ್ಟಾದ ಸ್ಪರ್ಧೆಯ ನಿಯಮಗಳು ಇದ್ದವು. ಇದರಲ್ಲಿ ಪಾಲ್ಗೊಂಡವರು ಸ್ನಾನದ ಸಮಯದಲ್ಲಿಯೂ ಕಿಸ್ ಅನ್ನು ನಿರ್ವಹಿಸಬೇಕಾಗಿತ್ತು ಮತ್ತು ಅವರ ಬಾಯಿಯ ನಡುವೆ ನೀರನ್ನು ಹಾಯಿಸಬೇಕಾಗಿತ್ತು! ಊಟ ಮಾಡುವಂತಿರಲಿಲ್ಲ, ಬಾಯಿಗೆ ಬಿಡುವು ಕೊಡುವಂತಿರಲಿಲ್ಲವಲ್ಲ! 

ಇದಕ್ಕೂ ಮುನ್ನ ಈ ಜೋಡಿ ಇನ್ನೊಂದು ಅಂಥದೇ ದಾಖಲೆ ಮಾಡಿತ್ತು. ಈ ಜೋಡಿ ಹಿಂದೆ 2011ರಲ್ಲಿ 46 ಗಂಟೆ 24 ನಿಮಿಷಗಳ ಕಾಲ ಚುಂಬನ ಮಾಡಿ ಆ ಸ್ಪರ್ಧೆಯಲ್ಲಿ ಗೆದ್ದಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಪ್ರೇಮಿಗಳ ದಿನ ನಡೆದ ಈ ಇವೆಂಟ್‌ನಲ್ಲಿ ಭಾಗವಹಿಸಲು ಅವರು ಆರಂಭದಲ್ಲಿ ಯೋಚಿಸಿರಲಿಲ್ಲ. ಲಕ್ಷಣಾ ಆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು. ಎಕ್ಕಚೈ ವಿಶ್ರಾಂತಿಗಾಗಿ ಅವಳನ್ನು ರಜೆಯ ಮೇಲೆ ಕರೆದುಕೊಂಡು ಹೋಗಲು ಬಯಸಿದ್ದ. ಆದರೂ ಸ್ಪರ್ಧೆಯನ್ನು ನೋಡಿ ಕುತೂಹಲದಿಂದ ಭಾಗವಹಿಸಿದರು. ಸಾವಿರಾರು ಡಾಲರ್‌ ಮೌಲ್ಯದ ವಜ್ರದ ಉಂಗುರವನ್ನು ಗೆದ್ದರು. 

ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಎಕ್ಕಾಚೈ ತಮ್ಮ ಅನುಭವ ಹಂಚಿಕೊಂಡಿದ್ದರು. "ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಇದು ಜೀವಮಾನದಲ್ಲಿ ಒಮ್ಮೆ ಪಡೆಯುವ ಅನುಭವ. ನಾವು ಸುದೀರ್ಘ ಕಾಲ ಒಟ್ಟಿಗೆ ಕಳೆದಿದ್ದೇವೆ ಮತ್ತು ನಾವು ಒಟ್ಟಿಗೆ ಸಾಧಿಸಿದ ಒಳ್ಳೆಯ ನೆನಪುಗಳನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ" ಎಂದರು. ಡೈಲಿ ಮೇಲ್ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಡೈವೋರ್ಸ್‌ನ ಸುದ್ದಿಯನ್ನು ಹಂಚಿಕೊಂಡಿದೆ. ನೆಟಿಜನ್‌ಗಳಿಗೆ ಸಹಜವಾಗಿಯೇ ಶಾಕ್‌ ಆಗಿದೆ. "ಸುದೀರ್ಘ ಮುತ್ತು ಕೂಡ ಅವರನ್ನು ಶಾಶ್ವತವಾಗಿ ಒಟ್ಟಿಗೆ ಇಡಲು ಸಾಧ್ಯವಾಗಲಿಲ್ಲ!" ಅತ ಒಬ್ಬ ಶಾಕ್‌ ವ್ಯಕ್ತಪಡಿಸಿದ್ದಾನೆ. ಮತ್ತೊಬ್ಬ "58 ಗಂಟೆಗಳು??? ಹಾಗಾದರೆ ಅವರು ಎರಡು ದಿನ ನಿದ್ರೆ ಮಾಡಲಿಲ್ಲವೇ?" ಎಂದು ಪ್ರಶ್ನಿಸಿದ್ದಾನೆ. ಮತ್ತೊಬ್ಬನ್ಯಾರೋ "ಇಷ್ಟು ದೀರ್ಘ ಕಾಲ ಕಿಸ್‌ ಮಾಡಿದರೆ ಜಿಗುಪ್ಸೆ ಬಾರದೆ ಇರುತ್ತದೆಯೇ? ಇದೇ ಅವರ ವಿಚ್ಛೇದನಕ್ಕೆ ಕಾರಣ ಆಗಿರಬಹುದು!" ಎಂದು ಜೋಕ್‌ ಮಾಡಿದ್ದಾನೆ. 

ಮದುವೆಯಾದ ನವ ಜೋಡಿಯ ಸೋಶಿಯಲ್ ಮೀಡಿಯಾ ಕ್ರೇಜ್, ಚರ್ಚೆಗೆ ಗ್ರಾಸವಾದ ವಿಡಿಯೋ

ಎಕ್ಕಾಚೈ ಮತ್ತು ಲಕ್ಷಣಾ ತಮ್ಮ ಡೈವೋರ್ಸ್‌ಗೆ ಕಾರಣ ಹೇಳಿಲ್ಲ. ಆದರೆ ಅವರ ನಿಕಟವರ್ತಿಗಳು ಹೇಳೋ ಪ್ರಕಾರ ಅವರ ಫ್ಯಾಮಿಲಿಯಲ್ಲಿ ಎಲ್ಲವೂ ಸರಿ ಇಲ್ಲ. ಇವತ್ತಿಗೂ ಎಕ್ಕಚ್ಚೈ ಅನ್ನು ಬೀದಿಯಲ್ಲಿ ಗುರುತು ಹಿಡಿಯುವವರು ಇದ್ದಾರೆ. 2013ರಲ್ಲಿ ಇವರ ದಾಖಲೆಯ ನಂತರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನವರು ಈ ಸುದೀರ್ಘ ಕಿಸ್ ವಿಭಾಗವನ್ನೇ ರದ್ದುಗೊಳಿಸಿದರು. ಏಕೆಂದರೆ ʼʼಅದು ತುಂಬಾ ಅಪಾಯಕಾರಿ ಸ್ಪರ್ಧೆಯಾಗಿದೆ, ಕೆಲವು ನಿಯಮಗಳು ಪಾಲನೆಯಾಗೋಲ್ಲ" ಅಂತ ಕಾರಣ ನೀಡಿದ್ದಾರೆ.

ಯುವಕ/ತಿಯರ ಗಮನಕ್ಕೆ... ನೀವು ವಿಷಕಾರಿ ಸಂಬಂಧದಲ್ಲಿದ್ದೀರಿ ಎಂಬುದಕ್ಕೆ ಇಲ್ಲಿವೆ ಸೂಚನೆಗಳು
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!