ಸಿನಿಮೀಯ ಶೈಲಿಯಲ್ಲಿ ಸರ್ಕಾರಿ ಶಿಕ್ಷಕನನ್ನು ಅಪಹರಿಸಿ, ಗನ್ ಪಾಯಿಂಟ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಹುಡುಗನ ಪೋಷಕರು ಪ್ರತಿಭಟನೆ ನಡೆಸಿದ್ದು, ಮಗನನ್ನು ಹುಡುಕಿ ಕೊಡುವಂತೆ ಒತ್ತಾಯಿಸಿದ್ದಾರೆ.
ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಕನನ್ನು ಅಪಹರಿಸಿ, ಬಲವಂತದಿಂದ ಮದುವೆ ಮಾಡಿಸಿದ ಘಟನೆ ವರದಿಯಾಗಿದೆ. ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್‌ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಶಿಕ್ಷಕನನ್ನು ಅಪಹರಿಸಿ ಮಗಳನ್ನು ವರಿಸುವಂತೆ ಅಪಹರಣಕಾರರು ಗುಂಡಿನ ದಾಳಿ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತ ಶಿಕ್ಷಕನನ್ನು ವೈಶಾಲಿ ಜಿಲ್ಲೆಯ ಪತೇಪುರದ ರೇಪುರದಲ್ಲಿರುವ ಉತ್ಕ್ರಾಮಿತ ಮಧ್ಯ ವಿದ್ಯಾಲಯದಲ್ಲಿ ಶಿಕ್ಷಕನಾಗಿ (Teacher) ಇತ್ತೀಚೆಗೆ ನೇಮಕಗೊಂಡಿರುವ ಗೌತಮ್ ಕುಮಾರ್ ಎಂದು ಗುರುತಿಸಲಾಗಿದೆ. ಹೊಸದಾಗಿ ನೇಮಕಗೊಂಡ ಗೌತಮ್ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮೊನ್ನೆ ಮೂರ್ನಾಲ್ಕು ಮಂದಿ ಶಾಲೆಯ ಬಳಿ ಬಂದು ಬಲವಂತವಾಗಿ ಗೌತಮ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ನೋಡಿದ ಸಹ ಶಿಕ್ಷಕಿ ತಿಳಿಸಿದ್ದಾರೆ.
ಚಲಿಸುವ ರೈಲಿನಲ್ಲೇ ಮದುವೆಯಾದ ಜೋಡಿ: ಪ್ರಯಾಣಿಕರೇ ನೆಂಟರು..! ವೀಡಿಯೋ
ಬಲವಂತವಾಗಿ ತನ್ನ ಮಗಳೊಂದಿಗೆ ವಿವಾಹ ಮಾಡಿದ ಕಿಡ್ನ್ಯಾಪರ್
ರಾಜೇಶ್ ರೈ ಎಂಬ ವ್ಯಕ್ತಿ ಮತ್ತು ಆತನ ಸಹಚರರು ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ತನ್ನ ಮಗಳೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಗೌತಮ್ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಗೌತಮ್ ಕುಮಾರ್‌ನ ಪೋಷಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. 'ನಮ್ಮ ಮಗನನ್ನು ಬಲವಂತವಾಗಿ ಅಪಹರಿಸಿ, ರಾಜೇಶ್ ರೈ ತನ್ನ ಮಗಳು ಚಾಂದಿನಿಯೊಂದಿಗೆ ವಿವಾಹ ಮಾಡಿದ್ದಾರೆ ಈ ಹಿಂದೆಯೇ ನಮ್ಮ ಮನೆಗೆ ಬಂದು ಅವರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ನನ್ನ ಮಗನಿಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ' ಗೌತಮ್ ಪೋಷಕರು ಆರೋಪಿಸಿದ್ದಾರೆ.
ಅಪಹರಣದ ನಂತರ ಗೌತಮ್ ಅವರನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಪಡೆದ ವ್ಯಕ್ತಿಗಳನ್ನು ಹೀಗೆ ಅಪಹರಿಸಿ ಬೇಕಾದವರ ಜೊತೆ ಮದುವೆ ಮಾಡಿಸುವ ಘಟನೆಗಳು ರಾಜ್ಯದಲ್ಲಿ ಹೆಚ್ಚಿವೆ.
ನಡು ವಯಸ್ಸಿನ ಹೆಣ್ಣು ಬೇರೊಬ್ಬನೊಂದಿಗೆ ಹೋಗೋದು ಲೈಂಗಿಕ ಆಸೆಗೋಸ್ಕರನಾ?
ಏನಿದು ಪಕಡ್ವಾ ವಿವಾಹ?
ಅಪಹರಣ ಮಾಡಿ ಮದುವೆ ಮಾಡಿಸುವುದು ಬಿಹಾರದಲ್ಲಿ ಸಾಮಾನ್ಯವಾಗಿದೆ. ಇದನ್ನು ಪಕಡ್ವಾ ವಿವಾಹ ಅಥವಾ ವರನ ಅಪಹರಣ (Kidnap) ಮದುವೆ ಎಂದು ಕರೆಯುತ್ತಾರೆ. ಕಳೆದ ವರ್ಷ, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯನ್ನು ಪರೀಕ್ಷಿಸಲು ಕರೆದ ಪಶುವೈದ್ಯರನ್ನು ಮೂರು ಜನರು ಅಪಹರಿಸಿ ಬೇಗುಸರಾಯ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದರು.
ಆ ನಂತರ ಇನ್ನೊಂದು ಪ್ರಕರಣದಲ್ಲಿ ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜ್ಯೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದ್ ಕುಮಾರ್ ಎಂಬಾತನನ್ನು ಥಳಿಸಿ ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆ ಜೊತೆ ಬಲವಂತವಾಗಿ ವಿವಾಹ (Marriage) ಮಾಡಲಾಗಿತ್ತು. ಇಂತಹ ಅನೇಕ ಘಟನೆಗಳು ಬಿಹಾರದಲ್ಲಿ ನಡೆಯುತ್ತಿರುತ್ತದೆ.