ಸಾಮಾಜಿಕ ಮಾಧ್ಯಮದಲ್ಲೊಂದು ತಮಾಷೆ ವಿಡಿಯೋ ವೈರಲ್ ಆಗುತ್ತಿದೆ. ಕಾರಿನ ಮೇಲೆ ಗೆಳತಿ ಜಂಪ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಗೆಳತಿ ಜೊತೆ ರೋಮ್ಯಾನ್ಸ್ ಮಾಡುತ್ತಿರುವಾಗ ದಿಢೀರ್ ಪತ್ನಿ ಮನೆಗೆ ಆಗಮಿಸಿದರೆ ಗತಿ ಏನು? ಗೆಳತಿಗೆ ಕೆಳಕ್ಕೆ ಹಾರುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಈ ಕುತೂಹಲ ಹಾಗೂ ತಮಾಷೆ ವಿಡಿಯೋ ಇಲ್ಲಿದೆ.
ಮದುವೆ ಬಳಿಕ ಗೆಳತಿಯರ ಜೊತೆ ಸಂಬಂಧ ಇಟ್ಟುಕೊಳ್ಳುವುದು, ಹಾದಿ ಬೀದಿಯಲ್ಲಿ ಪತ್ನಿ ಅಟ್ಟಾಡಿಸಿಕೊಂಡು ಗಂಡನ ಹೊಡೆದಿರುವ ಹಲವು ಘಟನೆಗಳು ನಡೆದಿದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಬಗೆ ಬಗೆಯ ಕತೆಗಳು ಹುಟ್ಟಿಕೊಳ್ಳುತ್ತಿದೆ. ಈ ಪೈಕಿ ಅತೀ ರೋಚಕ ಕತೆಯೊಂದು ಈ ವಿಡಿಯೋ ಜೊತೆ ವೈರಲ್ ಆಗುತ್ತಿದೆ. ಮನೆಯಲ್ಲಿ ಪತ್ನಿ ಇಲ್ಲದಿರುವಾಗ ಗಂಡ, ಗೆಳತಿ ಜೊತೆ ರೋಮ್ಯಾನ್ಸ್ ಮೂಡ್‌ಗೆ ಜಾರಿದ್ದಾನೆ. ಆದರೆ ಗಂಡನ ಕಣ್ಣಾಮುಚ್ಚಾಲೆ ಆಟದ ಬಗ್ಗೆ ಅನುಮಾನಗೊಂಡಿದ್ದ ಪತ್ನಿ ಮನೆಗೆ ದಿಢೀರ್ ವಾಪಸ್ ಆಗಿದ್ದಾಳೆ. ಗೆಳತಿಯನ್ನು ಅಡಗಿಸಿಡಲು ಜಾಗವಿಲ್ಲ. ಮನೆ 4ನೇ ಮಹಡಿ. ಬೇರೆ ದಾರಿ ಕಾಣದೇ ಬೆಡ್ ರೂಂ ಕಿಟಕಿ ಮೂಲಕ ಗೆಳತಿ ಕೆಳಕ್ಕೆ ಹಾರಿದ್ದಾಳೆ. ಕೆಳಗೆ ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಹಾರಿದ ಗೆಳತಿಯ ಈ ವಿಡಿಯೋ ಅಷ್ಟೇ ಅತ್ಯುತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಕೆಳಕ್ಕೆ ಹಾರುವ ದೃಶ್ಯವಿದೆ. ಕ್ರೇಜಿ ಕ್ಲಿಪ್ಸ್ ಅನ್ನೋ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಕೊಳ್ಳಲಾಗಿದೆ. ಜೊತೆಗೆ ಪತ್ನಿ ಮನೆಗೆ ದಿಢೀರ್ ವಾಪಸ್ ಬಂದಾಗ, 4ನೇ ಮಹಡಿಯ ಬೆಡ್ ರೂಂ ಕಿಟಿಕಿಯಿಂದ ಯುವತಿಯ ಜಂಪ್ ಅನ್ನೋ ಬರಹದ ಜೊತೆ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 6.4 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರು ಮಂದಿ ಈ ವಿಡಿಯೋವನ್ನ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. ಹಲವರು ಇದೇ ರೀತಿಯ ಹಲವು ಘಟನೆಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್
ಈ ವಿಡಿಯೋದ ಅಸಲಿಯತ್ತು, ಪತ್ನಿ ಮನೆಗೆ ವಾಪಸ್ ಬಂದಿರುವ ಕಾರಣಕ್ಕೆ ಯುವತಿ ಕೆಳಕ್ಕೆ ಹಾರಿದ್ದಾರೆ ಅನ್ನೋ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಈ ಕತೆ ಮಾತ್ರ ಭಾರಿ ವೈರಲ್ ಆಗಿದೆ. ಇದರ ಜೊತೆಗೆ ಒಂದನೇ ಮಹಡಿಯಿಂದ ಯುವತಿಯೊಬ್ಬಳು ಕಿಟಕಿ ಮೂಲಕ ಹೊರಬಂದು ಕೆಳಕ್ಕೆ ಹಾರಿದ ವಿಡಿಯೋವನ್ನು ಹಾಕಿ ರಿಪ್ಲೇ ಮಾಡಲಾಗಿದೆ.
Side chick jumps out 4th floor window when lover's wife comes home unexpectedly 😳 pic.twitter.com/YQbN7xwjO8
— Crazy Clips (@crazyclipsonly)
ಮತ್ತೆ ಕೆಲವರೂ ಈಗ ಪತಿ ಹೇಗಿದ್ದಾನೆ? ವಿಡಿಯೋ ವೈರಲ್ ಆಗಿರುವ ಕಾರಣ ಗಂಡನ ಪರಿಸ್ಥಿತಿ ನಾವು ಊಹಿಸಲು ಸಾಧ್ಯ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ಇದು ತಮಾಷೆ, ಆದರೆ ಯುವತಿಯ ಸೊಂಟ ಮುರಿದಿದೆ. ಕತ್ತಿನ ಮೂಳೆ ಮುರಿತಕ್ಕೊಳಗಾಗಿದೆ. ಕಾಲು ಮೂಳೆಗಳೂ ಮುರಿದಿದೆ. ಆಕೆಯ ಪರಿಸ್ಥಿತಿ ಏನು ಎಂದು ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ 4ನೇ ಮಹಡಿ ಹತ್ತು ಮುನ್ನ ಯೋಚನೆ ಇರಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಸಾಕು ನಾಯಿ ಲಿಫ್ಟ್‌ನೊಳಗೆ ಕರೆದೊಯ್ಯಲು ಜಗಳ; ನಿವೃತ್ತ ಐಎಎಸ್ ಅಧಿಕಾರಿ - ಕುಟುಂಬದ ನಡುವೆ ಹೊಡೆದಾಟ: ವಿಡಿಯೋ ವೈರಲ್