ಪ್ರೀತಿಯೆಂಬ ಸಂಬಂಧಕ್ಕೆ ಇವತ್ತಿನ ದಿನಗಳಲ್ಲಿ ನಿರ್ಧಿಷ್ಟ ವ್ಯಾಖ್ಯಾನವನ್ನು ಹೇಳುವುದು ಕಷ್ಟ. ಯಾಕೆಂದರೆ ಬದಲಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಸಹ ಸಂಬಂಧದಲ್ಲ ತೊಡಗಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಕಾಮನ್ ಆಗಿದೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಇಂಗ್ಲೆಂಡ್ನಲ್ಲೊಬ್ಬ ಯುವತಿ ದೆವ್ವದೊಂದಿಗೆ ಸಂಬಂಧವಿಟ್ಟುಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಪ್ರೀತಿಯೆಂಬ ಸಂಬಂಧಕ್ಕೆ ಇವತ್ತಿನ ದಿನಗಳಲ್ಲಿ ನಿರ್ಧಿಷ್ಟ ವ್ಯಾಖ್ಯಾನವನ್ನು ಹೇಳುವುದು ಕಷ್ಟ. ಯಾಕೆಂದರೆ ಪ್ರೀತಿ, ಪ್ರೇಮ, ಪ್ರಣಯವೆಂಬ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕೇವಲ ಗಂಡು-ಹೆಣ್ಣಿಗಷ್ಟೇ ಸೀಮಿತಿವಾಗಿ ಉಳಿದಿಲ್ಲ. ಬದಲಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಸಹ ಸಂಬಂಧದಲ್ಲ ತೊಡಗಿಸಿಕೊಳ್ಳುತ್ತಾರೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಇಂಗ್ಲೆಂಡ್ನಲ್ಲೊಬ್ಬ ಯುವತಿ ದೆವ್ವದೊಂದಿಗೆ ಸಂಬಂಧವಿಟ್ಟುಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಪ್ರೀತಿಯೆಂಬ ಸಂಬಂಧಕ್ಕೆ ಇವತ್ತಿನ ದಿನಗಳಲ್ಲಿ ನಿರ್ಧಿಷ್ಟ ವ್ಯಾಖ್ಯಾನವನ್ನು ಹೇಳುವುದು ಕಷ್ಟ. ಯಾಕೆಂದರೆ ಪ್ರೀತಿ, ಪ್ರೇಮ, ಪ್ರಣಯವೆಂಬ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕೇವಲ ಗಂಡು-ಹೆಣ್ಣಿಗಷ್ಟೇ ಸೀಮಿತಿವಾಗಿ ಉಳಿದಿಲ್ಲ. ಬದಲಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಸಹ ಸಂಬಂಧದಲ್ಲ ತೊಡಗಿಸಿಕೊಳ್ಳುತ್ತಾರೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಇಂಗ್ಲೆಂಡ್ನಲ್ಲೊಬ್ಬ ಯುವತಿ ದೆವ್ವದೊಂದಿಗೆ ಸಂಬಂಧವಿಟ್ಟುಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಉತ್ತರ ಕೆರೊಲಿನಾದ ವಿಲ್ಮಿಂಗ್ಟನ್ ನಿವಾಸಿ ರೆಬೆಕಾ ಕಾರ್ಮೈಕಲ್ ತಾನು ದೆವ್ವದೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.
undefined
‘ಪ್ರೇತ ಮದುವೆ’ಗೆ ಪ್ರೇತ ವರ ಬೇಕಾಗಿದ್ದಾರೆ: ಚರ್ಚೆಗೆ ಕಾರಣವಾದ ಜಾಹೀರಾತು!
ರೆಬೆಕಾಳ ಗೆಳೆಯ ನೂರಾರು ವರ್ಷಗಳ ಹಿಂದೆ ನಿಧನರಾದ ವೆಲ್ಷ್ ಸೈನಿಕನ ಆತ್ಮ ಎಂದು ತಿಳಿದುಬಂದಿದೆ. ಅವನಿಗೆ ರೂಪರ್ಟ್ ಎಂದು ಹೆಸರಿಸಲಾಗಿದೆ. ಪಾಡ್ಕ್ಯಾಸ್ಟ್ ಸಂಭಾಷಣೆಯಲ್ಲಿ, ರೆಬೆಕಾ ತನ್ನ ಪ್ರೇತ ಗೆಳೆಯನನ್ನು ಹೇಗೆ ಭೇಟಿಯಾದಳು ಎಂಬುದನ್ನು ಬಹಿರಂಗಪಡಿಸಿದಳು.
ಪ್ರೇತವು ಯುವತಿ ಒಬ್ಬಂಟಿಯಾಗಿದ್ದಾಗ ಅವಳ ಒಡನಾಟವನ್ನು ಬಯಸಿದ್ದು, ತನ್ನೊಂದಿಗೆ ಇರುತ್ತೀರಾ ಎಂದು ಕೇಳಿತು. ಆರಂಭದಲ್ಲಿ, ಅವಳು ಅವನಿಂದ ತನಗೆ ಅಪಾಯವಾಗಬಹುದು ಎಂದು ಅಂದುಕೊಂಡಳು. ಆದರೆ ನಂತರದ ದಿನಗಳಲ್ಲಿ ಅವನು ನಿಜವಾಗಿಯೂ ಒಳ್ಳೆಯವನು ಎಂಬ ಭಾವನೆ ಬಂದ ಕಾರಣ ಅವನ ಜೊತೆ ಹೋಗಲು ಒಪ್ಪಿಕೊಂಡಳು ಎಂದು ತಿಳಿದುಬಂದಿದೆ.
20 ಕೋಟಿ ಬಂಗಲೆ ಕೊಳ್ಳಲು ಯೂರೂ ಇಲ್ಲ, 60 ವರ್ಷದಿಂದ ಖಾಲಿ ಇರೋ ಇಲ್ಲಿ ದೆವ್ವದ ಕಾಟವೇ?
ದೆವ್ವವಲ್ಲದೆ ರೆಬೆಕಾಗೆ ಕ್ಯಾಥರಿನ್ಗೂ ಎಂಬ ಯುವತಿಯ ಜೊತೆಗೂ ಸಂಬಂಧವಿದೆ. ಆದರೆ ರೆಬೆಕಾಳ ದೆವ್ವದ ಸ್ನೇಹದ ಬಗ್ಗೆ ಕ್ಯಾಥರಿನ್ ಯಾವುದೇ ಅಸೂಯೆಯನ್ನು ಅನುಭವಿಸುವುದಿಲ್ಲ ಎಂದು ಹೇಳುತ್ತಾರೆ. ಬದಲಿಗೆ ಅವರ ಸಂಪರ್ಕ ಮತ್ತು ಅದು ಹೇಗೆ ಬಂದಿತು ಎಂಬುದರ ಬಗ್ಗೆ ಅಪಾರ ಗೌರವವಿದೆ ಎನ್ನುತ್ತಾರೆ.
ರೆಬೆಕಾ ಅವರು ರೂಪರ್ಟ್ ಅವರೊಂದಿಗಿನ ಸಂಬಂಧವು ಇತ್ತೀಚಿನದಲ್ಲ. ನಾನು ಹಿಂದಿನ ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ. '1781ರಲ್ಲಿ ರೂಪರ್ಟ್ 82ನೇ ರೆಜಿಮೆಂಟ್ನ ಭಾಗವಾಗಿ ಇಲ್ಲಿ ನೆಲೆಸಿದಾಗ ನಾನು ಅವನ ಬಗ್ಗೆ ತಿಳಿದಿದ್ದೇನೆ' ಎಂದು ರೆಬೆಕಾ ಹೇಳಿದರು. ಈ ಹಿಂದಿನ ಜನ್ಮದಲ್ಲಿ ಇಬ್ಬರೂ ಮದುವೆಯಾಗಿದ್ದರು ಎಂದು ರೆಬೆಕಾ ಹೇಳಿದ್ದಾರೆ. ಇತರ ಸಂಮೋಹನಕಾರರು ಮತ್ತು ಅತೀಂದ್ರಿಯ ಮಾಧ್ಯಮಗಳ ಸಹಾಯದಿಂದ ರೆಬೆಕಾ ಇದನ್ನು ದೃಢಪಡಿಸಿದ್ದಾರೆ. ಆಶ್ಚರ್ಯಕರವಾಗಿ, ನೆಟಿಜನ್ಗಳು ಆಕೆಯ ಪರಿಸ್ಥಿತಿಯ ಬಗ್ಗೆ ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.