
ಬೆಂಗಳೂರು (ಜು.01) ಡೇಟಿಂಗ್ ಮಾಡಬೇಕು, ಆದರೆ ಖರ್ಚಾಗಬಾರದು ಅನ್ನೋ ಪ್ಲಾನ್‌ನಲ್ಲಿ ನೀವಿದ್ದರೆ ನಿಮಗೆ ಬೆಂಗಳೂರಿಗಿಂತ ಬೆಸ್ಟ್ ನಗರ ಇನ್ನೊಂದಿಲ್ಲ. ಇದು ಡೈಯ್‌ಚೆ ಬ್ಯಾಂಕ್ ನಡೆಸಿದ ಸಮೀಕ್ಷಾ ವರದಿ. ವಿಶ್ವದ ನಗರಳ ಪೈಕಿ ಬೆಂಗಳೂರು ಡೇಟಿಂಗ್ ಮಾಡುವವರಿಗೆ ಸ್ವರ್ಗ. ಕಾರಣ ಡೇಟಿಂಗ್ ಜೋಡಿಗೆ ವಿಶ್ವದಲ್ಲೇ ಅತೀ ಅಗ್ಗದ, ಕೈಗೆಟುಕುವ ನಗರ ಬೆಂಗಳೂರು ಎಂದು ಸಮೀಕ್ಷೆ ಹೇಳಿದೆ. 2025ರ ವರ್ಲ್ಡ್ ಪ್ರೈಸ್ ಅನ್ನೋ ಸಮೀಕ್ಷೆಯನ್ನು ಈ ಬ್ಯಾಂಕ್ ಮಾಡಿದೆ. ಲಂಡನ್, ಜಿನೆವಾ, ಪ್ಯಾರಿಸ್ ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಪಾರ್ಟ್ನರ್ ಜೊತೆ ರೊಮ್ಯಾಂಟಿಕ್ ಸಂಜೆ ಕಳೆಯಬೇಕು ಎಂದರೆ ಪರ್ಸ್ ಅಥವಾ ಕಾರ್ಡ್ ಗಟ್ಟಿಯಾಗಿರಬೇಕು. ಆದರೆ ಬೆಂಗಳೂರು ಹಾಗಲ್ಲ, ಕೈಯಲ್ಲಿ ಕಾಸಿಲ್ಲದಿದ್ದರೂ ನಿಮ್ಮ ಡೇಟಿಂಗ್‌ಗೆ ಯಾವುದೇ ಅಡ್ಡಿ ಆತಂಕವಿಲ್ಲ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆ ಬಯಲು ಮಾಡಿದ ಕೈಗೆಟುಕವ ನಗರ
ವಿಶ್ವದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಡೇಟಿಂಗ್ ಜೋಡಿಗಳಿಗೆ ಬಜೆಟ್ ಫ್ರೆಂಡ್ಲಿ. ನಿಮ್ಮ ಕೈಯಲ್ಲಿರುವ ಅಲ್ಪ ಹಣದಲ್ಲೂ ನೆಮ್ಮದಿಯಾಗಿ ಡೇಟಿಂಗ್ ಮಾಡಲು ಬೆಂಗಳೂರು ಅವಕಾಶ ನೀಡುತ್ತದೆ. ಬ್ಯಾಂಕ್ ಸಮೀಕ್ಷೆಯಲ್ಲಿ ಡೇಟಿಂಗ್ ಜೋಡಿಗಳು ತೆರಳುವ ಸ್ಥಳ, ಅಲ್ಲಿನ ದರ, ಶಾಪಿಂಗ್, ಡಿನ್ನರ್ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಬೆಂಳೂರು ಡೇಟಿಂಗ್ ಜೋಡಿಗೆ ಕೈಗೆಟುಕುವ ನಗರವಾಗಿ ಹೊರಹೊಮ್ಮಿದೆ
ಚೀಪ್ ಡೇಟಿಂಗ್ ಇಂಡೆಕ್ಸ್ ಅಡಿಯಲ್ಲಿ ಒಂದಷ್ಟು ಪಟ್ಟಿ ಮಾಡಿ ಸಮೀಕ್ಷೆ ಮಾಡಲಾಗಿದೆ. ಆಯಾ ನಗರಗಳಲ್ಲಿ ಡೇಟಿಂಗ್ ಜೋಡಿಗಳು ಹೆಚ್ಚಾಗಿ ತೆರಳುವ ಸ್ಥಳ, ಆಸಕ್ತಿ ವಿಚಾರ, ಶಾಪಿಂಗ್, ಡಿನ್ನರ್, ಮೂವಿ ಸೇರಿದಂತೆ ಇತರ ಖರ್ಚು ವೆಚ್ಚಗಳ ಮಾನದಂಡದಲ್ಲಿ ವರದಿ ತಯಾರಿಸಲಾಗಿದೆ.
ವೈನ್ ಬಾಟಲ್
ಜೋಡಿ ಜೀನ್ಸ್
ಡ್ರೆಸ್
ಜ್ಯೂಸ್ ಅಥಾ ಕಾಫಿ
ರಾತ್ರಿ ಊಟ
ಎರಡು ಸಿನಿಮಾ ಟಿಕೆಟ್
ಎರಡು ಸಾರಿಗೆ ಟಿಕೆಟ್
5 ಕಿಲೋಮೀಟರ್ ಕ್ಯಾಬ್ ಪ್ರಯಾಣ
ಸಮೀಕ್ಷೆ ವೇಳೆ ಈ ಪಟ್ಟಿ ಅಧಾರದಲ್ಲಿ ಯಾವ ನಗರ ಅಗ್ಗವಾಗಿದೆ ಎಂದು ಪರೀಕ್ಷಿಸಲಾಗಿದೆ. ಬೆಂಗಳೂರಿನ ರೊಮ್ಯಾಂಟಿಕ್ ತಾಣಗಳಲ್ಲಿ ಡೇಟಿಂಗ್ ಅತೀ ಕಡಿಮೆ ಬಜೆಟ್‌ನಲ್ಲಿ ಸಾಧ್ಯವಾಗುತ್ತಿದೆ. ಜಿನೆವಾ, ಜ್ಯೂರಿಚ್, ಲಂಡನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಡೇಟಿಂಗ್ ಜೋಡಿಗೆ ಕನಿಷ್ಠ ಒಂದು ರೊಮ್ಯಾಂಟಿಕ್ ಸಂಜೆಗೆ 450 ಯುಎಸ್ ಡಾಲರ್ ಬೇಕು. ಆದರೆ ಇದೇ ಬೆಂಗಳೂರಿನ ಡೇಟಿಂಗ್ ಜೋಡಿಗೆ 104 ಯುಎಸ್ ಡಾಲರ್ ಸಾಕು. ಭಾರತದ ಇತರ ನಗರಕ್ಕೂ ಹೋಲಿಸಿದೂ ಬೆಂಗಳೂರಿನಲ್ಲಿ ಡೇಟಿಂಗ್ ಜೋಡಿಯ ವೆಚ್ಚ ಅತೀ ಕಡಿಮೆ.
ಬಜೆಟ್ ಮಾತ್ರವಲ್ಲ ಬೆಂಗಳೂರು ಡೇಟಿಂಗ್ ಆಲ್ರೌಂಡರ್
ಬೆಂಗಳೂರು ಡೇಟಿಂಗ್ ಜೋಡಿಗೆ ಬಜೆಟ್ ಮಾತ್ರವಲ್ಲ, ಅತ್ಯುತ್ತಮ ತಾಣ ಕೂಡ ಹೌದು. ಕಾರಣ ಕೆಫೆ ಕಲ್ಚರ್, ವೈನ್, ಪಬ್ ಸೇರಿದಂತೆ ಮಾಡರ್ನ್ ಡೇಟಿಂಗ್ ಸ್ಪಾಟ್‌ಗೂ ಬೆಂಗಳೂರು ಮುಂದಿದೆ. ಲೈವ್ ಮ್ಯೂಸಿಕ್, ಹಚ್ಚ ಹಸುರಿನ ತಾಣ, ಉದ್ಯಾನ ನಗರ, ತಣ್ಣನೆ ವಾತಾವರಣ ವಿದ್ಯಾರ್ಥಿಗಳು ಅಥವಾ ಕಿರಿಯ ವಯಸ್ಸಿನವರನ್ನು ಕಾಫಿ ಹೀರುವಂತೆ, ಟೆಕ್ಕಿ, ವೃತ್ತಿಪರರನ್ನು ಕಾಕ್‌ಟೈನ್ ಸಿಪ್ ಮಾಡುವ ಅವಕಾಶ ನೀಡುವ ನಗರ ಬೆಂಗಳೂರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.