
ಬೆಂಗಳೂರು: ಈಗಿನ ಜೆನ್ ಝಿ ತಲೆಮಾರಿನ ಬಗ್ಗೆ ಅದರ ಹಿಂದಿನ ಪೀಳಿಗೆಯ ಜನರಿಗೆ ವಿಶೇಷ ಕುತೂಹಲವಿದೆ. ಮೊಬೈಲ್ ಇಂಟರ್‌ನೆಟ್ ಕೈಗೆಟುಕುವ ಕಾಲಘಟದಲ್ಲಿ ಹುಟ್ಟಿದ ಈ ಜೆನ್ ಕಿಡ್‌ಗಳು ಬಹಳಷ್ಟು ಬುದ್ಧಿವಂತರು, ಹಿಂದಿನ ಪೀಳಿಗೆಗಿಂತಲೂ ಚುರುಕುತನವನ್ನು ಹೊಂದಿರುವರು. 1997ರಿಂದ 2012ರ ನಡುವೆ ಜನಿಸಿರುವವರು ಜೆನ್ ಝಿ ಕಿಡ್‌ಗಳಾಗಿದ್ದು, ಈ ತಲೆಮಾರಿನ ಆರಂಭದಲ್ಲಿ ಜನಿಸಿದವರು ಮದುವೆಯ ಹಂತಕ್ಕೆ ಕಾಲಿಟ್ಟಿದ್ದು, ಅವರ ನೆಚ್ಚಿನ ಸ್ಥಳ ಯಾವುದು ಅವರು ಹನಿಮೂನ್‌ಗೆ ಹೋಗುವುದಕ್ಕೆ ಯಾವ ಸ್ಥಳವನ್ನು ಇಷ್ಟಪಡುತ್ತಾರೆ ಎಷ್ಟು ವೆಚ್ಚ ಮಾಡುತ್ತಾರೆ ಎಂಬ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..
ಈ ಭಾರತೀಯ ಜೆನ್ ಝಿ ಜೋಡಿಗಳು, ಅಡುಗೆ ತರಗತಿಗಳಿಂದ ಹಿಡಿದು ಮದುವೆಯ ಉಂಗುರ ತಯಾರಿಸುವ ಕಾರ್ಯಾಗಾರಗಳವರೆಗೆ ಮದುವೆಯ ಪರಿಕಲ್ಪನೆ ಹನಿಮೂನ್‌ಗಳ ವಿಚಾರದಲ್ಲಿ ಹೊಸ ಕ್ರಾಂತಿಯನ್ನೇ ಮಾಡ್ತಿದ್ದಾರೆ.. ಹೌದು ಜೇನ್ ಝಿ ಎಂದರೆ ತಂತ್ರಜ್ಞಾನವನ್ನೇ ಅರಿದು ಕುಡಿದಿರುವ ತಲೆಮಾರು. ತಮ್ಮದೇ ಶಾರ್ಟ್ ಕಟ್ ಭಾಷೆ ಬಳಸುವ ಇಂತಹ ತಲೆಮಾರುಗಳ ಜೊತೆ ಏಗೋದು ಹೇಗೆ ಎಂಬುದು ಅನೇಕ ಪೋಷಕರ ಅಳಲು. ಆದರೆ ಜೇನ್ ಝಿ ಕಿಡ್‌ಗಳು ಬಹಳ ಬುದ್ಧಿವಂತರು, ಅಸಾಮಾನ್ಯ ಐಷಾರಾಮಿ ಪ್ರವಾಸಿ ಯೋಜನೆಗಳಿಂದ ಇವರು ದೂರ ಸರಿಯುತ್ತಿದ್ದು, ದೃಢತೆ, ಸಂಸ್ಕೃತಿ ಮತ್ತು ಸಂಪರ್ಕವನ್ನು ಅಳವಡಿಸಿಕೊಳ್ಳುವುದಕ್ಕೆ ಈ ಪೀಳಿಗೆ ಮುಂದಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಈ ಹೊಸ ಪೀಳಿಗೆಯ ಈ ಜನರು ದುಬಾರಿ ಟ್ರಾವೆಲ್ ಡೆಸ್ಟಿನೇಷನ್‌ಗಳು, ಹನಿಮೂನ್ ಸ್ಪಾಟ್‌ಗಳನ್ನು ಬಿಟ್ಟು ವೈಯಕ್ತಿಕವಾಗಿ ಸ್ಮರಣೀಯವೆಂದು ಭಾವಿಸುವ ನೆನಪುಗಳನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತರಾಗಿದ್ದಾರಂತೆ. ಇತ್ತೀಚಿನ ಪಿಕ್ಕಿಯೋರ್‌ಟ್ರೈಲ್ ಸಮೀಕ್ಷೆಯ ಪ್ರಕಾರ, ಜನರೇಷನ್ ಝಡ್ ಯೋಜಿತ ರಜಾದಿನಗಳಿಗಿಂತ ವೃತ್ತಿಪರವಾಗಿ ಪ್ಲಾನ್ ಮಾಡಿ ಯೋಜನೆ ರೂಪಿಸುತ್ತಾರೆ.
ಭಾರತದ ಟ್ರಾವೆಲ್ ಟ್ರೆಂಡ್ಸ್ ತೋರಿಸುವಂತೆ ಭಾರತೀಯ ಜೇನ್ ಝೀ ಸಮುದಾಯವೂ ಯೋಜಿತ ರಜಾದಿನಗಳನ್ನು ಕೈ ಬಿಟ್ಟು ತಮ್ಮ ರಜಾದಿನಗಳು ಹನಿಮೂನ್ ಒಳಗೊಂಡಂತೆ ಎಲ್ಲವನ್ನೂ ಹೇಗೆ ಯೋಜಿಸಲು ಬಯಸುತ್ತಾರೆ ಎಂಬುದರಲ್ಲಿ ಸ್ಪಷ್ಟ ಬದಲಾವಣೆ ಕಾಣುತ್ತಿದೆ. ಪ್ರಮಾಣಿತ ಪ್ರವಾಸದ ವಿವರಗಳಿಗೆ ವಿರುದ್ಧವಾಗಿ, ಜೋಡಿಗಳು ವೈಯಕ್ತಿಕ ಮತ್ತು ಉದ್ದೇಶಪೂರ್ವಕ ರಜಾದಿನಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪಿಕ್ಕಿಯೋರ್‌ಟ್ರೈಲ್ ವಿಶ್ಲೇಷಿಸಿದಂತೆ ಜನರೇಷನ್ ಝಡ್ ಈ ಬದಲಾವಣೆಗೆ ಚಾಲನೆ ನೀಡುತ್ತಿದೆ. 62% ಜನರು ಕ್ಯುರೇಟೆಡ್ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದರೆ 38% ಮಿಲೇನಿಯಲ್‌ಗಳು ಸೌಕರ್ಯ ಮತ್ತು ಪರಿಚಿತತೆಯನ್ನು ಬೆಂಬಲಿಸುತ್ತಾರೆ.
ಪಿಕ್‌ಯೋರ್‌ಟ್ರೇಲ್ ಸಮೀಕ್ಷೆಯ ಪ್ರಕಾರ, ವಿಯೆಟ್ನಾಂ ಮತ್ತು ದುಬೈ ಜೇನ್ ಝಿ ಜೋಡಿಗಳ ಹನಿಮೂನ್‌ಗಳಿಗೆ ಹೊಸ ಹಾಟ್‌ಸ್ಪಾಟ್‌ಗಳಾಗಿ ಹೊರಹೊಮ್ಮಿವೆ. ಆದರೆ ಮಾಲ್ಡೀವ್ಸ್, ಬಾಲಿ, ಥೈಲ್ಯಾಂಡ್ ಮತ್ತು ಯುರೋಪ್ ಶಾಶ್ವತ ನೆಚ್ಚಿನ ತಾಣಗಳಾಗಿ ಉಳಿದಿವೆ. ಇಂದಿನ ಸರಾಸರಿ ಹನಿಮೂನ್ ಬಜೆಟ್ ₹1ರಿಂದ 2 ಲಕ್ಷದ ನಡುವೆ ಇದೆ. ಆದರೆ ಕ್ಯುರೇಟೆಡ್, ವೈಯಕ್ತಿಕಗೊಳಿಸಿದ ಅನುಭವಗಳನ್ನು ಬಯಸುವ ದಂಪತಿಗಳು ಸಾಮಾನ್ಯವಾಗಿ ₹3 ರಿಂದ 4 ಲಕ್ಷ ಖರ್ಚು ಮಾಡುತ್ತಾರೆ. ವರ್ಷಗಳಲ್ಲಿ, ಒಟ್ಟಾರೆ ಹನಿಮೂನ್ ವೆಚ್ಚದಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರವಾದ 5% ಏರಿಕೆ ಕಂಡುಬಂದಿದೆ. ಚೆನ್ನೈ, ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ನಗರಗಳು ಹನಿಮೂನ್ ಹಾದಿಯಲ್ಲಿ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ಬುಕಿಂಗ್‌ಗಳನ್ನು ಹೊಂದಿವೆ.
ಇದನ್ನೂ ಓದಿ: ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣದ ವಿಚಾರದಲ್ಲೂ ಕೇರಳ ಸರ್ಕಾರದ ರಾಜಕೀಯ: ಪಿಎಂಶ್ರೀ ಯೋಜನೆಗೆ ಬ್ರೇಕ್
ಇದನ್ನೂ ಓದಿ: ವಿವಾಹಿತ ಮುಸ್ಲಿಂ ವ್ಯಕ್ತಿ ಜೊತೆ ಪ್ರೀತಿ: ಮಗಳ ಗೃಹ ಬಂಧನದಲ್ಲಿಟ್ಟ ಕೇರಳ ಸಿಪಿಎಂ ನಾಯಕ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.