ಗಂಡು- ಹೆಣ್ಣಿನ ಸಂಬಂಧ ಸುಂದರವಾಗಿರೋ ಹೆಣ್ಣಿನ ಮೇಲೆ ನಿಂತಿರುತ್ತದಂತೆ! ಚಾಣಕ್ಯ ಹೇಳ್ತಾರೆ ಕೇಳಿ

Published : Dec 26, 2023, 03:13 PM IST
ಗಂಡು- ಹೆಣ್ಣಿನ ಸಂಬಂಧ ಸುಂದರವಾಗಿರೋ ಹೆಣ್ಣಿನ ಮೇಲೆ ನಿಂತಿರುತ್ತದಂತೆ! ಚಾಣಕ್ಯ ಹೇಳ್ತಾರೆ ಕೇಳಿ

ಸಾರಾಂಶ

ಗಂಡು ಹೆಣ್ಣನ್ನು, ಹೆಣ್ಣು ಗಂಡನ್ನು ಯಾವಾಗ ಮೆಚ್ಚುತ್ತಾರೆ? ಯಾವಾಗ ಜೊತೆಯಾಗಿರುತ್ತಾರೆ? ಯಾವಾಗ ಬಿಡುತ್ತಾರೆ? ಈ ಕುರಿತು ಚಾಣಕ್ಯ ಹೇಳಿದ ಅಂಶಗಳನ್ನು ಇಲ್ಲಿ ನೋಡೋಣ.

ಆಚಾರ್ಯ ಚಾಣಕ್ಯರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಮುಖ್ಯವಾಗಿ ರಾಜಕೀಯದ ಬಗ್ಗೆ. ಗಂಡು- ಹೆಣ್ಣಿನ ಸಂಬಂಧ, ದಾಂಪತ್ಯ ಇತ್ಯಾದಿಗಳ ಬಗ್ಗೆಯೂ ಚಾಣಕ್ಯರ ಶ್ಲೋಕಗಳಿವೆ. ಚಾಣಕ್ಯ ತನ್ನ ಅನುಭವದ ಆಧಾರದ ಮೇಲೆ ಮಾನವ ಜೀವನದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಒಂದು ದಾಂಪತ್ಯ ಹೇಗಿದ್ದಾಗ ಚೆನ್ನಾಗಿರುತ್ತದೆ? ಗಂಡು ಹೆಣ್ಣನ್ನು, ಹೆಣ್ಣು ಗಂಡನ್ನು ಯಾವಾಗ ಮೆಚ್ಚುತ್ತಾರೆ? ಯಾವಾಗ ಜೊತೆಯಾಗಿರುತ್ತಾರೆ? ಯಾವಾಗ ಬಿಡುತ್ತಾರೆ? ಇವೆಲ್ಲವೂ ದಾಂಪತ್ಯದಲ್ಲಿ ವರ್ಕೌಟ್‌ ಆಗುತ್ತದಂತೆ. ಹಾಗಿದ್ದರೆ ಈ ಕುರಿತು ಚಾಣಕ್ಯ ಹೇಳಿದ ಅಂಶಗಳನ್ನು ಇಲ್ಲಿ ನೋಡೋಣ.

- ಮದುವೆಯಾಗುವಾಗ ಸಣ್ಣ ಪ್ರಾಯದ ಹೆಣ್ಣು ಗಂಡಿನ ರೂಪವನ್ನು ನೋಡುತ್ತಾಳೆ. ಆಕೆಯ ಹೆತ್ತವರು ಗಂಡು ಶ್ರೀಮಂತನೇ, ಉದ್ಯೋಗಿಯೇ ಎಂಬುದನ್ನು ನೋಡುತ್ತಾರೆ. ಗಂಡು ಹೆಣ್ಣಿನ ಸಂದರ್ಯ ಹಾಗೂ ಫಲವಂತಿಕೆಯನ್ನು ಗಮನಿಸುತ್ತಾನೆ. ತನಗೆ ಆಕೆ ಎಲ್ಲ ಬಗೆಯ ಸುಖ ಕೊಡಬಲ್ಲಳೇ ಎಂಬುದನ್ನು ಮೊದಲಾಗಿ ಗಮನಿಸುತ್ತಾನೆ!

- ತಮ್ಮ ಜೀವನದಲ್ಲಿ ಏನೇ ಕಷ್ಟ-ನಷ್ಟಗಳು ಸಂಭವಿಸಲಿ ಯಾವುದೇ ಸಮಯದಲ್ಲಿ ತಾಳ್ಮೆಯಿಂದಿರುವ ಮಹಿಳೆಯರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ. ತಾಳ್ಮೆ ಹೊಂದಿರುವ ಮಹಿಳೆಯನ್ನು ಮದುವೆಯಾಗುವ ಪುರುಷನು ಯಾವಾಗಲೂ ಯಶಸ್ಸನ್ನು ಪಡೆಯುತ್ತಾನೆ.

- ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ. ಆದರೆ ಹೆಂಡತಿ ತೊರೆಯುವುದಿಲ್ಲ. ಆದರೆ ವಿವಾಹೇತರ ಸಂಬಂಧ ಇಟ್ಟಕೊಂಡು ಮೋಸ ಮಾಡುವ ಗಂಡನನ್ನು ಹೆಂಡತಿ ಕೂಡ ತೊರೆಯುತ್ತಾಳೆ. ಮೊದಲ ಆತನನ್ನು ಸರಿಪಡಿಸಲು ಯತ್ನಿಸುತ್ತಾಳೆ. ಆಗ ಗಂಡು ಎಚ್ಚೆತ್ತುಕೊಂಡು ಸರಿಯಾಗಬೇಕು. ಇಲ್ಲದಿದ್ದರೆ ಆತನ ಸರ್ವನಾಶ ಖಚಿತ.

- ಚಿನ್ನದ ಅಸಲಿತನವನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ಗಂಡನ್ನು ಹೆಣ್ಣು ಒರೆಗೆ ಹಾಕಿ ಪರೀಕ್ಷಿಸುತ್ತಾಳೆ. ಅಂದರೆ ಅವನು ತನ್ನನ್ನು ಸಾಕಬಲ್ಲನೇ, ಉದ್ಯೋಗ ಮಾಡಬಲ್ಲನೇ, ಲೈಂಗಿಕ ಸುಖ ಕೊಡಬಲ್ಲನೇ, ತನ್ನಲ್ಲಿ ಗರ್ಭ ನಿಲ್ಲಿಸಿ ಮಗು ಕೊಡಬಲ್ಲನೇ ಎಂಬುದನ್ನೆಲ್ಲ ಹಲವು ರೀತಿಯಲ್ಲಿ ಪರೀಕ್ಷಿಸುತ್ತಾಳೆ.

- ಸುಂದರವಾದ ಮುಖ ಹೊಂದಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖ ಕೊಡಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನ ಪೂರ್ತಿ ಸುಖ ಕೊಡುತ್ತಾಳೆ. ಮನಸಿನಲ್ಲಿ ಸುಂದರವಾಗಿರುವವಳನ್ನು ಮಡದಿಯಾಗಿ ಪಡೆಯುವುದು ಒಳ್ಳೆಯದು.

ನಿಮ್ಮ ಈ 3 ಅಭ್ಯಾಸಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು, ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಬದಲಿಸಿಕೊಳ್ಳಿ

- ಯಾರದ್ದೇ ಜೀವನದಲ್ಲಿ ಜೀವನದಲ್ಲಿ ಧರ್ಮವನ್ನು ಆಚರಿಸುವ ಸ್ವಭಾವದ ಮಹಿಳೆ ಇದ್ದರೆ, ಅವನ ಭವಿಷ್ಯವು ಬದಲಾಗುತ್ತದೆ. ಸನಾತನ ಧರ್ಮವನ್ನು ಅನುಸರಿಸುವ ಮಹಿಳೆಯರು ಪ್ರತಿದಿನ ಪೂಜೆ ಮಾಡುತ್ತಾರೆ. ಮಹಿಳೆಯರು ನಿತ್ಯ ಪೂಜೆ ಮಾಡುವ ಮನೆಗಳಲ್ಲಿ ದೇವರು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ರೀತಿಯ ಮಹಿಳೆಯರ ಕಾರಣದಿಂದ ಪುರುಷನ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

- ಕೋಪವು ಪುರುಷನ ಶತ್ರು ಎಂದು ಹೇಳಲಾಗುತ್ತದೆ. ಆದ್ದರಿಂದ ಶಾಂತ ಮಹಿಳೆ ಎಲ್ಲಾ ರೀತಿಯಲ್ಲೂ ಮನೆಯನ್ನು ನೋಡಿಕೊಳ್ಳುತ್ತಾಳೆ. ಶಾಂತಿಯುತ ಮನೆಗಳಲ್ಲಿ ದೇವರು ನೆಲೆಸುವ ಕಾರಣ ಯಾವುದೇ ಸಮಸ್ಯೆ ಆಗುವುದಿಲ್ಲ.

- ಆಚಾರ್ಯ ಚಾಣಕ್ಯರ ಪ್ರಕಾರ ಮನೆಯ ಹಿರಿಯರನ್ನು ಗೌರವಿಸುವ ಮತ್ತು ಕಿರಿಯರನ್ನು ಪ್ರೀತಿಸುವ ಮಹಿಳೆಯನ್ನು ಮದುವೆಯಾಗುವುದು ಅದೃಷ್ಟ. ಈ ರೀತಿಯ ಮಹಿಳೆ ಮನೆಯಲ್ಲಿ ಸಂತೋಷವನ್ನು ತರುತ್ತಾಳೆ. ಈ ಗುಣಲಕ್ಷಣ ಹೊಂದಿರುವ ಮಹಿಳೆ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಹೊಂದಿರುತ್ತಾರೆ.

ಈ ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಬಾರದೆನ್ನುತ್ತಾರೆ ಆಚಾರ್ಯ ಚಾಣಕ್ಯ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?