ಪಿಂಚಣಿ ಹಣ ಬರ್ತಿದ್ದಂತೆ ಹೆಂಡ್ತಿಯಿಂದ ದೂರವಾದ ಗಂಡ, ಒಬ್ಬಂಟಿ ಆದ್ಮೇಲೆ ಪಟ್ಟ ಪಾಡು ಅಷ್ಟಿಷ್ಟಲ್ಲ!

Published : Aug 19, 2025, 01:31 PM IST
man ditches wife for peace

ಸಾರಾಂಶ

ನಗರ ಜೀವನಕ್ಕೆ ಒಗ್ಗಿಕೊಂಡಿದ್ದ ಹೆಂಡ್ತಿ ಗಂಡನ ಪ್ಲಾನ್ ರಿಜೆಕ್ಟ್ ಮಾಡಿ ಹಳ್ಳಿಗೆ ಹೋಗಲು ನಿರಾಕರಿಸಿದರು. ಅಲ್ಲದೆ ಇಬ್ಬರು ಪುತ್ರರೂ ಸಹ ತಮ್ಮ ಕೆಲಸ ಬಿಟ್ಟು ಹಳ್ಳಿಗೆ ಹಿಂತಿರುಗಲು ಒಪ್ಪಿಕೊಳ್ಳಲಿಲ್ಲ. ಕೊನೆಗೆ…   

ಹಣ ಎಷ್ಟಿದ್ದರೇನು..ನೆಮ್ಮದಿ ಇಲ್ಲ ಅಂದ್ರೆ ಯಾವುದೇ ಪ್ರಯೋಜನವಿಲ್ಲ. ಅದರಲ್ಲೂ ಫ್ಯಾಮಿಲಿ ನಿಮ್ಮ ಜೊತೆ ಇಲ್ಲ ಅಂದ್ರೆ ಜಗತ್ತಿನ ಯಾವುದೇ ಅದ್ಭುತ ಸ್ಥಳವಾದರೂ ಸಂತೋಷ, ಶಾಂತಿ ನೀಡಲು ಸಾಧ್ಯವೇ ಇಲ್ಲ. ಕೆಲವರಿಗಿದು ಈಗಾಗಲೇ ಅನುಭವಕ್ಕೂ ಬಂದಿರುತ್ತದೆ. ಇಷ್ಟೆಲ್ಲಾ ಯಾಕೆ ಹೇಳ್ತಿರೋದು ಅಂದ್ರೆ ಜಪಾನ್‌ನ ಟೋಕಿಯೊದಲ್ಲಿ ವಾಸಿಸುವ ಟೆಟ್ಸು ಯಮಡಾ ಎಂಬ ವ್ಯಕ್ತಿ ಜೀವನದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ.

ಈ ಯಮಡಾ ಎಂಬ ವ್ಯಕ್ತಿ ಪತ್ನಿ ಕೀಕೊ ಮತ್ತು ಇಬ್ಬರು ಮಕ್ಕಳೊಂದಿಗೆ ಟೋಕಿಯೊದಲ್ಲಿ ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದರು. ಆದರೆ ಅವರಿಗೆ ಕ್ರಮೇಣ ನಗರ ಜೀವನ ಬೇಸರ ತರಿಸಿತು. ಕೊನೆಗೆ ಅವರು ನಿವೃತ್ತಿ ನಂತರ ತಮ್ಮ ಹಳ್ಳಿಗೆ ಮರಳಿ ಅಲ್ಲಿ ತಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ನಿರ್ಧರಿಸಿದರು.

ನಿವೃತ್ತಿ ನಂತರ ಹಳ್ಳಿಯಲ್ಲಿ ವಾಸಿಸುವ ಕನಸು
ಹೀಗೆ ಸಮಯ ಕಳೆದುಹೋಯಿತು. ಕೊನೆಗೆ ಅವರಿಗೆ 60 ವರ್ಷ ಆಯ್ತು. ಕೆಲಸದಿಂದ ನಿವೃತ್ತರಾದರು. ಅವರಿಗೆ ನಿವೃತ್ತಿಯಾದ ನಂತರ 2.96 ಕೋಟಿ ರೂ. ಪಿಂಚಣಿ ಸಿಕ್ಕಿತು. ಯಮಡಾ ಇದನ್ನು ತೆಗೆದುಕೊಂಡು ಪತ್ನಿಯನ್ನು ತನ್ನೊಂದಿಗೆ ಹಳ್ಳಿಗೆ ಬರಲು ಕೇಳಿಕೊಂಡರು. ಅಷ್ಟೇ ಅಲ್ಲ, ನಿವೃತ್ತಿಯ ನಂತರ ಇಬ್ಬರೂ ತಮ್ಮ ಹಳ್ಳಿಗೆ ಮರಳಬೇಕೆಂದು ಮತ್ತು ಸರಳ ಹಾಗೂ ಶಾಂತಿಯುತ ಜೀವನವನ್ನು ನಡೆಸಬೇಕೆಂದು ಬಯಸುವುದಾಗಿ ಹೇಳಿದರು. ಆದರೆ ಟೋಕಿಯೊದ ನಗರ ಜೀವನಕ್ಕೆ ಒಗ್ಗಿಕೊಂಡಿದ್ದ ಪತ್ನಿ ಕೀಕೊ, ಅವರ ಪ್ಲಾನ್ ರಿಜೆಕ್ಟ್ ಮಾಡಿ, ಹಳ್ಳಿಗೆ ಹೋಗಲು ನಿರಾಕರಿಸಿದರು. ಅಲ್ಲದೆ, ಯಮಡಾದ ಇಬ್ಬರು ಪುತ್ರರೂ ಸಹ ಟೋಕಿಯೊದಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ಹಳ್ಳಿಗೆ ಹಿಂತಿರುಗಲು ನಿರಾಕರಿಸಿದರು.

'ಸೊಟ್ಸುಕಾನ್' ಕಲ್ಪನೆ ಇಷ್ಟಪಟ್ಟ ಯಮಡಾ
ಇಷ್ಟೆಲ್ಲಾ ಆದ ನಂತರ ಯಮಡಾ ಮತ್ತು ಕೀಕೊ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಲು ಪ್ರಾರಂಭಿಸಿತು. ಭಿನ್ನಾಭಿಪ್ರಾಯ ಹೆಚ್ಚಾದಾಗ ಕೀಕೊ ತನ್ನ ಪತಿ ಯಮಡಾಗೆ 'ಸೊಟ್ಸುಕಾನ್' ಬಗ್ಗೆ ಹೇಳಿದರು. 'ಸೊಟ್ಸುಕಾನ್' ಎಂದರೆ ಇದರಲ್ಲಿ ವಿವಾಹಿತ ದಂಪತಿಗಳು ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಾರೆ. ಆದರೆ ವಿಚ್ಛೇದನ ಪಡೆಯುವುದಿಲ್ಲ. ಈ ಪದ್ಧತಿಯನ್ನು 2004 ರಲ್ಲಿ ಜಪಾನಿನ ಬರಹಗಾರರು ಪ್ರಾರಂಭಿಸಿದರು. ಈ ಪದ್ಧತಿ ಜಪಾನ್‌ನಲ್ಲಿ ಬಹಳ ಪ್ರಸಿದ್ಧವಾಗಿದೆ. ಯಮಡಾ ತನ್ನ ಹೆಂಡತಿ ನೀಡಿದ 'ಸೊಟ್ಸುಕಾನ್' ಕಲ್ಪನೆಯನ್ನು ಇಷ್ಟಪಟ್ಟರು, ನಂತರ ಅವರು ಈ ಕಲ್ಪನೆಗೆ ಒಪ್ಪಿಕೊಂಡರು.

ಪಿಂಚಣಿ ಹಣದೊಂದಿಗೆ ಹಳ್ಳಿಗೆ ಮರಳಿದ ಯಮಡಾ
ವಿಚ್ಛೇದನದ ಸಾಧ್ಯತೆಯ ನಡುವೆ 'ಸೊಟ್ಸುಕಾನ್' ಪ್ಲಾನ್ ಒಪ್ಪಿಕೊಂಡ ಯಮಡಾ ಒಬ್ಬಂಟಿಯಾಗಿ ತನ್ನ ಪಿಂಚಣಿ ಹಣವನ್ನು ತನ್ನೊಂದಿಗೆ ತೆಗೆದುಕೊಂಡು ಹಳ್ಳಿಗೆ ಹೋದನು. ಆ ಹಣದಿಂದ ಯಮಡಾ ಮನೆಯನ್ನು ನವೀಕರಿಸಿ ಶಾಂತ ಜೀವನವನ್ನು ನಡೆಸಲು ಪ್ರಯತ್ನಿಸಿದನು. ಆದರೆ ಶೀಘ್ರದಲ್ಲೇ ಅವನು ಕಷ್ಟಗಳನ್ನು ಎದುರಿಸಬೇಕಾಯಿತು. ಮನೆಕೆಲಸ ಮತ್ತು ಅಡುಗೆಯಂತಹ ಸರಳ ಕೆಲಸಗಳನ್ನು ಸಹ ಮಾಡಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಅವನು ಇನ್‌ಸ್ಟಂಟ್ ನೂಡಲ್ಸ್ ಮತ್ತು ಫ್ರೋಜನ್ ತರಕಾರಿಗಳ ಮೇಲೆ ಅವಲಂಬಿತನಾದನು. ಮತ್ತೊಂದೆಡೆ, ಅವನ ಹೆಂಡತಿ ಕೀಕೊ ಟೋಕಿಯೊದಲ್ಲಿಯೇ ಇದ್ದು, ಬ್ಯೂಸಿ ಇದ್ದಳು. ಪತಿ ಹಳ್ಳಿಗೆ ಹೋದ ನಂತರ, ಅವಳು ಹ್ಯಾಂಡ್ ಮೇಡ್ ವರ್ಕ್ ಶಾಪ್ ಪ್ರಾರಂಭಿಸಿದಳು, ಅದು ಬಹಳ ಬೇಗ ಯಶಸ್ವಿಯಾಯಿತು. ಕೀಕೊ ಅವನಿಲ್ಲದೆ ಸಂತೋಷ ಮತ್ತು ಯಶಸ್ವಿಯಾಗಿದ್ದಾಳೆಂದು ಯಮಡಾ ಸಾಮಾಜಿಕ ಮಾಧ್ಯಮದಲ್ಲಿ ನೋಡಿದರು.

ಒಂಟಿತನದಿಂದ ನರಳಾಡಿದ ವ್ಯಕ್ತಿ
ಕೆಲವು ದಿನಗಳ ನಂತರ, ಯಮಡಾ ಒಂಟಿತನ ಅನುಭವಿಸಲು ಪ್ರಾರಂಭಿಸಿದನು. ತಾನು ತೆಗೆದುಕೊಂಡ ನಿರ್ಧಾರಕ್ಕೆ ವಿಷಾದಿಸಿದನು. ಪುತ್ರರೊಂದಿಗಿನ ಅವರ ಸಂಬಂಧವೂ ಅಷ್ಟಕಷ್ಟೆ ಅನ್ನುವಂತಾಯಯ್ತು. ಯಮಡಾ ಮತ್ತು ಕೀಕೊ ಸಾಂದರ್ಭಿಕವಾಗಿ ಆನ್‌ಲೈನ್‌ನಲ್ಲಿ ಮಾತನಾಡುತ್ತಿದ್ದರೂ, ಯಮಡಾ ಟೋಕಿಯೊಗೆ ಹಿಂತಿರುಗಿ ತಮ್ಮ ಕುಟುಂಬದೊಂದಿಗೆ ಮತ್ತೆ ವಾಸಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು