ಹುಡುಗಿಯನ್ನು ಹೊಗಳಿ ಮೆಚ್ಚಿಸುವ ಪ್ರಯತ್ನ ನಿಮ್ಮದಾಗಿದ್ದರೆ ಇವಿಷ್ಟು ವಿಚಾರ ಗೊತ್ತಿರಲಿ

By Suvarna News  |  First Published May 28, 2022, 4:52 PM IST

ಕಾಲೇಜು ಸಮಯದಲ್ಲಿ ಹುಡುಗ ಹುಡುಗಿಯರು (Boys-girls) ಪರಸ್ಪರ ಪ್ರೀತಿ (Love)ಯಲ್ಲಿ ಬೀಳುತ್ತಾರೆ. ಇದಲ್ಲದೆ ಕಚೇರಿ, ಸ್ನೇಹಿತರ (Friends) ಬಳಗದಲ್ಲೂ ಹುಡುಗಿಯನ್ನು ಪ್ರೀತಿ ಮಾಡುವವರು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಸಿಕ್ಕಾಪಟ್ಟೆ ಹೊಗಳಿ ಹುಡುಗಿಯನ್ನು ಮೆಚ್ಚಿಸುವ ಪ್ಯಯತ್ನ ನಿಮ್ಮದಾಗಿದ್ದರೆ ಯಾವ ರೀತಿ ಹೊಗಳಬೇಕು ಎಂಬುದನ್ನು ತಿಳಿದುಕೊಳ್ಳಿ.


ಹುಡುಗಿಯರು (Girls) ಹೊಗಳಿಕೆ (Praise)ಯನ್ನು ಕೇಳಲು ಇಷ್ಟಪಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದನ್ನು ಹೇಳುವುದಕ್ಕೂ ಒಂದು ಕಲೆ ಇದೆ ಗೊತ್ತಾ. ನಿಮಗೆ ಒಬ್ಬ ಗೆಳತಿ (Girlfriend) ಇದ್ದರೆ ಮತ್ತು ಅವಳನ್ನು ಹೊಗಳುವುದರ ಮೂಲಕ ಅವಳನ್ನು ಸಂತೋಷಪಡಿಸಬಹುದು ಎಂದು ನೀವು ಭಾವಿಸಿದರೆ ನೀವು ತಿಳಿದುಕೊಂಡಿರಬೇಕಾದ ವಿಚಾರಗಳು ಹಲವು. ಹೊಗಳಿಕೆ ಸರಿಯಾದ ರೀತಿಯಲ್ಲಿದ್ದರೆ ಮಾತ್ರ ಹುಡುಗಿಯರಿಗೆ ಇಷ್ಟವಾಗುತ್ತದೆ. ಇಲ್ಲದಿದ್ದರೆ ಇದು ಜಗಳಕ್ಕೂ ಕಾರಣವಾಗಬಹುದು.

ಕಾಲೇಜು ಸಮಯದಲ್ಲಿ ಹುಡುಗ ಹುಡುಗಿಯರು ಒಬ್ಬರನ್ನೊಬ್ಬರು ತುಂಬಾ ಹೊಗಳುವುದು ಮತ್ತು ಆ ಸಮಯದಲ್ಲಿ ಅವರು ಮೊದಲ ಬಾರಿಗೆ ಪ್ರೀತಿ (Love)ಯಲ್ಲೂ ಬೀಳುತ್ತಾರೆ. ಇದಲ್ಲದೆ ಕಚೇರಿ, ಸ್ನೇಹಿತರ (Friends) ಬಳಗದಲ್ಲೂ ಹುಡುಗಿಯನ್ನು ಪ್ರೀತಿ ಮಾಡುವವರು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಸಿಕ್ಕಾಪಟ್ಟೆ ಹೊಗಳಿ ಹುಡುಗಿಯನ್ನು ಮೆಚ್ಚಿಸುವ ಪ್ಯಯತ್ನ ನಿಮ್ಮದಾಗಿದ್ದರೆ ಯಾವ ರೀತಿ ಹೊಗಳಬೇಕು ಎಂಬುದನ್ನು ತಿಳಿದುಕೊಳ್ಳಿ. ಇಲ್ಲದಿದ್ದರೆ ಇದು ಸಂಬಂಧ (Relationship)ವನ್ನು ಮುರಿಯುವ ಹಂತಕ್ಕೂ ತಲುಪಬಹುದು. 

Tap to resize

Latest Videos

ಬ್ರೇಕ್ ಅಪ್ ಆದ ಬಳಿಕ ಮುಂದೇನು ? ಚಿಂತಿಸಬೇಡಿ, ಇಲ್ಲಿದೆ ಟಿಪ್ಸ್

ಎಂದಿಗಿಂತೂ ಹೆಚ್ಚು ಸುಂದರವಾಗಿ ಕಾಣುತ್ತಿದ್ದೀರಿ
ಹುಡುಗರು ಹೆಚ್ಚಾಗಿ ಹುಡುಗಿಯರನ್ನು ಮೆಚ್ಚಿಸಲು ಹೀಗೆ ಆಗಿಂದಾಗೆ ಹೇಳುತ್ತಿರುತ್ತಾರೆ. ಕಾಲೇಜಿನಲ್ಲಿ ತಮ್ಮ ಗೆಳತಿಯನ್ನು ಹೊಗಳಲು ಈ ಪದವನ್ನು ಹೇಳುತ್ತಾರೆ. ಇದರಿಂದ ಅವಳು ಖುಷಿ ಪಡುತ್ತಾಳೆ ಅನ್ನೋದು ನಿಜ. ಆದರೆ, ಇದನ್ನು ಹೇಳುವ ಮೂಲಕ ಅವಳು ಉಳಿದ ದಿನದಲ್ಲಿ ಸುಂದರವಾಗಿ (Beautiful) ಕಾಣುವುದಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಆಕೆ ಅಂದುಕೊಳ್ಳಬಹುದು. ನಿಮಗೆ ಅಂತಹ ಉದ್ದೇಶವಿಲ್ಲದಿದ್ದರೂ ಸಹ, ನಿಮ್ಮ ಗೆಳತಿ ಖಂಡಿತವಾಗಿಯೂ ಅದರ ವಿರುದ್ಧವಾದ ಅರ್ಥವನ್ನು ತೆಗೆದುಕೊಳ್ಳಬಹುದು. ಬದಲಾಗಿ ಪ್ರತಿದಿನದಂತೆ ನೀವು ಇನ್ನೂ ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ನೀವು ಅವರಿಗೆ ಹೇಳಬಹುದು. ಇದು ಅವರಿಗೆ ನಿಜವಾದ ಸಂತೋಷವನ್ನು ನೀಡುತ್ತದೆ.

ಮಾಜಿ ಪ್ರೇಯಸಿಯನ್ನು ಹೊಗಳುವುದು
ಅನೇಕ ಬಾರಿ ಹುಡುಗರು ತಮ್ಮ ಗೆಳತಿಯರನ್ನು ತಮ್ಮ ಮಾಜಿಗೆ ಹೋಲಿಸಿ ಮಾತನಾಡುತ್ತಾ ಹೊಗಳುತ್ತಾರೆ. ಅದನ್ನು ಕೇಳಿದ ನಂತರ ಅವರ ಭಾವನೆಯು ಬದಲಾಗಬಹುದು. ಅನೇಕ ಬಾರಿ ನೀವು ಕಾಂಪ್ಲಿಮೆಂಟ್ ಕೊಟ್ಟಿದ್ದೀರಿ ಎಂದುಕೊಳ್ಳುತ್ತೀರಿ, ಆದರೆ ಹಳೆಯ ಪ್ರೀತಿಯ ಬಗ್ಗೆ ಮಾತನಾಡುತ್ತಾ, ಇವತ್ತಿಗೂ ನಿಮ್ಮ ಮನಸ್ಸಿನಲ್ಲಿ ಎಕ್ಸ್‌ಗೆ ಸ್ಥಾನವಿದೆ ಎಂಬುದನ್ನು ನೀವು ತೋರಿಸಿಕೊಡುತ್ತಿದ್ದೀರಿ. ಆದ್ದರಿಂದ, ನಿಮ್ಮ ಗೆಳತಿಯನ್ನು ಹೊಗಳುವಾಗ, ಅವಳನ್ನು ನಿಮ್ಮ ಮಾಜಿ ಜೊತೆ ಹೋಲಿಸಬೇಡಿ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ನೀವು ತುಂಬಾ ಸ್ಪೆಷಲ್. ನನ್ನ ಜೀವನದಲ್ಲಿ ನೀವಿರುವುದೇ ಅದೃಷ್ಟ. ಇಲ್ಲಿಯವರೆಗೆ ಜೀವನದಲ್ಲಿ ನಿಮ್ಮಂಥವರನ್ನು ಯಾರನ್ನೂ ನೋಡಿಲ್ಲ ಎಂದು ನೀವು ಅವರಿಗೆ ಹೇಳಬಹುದು.

Relationship Tips : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ

ಸರಿಯಾದ ರೀತಿಯಲ್ಲಿ ಹೊಗಳಿ
ಹುಡುಗಿಯರು ಹೆಚ್ಚಿನ ಸ್ನೇಹಿತೆಯರನ್ನು ಹೊಂದಿರುತ್ತಾರೆ. ಅಲ್ಲದೆ ಆ ಸ್ನೇಹಿತರು ಮನಸ್ಸಿಗೆ ಹತ್ತಿರವಾಗಿರುತ್ತಾರೆ. ಯಾರಾದರೂ ಏನಾದರೂ ಹೇಳಿದರೆ ಅವರು ಅದನ್ನು ಸಹಿಸುವುದಿಲ್ಲ. ಕಾಲೇಜಿನಲ್ಲಿ ಹೇಗಿದ್ದರೂ ಹುಡುಗಿಯರು ಆತ್ಮೀಯ ಸ್ನೇಹವನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗೆಳತಿಯನ್ನು ಹೊಗಳುವಾಗ ಮಧ್ಯದಲ್ಲಿ ಆಕೆಯ ಸ್ನೇಹಿತೆಯನ್ನು ತೆಗಳದಿರಿ. ಅವಳನ್ನು ಮೆಚ್ಚಿಸಲು, ನೀವು ಅವಳ ಸ್ನೇಹಿತೆಯನ್ನು ನೋಡಲು ಚೆನ್ನಾಗಿಲ್ಲವೆಂದಾಗ ಅವಳು ತುಂಬಾ ಸಂತೋಷವಾಗಿರುತ್ತಾಳೆ ಎಂದು ನೀವು ಯೋಚಿಸಬಹುದು. ಆದರೆ ಇದು ಹಾಗಲ್ಲ, ನಿಮ್ಮ ಆಲೋಚನೆಯನ್ನು ನೋಡಿದ ನಂತರ ಅವಳು ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾಳೆ.

ಕೋಪಗೊಂಡಾಗ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ
ಗೆಳತಿಯ ಹೊಗಳಿಕೆ ಎಂದರೆ ಏನೇನನ್ನೋ ಹೇಳಬೇಕು ಎಂದಲ್ಲ. ಕೆಲವೊಮ್ಮೆ ಹುಡುಗರು ತಮ್ಮ ಗೆಳತಿಯರು ಕೋಪಗೊಂಡಾಗ ತಮಾಷೆ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಆ ಸಮಯದಲ್ಲಿ ಅವಳು ಇನ್ನಷ್ಟು ಸಿಟ್ಟಿಗೇಳುತ್ತಾಳೆ. ಸಿಟ್ಟು ಬಂದಿರುವಾಗ ಏನು ಹೇಳಿದರೂ ಕೆಟ್ಟದ್ದೇ ಅನಿಸುತ್ತದೆ. ಒಳ್ಳೆಯದೆಂದು ಹೇಳಿದರೆ ಅದು ಕೆಟ್ಟದು ಅನ್ನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗೆಳತಿಯರು ಕೋಪಗೊಂಡಾಗ ಮೌನವಾಗಿರಲು ಪ್ರಯತ್ನಿಸಿ ಮತ್ತು ನೀವು ಯಾವಾಗಲೂ ನಗುವುದನ್ನು ಇಷ್ಟಪಡುತ್ತೀರಿ ಎಂದು ಅವರಿಗೆ ಅನಿಸುತ್ತದೆ.

ಸೋ, ಹೊಗಳಿ ಅಟ್ಟಕ್ಕೇರಿಸಿ ಹುಡುಗೀನ ಪಟಾಯಿಸ್ಬೋದು ಅನ್ನೋ ಪ್ಲಾನ್ ನಿಮ್ಮದಾಗಿದ್ದರೆ ಪ್ಲಾನ್ ಪ್ಲಾಪ್ ಆಗದಿರೋ ರೀತಿ ಎಲ್ಲಾ ವಿಚಾರ ತಿಳ್ಕೊಂಡಿರಿ ಅಷ್ಟೆ.

click me!