
ಬೆಂಗಳೂರು (ಸೆ.28) ಭಾರತ ಸಂಬಂಧ, ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ದೇಶ. ತಂದೆ ತಾಯಿ, ಪತಿ ಪತ್ನಿ, ಅಣ್ಣ ತಂಗಿ ಸೇರಿದಂತೆ ಪ್ರತಿ ಸಂಬಂಧಗಳು ಅತ್ಯಂತ ಪವಿತ್ರ ಎಂದು ಭಾವಿಸುತ್ತದೆ. ಈ ಸಂಬಂಧಗಳ ಸುತ್ತವೇ ಭಾರತೀಯ ಸಂಸ್ಕೃತಿ, ಹಬ್ಬ, ಸಂಪ್ರದಾಯಗಳು ಮಿಳಿತಗೊಂಡಿದೆ. ಆದರೆ ಆಧುನಿಕತೆ ಪ್ರವಾಹದಲ್ಲಿ ಭಾರತ ತನ್ನ ತನ ಕಳೆದುಕೊಂಡಿತಾ? ಅನ್ನೋ ಚರ್ಚೆಗಳು ಹಲವು ಬಾರಿ ನಡೆದಿದೆ. ಇದೀಗ ಗ್ಲೀಡನ್ ಆ್ಯಪ್ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಭಾರತದಲ್ಲಿ ಅಕ್ರಮ ಸಂಬಂಧಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಯಾವ ನಗರದಲ್ಲಿ ಅತೀ ಹೆಚ್ಚು ಅಕ್ರಮಸಂಬಂಧವಿದೆ ಅನ್ನೋ ಪಟ್ಟಿಯನ್ನು ಗ್ಲೀಡನ್ ಪ್ರಕಟಿಸಿದೆ. ಈ ಗ್ಲೀಡನ್ ಪ್ರಕಾರ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ಭಾರತದ ನಗರ ಬೆಂಗಳೂರು.
ಗ್ಲೀಡನ್ (Gleeden) ಹೊರತಂದಿರುವ ಅಧ್ಯಯನ ಸಮೀಕ್ಷೆ ವರದಿಯಲ್ಲಿ ಬೆಂಗಳೂರು ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಎಂದಿದೆ. ಬೆಂಗಳೂರಿಗೆ ಅತೀ ಹೆಚ್ಚು ಟ್ರಾಫಿಕ್ ನಗರ ಅನ್ನೋ ಟೀಕೆ, ಕಳಂಕ ಅಂಟಿಕೊಂಡಿದೆ. ಇದರ ಜೊತೆಗೆ ಅತೀ ಹೆಚ್ಚು ಅಕ್ರಮ ಸಂಬಂಧ ನಗರ ಅನ್ನೋ ಕಳಂಕವೂ ಅಂಟಿಕೊಂಡಿತಾ? ಈ ಗ್ಲೀಡನ್ ವರದಿ ಕುರಿತು ಭಾರಿ ಚರ್ಚೆಯೊಂದು ನಡೆಯುತ್ತಿದೆ.
ಈ ಸಮೀಕ್ಷೆಯಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಣ್ಣ ನಗರ ಅಂದರೆ ಟೈರ್ 2, ಟೈರ್ 3 ನಗರಗಳು ಹೆಚ್ಚು ಸುರಕ್ಷಿತ ಎಂದು ಭಾವಿಸಿದರೆ ತಪ್ಪು. ಇದೇ ನಗರಗಳಲ್ಲಿ ಅತೀ ಹೆಚ್ಚು ಡೇಟಿಂಗ್ ಆ್ಯಪ್, ಅಕ್ರಮ ಸಂಬಂಧ, ರಿಲೇಶನ್‌ಶಿಪ್ ಸಕ್ರಿಯವಾಗಿದೆ ಎಂದು ವರದಿ ಹೇಳುತ್ತಿದೆ. ಈ ಸಣ್ಣ ನಗರದಳಲ್ಲಿ ಡೇಟಿಂಗ್, ಅಕ್ರಮ ಸಂಬಂಧ , ರಿಲೇಶನ್‌ಶಿಪ್ ಆ್ಯಪ್ ಸಕ್ರಿಯತೆ ಹಾಗೂ ಬೆಳವಣಿಗೆ ವೇಗ ಮಹಾ ನಗರಗಳಿಂದ ದುಪ್ಪಟ್ಟು ಎಂದು ವರದಿ ಹೇಳುತ್ತಿದೆ.
ಈ ಬದಲಾವಣೆಗೆ ಮುಖ್ಯ ಕಾರಣ, ಸಣ್ಣ ನಗರದಲ್ಲಿ ಬಹುತೇಕರು, ಕುಟುಂಬ, ಸಂಪ್ರದಾಯಗಳ ಜೊತೆ ಬದುಕುತ್ತಾರೆ. ಆದರೆ ಇದೇ ವೇಳೆ ಕದ್ದು ಮುಚ್ಚಿ ಡೇಟಿಂಗ್ ಆ್ಯಪ್, ರಿಲೇಶನ್‌ಶಿಪ್ ಆ್ಯಪ್, ಅಕ್ರಮಸಂಬಂಧ ಇಟ್ಟುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.