ಪೂಜಾ ನ ಪ್ರೀತಿಸ್ತಿದ್ದವ ಪೂಜಾರಿ ಆದ: ಬ್ರೇಕಪ್ ಮೊದಲು ನಂತರದ ಫೋಟೋ ಭಾರಿ ವೈರಲ್‌

Published : Aug 20, 2025, 10:59 AM IST
Man Edits Breakup Tattoo into Spiritual Symbol

ಸಾರಾಂಶ

ಒಬ್ಬ ಯುವಕನ ಬ್ರೇಕಪ್ ನಂತರ ಹಚ್ಚೆಯನ್ನು ತಿದ್ದಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ನಗೆಯ ಹೊನಲು ಹರಿಸುತ್ತಿದೆ. ಪ್ರೀತಿಯಲ್ಲಿ ಹಚ್ಚೆ ಹಾಕಿಸಿಕೊಂಡು ಬ್ರೇಕಪ್ ನಂತರ ಅದನ್ನು ಹೇಗೆ ಬದಲಾಯಿಸಿದ ಎಂಬುದನ್ನು ಈ ಫೋಟೋ ತೋರಿಸುತ್ತದೆ.

ಈಗಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಬ್ರೇಕಪ್ ಆಗದವರು ಯಾರಿದ್ದಾರೆ ಹೇಳಿ 7ನೇ ಕ್ಲಾಸ್ ಓದೋ ಹುಡುಗನಿಗೂ ಬ್ರೇಕಪ್, ಮದುವೆ ಆದವರಿಗೂ ಬ್ರೇಕಪ್, ಪ್ರೀತಿಸುತ್ತಿರುವವರಿಗೂ ಬ್ರೇಕಪ್‌ ಆದ ಮೇಲೆ ಕೆಲವರು ಪಾರ್ಟಿ ಮಾಡುವವರೂ ಇದ್ದಾರೆ. ನಿಜವಾಗಿಯೂ ಮೊದಲ ಪ್ರೀತಿಯ ಬ್ರೇಕಪ್ ಭಯಾನಕವಾಗಿರುತ್ತದೆ ಎಂಬುದು ಬ್ರೇಕಪ್ ಆದವರ ಅನುಭವದ ಮಾತು. ಪ್ರೀತಿಯಲ್ಲಿದ್ದಾಗ ಜೊತೆಯಾಗಿ ಕೈ ಕೈ ಹಿಡಿದು ಓಡಾಡಿದ್ದೇ ಆಡಿದ್ದು, ಗೊತ್ತಿಲ್ಲದ ಕಾಣದ ಊರಲ್ಲೆಲ್ಲಾ ಹುಡ್ಗ ಹುಡ್ಗಿ ಲಾಂಗ್ ರೈಡ್ ಹೋಗಿದ್ದೆ ಹೋಗಿದ್ದು, ಮೈಮೇಲೆ ಎದೆ ಮೇಲೆ ಹುಡುಗ, ಹುಡುಗಿಯ ಹೆಸರು ಹಾಕಿದ್ರೆ ಹುಡುಗಿ ಕೈ ಮೇಲೆ ಹೆಸರು ಹಾಕೋತ್ತಾಳೆ. ಊರೆಲ್ಲಾ ಕೈ ಕೈ ಹಿಡಿದು ಓಡಾಡಿ ತಮಗೆ ಆಗದವರ ಹೊಟ್ಟೆ ಉರಿಸಿದ್ದೇ ಉರಿಸಿದ್ದು, ಆದರೆ ಬ್ರೇಕಪ್ ಆದ್ಮೇಲೆ ಎಲ್ಲವೂ ಉಲ್ಟಾಪಲ್ಟಾ. ಇಷ್ಟು ದಿನ ಜೊತೆಯಾಗಿ ತಿರುಗಾಡಿದವರು ಇದ್ದಕ್ಕಿದಂತೆ ಅಪರಿಚಿತರಾಗಿ ಬಿಡುತ್ತಾರೆ. ಕೆಲವರು ಈ ವಿರಹದಿಂದ ಹೊರಬರಲಾಗದೇ ಅಥವಾ ಅದನ್ನು ಮರೆಯುವುದಕ್ಕಾಗಿ ಇನ್ನೇನೋ ಮಾಡುವುದಕ್ಕೆ ಹೋಗಿ ಬದುಕು ಹಾಳು ಮಾಡಿಕೊಳ್ಳುತ್ತಾರೆ.

ನಗು ತರಿಸುತ್ತಿದೆ ಬ್ರೇಕಪ್ ಸ್ಟೋರಿ

ಕೆಲವರು ಪ್ರಾಣ ಬಿಟ್ಟರೆ ಇನ್ನು ಕೆಲವರು ಕುಡಿತಕ್ಕೆ ದಾಸರಾಗುತ್ತಾರೆ. ಹೆಣ್ಣುಮಕ್ಕಳು ಈತನನ್ನು ಮರೆಯುವುದಕ್ಕಾಗಿಯೇ ಅಪ್ಪ ಅಮ್ಮ ನೋಡಿದ ಹುಡುಗನ ಹಠಕ್ಕಾದರೂ ಆಗಿದ್ದಾಗಲಿ ಮುಂದೆ ನೋಡ್ಕೊಳ್ಳೋಣ ಅಂತ ಮದ್ವೆಯಾಗಿ ಬಿಡ್ತಾರೆ. ಇನ್ನು ಕೆಲವರು ಪ್ರೀತಿ ಕೈ ಕೊಟ್ಟ ನಂತರ ಏನನ್ನಾದರೂ ಸಾಧಿಸಿ ತೋರಿಸಬೇಕು ಎಂಬ ಹಠಕ್ಕೆ ಬಿದ್ದು, ಬದುಕಿನಲ್ಲಿ ಯಶಸ್ವಿಯಾದವರಿದ್ದಾರೆ. ಚೆನ್ನಾಗಿ ಓದಿ ಉದ್ಯೋಗ ಗಳಿಸಿ ಕೈ ಕೊಟ್ಟವನ/ಕೈಕೊಟ್ಟವಳ ಮುಂದೆಯೇ ಧಾಮ್ ಧೂಮ್ ಅಗಿ ಓಡಾಡುತ್ತಾರೆ. ಹೀಗೆ ವಿರಹವೆನ್ನುವುದು ಆ ಕ್ಷಣದಲ್ಲಿ ನೋವು ಮೂಡಿಸಿದರೂ, ಮುಂದೊಂದು ದಿನ ಕುಳಿತು ಯೋಚನೆ ಮಾಡಿದಾಗ ಮೊಗದಲ್ಲಿ ನಗೆ ಮೂಡುತ್ತದೆ. ಹೀಗೆ ಒಬ್ಬೊಬ್ಬರ ಕತೆ ಒಂದೊಂದು ವೆರೈಟಿಯಾಗಿರುತ್ತದೆ. ಕೆಲವರ ಪ್ರೇಮ ಜೀವನದ ಕತೆ ಸಿನಿಮಾವನ್ನು ಮೀರಿಸುವಂತಿರುತ್ತದೆ. ಹೀಗೆ ಕೆಲವು ಕತೆಗಳು ಕೇಳುವುದಕ್ಕೆ ಸ್ವಾರಸ್ಯಕರವಾಗಿರುವುದರ ಜೊತೆ ನಗುಯುಕ್ಕಿಸಿ ಬಿಡುತ್ತದೆ.

ಅದೇ ರೀತಿ ಇಲ್ಲಿ ಒಂದೇ ಒಂದು ಫೋಟೋ ಪ್ರೀತಿ ಹಾಗೂ ಬ್ರೇಕಪ್ ಕತೆ ಹೇಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. oye_roaster05 ಎಂಬ ಯುಸರ್‌ ನೇಮ್ ಹೊಂದಿರುವ Golu Yadav ಎಂಬಾತ ಇನ್ಸ್ಟಾದಲ್ಲಿ ಈ ಪೋಟೋವನ್ನು ಪೋಸ್ಟ್ ಮಾಡಿದ್ದಾನೆ. ಫೋಟೋದಲ್ಲಿ ಪ್ರೀತಿಯಲ್ಲಿದ್ದಾಗ ಹಾಗೂ ಬ್ರೇಕಪ್ ನಂತರದ ಹಚ್ಚೆಯ ಫೋಟೋವನ್ನು ಒಂದೇ ಫ್ರೇಮ್‌ನಲ್ಲಿ ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಹಾಗಿದ್ದರೆ ಆ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡೋಣ ಬನ್ನಿ...

ಪೂಜಾನ ಪ್ರೀತಿಸ್ತಿದ್ದವ ಪೂಜಾರಿ ಆದ:

ವೈರಲ್ ಆದ ಪೋಸ್ಟ್‌ನಲ್ಲಿ ಆತ ಮೇಲೆ ಪ್ರೀತಿಯಲ್ಲಿದ್ದಾಗ ಎದೆ ಮೇಲೆ ಪೂಜಾ ಎಂದು ಹಚ್ಚೆ ಹಾಕಿ ಅದರ ಕೆಳಗೆ ಲವ್ ಸಿಂಬಲ್ ಹಾಕಿದ ಚಿತ್ರವಿದೆ. ಹಾಗೆಯೇ ಪ್ರೀತಿ(ಪೂಜಾ) ಕೈ ಕೊಟ್ಟ ಮೇಲೆ ಪೂಜಾಳ ಹೆಸರಿನಲ್ಲಿ ಎದೆ ಮೇಲೆ ಹಾಕಿದ್ದ ಹಚ್ಚೆ ಎದೆಗೆ ನೆನಪುಗಳನ್ನು ಚುಚ್ಚಲು ಶುರು ಮಾಡುವುದು ಸಾಮಾನ್ಯ, ಹೀಗಾಗಿ ಬುದ್ಧಿವಂತಿಕೆ ಬಳಸಿದ ಆತ ಆ ಹಚ್ಚೆಯನ್ನು ಪೂಜಾರಿ ಎಂದು ಬದಲಿಸಿದ್ದು, ಕೆಳಗೆ ಲವ್ ಸಿಂಬಲ್‌ನ ಮೇಲೆ ಓಂ ಎಂದು ತಿದ್ದಿದ್ದಾನೆ. ಈ ಪೋಸ್ಟ್‌ ಈಗ ಭಾರಿ ವೈರಲ್ ಆಗಿದೆ. ಅನೇಕರು ಆತನ ಸ್ಮಾರ್ಟ್‌ನೆಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿ ನಿಜವಾಗಿ ಹಚ್ಚೆ ಹಾಕಿಲ್ಲ ಇದೊಂದು ತಮಾಷೆಗಾಗಿ ಮಾಡಿರುವ ಫೋಟೋದಂತೆ ಕಾಣುತ್ತಿದೆ. ಅದೇನೆ ಇರಲಿ ಈ ಫೋಟೋ ಅನೇಕರಿಗೆ ತಮ್ಮ ಬ್ರೇಕಪ್ ಹಾಗೂ ಅದರ ನಂತರ ಹಾಕಿದ್ದ ಹಚ್ಚೆಯನ್ನು ತಿದ್ದುವುದಕ್ಕೆ ಪಟ್ಟ ಕಷ್ಟವನ್ನು ನೆನಪು ಮಾಡುತ್ತಿದೆ. ಅಂದಹಾಗೆ ನೀವು ಕೂಡ ಹೀಗೆ ಬ್ರೇಕಪ್ ನಂತರ ಹಚ್ಚೆಯನ್ನು ತಿದ್ದಿದ್ದೀರಾ ಹೌದಾಗಿದ್ರೆ ಕಾಮೆಂಟ್ ಮಾಡಿ....

ಇದನ್ನೂ ಓದಿ: ತಾಯಿಗೆ ಹೊಡೆದವಳ ಚಳಿ ಬಿಡಿಸಿದ ಯುವಕ: ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ಪ್ರಕರಣದ ಫುಲ್ ವೀಡಿಯೋ

ಇದನ್ನೂ ಓದಿ: ನಭಕ್ಕೆ ಜಿಗಿಯಿತು ಸೋಡಾ ಬಾಟಲಿ ಬಳಸಿ ಮಕ್ಕಳು ತಯಾರಿಸಿದ ರಾಕೆಟ್: ವೀಡಿಯೋ ಭಾರಿ ವೈರಲ್

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ