
ಪ್ರೇಮ ಸಂಬಂಧಗಳಲ್ಲಿ ಯುವತಿ ನಮ್ಮ ಮನೆಯಲ್ಲಿ ಯಾರೂ ಸಿಂಗಲ್ ಆಗಿದ್ದೀನಿ, ಮನೆಗೆ ಬರ್ತೀಯಾ ಎಂದು ಕರೆಯುವುದು ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೂ ಕಾಮನ್ ಆಗಿದೆ. ಅದೇ ರೀತಿ ಪ್ರೇಯಸಿ ನಮ್ಮ ಮನೆಯಲ್ಲಿ ಯಾರೂ ಇಲ್ಲ, ಬೇಗನೆ ಬಾ... ಎಂದು ತನ್ನ ಪ್ರೇಮಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಅಲ್ಲಿ ದೈಹಿಕ ಸಂಪರ್ಕಕ್ಕೆ ಹಾತೊರೆಯುತ್ತಿದ್ದ ಪ್ರೇಮಿಯ ಖಾಸಗಿ ಅಂಗವನ್ನೇ ಕತ್ತರಿಸಿ ಕಳಿಸಿದ್ದಾಳೆ.
ಈ ಬೆಚ್ಚಿಬೀಳಿಸುವ ಘಟನೆ ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ವರದಿಯಾಗಿದೆ. ಖಲೀಲಾಬಾದ್ ಕೋಟ್ವಾಲಿ ಪ್ರದೇಶದ ಮುಶಾರ ಗ್ರಾಮದ ಯುವತಿ ತನ್ನ ಪ್ರೇಮಿಯ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಇಬ್ಬರ ನಡುವೆ ಏನೋ ವಿಚಾರಕ್ಕೆ ಜಗಳ ನಡೆದಿದ್ದು, ನಂತರ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಖಲೀಲಾಬಾದ್ ಕೋಟ್ವಾಲಿ ಪ್ರದೇಶದ ಜಂಗಲ್ ಕಾಲದಲ್ಲಿ ವಾಸಿಸುವ 19 ವರ್ಷದ ವಿಕಾಸ್ ನಿಷಾದ್ ಸೋಮವಾರ ತನ್ನ ಪಕ್ಕದೂರಿನ ಮುಶಾರ ಗ್ರಾಮದ ಗೆಳತಿಯನ್ನು ನೋಡಲು ಹೋಗಿದ್ದ. ಆತ ಆಕೆಯ ಮನೆಯಲ್ಲಿ ಸುಮಾರು 6 ಗಂಟೆಗಳ ಕಾಲ ಕಳೆದಿದ್ದನು. ಕೊನೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ನಂತರ ಯುವತಿ ವಿಕಾಸ್‌ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ.
ಇನ್ನು ಪ್ರೇಯಸಿಯ ಮನೆಗೆ ಹೋಗಿದ್ದ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸ್ಥಳೀಯರು ಆತನನ್ನು ತನ್ನ ಮನೆಗೆ ಕರೆದೊಯ್ಯಲಾಗಿದೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಅಂಗ ಕತ್ತರಿಸಿದ ನಂತರ ಗಂಟೆಗಟ್ಟಲೆ ರಕ್ತಸ್ರಾವವಾಗಿದೆ ಎಂದು ವರದಿಗಳು ತಿಳಿಸಿವೆ. ವಿಕಾಸ್ ಮತ್ತು ಆತನ ಪ್ರೇಯಸಿ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ವಿಕಾಸ್‌ನನ್ನು ಮನೆಗೆ ಕರೆಸಿದ್ದಳು ಎಂದು ವರದಿಗಳು ತಿಳಿಸಿವೆ.
ಯುವತಿ ಮನೆಗೆ ಹೋಗಿದ್ದ ವಿಕಾಸ್‌ನನ್ನು ಸ್ಥಳೀಯರು ಮನೆಗೆ ಕರೆದುಕೊಂಡು ಬಂದ ನಂತರ ಪ್ರಜ್ಞಾಹೀನನಾಗಿದ್ದಾನೆ ಎಂದು ವಿಕಾಸ್‌ನ ತಾಯಿ ಹೇಳಿದ್ದಾರೆ. ಯುವತಿ ಉದ್ದೇಶಪೂರ್ವಕವಾಗಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಕೋಟ್ವಾಲಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.