ಊಟದ ಮೆನುವಿನಲ್ಲಿ ಲಡ್ಡು ಇರಲ್ಲಿಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರನ ಕುಟುಂಬ !

By Suvarna News  |  First Published Apr 30, 2022, 3:05 PM IST

ಮದುವೆ (Marriage)ಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ. ಮಂಟಪ, ಅಲಂಕಾರ (Decoration), ಪುರೋಹಿತರು, ವಧು (Bride), ವರನ (Groom) ಕುಟುಂಬಸ್ಥರು ಎಲ್ಲರೂ ಸಿದ್ಧವಾಗಿದ್ದಾರೆ. ಆದ್ರೆ ಹುಡುಗನ ಕುಟುಂಬ ಮಾತ್ರ ಕೊನೇ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಅಂದು ಬಿಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಾಗಿದ್ದೇನು ?


ಮದುವೆ (Marriage)ಯೆಂಬುದು ಒಂದು ಪವಿತ್ರ ಬಂಧನ. ಹೀಗಾಗಿಯೇ ಸಂಪ್ರದಾಯಿಕಬದ್ಧವಾಗಿ ಮದುವೆಯನ್ನು ನಡೆಸಲಾಗುತ್ತದೆ. ಮದುವೆಯೆಂದರೆ ಏಳೇಳು ಜನ್ಮದ ಅನುಬಂಧವೆಂದೇ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಕೆಲ ಮದುವೆಗಳು ಒಂದು ಜನ್ಮ ಬಿಡಿ, ಒಂದು ವರ್ಷವೂ ಉಳಿಯುತ್ತಿಲ್ಲ. ಕ್ಷುಲ್ಲಕ ಕಾರಣದಿಂದ ಗಂಡ-ಹೆಂಡತಿ (Husband-wife) ದೂರವಾಗುತ್ತಾರೆ. ಕೆಲ ಮದುವೆಗಳು ಎಂಗೇಜ್‌ಮೆಂಟ್ (Engagement) ಆಗಿ ನಂತರ ಮುಂದುವರಿಯದ್ದೂ ಇದೆ. ಇವತ್ತಿನ ಕಾಲದ ಜನರು ಚಂಚಲ ಮನಸ್ಸಿನವರು. ಮದುವೆಯ ದಿನವೇ ಬೇರೆ ಹುಡುಗನ, ಹುಡುಗಿಯ ಜತೆ ವರ, ವಧು ಓಡಿ ಹೋಗುವ ವಿಚಾರಗಳು ಹೊಸದೇನಲ್ಲ. ಮದುವೆ ಕಾರ್ಯ ಸಂಪೂರ್ಣ ಮುಗಿಯುವ ವರೆಗೂ ಮದುವೆ ಆಯಿತೆಂದು ಹೇಳುವುದು ಕಷ್ಟ. ಯಾಕೆಂದರೆ ಯಾವ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಆಗಬಹುದು. ಇಲ್ಲಾಗಿದ್ದೂ ಇದೆ.

ಮದುವೆಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ. ಮಂಟಪ, ಅಲಂಕಾರ, ಪುರೋಹಿತರು, ವಧು, ವರ ಕುಟುಂಬಸ್ಥರು ಎಲ್ಲರೂ ಸಿದ್ಧವಾಗಿದ್ದಾರೆ. ಆದ್ರೆ ವರನ ಕುಟುಂಬಸ್ಥರು ಮಾತ್ರ ಮದುವೆ ಕ್ಯಾನ್ಸಲ್‌ ಎಂದು ಬಿಟ್ಟಿದ್ದಾರೆ. 

Tap to resize

Latest Videos

ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !

ಕೆಲವೊಮ್ಮೆ ಮದುವೆಗಳು ಸೀರಿಯಲ್‌ಗಳಂತೆ ತಿರುವು ಪಡೆದುಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿ ಹೋಗಿದೆ. ಕೆಲವು ಅಪರಿಚಿತ ಕಾರಣಕ್ಕಾಗಿ ವಧು ತನ್ನ ಮದುವೆಯನ್ನು ವೇದಿಕೆಯ ಮೇಲೆ ಕ್ಯಾನ್ಸಲ್‌ ಮಾಡಿಬಿಡುತ್ತಾಳೆ. ಇದರಲ್ಲಿ ಬಹು ಗಂಭೀರ ಕಾರಣಗಳಿಂದ ತೊಡಗಿ, ಸಿಲ್ಲಿ ಕಾರಣಗಳೂ ಇರುತ್ತವೆ. ಹುಡುಗ ತಂದ ಸೀರೆ ಚೆನ್ನಾಗಿಲ್ಲ, ಹುಡುಗ ಬೀಡಾ ಜಗಿಯುತ್ತಾನೆ ಹೀಗೆ ಹಲವು ಕಾರಣಗಳಿಂದ ಹುಡುಗಿ ಮದ್ವೆ ಕ್ಯಾನ್ಸಲ್ ಮಾಡಿಬಿಡುತ್ತಾಳೆ. ನಿನ್ನೆ ಒಂದೆಡೆ ವರನಿಗೆ ವಿದ್ಯಾಭ್ಯಾಸವಿಲ್ಲ ಎಂದು ವಧು ತನ್ನ ಮದುವೆಯನ್ನು ನಿಲ್ಲಿಸಿದ್ದಳು. ಇದೀಗ ಛತ್ತೀಸ್‌ಗಡ್‌ನಲ್ಲಿ ಮದುವೆ ಊಟದಲ್ಲಿ ಲಡ್ಡು ಇರಲ್ಲಿಲ್ಲವೆಂಬ ಕಾರಣಕ್ಕೆ ಹುಡುಗನ ಕುಟುಂಬಸ್ಥರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ.

ಊಟದಲ್ಲಿ ಲಡ್ಡು ಬಡಿಸಲಿಲ್ಲ, ಈ ಮದುವೇನೇ ಬೇಡ ಎಂದ ಲಡ್ಡುಪ್ರಿಯ ವರನ ಕುಟುಂಬ ಮದುವೆಯ ಸಂದರ್ಭದಲ್ಲಿ ಲಡ್ಡು ನೀಡದ ಕಾರಣ ವರನ ಕಡೆಯವರು ಅಸಮಾಧಾನಗೊಂಡರು. ಈ ವಿವಾದವು ತೀವ್ರ ವಾಗ್ವಾದಕ್ಕೆ ತಿರುಗಿ ಜಗಳಕ್ಕೆ ಕಾರಣವಾಯಿತು. ವರನು ಕೋಪದಿಂದ ಪಂಡಾಲ್‌ನಿಂದ ಹೊರನಡೆದನು ಎಂದು ತಿಳಿದುಬಂದಿದೆ. ಪೊಲೀಸರು ಸಮಸ್ಯೆಯನ್ನು ಬಗೆಹರಿಸಿದರು. ಮರುದಿನ ಪೊಲೀಸರ ಸಮ್ಮುಖದಲ್ಲಿ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪೊಲೀಸರು ಮಧ್ಯಸ್ಥಿಕೆ ವಹಿಸಿ ವಾದವನ್ನು ಇತ್ಯರ್ಥಪಡಿಸಿದ ಘಟನೆ ಮುಂಗೇಲಿಯ ಚರ್ಭಾತ ಪ್ರದೇಶದಲ್ಲಿ ವರದಿಯಾಗಿದೆ.

ಹುಡುಗ ಹೆಬ್ಬೆಟ್ಟು ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು!

ಕುಂತಿ ಮತ್ತು ಸೂರಜ್ ಸಾಹು ಅವರ ವಿವಾಹವನ್ನು ಏಪ್ರಿಲ್ 23 ರಂದು ನಿಗದಿಪಡಿಸಲಾಗಿತ್ತು. ಸಮಾರಂಭದಲ್ಲಿ, ಮದುವೆಯ ಉಟದಲ್ಲಿ ಲಡ್ಡು ನಿರೀಕ್ಷಿಸುತ್ತಿದ್ದ ವರನ ಕಡೆಯವರಿಗೆ ಅದು ಮೆನುವಿನಲ್ಲಿಲ್ಲ ಎಂದು ತಿಳಿದುಬಂತು. ಈ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಕೇಶರ್ ಪರಾಗ್ ಹೇಳಿದ್ದಾರೆ. 

ಲಾಡುಗಳಿಲ್ಲದ ಕಾರಣ ಕುಟುಂಬವು ಕೋಪಗೊಂಡಿತು. ಇದು ಎರಡೂ ಕಡೆಯಿಂದ ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಕೋಪಗೊಂಡ ವರನು ತನ್ನ ಸ್ವಂತ ಮದುವೆಯಿಂದ ಹೊರನಡೆದನು. ಇದರಿಂದ ಕೋಪಗೊಂಡ ಎರಡೂ ಕುಟುಂಬಗಳ ಸದಸ್ಯರು ಕೆಲವರ ನಡುವೆ ಮಾತಿನ ಚಕಮಕಿ ನಡೆಸಿದರು. ಈ ವಿಚಾರ ಕೊತ್ವಾಲಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಪ್ರಕರಣವನ್ನು ದಾಖಲಿಸುವ ಬದಲು ವಿಷಯವನ್ನು ಇತ್ಯರ್ಥಪಡಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಿದರು. ಅವರು ಎರಡೂ ಕುಟುಂಬಗಳಿಗೆ ಸಲಹೆ ನೀಡಿದರು ಮತ್ತು ನಂತರ ಅವರಿಗೆ ಮನವರಿಕೆ ಮಾಡಿ ಮದುವೆ ಮಾಡಿಸಲಾಯಿತು.

ಸೋಮವಾರ, ವಿವಾಹ ಕಾರ್ಯ ನಡೆಯಿತು. ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದರು, ಎಲ್ಲವೂ ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿ ಕಾವಲು ಏರ್ಪಡಿಸಲಾಗಿತ್ತು.

click me!