ಊಟ ಕೊಡಲಿಲ್ಲ: ವರನ ಮುಂದೆಯೇ ಎಲ್ಲ ಫೋಟೋ ಡಿಲೀಟ್ ಮಾಡಿದ ಫೋಟೊಗ್ರಫರ್

Suvarna News   | Asianet News
Published : Oct 02, 2021, 08:54 AM ISTUpdated : Oct 02, 2021, 09:23 AM IST
ಊಟ ಕೊಡಲಿಲ್ಲ: ವರನ ಮುಂದೆಯೇ ಎಲ್ಲ ಫೋಟೋ ಡಿಲೀಟ್ ಮಾಡಿದ ಫೋಟೊಗ್ರಫರ್

ಸಾರಾಂಶ

ಹಸಿವು ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತೆ ಅಂತಾರಲ್ಲಾ ? ಹೌದು ಎನ್ನುವಂತಹ ಘಟನೆ ನಡೆದಿದೆ ನೋಡಿ ಊಟ ಕೊಡಲ್ಲ ಎಂದ ವರನ ಮುಂದೆಯೇ ಮದ್ವೆಯ ಎಲ್ಲಾ ಫೋಟೋಸ್ ಡಿಲೀಟ್

ಮದುವೆ ಮನೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತಿಯೊಂದು ನಿಮಿಷ, ಸಂಪ್ರದಾಯ, ಪದ್ಧತಿ ವಿವಾಹದ ಕ್ಷಣಗಳನ್ನು ನಿಂತುಕೊಂಡು, ಕುಳಿತುಕೊಂಡು, ಎಲ್ಲೆಲ್ಲೋ ಹತ್ತಿ ನಿಂತು, ಮಲಗಿ ಫೋಟೊ ಕ್ಲಿಕ್ ಮಾಡೋ ಫೋಟೋಗ್ರಫರ್‌ಗಳು ಯಾವಾಗ ಉಣ್ಣುತ್ತಾರೋ ಯಾರಿಗೂ ತಿಳಿಯುವುದಿಲ್ಲ. ಮದುವೆ ಅಂದ ಮೇಲೆ ಹೇಳಬೇಕಾ ? ಫೋಟೋಗ್ರಫರ್ ಸುಸ್ತಾಗಿಬಿಟ್ಟಿರುತ್ತಾನೆ.

ಹೀಗೆ ಒಂದು ಮದುವೆಯಲ್ಲಿ ಫೋಟೋ ತೆಗೆಯುತ್ತಿದ್ದ ಫೋಟೋಗ್ರಫರ್‌ಗೆ(Photography) ವರನೇ ಊಟ ನಿರಾಕರಿಸಿದ್ದು, ಸಿಟ್ಟಾದ ಫೋಟೋಗ್ರಫರ್ ಮದುಮಗನ ಮುಂದೆಯೇ ಅಷ್ಟೊತ್ತಿಂದ ಕ್ಲಿಕ್ ಮಾಡಿದ್ದ ಅಷ್ಟೂ ಮದುವೆ(Marriage) ಫೋಟೋ ಒಂದೇ ಕ್ಷಣದಲ್ಲಿ ಡಿಲೀಟ್ ಮಾಡಿಬಿಟ್ಟಿದ್ದಾನೆ. ಮದುವೆಯಲ್ಲಿ ಆಹಾರವನ್ನು ನಿರಾಕರಿಸಿದ ನಂತರ ವರನ ಮುಂದೆ ತನ್ನ ಕ್ಯಾಮೆರಾದಲ್ಲಿರುವ ಎಲ್ಲಾ ಫೋಟೋಗಳನ್ನು ಅಳಿಸಿದ ಛಾಯಾಗ್ರಾಹಕ ತನ್ನ ನಡೆಯ ಬಗ್ಗೆ ಜನರ ಅಭಿಪ್ರಾಯವನ್ನು ಕೇಳಿದ್ದಾನೆ.

ವಧುವಿನ ಹತ್ತಿರ ಹೋಗಿ ಫೋಟೋ ತೆಗೆದವನಿಗೆ ವರನಿಂದ ಗೂಸಾ, ನಗು ತಡೆಯಲಾರದ ವಧು!

ನಾನು ನಿಜವಾಗಿಯೂ ಛಾಯಾಗ್ರಾಹಕನಲ್ಲ, ನಾನು ನಾಯಿ ಸಾಕುವವನು. ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲು ನಾನು ದಿನವಿಡೀ ಸಾಕಷ್ಟು ನಾಯಿಗಳ ಫೋಟೋಗಳನ್ನು ತೆಗೆದುಕೊಳ್ಳುತ್ತೇನೆ. ಅದು ಅರ್ಥವಾದರೆ ನನ್ನ ಅಷ್ಟೇ ಮ್ಯಾಟರ್ ಎಂದು ಅವರು ರೆಡ್ಡಿಟ್‌ನಲ್ಲಿ ಬರೆದಿದ್ದಾರೆ.

ಹಣವನ್ನು ಉಳಿಸೋ ಪ್ಲಾನ್ ಮಾಡಿದ ಸ್ನೇಹಿತ ತನ್ನ ಮದುವೆಯ ಫೋಟೋ ಕ್ಲಿಕ್ ಮಾಡಲು ನನ್ನ ಮನವೊಲಿಸಿ. ವೆಡ್ಡಿಂಗ್ ಫೋಟೋಗ್ರಫಿ ನಿಜವಾಗಿಯೂ ನನ್ನ ಸಾಮರ್ಥ್ಯವಲ್ಲ ಎಂದು ನಾನು ಅವನಿಗೆ ಹೇಳಿದೆ. ಆದರೆ ಅವರು ಅದು ಚೆನ್ನಾಗಿರದಿದ್ದರೂ ಪವರವಾಗಿಲ್ಲ ಎಂದು ನನಗೆ ಮನವರಿಕೆ ಮಾಡಿದರು ಎಂದಿದ್ದಾರೆ ಫೋಟೋಗ್ರಫರ್.

ಛಾಯಾಗ್ರಾಹಕ 250 ಡಾಲರ್‌ಗೆ ಫೋಟೋ ತೆಗೆಯಲು ಒಪ್ಪಿಕೊಂಡಿದ್ದ. ಬೆಳಗ್ಗೆ 11 ಗಂಟೆಗೆ ಕೆಲಸ ಮಾಡಲು ಪ್ರಾರಂಭಿಸಿದರು. ಸಂಜೆ 7: 30 ಕ್ಕೆ ಮುಗಿಯಬೇಕಿತ್ತು. ಸಂಜೆ 5 ಗಂಟೆ ಸುಮಾರಿಗೆ ಆಹಾರವನ್ನು ನೀಡಲಾಗುತ್ತಿತ್ತು. ನಾನು ಫೋಟೋಗ್ರಾಫರ್ ಆಗಬೇಕಾಗಿದ್ದ ಕಾರಣ ನಾನು ತಿನ್ನಬಾರದು, ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದರು. ನಿಜಕ್ಕೂ ಊಟದ ಟೇಬಲ್‌ನಲ್ಲಿ ನನಗಾಗಿ ಸ್ಥಳವನ್ನೇ ಬಿಡಲಿಲ್ಲ ಎಂದಿದ್ದಾರೆ.

ನನಗೆ ಸುಸ್ತಾಗುತ್ತಿತ್ತು, ಅಲ್ಲಿ ನಂಬಲಾಗದಷ್ಟು ಬಿಸಿ ಇತ್ತು. ಭಾರೀ ಬಿಸಿಯ ಅನುಭವಾಗುತ್ತಿತ್ತು. ಅಲ್ಲಿ ಯಾವುದೇ AC ಇರಲಿಲ್ಲ. ನೀರು ಪಡೆಯಲು ಯಾವುದೇ ಸೌಲಭ್ಯವಿರಲಿಲ್ಲ ಎಂದಿದ್ದಾರೆ.

ಸುಸ್ತಾದ ಫೋಟೋಗ್ರಫರ್ ವರನಲ್ಲಿ 20 ನಿಮಿಷ ಬ್ರೇಕ್ ಬೇಕೆಂದು ಕೇಳಿದ್ದ. ಆದರೆ ಇದಕ್ಕೆ ಉತ್ತರಿಸಿದ ವರ ಒಂದಾ ಫೊಟೋಗ್ರಫರ್ ಆಗಿ ಇರು, ಅಥವಾ ಹಣ ಕೊಡುವುದಿಲ್ಲ ತೊಲಗು ಎಂದಿದ್ದಾನೆ. ಸುತ್ತಲಿನ ಬಿಸಿ, ಹಸಿವು, ಆ ಸಂದರ್ಭದಲ್ಲಿ ಆದ ಅವಮಾನದಿಂದ ನಾನೂ ಸಿಟ್ಟಾದೆ. ನಾನು ಮತ್ತೊಮ್ಮೆ ಇದೇ ಕೊನೆ ನಿರ್ಧಾರವಾ ಎಂದು ಮರು ಪ್ರಶ್ನೆ ಮಾಡಿದೆ. ಅವನು ಹೌದು ಎಂದ. ನಾನು ಅವನೆದರುರೇ ಫೋಟೋಸ್ ಎಲ್ಲ ಡಿಲೀಟ್ ಮಾಡಿ ನಾನು ನಿನ್ನ ಫೋಟೋಗ್ರಫರ್ ಅಲ್ಲ ಎಂದು ಅಲ್ಲಿಂದ ಬಂದೆ ಎಂದಿದ್ದಾರೆ.

ಆ ಸಂದರ್ಭದಲ್ಲಿ ನನಗೆ 250 ಡಾಲರ್ ಕೊಟ್ಟಿದ್ದರೆ ಅದನ್ನು ನಾನು ಒಂದು ಗ್ಲಾಸ್ ತಂಪು ನೀರಿಗೂ, 5 ನಿಮಿಷ ಕೂರುವುದಕ್ಕೂ ಪಾವತಿಸುತ್ತಿದ್ದೆ ಎಂದಿದ್ದಾರೆ ಫೋಟೋಗ್ರಫರ್. ಇತ್ತ ಮದುವೆ ಫೋಟೋ ಕಳಿಸ್ರಪ್ಪಾ ಎಂದು ಗೋಗರೆಯೋ ಸಂಬಂಧಿಕರಿಂದ ತಪ್ಪಿಸಿಕೊಂಡು ಜೋಡಿ ಸೋಷಿಯಲ್ ಮೀಡಿಯಾದಿಂದ ದೂರ ಸರಿದು ಹನಿಮೂನ್‌ಗೆ ಹೋಗಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕಡಿಮೆ ಬೆಲೆ ನೀಡುವವರಿದ್ದರು. ಆದರೆ ನಿಮಗೆ ಆಹಾರವನ್ನು ಕೊಡಲಿಲ್ವಾ? ಈ 'ಸ್ನೇಹಿತರಿಗಿಂತ' ನಾಯಿಗಳು ಉತ್ತಮ ಎಂದಿದ್ದಾರೆ. ಇನ್ನೊಬ್ಬರು ನೀವು ಯಾರಿಗಾದರೂ ಆಹಾರ ಮತ್ತು ನೀರು ಮತ್ತು ವಿಶ್ರಾಂತಿ ವಿರಾಮವನ್ನು ನಿರಾಕರಿಸಿದರೆ ನೀವು ಫ್ರೆಂಡ್ ಅಲ್ಲ ಎಂದಿದ್ದಾರೆ.

ಇನ್ನೊಬ್ಬರು ಮದುವೆ ಫೋಟೋಗಳನ್ನು ಅಳಿಸಬಾರದಿತ್ತು. ಸುಮ್ಮನೆ ಹೊರಡಬೇಕಿತ್ತು. ನಂತರ ಅವರ ಸ್ನೇಹಿತರು ಫೊಟೋ ಬಗ್ಗೆ ಕೇಳಿದಾಗ ಅವರು ಫೋಟೋಗಳನ್ನು ಡಬಲ್ ಅಥವಾ ಟ್ರಿಪಲ್ ರೇಟ್‌ಗೆ ಮಾರಾಟ ಮಾಡುತ್ತೇನೆ ಎಂದು ಹೇಳಬೇಕಿತ್ತು ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!