
ಸಾಮಾನ್ಯವಾಗಿ ಮದುವೆಯ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇದೆ. ಕೆಲವರಿಗೆ ಲವ್ ಮ್ಯಾರೇಜ್ ಆಗುವ ಆಸೆ ಇದ್ದರೆ, ಮತ್ತೆ ಕೆಲವರಿಗೆ ಅಪ್ಪ ಅಮ್ಮ ನೋಡಿ ಮಾಡಿದ ಅರೆಂಜ್ಡ್ ಮ್ಯಾರೇಜ್ ಅಂದ್ರೆ ಇಷ್ಟ ಅಂತ ಹೇಳುವವರಿದ್ದಾರೆ. ಆದರೆ ಯಾವುದೇ ಮದುವೆಗಾದರೂ ಅಪ್ಪ ಅಮ್ಮನ ಒಪ್ಪಿಗೆ ಬೇಕೇ ಬೇಕು ಇಲ್ಲದೇ ಹೋದರೆ ಬದುಕು ನಿರಾಸ ಎನಿಸುತ್ತದೆ. ಮುಂದೆ ಬದುಕಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾದಾಗ ಪೋಷಕರ ಬೆಂಬಲ ಅಷ್ಟಕಟ್ಟೆ ಎಂಬಂತಿರುತ್ತದೆ. ಅದಕ್ಕೆ ಬಹುತೇಕರು ಯಾರಾನ್ನಾದರು ಪ್ರೀತಿಸಿದರು ಮದುವೆಗೆ ಪೋಷಕರು ಒಪ್ಪದೇ ಹೋದಾಗ ತಮ್ಮ ಪ್ರೀತಿಯನ್ನು ನಡು ದಾರಿಯಲ್ಲಿ ಕೈ ಬಿಡಲು ಮುಂದಾಗುತ್ತಾರೆ. ಪ್ರೀತಿಗೆ ಎಳ್ಳು ನೀರು ಬಿಟ್ಟು ಪೋಷಕರು ನೋಡಿದ ಹುಡುಗ ಅಥವಾ ಹುಡುಗಿಯ ಜೊತೆ ಮದುವೆ ಆಗುತ್ತಾರೆ. ಆದರೆ ಇಲ್ಲೊಬ್ಬರು ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಪ್ಪ ಅಮ್ಮ ಒಪ್ಪಿಗೆ ನೀಡದೇ ಹೋದರೂ ನಿಮ್ಮ ಹುಡುಗನನ್ನು ಅಥವಾ ಹುಡುಗಿಯನ್ನು ಮದುವೆಯಾಗುತ್ತೀರಾ ಎಂದು ಸಾರ್ವಜನಿಕವಾಗಿ ಸಮೀಕ್ಷೆ ಮಾಡಿದ್ದಾರೆ. ಅನೇಕ ಯುವಕ ಯುವತಿಯರ ಬಳಿ ಅವರು ಈ ಪ್ರಶ್ನೆ ಕೇಳಿದ್ದಾರೆ. ಅವರ ಉತ್ತರ ಏನು ಅಂತ ನೋಡೋಣ ಬನ್ನಿ...
ವೀಡಿಯೋದಲ್ಲೇನಿದೆ?
ಡಿಜಿಟಲ್ ಕ್ರಿಯೇಟರ್ voxhub.rehan ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹುಡುಗರು ಹಾಗೂ ಹುಡುಗಿಯರು ತಮ್ಮ ಪ್ರೀತಿ ಹಾಗೂ ಮದುವೆಯ ಬಗ್ಗೆ ನೀಡಿದ ಈ ಉತ್ತರಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಪ್ರೀತಿ ಮುಖ್ಯನಾ ಅಥವಾ ಪೋಷಕರು ಮುಖ್ಯನಾ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಈ ಇನ್‌ಫ್ಲುಯೆನ್ಸರ್ ರಸ್ತೆಯಲ್ಲಿ ಅಲ್ಲಿ ಇಲ್ಲಿ ಸಿಕ್ಕ ನವ ತರುಣಿಯರು ಹಾಗೂ ತರುಣರ ಬಳಿ ಪ್ರಶ್ನೆ ಕೇಳಿದ್ದಾರೆ. ಒಂದು ವೇಳೆ ನಿಮ್ಮ ಪ್ರೀತಿಗೆ ಪೋಷಕರು ನಿರಾಕರಿಸಿದರು ನಿಮ್ಮ ಪ್ರೀತಿಯನ್ನು ನೀವು ಮದುವೆಯಾಗುವಿರಾ ಎಂದು ಕೇಳಿದ್ದಾರೆ ಇದಕ್ಕೆ ಹುಡುಗಿಯರು ಬಹುತೇಕ ಎಸ್ ಎಂದು ಉತ್ತರಿಸಿದ್ದರೆ ಹುಡುಗರು ಸಾಧ್ಯವೇ ಇಲ್ಲ ನೋ, ಪೋಷಕರ ಒಪ್ಪಿಗೆ ಇಲ್ಲದೇ ಮದುವೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ವರನ ಗೆಳತಿ ಅಲ್ಲ ವಧುವಿನ ಗರ್ಲ್‌ಫ್ರೆಂಡ್ ಎಂಟ್ರಿಯಿಂದ ಮುರಿದು ಬಿತ್ತು ಮದುವೆ
ಹುಡುಗಿಯರ ಉತ್ತರ ಹೀಗಿದೆ!
ಹುಡುಗಿಯೊಬ್ಬರ ಬಳಿ ಮೊದಲಿಗೆ ಇವರು ನೀವು ನಿಮ್ಮ ಜೀವದ ವ್ಯಕ್ತಿಯನ್ನು ನಿಮ್ಮ ಪೋಷಕರ ವಿರೋಧದ ನಡುವೆಯೂ ಮದುವೆಯಾಗಲು ಬಯಸುವಿರಾ ಎಂದು ಕೇಳುತ್ತಾರೆ? ಇದಕ್ಕೆ ಅವರು ಯಾವ ಹುಡುಗಿಯರ ಬಳಿ ಎಲ್ಲಾ ಪ್ರಶ್ನೆ ಕೇಳಿದರೋ ಅವರೆಲ್ಲಾ ಎಸ್ ಪೋಷಕರ ವಿರೋಧದ ನಡುವೆಯೂ ನಮ್ಮ ಪ್ರೀತಿಯನ್ನು ನಾವು ಮದುವೆಯಾಗುತ್ತೇವೆ ಎಂದು ಉತ್ತರಿಸಿದ್ದಾರೆ. ಒಬ್ಬರು ಮಾತ್ರ ಬಹುಶಃ ಅಂತ ಉತ್ತರಿಸಿದ್ದಾರೆ. ಇದೇ ಪ್ರಶ್ನೆಯನ್ನು ಈ ಇನ್‌ಫ್ಲುಯೆನ್ಸರ್ ಹುಡುಗರ ಬಳಿ ಕೇಳಿದ್ದಾರೆ. ಅವರ ಉತ್ತರ ಮಾತ್ರ ಹೆಣ್ಣು ಮಕ್ಕಳಿಗೆ ದೊಡ್ಡ ಅಚ್ಚರಿ ತಂದಿದೆ.
ಹುಡುಗರ ಉತ್ತರಕ್ಕೆ ಗರಂ ಆದ ಹುಡುಗಿಯರು
ನಿಮ್ಮ ಪೋಷಕರು ನಿಮ್ಮ ಹುಡುಗಿಯನ್ನು ತಿರಸ್ಕರಿಸಿದರು ನೀವು ಮದುವೆಯಾಗುವಿರಾ ಎಂದು ಅವರು ಕೇಳಿದ್ದಾರೆ. ಇದಕ್ಕೆ ಅನೇಕರು ಇಲ್ಲ ಎಂದಿದ್ದಾರೆ, ಸಾಧ್ಯವೇ ಇಲ್ಲ ನಾವು ನಮ್ಮ ಪೋಷಕರ ವಿರುದ್ಧ ಹೋಗಲು ಸಾಧ್ಯವೇ ಇಲ್ಲ ಎಂದು ಒಬ್ಬ ಹುಡುಗ ಹೇಳಿದ್ದಾನೆ. ನಾನು ಅಮ್ಮನ ಮಗ ಈ ತರ ಮಾಡಲು ಸಾಧ್ಯವೇ ಇಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಹಾಗೆಯೇ ಅವರು ಅನೇಕರನ್ನು ಇದೇ ಪ್ರಶ್ನೆ ಕೇಳಿದ್ದು ಎಲ್ಲ ಹುಡುಗರು ಪೋಷಕರ ಬೆಂಬಲ ಇಲ್ಲದೇ ಪೋಷಕರ ಒಪ್ಪಿಗೆ ಇಲ್ಲದೇ ನಮ್ಮ ಪ್ರೀತಿಯ ಹುಡುಗಿಯನ್ನು ನಾವು ಮದುವೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಗಂಡೈಕಳ ಈ ಮಾತು ಹೆಣ್ಣು ಮಕ್ಕಳನ್ನು ರೊಚ್ಚಿಗೆಬ್ಬಿಸಿದೆ.
ನೀವು ಸಿಂಗಲಾ? ಶುರುವಾಗಿದೆ ಹೊಸ ಫ್ಲಡ್‌ಲೈಟಿಂಗ್ ಟ್ರೆಂಡ್, ಏನಿದು ರಿಲೇಶನ್‌ಶಿಪ್
ಅನೇಕರು ಯಾರು ಅಮ್ಮನ ಮಗನಂತೆ ಆಡುವವರನ್ನು ಮದುವೆಯಾಗಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಅಮ್ಮನ ಮಗ ಅಂತ ಹೇಳಿಕೊಳ್ಳುವವರು ಯಾರು ಪ್ರೀತಿ ಮಾಡಲು ಹೋಗಬೇಡಿ ಎಂದು ಹೇಳಿದ್ದರೆ, ಮತ್ತೊಬ್ಬರು ಇವರಿಗೆ ಪ್ರೇಮ ಗಿಮಾ ಅಂತ ಸುತ್ತಾಡೋದಕ್ಕೆ ಯಾರ ಪರ್ಮಿಷನ್ ಬೇಕಾಗುವುದಿಲ್ಲ, ಆದರೆ ಮದುವೆಯಾಗುವುದಕ್ಕೆ ಮಾತ್ರ ಪರ್ಮಿಷನ್ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈ ಅಮ್ಮನ ಮಗ ಎಂದು ಹೇಳುವವರು ಜೀವನಪೂರ್ತಿ ಸಿಂಗಲ್ ಆಗಿ ಇದ್ದುಬಿಡಿ ಎಂದು ಹೆಣ್ಣು ಮಕ್ಕಳು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅಮ್ಮನ ಜೊತೆಯೇ ಇರುವಂತೆ ಹುಡುಗರಿಗೆ ಸಲಹೆ ನೀಡಿದ್ದಾರೆ. ಹೆಣ್ಣು ಮಕ್ಕಳ ಈ ಕಾಮೆಂಟ್‌ಗೆ ಹುಡುಗರು ರೊಚ್ಚಿಗೆದ್ದು ಮಾಡಿದ ಕಾಮೆಂಟ್ ಮಾತ್ರ ಇಲ್ಲಿ ಉಲ್ಲೇಖಿಸುವುದಕ್ಕೂ ಸಾಧ್ಯವಿಲ್ಲದಷ್ಟು ಕೆಟ್ಟದಾಗಿದೆ.
ಅದೇನೆ ಇರಲಿ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಯಾರು ಸರಿ ಯಾರು ತಪ್ಪು ಕಾಮೆಂಟ್ ಮಾಡಿ...
ವೀಡಿಯೋ ಇಲ್ಲಿದೆ ನೋಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.