
ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರ (friend) ಪಾತ್ರ ಬಹಳ ಮುಖ್ಯ. ಕುಟುಂಬಸ್ಥರು, ಸಂಬಂಧಿಕರ ಮುಂದೆ ಹೇಳಿಕೊಳ್ಳಲಾಗದ ವಿಷ್ಯವನ್ನು ಸ್ನೇಹಿತರ ಮುಂದೆ ಯಾವ್ದೆ ಮುಜುಗರ ಇಲ್ದೆ ಹಂಚಿಕೊಳ್ಬಹುದು. ನಗು – ಅಳು ಎರಡರಲ್ಲೂ ಜೊತೆಯಾಗಿರುವ ಈ ಸ್ನೇಹಿತರು ನಮ್ಮ ಜೀವನದಲ್ಲಿ ಅತಿ ಮುಖ್ಯ ಪಾತ್ರ ವಹಿಸ್ತಾರೆ. ಸಿನಿಮಾ, ಹೊಟೇಲ್, ಶಾಪಿಂಗ್ ಹೀಗೆ ಕೆಲ ಜಾಗಕ್ಕೆ ಒಬ್ರೇ ಹೋಗೋದು ಬೋರಿಂಗ್. ಈ ಸಮಯದಲ್ಲಿ ಸ್ನೇಹಿತರಿದ್ರೆ ಅದೇನೋ ಖುಷಿ, ನೆಮ್ಮದಿ. ನಮಗೆ ಅಗತ್ಯವಿರುವ ಎಲ್ಲ ಟೈಂನಲ್ಲಿ ನಮ್ಮ ಸ್ನೇಹಿತರು ನಮಗೆ ಸಿಗೋದಿಲ್ಲ. ಇಂಥ ಟೈಂನಲ್ಲಿ ಏನು ಮಾಡೋದು? ಇದೇ ಕಾರಣಕ್ಕೆ ಶುರುವಾಗಿದ್ದು ಫ್ರೆಂಡ್ಸ್ ಆನ್ ರೆಂಟ್. ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಶುರುವಾಗಿದೆ. ಸ್ನೇಹಿತರು ನಿಮಗೆ ಬಾಡಿಗೆಗೆ ಸಿಗ್ತಾರೆ. ನೀವು ಅವ್ರ ಜೊತೆ ಎಷ್ಟು ಟೈಂ ಇರ್ತೀರಿ ಅನ್ನೋದ್ರ ಮೇಲೆ ನೀವು ಬಾಡಿಗೆ ನೀಡ್ಬೇಕು.
ಕೇರಳದ ಕೆಲವು ಕಡೆ ಫ್ರೆಂಡ್ಸ್ ಆನ್ ರೆಂಟ್ ಟ್ರೆಂಡ್ ಜಾಸ್ತಿಯಾಗ್ತಿದೆ. ಫ್ರೆಂಡ್ಸ್ ಅಡ್ಡಾ, FRND ಮತ್ತು ಪಾಮ್ಮ್ಯಾಚ್ನಂತಹ ಅಪ್ಲಿಕೇಶನ್ಗಳು ಫೇಸ್ಬುಕ್ ಮತ್ತು ಟೆಲಿಗ್ರಾಮ್ನಲ್ಲಿ ಫೇಮಸ್ ಆಗಿವೆ. ಬಳಕೆದಾರರು ಪ್ರೊಫೈಲ್ ಬ್ರೌಸ್ ಮಾಡ್ಬೇಕು. ವಯಸ್ಸು, ಭಾಷೆ ಅಥವಾ ಆಸಕ್ತಿ ಮೂಲಕ ಸ್ನೇಹಿತರನ್ನು ಫಿಲ್ಟರ್ ಮಾಡ್ತಾರೆ. ಎಲ್ಲ ಟ್ಯಾಲಿ ಮಾಡಿ, ಅವರಿಷ್ಟದ ವ್ಯಕ್ತಿಯನ್ನು ಅವರು ಆಯ್ಕೆ ಮಾಡ್ಕೊಳ್ಬಹುದು.
ಈ ಅಪ್ಲಿಕೇಷನ್ ಗಳು ಸ್ನೇಹಕ್ಕಾಗಿ ಮೀಸಲು. ಇಲ್ಲಿ ಯಾವುದೇ ಲೈಂಗಿಕತೆಗೆ ಆಸ್ಪದ ಇಲ್ಲ. ವೈಯಕ್ತಿಕ ಪ್ರಶ್ನೆ ಕೇಳ್ಬಾರದು, ದೈಹಿಕ ಸಂಪರ್ಕ ಬೆಳೆಸ್ಬಾರದು ಎನ್ನುವ ರೂಲ್ಸ್ ಹಾಕಲಾಗಿದೆ. ಹಾಗೆಯೇ ಮನೆ ಸೇರಿದಂತೆ ಯಾವುದೇ ಖಾಸಗಿ ಸ್ಥಳಕ್ಕೆ ಸ್ನೇಹಿತರನ್ನು ಕರೆಯಬಾರದು ಎನ್ನುವ ನಿಯಮ ಇದೆ. ಬುಕ್ ಆದ ಸ್ಥಳಕ್ಕೆ ಸ್ನೇಹಿತರು ಬರ್ತಾರೆ, ನಿಗದಿತ ಸಮಯದವರೆಗೆ ಮಾತನಾಡಿ, ಹರಟೆ ಹೊಡೆದು ಹೊರಟು ಹೋಗ್ತಾರೆ.
ತಮಗಿದ್ದ ಲವ್ ಅಫೇರ್ ಬಗ್ಗೆ ಸ್ಟೇಜ್ ಮೇಲೆಯೇ ಹೆಂಡ್ತಿಗೆ ಮುಕ್ತವಾಗಿ ಹೇಳಿಕೊಂಡಿದ್ದ ಯಶವಂತ ಸರದೇಶಪಾಂಡೆ!
ಈ ಬಗ್ಗೆ ಸಮಾಜಶಾಸ್ತ್ರಜ್ಞರ ಅಭಿಪ್ರಾಯ ಏನು? :
ಯುವಕರು ಹಳ್ಳಿ ಬಿಟ್ಟು ನಗರ ಸೇರ್ತಿದ್ದಾರೆ. ವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆ ಆಗಿದೆ. ಅನೇಕರಿಗೆ ಕಳೆಯಲು ಸಮಯ ಇಲ್ಲ. ಮತ್ತೆ ಕೆಲವರಿಗೆ ಟೈಂ ಇದ್ರೂ ಸ್ನೇಹಿತರು ದೂರವಿದ್ದಾರೆ. ಕೆಲಸದ ಹೊರೆಯಿಂದ ಸ್ನೇಹ ಕ್ಷೀಣಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಹಣ ನೀಡುವ ಮೂಲಕ ಸ್ನೇಹ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಣಕೊಟ್ಟು ಪಡೆಯುವ ಸ್ನೇಹ, ನೈಜ ಸ್ನೇಹಕ್ಕೆ ಸಮವಲ್ಲ. ಆದ್ರೆ ಮನಸ್ಥಿತಿ ಸುಧಾರಿಸಲು, ಒತ್ತಡದಿಂದ ಹೊರಗೆ ಬರಲು ಇದು ಅನಿವಾರ್ಯ.
ಬಿಗ್ ಬಾಸ್ ಯಾಕೆ ನೋಡ್ತಾರೆ ಜನ್ರು? ಪಕ್ಕದ್ಮನೆ ರೂಮಿನೊಳಗೆ ಭಾರೀ ಸೀಕ್ರೆಟ್ ಬಯಲಾಯ್ತು..!
ಇದಕ್ಕೆ ಪರ – ವಿರೋಧ :
ಕೇರಳದಲ್ಲಿ ಹೆಚ್ಚಾಗುತ್ತಿರುವ ಈ ಫ್ರೆಂಡ್ ಆನ್ ರೆಂಟ್ ಪ್ರವೃತ್ತಿಗೆ ಸಾಕಷ್ಟು ವಿರೋಧಗಳೂ ಕೇಳಿ ಬಂದಿವೆ. ಅಪ್ಲಿಕೇಷನ್ ನಲ್ಲಿರುವ ಸಮಸ್ಯೆಯನ್ನು ಅನೇಕರು ಹೇಳಿದ್ದಾರೆ. ಇದನ್ನು ಸಾಮಾನ್ಯ ಅಪ್ಲಿಕೇಷನ್ ರೀತಿಯಲ್ಲಿ ಬಿಂಬಿಸಲಾಗಿದೆ. ಆದ್ರೆ ಅದನ್ನು ಬ್ರೌಸ್ ಮಾಡಿದಾಗ ಬಳಕೆದಾರ ಸಮಸ್ಯೆಗೆ ಸಿಲುಕುತ್ತಾನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಈಗಿನ ಕಾಲದಲ್ಲಿ ಒಂಟಿತನ ಜನರನ್ನು ಕಾಡ್ತಿದೆ. ಫ್ರೆಂಡ್ ಆನ್ ರೆಂಟ್, ಶಾಶ್ವತ ಪರಿಹಾರ ನೀಡೋದಿಲ್ಲವಾದ್ರೂ ತಾತ್ಕಾಲಿಕ ಪರಿಹಾರ ನೀಡ್ತಿದೆ. ಶಾಶ್ವತ ಸ್ನೇಹದಂತೆ ಇದು ಎಂದಿಗೂ ಕೆಲ್ಸ ಮಾಡೋದಿಲ್ಲ. ಆದ್ರೆ ಜನರು ಇದನ್ನು ಹೇಗೆ ಸ್ವೀಕರಿಸ್ತಾರೆ ಎಂಬುದು ಅಲ್ಲಿನ ಸಂಸ್ಕೃತಿ, ವ್ಯಕ್ತಿತ್ವ, ಪರಿಸರವನ್ನು ಅವಲಂಭಿಸಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.