ಲೈಂಗಿಕ ಆಸಕ್ತಿ ಕಡಿಮೆಯಾಗಿದ್ಯಾ? ಬೂಸ್ಟರ್‌ನಂತಿರೋ ಈ ಡ್ರಿಂಕ್ಸ್ ಟ್ರೈ ಮಾಡಿ

By Suvarna News  |  First Published Nov 8, 2022, 3:04 PM IST

ಮದುವೆಯಾದ ಮೊದಲೆಲ್ಲಾ ಚೆನ್ನಾಗಿತ್ತು. ಆದ್ರೆ ಇತ್ತೀಚಿಗೆ ಯಾವ್ದೂ ಸರಿಯಿಲ್ಲ ಅನ್ನುವಂತಾಗಿದ್ಯಾ ? ಸೆಕ್ಸ್ ಡ್ರೈವ್ ಕಡಿಮೆಯೇ? ಕೆಲವು ಆಹಾರಗಳು ಮತ್ತು ಪಾನೀಯಗಳು ನೈಸರ್ಗಿಕವಾಗಿ ಕಾಮವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತವೆ. ಅವುಗಳು ಯಾವುವು ತಿಳ್ಕೊಳ್ಳಿ.


ಕೆಟ್ಟದಾದ ಜೀವನಶೈಲಿ, ಆಹಾರಪದ್ಧತಿ ಮನುಷ್ಯನ ಜೀವನದ ಹಲವು ಹಂತಗಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೊಂದು ಕಡಿಮೆ ಸೆಕ್ಸ್‌ ಡ್ರೈವ್‌.  ಕೆಲಸದ ಒತ್ತಡ, ದಣಿವು, ಜವಾಬ್ದಾರಿಗಳು ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡಬಹುದು. ಇದರಿಂದ ಇನ್ನೊಬ್ಬ ಸಂಗಾತಿಗೆ ನಿರಾಸೆ, ಅತೃಪ್ತಿ ಉಂಟಾಗಬಹುದು. ಲೈಂಗಿಕ ಜೀವನ ಸರಿಯಾಗಿ ಇಲ್ಲದಿದ್ದರೆ ವೈವಾಹಿಕ ಸಂಬಂಧ ದೀರ್ಘಕಾಲ ಚೆನ್ನಾಗಿರಲು ಸಾಧ್ಯವಿಲ್ಲ. ಆರೋಗ್ಯಕರ ಸೆಕ್ಸ್ ಡ್ರೈವ್ ಆತ್ಮೀಯತೆಗೆ ಮಾತ್ರವಲ್ಲದೆ ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೂ ಮುಖ್ಯವಾಗಿದೆ. ನೀವು ಆರೋಗ್ಯಕರ ಕಾಮವನ್ನು ಹೊಂದಿದ್ದರೆ, ನಿಮ್ಮ ದೈನಂದಿನ ಜೀವನದಲ್ಲಿ ನೀವು ಸ್ವಾಭಾವಿಕವಾಗಿ ಭಾವನಾತ್ಮಕವಾಗಿ ತೃಪ್ತರಾಗಬಹುದು. ಮತ್ತೊಂದೆಡೆ, ಕಡಿಮೆ ಸೆಕ್ಸ್ ಡ್ರೈವ್ ಆಲಸ್ಯ, ಕಡಿಮೆ ಶಕ್ತಿಯ ಮಟ್ಟಗಳು ಮತ್ತು ಖಿನ್ನತೆಗೆ ಕಾರಣವಾಗಬಹುದು. 

ಯೋನಿ ಶುಷ್ಕತೆ, ಕೀಲು ನೋವು ಮೊದಲಾದ ಲೈಂಗಿಕ ಆರೋಗ್ಯ ಸಮಸ್ಯೆಗಳು ನಿಮ್ಮ ಸೆಕ್ಸ್ ಡ್ರೈವ್‌ನ್ನು ಹಾಳುಮಾಡುತ್ತಿದ್ದರೆ, ನಿಮ್ಮ ಲೈಂಗಿಕ ಬಯಕೆಯನ್ನು ಮರಳಿ ಪಡೆಯಲು ಪ್ರಯತ್ನಿಸಿ. ಒಟ್ಟಾರೆ ಲೈಂಗಿಕ ಆರೋಗ್ಯವನ್ನು (Sexual Health) ಕಾಪಾಡಿಕೊಳ್ಳಲು ಸರಿಯಾದ ವ್ಯಾಯಾಮ ಮತ್ತು ಸಮತೋಲಿತ ಆಹಾರ (Balance food) ಸೇವನೆ ಅಗತ್ಯವೆಂದು ತಜ್ಞರು ಹೇಳುತ್ತಾರೆ. ಲೈಂಗಿಕಾಸಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರ ಮತ್ತು ಪಾನೀಯಗಳ (Drinks) ಮಾಹಿತಿ ಇಲ್ಲಿದೆ.

Latest Videos

undefined

ಸೆಕ್ಸ್ ಲೈಫ್ ಚೆನ್ನಾಗಿರಬೇಕಂದ್ರೆ ‘Kareeza Technique’ ಟ್ರೈ ಮಾಡಿ

ನೈಸರ್ಗಿಕವಾಗಿ ಕಾಮಾಸಕ್ತಿ ಹೆಚ್ಚಿಸುವ ಪಾನೀಯಗಳು ಇಲ್ಲಿವೆ

1. ಹಸಿರು ಚಹಾ: ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಹಸಿರು ಚಹಾ ಅಥವಾ ಗ್ರೀನ್‌ ಟೀ ನಿಮ್ಮ ಲೈಂಗಿಕ ಬಯಕೆಯನ್ನು ಪುನರುಜ್ಜೀವನಗೊಳಿಸುತ್ತದೆ. ಯಾಕೆಂದರೆ ಹಸಿರು ಚಹಾವು ಕ್ಯಾಟೆಚಿನ್ಸ್ ಎಂಬ ಸಂಯುಕ್ತಗಳನ್ನು ಒಳಗೊಂಡಿದೆ, ಇದು ನಿಮ್ಮ ಗುಪ್ತಾಂಗ ಪ್ರದೇಶಗಳಿಗೆ ರಕ್ತದ ಹರಿವನ್ನು (Blood circulation) ಉತ್ತೇಜಿಸುತ್ತದೆ. ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಬ್ಲ್ಯಾಕ್‌ ಕಾಫಿ: ಕಾಫಿ ನಮಗೆಲ್ಲರಿಗೂ ತಿಳಿದಿರುವಂತೆ, ಮನಸ್ಥಿತಿಯನ್ನು ಸುಧಾರಿಸುವ ಪಾನೀಯ. ಕೆಫೀನ್‌ನಿಂದ ಕೂಡಿದ ಕಾಫಿಯು ಪುರುಷರು (Men) ಮತ್ತು ಮಹಿಳೆ (Woman)ಯರಲ್ಲಿ ಸೆಕ್ಸ್ ಡ್ರೈವ್‌ಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹೂಸ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನ ಕೇಂದ್ರದ 2015 ರ ಅಧ್ಯಯನದ ಪ್ರಕಾರ,  ಪ್ರತಿದಿನ ಕಾಫಿ ಸೇವಿಸುವ ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಕಡಿಮೆಯಿರುತ್ತದೆ.

4. ಬನಾನಾ ಶೇಕ್: ಆರೋಗ್ಯಕರ ಮತ್ತು ರುಚಿಕರವಾದ ಬಾಳೆಹಣ್ಣಿನ ಶೇಕ್ (Banana shake) ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಈ ಸಂಯೋಜನೆಯು ನಿಮ್ಮ ದೇಹಕ್ಕೆ ದೈಹಿಕ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಲೈಂಗಿಕ ಬಯಕೆಯನ್ನು ಸಹ ಹೆಚ್ಚಿಸಬಹುದು. ತಜ್ಞರ ಪ್ರಕಾರ, ಬಾಳೆಹಣ್ಣಿನಲ್ಲಿ ಬ್ರೋಮೆಲಿನ್ ಕಿಣ್ವವಿದೆ, ಇದು ಪುರುಷರಲ್ಲಿ ಲಿಬಿಡೋ ಮತ್ತು ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ. ಕಡಿಮೆ ಕಾಮಕ್ಕೆ ಚಿಕಿತ್ಸೆ ನೀಡಲು ನಿಮ್ಮ ದೈನಂದಿನ ಸೇವನೆಯಲ್ಲಿ ಇದನ್ನು ಸೇರಿಸಬಹುದು.

ಲೈಂಗಿಕ ಕ್ರಿಯೆಯ ನಂತರ ವಿಪರೀತ ತಲೆನೋವು, ಇದಕ್ಕೇನು ಕಾರಣ ?

5. ದಾಳಿಂಬೆ ರಸ: ದಾಳಿಂಬೆ ರಸವು (Pomogranate juice) ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬೆವರ್ಲಿ ಹಿಲ್ಸ್ ಕ್ಲಿನಿಕ್‌ನಲ್ಲಿ ನಡೆಸಿದ ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಪೊಟೆನ್ಸ್ ರಿಸರ್ಚ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ದಾಳಿಂಬೆ ರಸವನ್ನು ಸೇವಿಸುವುದು ಲೈಂಗಿಕ ಅಂಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಎಂದು ಗಮನಿಸಿದೆ. 

ನೀವು ಈ ಕಾಮಾಸಕ್ತಿ ಹೆಚ್ಚಿಸುವ ಪಾನೀಯಗಳನ್ನು ಪ್ರಯತ್ನಿಸಬಹುದಾದರೂ, ನಿಮ್ಮ ವೈಯಕ್ತಿಕ ಕಾರಣ ಮತ್ತು ಕಡಿಮೆ ಸೆಕ್ಸ್ ಡ್ರೈವ್‌ಗೆ ಚಿಕಿತ್ಸೆ ನೀಡುವ ಕುರಿತು ಲೈಂಗಿಕ ಆರೋಗ್ಯ ತಜ್ಞರಿಂದ ತಜ್ಞರ ಸಲಹೆ ಪಡೆಯಲು ಇದು ನಿಮಗೆ ಸಹಾಯ ಮಾಡಬಹುದು.

click me!