ಸಾಮಾಜಿಕ ಜಾಲತಾಣದಲ್ಲಿ ಮದುವೆ ಕಾರ್ಡ್ ಒಂದು ಗಮನ ಸೆಳೆಯುತ್ತಿದೆ. ವ್ಯಕ್ತಿ ತನ್ನ ಮದುವೆ ಕರೆಯೋಲೆಯಲ್ಲಿ ಮದುವೆಗೆ ಬಂದವರು ಏನು ಮಾಡಬಾರದು ಎಂಬ ಸಂದೇಶವೊಂದನ್ನು ನೀಡಿದ್ದಾನೆ. ಅದನ್ನು ಓದಿದ ಸಂಬಂಧಿಕರು ಅಚ್ಚರಿಗೊಳಗಾಗಿದ್ದಾರೆ.
ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಮದುವೆಗೆ ಆರೇಳು ತಿಂಗಳು ಇರುವಾಗ್ಲೇ ಜನರು ಮದುವೆಗೆ ತಯಾರಿ ನಡೆಸುತ್ತಾರೆ. ಮದುವೆ ಕಾರ್ಡ್ ತಯಾರಿಸಿ ಅದನ್ನು ಎಲ್ಲೆಡೆ ಹಂಚುತ್ತಾರೆ. ಈ ಮದುವೆ ಕಾರ್ಡ್ ಸಾಕಷ್ಟು ವಿಶೇಷತೆಯನ್ನು ಹೊಂದಿರುತ್ತದೆ. ವಾಟ್ಸ್ ಅಪ್ ಶೈಲಿಯಲ್ಲಿ, ಇನ್ಸ್ಟಾಗ್ರಾಮ್ ಶೈಲಿಯಲ್ಲಿ ಮದುವೆ ಕಾರ್ಡ್ ಮಾಡಿದ ಜನರಿದ್ದಾರೆ. ದುಬಾರಿ ಹಣ ನೀಡಿ ಮದುವೆ ಕಾರ್ಡನ್ನು ಜನರು ತಯಾರಿಸುತ್ತಾರೆ. ಕೆಲ ಕಾರ್ಡ್ ಎಷ್ಟು ಆಕರ್ಷಕವಾಗಿರುತ್ತದೆ ಅಂದ್ರೆ ಅದನ್ನು ಎಸೆಯದೆ ವರ್ಷಗಟ್ಟಲೆ ಅತಿಥಿಗಳು ಹಾಗೆಯೇ ಇಟ್ಟುಕೊಳ್ತಾರೆ. ಆಯಾ ಸಮಯಕ್ಕೆ ತಕ್ಕಂತೆ ಮದುವೆ ಕಾರ್ಡ್ನಲ್ಲಿ ಹೊಸತನವನ್ನು ನೀವು ನೋಡ್ಬಹುದು.
ಕೊರೊನಾ (Corona) ಸಮಯದಲ್ಲಿ ಮದುವೆ (Marriage ) ಕಾರ್ಡ್ ನಲ್ಲಿ ಕೊರೊನಾ ಬರದಂತೆ ತಡೆಯಲು ಏನೆಲ್ಲ ಮಾಡ್ಬೇಕು ಎಂಬ ಎಚ್ಚರಿಕೆ ಸಂದೇಶವಿತ್ತು. ಚುನಾವಣೆ (Election) ಸಮಯದಲ್ಲಿ ಮದುವೆ ಆಗುವ ಜನರು, ಮದುವೆ ಕಾರ್ಡ್ ನಲ್ಲಿ, ಮತ ಹಾಕುವಂತೆ ಇಲ್ಲವೆ ಯಾವುದಾದ್ರೂ ಒಂದು ಪಕ್ಷಕ್ಕೆ ಮತ ಚಲಾಯಿಸುವಂತೆ ಪ್ರಚಾರ ಮಾಡ್ತಿರುತ್ತಾರೆ. ಈಗ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅನೇಕ ಮದುವೆ ಕಾರ್ಡ್ ಗಳಲ್ಲಿ ನೀವು ಈ ಸಂದೇಶ ನೋಡಿರುತ್ತೀರಿ. ಆದ್ರೆ ಈಗ ಮತ್ತೊಂದು ಭಿನ್ನ ಮಂಗಳಪತ್ರ ಎಲ್ಲರ ಗಮನ ಸೆಳೆದಿದೆ.
undefined
ಮದುವೆಯಾಗಿ 12 ದಿನವಾದ್ರೂ ಸಿಗ್ಲಿಲ್ಲ ಆ ಭಾಗ್ಯ…ಕೊನೆಯಲ್ಲಿ ರಿವೀಲ್ ಆಯ್ತು ಕಹಿ ಸತ್ಯ
ಸಾಮಾಜಿಕ ಜಾಲತಾಣದಲ್ಲಿ ಮದುವೆ ಕಾರ್ಡ್ ವೈರಲ್ ಆಗಿದೆ. ಈ ಕಾರ್ಡಿನಲ್ಲಿ ವರ, ಸಂಬಂಧಿಕರಿಗಾಗಿ ವಿಶೇಷ ಸಂದೇಶ ನೀಡಿದ್ದಾನೆ. ಸಂದೇಶವನ್ನು ಓದಿದ ನಂತರ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಕಾರ್ಡ್ ನಲ್ಲಿ ಜನರನ್ನು ದಾರಿ ತಪ್ಪಿಸುವ ಯಾವುದೇ ಸಂದೇಶವಿಲ್ಲ. ಜನರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗಿದೆ. ಈ ವ್ಯಕ್ತಿ ಲೋಕಸಭೆ ಚುನಾವಣೆ ಬಗ್ಗೆಯಾಗ್ಲಿ ಇಲ್ಲ ತನ್ನ ಸಾಮಾಜಿಕ ಜಾಲತಾಣ ಲೈಕ್ ಮಾಡಬೇಕೆಂದಾಗ್ಲಿ ಮಾಹಿತಿ ನೀಡಿಲ್ಲ. ಬದಲಾಗಿ ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ಸಂದೇಶ ನೀಡಿದ್ದಾನೆ.
ಮದುವೆ ಕಾರ್ಡ್ ನಲ್ಲಿ ಏನಿದೆ? : ಮದುವೆ ಕಾರ್ಡ್ ನ ಮಧ್ಯ ಭಾಗದಲ್ಲಿ ಸಂದೇಶ ಬರೆಸಿದ್ದಾರೆ. ಕೋವಿಶೀಲ್ಡ್ ಲಸಿಗೆ ತೆಗೆದುಕೊಂಡ ಜನರು ದಯವಿಟ್ಟು ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡಬೇಡಿ ಎಂದು ಕಾರ್ಡ್ ನಲ್ಲಿ ಬರೆಯಲಾಗಿದೆ. ಕೋವಿಶೀಲ್ಡ್ ಲಸಿಕೆ ಜನರನ್ನು ತಲ್ಲಣಗೊಳಿಸಿದೆ. ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡ್ತಿದ್ದಂತೆ ಕುಸಿದು ಬಿದ್ದು ಅನೇಕರು ಸಾವನ್ನಪ್ಪಿದ್ದಾರೆ. ಇಂಥ ಘಟನೆ ತನ್ನ ಮದುವೆಯಲ್ಲೂ ಆಗ್ಬಾರದು ಎನ್ನುವ ಉದ್ದೇಶದಿಂದ ವರ, ಮದುವೆ ಕಾರ್ಡ್ ನಲ್ಲಿ ಈ ಮಾಹಿತಿಯನ್ನು ಮುದ್ರಿಸಿದ್ದಾನೆ.
ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡವರು ಭಯಕ್ಕೊಳಗಾಗಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದ ಜನರಲ್ಲಿ ರಕ್ತಹೆಪ್ಪುಗಟ್ಟುವ ಪ್ರಕರಣ ಹೆಚ್ಚಾಗಿ ಕಾಣಿಸ್ತಿದೆ. ಇದನ್ನು ಕೋವಿಶೀಲ್ಡ್ ತಯಾರಕ ಕಂಪನಿ AstraZeneca ಕೂಡ ಒಪ್ಪಿಕೊಂಡಿದೆ. ಲಸಿಕೆ ಅಡ್ಡ ಪರಿಣಾಮ ಹೊಂದಿದೆ ಎಂದು ಅದು ಬ್ರಿಟನ್ ಉಚ್ಛ ನ್ಯಾಯಾಲಯದಲ್ಲಿ ಹೇಳಿದೆ. ತೀವ್ರ ವ್ಯಾಯಾಮ ಅಥವಾ ಡಾನ್ಸ್ ಮಾಡಿದವರು ಹೃದಯಾಘಾತಕ್ಕೆ ಒಳಗಾಗೋದು ಹೆಚ್ಚಾಗಿದೆ.
ಗಂಡ ಹೆಂಡತಿ ಹೆಚ್ಚು ವಯಸ್ಸಿನ ಅಂತರ ಡಿವೋರ್ಸ್‌ಗೆ ಕಾರಣವಂತೆ ಗೊತ್ತಾ?
ಕೋವಿಶೀಲ್ಡ್ ವ್ಯಾಕ್ಸಿನ್ ಈಗಾಗಲೇ ತೆಗೆದುಕೊಂಡವರು ಭಯಪಡಬಾರದು ಎಂದು ತಜ್ಞರು ಹೇಳಿದ್ದಾರೆ. ಈವರೆಗೂ ಕೊರೊನಾ ಲಸಿಕೆ ತೆಗೆದುಕೊಳ್ಳದೆ ಇರೋರು, ಈಗ ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದವರು ದಯವಿಟ್ಟೂ ಯಾವುದೇ ಲಸಿಕೆ ಹಾಕಿಸಿಕೊಳ್ಬೇಡಿ ಎಂದು ತಜ್ಞರು ಹೇಳಿದ್ದಾರೆ. ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡವರು ಹೆದರುವ ಅಗತ್ಯವಿಲ್ಲ. ಆದ್ರೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಲಕ್ಷಣ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಿ ಎಂದು ತಜ್ಞರು ಸೂಚಿಸಿದ್ದಾರೆ. ಭಾರತದಲ್ಲಿ ಇತ್ತೀಚಿಗೆ ಹೃದಯಾಘಾತ ಪ್ರಕರಣ ಹೆಚ್ಚಾಗ್ತಿದೆ. ಆದ್ರೆ ಕೋವಿಶೀಲ್ಡ್ ನಿಂದಲೇ ಇದು ಆಗಿದೆ ಎಂಬುದಕ್ಕೆ ಇನ್ನೂ ಸೂಕ್ತ ದಾಖಲೆ ಲಭ್ಯವಾಗಿಲ್ಲ.