ಉತ್ತರ ಪ್ರದೇಶದಲ್ಲಿ ಅಚ್ಚರಿ ಘಟನೆ ನಡೆದಿದೆ. ಅಕ್ಕನ ಗಂಡನ ಮೇಲೆ ನಾದಿನಿಗೆ ಮನಸ್ಸಾಗಿದೆ. ಮುಂದೇನಾಯ್ತು ಎಂಬ ವಿವರ ಇಲ್ಲಿದೆ.
ಪ್ರೀತಿ (love) ಗೆ ಕಣ್ಣಿಲ್ಲ, ಕುರುಡು ಅಂತ ಹೇಳ್ತಾರೆ. ಆದ್ರೆ ಕೆಲವೊಮ್ಮೆ ಈ ಕುರುಡು ಪ್ರೀತಿ, ಪ್ರೀತಿಸಿದವರಿಗೆ ಸುಖ ನೀಡಿದ್ರೂ ಅವರನ್ನು ನಂಬಿರುವ ಆಪ್ತರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಮದುವೆಯಾಗಿ ಎರಡು ಮಕ್ಕಳಾದ್ಮೇಲೆ ಇಬ್ಬರು ಪ್ರೀತಿಯಲ್ಲಿ ಬಿದ್ರೆ, ಆ ಮಕ್ಕಳು ಹಾಗೆ ಅವರನ್ನು ನಂಬಿರುವ ಸಂಗಾತಿ ಗತಿ ಏನಾಗ್ಬೇಡ?. ಯಾಕೆ ಈ ಮಾತು ಹೇಳ್ತಿದ್ದೇವೆ ಅಂದ್ರೆ ಉತ್ತರ ಪ್ರದೇಶದಲ್ಲಿ ನಾದಿನಿಯೊಬ್ಬಳು ಭಾವನ ಜೊತೆ ಓಡಿ ಹೋಗಿದ್ದಾಳೆ. ಇಬ್ಬರಿಗೂ ಎರಡು ಮಕ್ಕಳಿವೆ. ಇವ್ರ ಪ್ರೀತಿಗೆ ಆ ಮಕ್ಕಳು ಹಾಗೂ ಸಂಗಾತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿದ್ದು, ಇದನ್ನು ಹೇಗೆ ಬಗೆಹರಿಸೋದು ಎಂಬ ಸಮಸ್ಯೆಯಲ್ಲಿ ಪೊಲೀಸರಿದ್ದಾರೆ.
ಘಟನೆ ಉತ್ತರ ಪ್ರದೇಶ (Uttar Pradesh )ದ ಮಥುರಾದಲ್ಲಿ ನಡೆದಿದೆ. ಕರ್ನಾಲ್ ಹುಡುಗಿಯೊಬ್ಬಳು 12 ವರ್ಷಗಳ ಹಿಂದೆ ನೌಝೀಲ್ ಗ್ರಾಮದ ವ್ಯಕ್ತಿಯನ್ನು ಮದುವೆ ಆಗಿದ್ದಳು. ಆಕೆಗೆ ಇಬ್ಬರು ಮಕ್ಕಳಿವೆ. ಆಕೆ ತಂಗಿಗೆ ಕೂಡ ಐದು ವರ್ಷಗಳ ಹಿಂದೆ ಮದುವೆಯಾಗಿದೆ. ಆಕೆಗೂ ಇಬ್ಬರು ಮಕ್ಕಳಿವೆ. ಈ ಮಧ್ಯೆ ತಂಗಿಗೆ ತನ್ನ ಭಾವನ ಮೇಲೆ ಪ್ರೀತಿ ಶುರುವಾಗಿದೆ. ಇಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ವಯಸ್ಸು, ಮಕ್ಕಳು ಎಲ್ಲವೂ ಅವರ ಪ್ರೀತಿ ಮುಂದೆ ಸೋತಿದೆ. ಈಗ ನಾಲ್ಕು ತಿಂಗಳ ಹಿಂದೆ ಭಾವನ ಜೊತೆ ನಾದಿನಿ ಓಡಿ ಹೋಗಿದ್ದಾಳೆ.
ವಾಕ್ ಮಾಡಲು ಸುಂದರ ಹುಡುಗಿ ಬೇಕು: ಸ್ಯಾಲರಿ 10 ಸಾವಿರ: ಜಾಹೀರಾತು ಸಖತ್ ವೈರಲ್
ಆರಂಭದಲ್ಲಿ ಮನೆಯವರು ಇವರಿಬ್ಬರ ಹುಡುಕಾಟ ನಡೆಸಿದ್ದಾರೆ. ಮನೆಯವರಿಗೆ ಇಬ್ಬರು ಪ್ರೀತಿಸುವ ವಿಷ್ಯ ಗೊತ್ತಿರಲಿಲ್ಲ. ಹಾಗಾಗಿ ಇಬ್ಬರಿಗೂ ಅಪಾಯವಾಗಿರಬಹುದೆಂಬ ಆತಂಕ ಅವರನ್ನು ಕಾಡಿತ್ತು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಜೊತೆಗೆ ಮನೆಯವರು ಇವರಿಗಾಗಿ ನಿರಂತರ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಈ ಜೋಡಿ ಸಿಕ್ಕಿದೆ.
ನಾದಿನಿ ಹೇಳೋದೇನು? : ರಾಯ್‌ಪುರ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಇಬ್ಬರು ಸಿಕ್ಕಿದ್ದಾರೆ. ಇಬ್ಬರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಮಹಿಳೆಯ ಸಹೋದರ, ತಂಗಿಯನ್ನು ಮನೆಗೆ ಕರೆತರುವ ಪ್ರಯತ್ನ ನಡೆಸಿದ್ದಾನೆ. ಆದ್ರೆ ಮಹಿಳೆ ಮಾತ್ರ ವಾಪಸ್ ಬರಲು ಒಪ್ಪಲಿಲ್ಲ. ಮಧ್ಯ ಪ್ರವೇಶಿಸಿದ ಭಾವ ಕೂಡ ಆಕೆಯನ್ನು ಮನೆಗೆ ಕಳುಹಿಸಲು ನಿರಾಕರಿಸಿದ್ದಾನೆ. ಈತ ಈಗ ನನ್ನ ಸಹೋದರಿ ಗಂಡನಲ್ಲ, ನನಗೆ ಭಾವನಲ್ಲ. ನನ್ನ ಪತಿ ಈತ ಎಂದು ಅಣ್ಣನ ಮುಂದೆ ಮಹಿಳೆ ಹೇಳಿದ್ದಾಳೆ. ಆತನನ್ನು ನಾನು ಪ್ರೀತಿ ಮಾಡುತ್ತಿದ್ದು, ಇಬ್ಬರೂ ಒಟ್ಟಿಗೆ ಜೀವನ ನಡೆಸುತ್ತೇವೆ ಎಂದಿದ್ದಾಳೆ. ತಂಗಿ ಮಾತು ಕೇಳಿ ಅಣ್ಣ ದಂಗಾಗಿದ್ದಾನೆ.
ಮದುವೆ ನಂತರವೂ ಪರರೊಂದಿಗೆ ಸಂಬಂಧ ಹೊಂದುವ ಜನರಿರೋ ಟಾಪ್ 10 ದೇಶಗಳು
ಭಾವನಿಗೆ ಬುದ್ದಿ ಹೇಳುವ ಪ್ರಯತ್ನ ಕೂಡ ಮಾಡಿದ್ದಾನೆ. ಇಬ್ಬರು ಮಕ್ಕಳಿವೆ, ನಿನ್ನನ್ನು ನಂಬಿದ ಪತ್ನಿಯಿದ್ದಾಳೆ. ಅವರನ್ನು ಹೇಗೆ ಬಿಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾನೆ. ಆದ್ರೆ ಇದ್ಯಾವುದಕ್ಕೂ ಭಾವ ಬಗ್ಗಲಿಲ್ಲ. ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಗಲಾಟೆಯಾಗಿದೆ. ನಂತ್ರ ಅಣ್ಣ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ತಂಗಿಯನ್ನು ವಾಪಸ್ ಕಳುಹಿಸುವಂತೆ ಮನವಿ ಮಾಡಿದ್ದಾನೆ.
ಇಬ್ಬರ ವಾದ- ವಿವಾದ ಆಲಿಸಿದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ. ಮಹಿಳೆ ಯಾವುದೇ ಕಾರಣಕ್ಕೂ ಭಾವನನ್ನು ಬಿಟ್ಟುಕೊಡಲು ಸಿದ್ಧಳಿಲ್ಲ. ಏನಾದ್ರೂ ಆತನ ಜೊತೆಗಿರ್ತೇನೆ ಎನ್ನುತ್ತಿದ್ದಾಳೆ. ಭಾವ ಕೂಡ ನಾದಿನಿ ಜೊತೆ ಜೀವನ ನಡೆಸುವ ಪಟ್ಟು ಹಿಡಿದಿದ್ದಾನೆ. ಈ ವಿಷ್ಯ ಕೇಳಿ ಮಹಿಳೆ ಅಕ್ಕ ಕಣ್ಣೀರಿಟ್ಟಿದ್ದಾಳೆ. ಮಾತುಕತೆ ನಡೆಸಿ ಪ್ರಕರಣ ಬಗೆ ಹರಿಸುವ ಪ್ರಯತ್ನವನ್ನು ಪೊಲೀಸರು ಮಾಡ್ತಿದ್ದಾರೆ. ಆದ್ರೆ ಈವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.