Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

By Suvarna News  |  First Published Sep 30, 2021, 6:24 PM IST

ನಾನು ಮತ್ತು ಗೆಳೆಯ ಲಿವಿಂಗ್ ಟುಗೆದರ್. ಆತನಿಗೆ ಹೋಮೋಸೆಕ್ಸ್ ಕೂಡ ಇಷ್ಟ. ಅವನ ಗೆಳೆಯರನ್ನು ಕರೆದು ಮೂವರೂ ಜೊತೆಯಾಗಿ ಸೆಕ್ಸ್ ಮಾಡೋಣವೇ ಎನ್ನುತ್ತಾನೆ. ನನಗೆ ಇಷ್ಟವಿಲ್ಲ. ಏನು ಮಾಡಲಿ?


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತಾರು. ಕಾಲೇಜು ಮುಗಿಸಿದ ಬಳಿಕ ನಗರದಲ್ಲಿ ಒಂದು ಕಾಲೇಜಿನಲ್ಲಿ ಲೆಕ್ಷರರ್ (Lecturer) ಆಗಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ಮೂವರು ಯುವಕರ ಜೊತೆ ಲಿವಿಂಗ್ ಟುಗೆದರ್ (live In relatinship) ಟ್ರೈ ಮಾಡಿದ್ದೇನೆ. ಆದರೆ ಪ್ರತಿಬಾರಿಯೂ ಏನಾದರೂ ಒಂದು ಸಮಸ್ಯೆ ಬಂದು ಬೇರೆ ಬೇರೆಯಾಗಿದ್ದೇವೆ. ನನಗೆ ಮದುವೆ(wedding)ಯ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ನಮ್ಮ ಮನೆಯಲ್ಲೂ ನೀನು ಮದುವೆ ಮಾಡಿಕೋ ಎಂದು ಫೋರ್ಸ್ ಮಾಡುವುದಿಲ್ಲ. ಆದರೆ ನನಗೇ ನನ್ನ ಸಂಗಾತಿ (Partner) ಹೇಗಿರಬೇಕು ಎಂಬ ಬಗ್ಗೆ ಕೆಲವು ಚೆನ್ನಾದ ಕಲ್ಪನೆಗಳಿವೆ. ನನ್ನ ಮೊದಲ ಬಾಯ್‌ಫ್ರೆಂಡ್‌ (Boyfriend) ನನಗಿಂತ ಹತ್ತು ವರ್ಷ ದೊಡ್ಡವನು. ಅವನು ನನ್ನ ಕಡೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಆರಂಭದ ಕೆಲವು ತಿಂಗಳಲ್ಲಿ ನಮ್ಮ ಸೆಕ್ಸ್ (Sex) ಚೆನ್ನಾಗಿತ್ತು. ಬಳಿಕ ನಾವಿಬ್ಬರೂ ಪರಸ್ಪರರಲ್ಲಿ ಆಸಕ್ತಿ ಕಳೆದುಕೊಂಡೆವು. ಬೇರೆ ಬೇರೆಯಾದೆವು. ನನ್ನ ಎರಡನೇ ಬಾಯ್‌ಫ್ರೆಂಡ್‌ ನನಗಿಂತ ಒಂದೆರಡು ವರ್ಷ ಸಣ್ಣವನು. ಅವನಿಗೂ ನನಗೂ ಸೆಕ್ಸ್ ವಿಷಯದಲ್ಲಿ ಒಂದು ಸಾಮರಸ್ಯವಿತ್ತು. ನಾವು ಹೆಚ್ಚುಕಡಿಮೆ ಪ್ರತಿದಿನ ಸೆಕ್ಸ್ ಮಾಡುತ್ತಿದ್ದೆವು. ಆದರೆ ಒಂದು ದಿನ ಅವನು ಆತನ ಕೊಲೀಗ್ ಜೊತೆಗೆ ಸೆಕ್ಸ್ ಮಾಡುತ್ತಾ ನನಗೆ ಸಿಕ್ಕಿಬಿದ್ದ. ಅವನನ್ನೂ ಬಿಟ್ಟು ಬಿಟ್ಟೆ. ಇದೀಗ ಮೂರನೇ ಬಾಯ್‌ಫ್ರೆಂಡ್ (Boy Friend) ಜೊತೆಗೆ ಇದ್ದೇನೆ. ನಮ್ಮಿಬ್ಬರ ಸೆಕ್ಸ್ ಸಾಮಾನ್ಯವಾಗಿದೆ. ಇದರ ಜೊತೆಗೆ, ಅವನು ಹೋಮೋಸೆಕ್ಷುಯಲ್‌ (Homosexual) ಕೂಡ ಇರಬಹುದು ಎನ್ನುವ ಆತಂಕ ಶುರುವಾಗಿದೆ. ಯಾಕೆಂದರೆ ಚಂದದ ಯುವಕರನ್ನು ಕಂಡರೆ ನನಗೆ ಆದಂತೆಯೇ ಅವನಿಗೂ ಉದ್ರೇಕ ಆಗುತ್ತದೆ. ಅವರನ್ನು ಸೆಕ್ಸ್‌ಗೆ ಕರೆಯೋಣವೇ ಎಂದು ಕೇಳುತ್ತಾನೆ. ಆದರೆ ಮೂವರು ಜತೆಯಾಗಿ ಸೆಕ್ಸ್ ಮಾಡುವುದು (threesome)‌ ನನಗೆ ಇಷ್ಟವಿಲ್ಲ. ಆದರೆ ಬಾಯ್‌ಫ್ರೆಂಡ್ ಒತ್ತಾಯಿಸುತ್ತಿದ್ದಾನೆ. ಈತನ ಸಂಬಂಧವೂ ಕಡಿದುಹೋಗಬಹುದು ಎಂಬ ಆತಂಕ. ಏನು ಮಾಡಲಿ?

ಉತ್ತರ: ಈ ವಿಚಾರದಲ್ಲಿ ನಿಮ್ಮ ಮಿತ್ರನೂ ಶತ್ರುವೂ ನೀವೇ ಆಗಿದ್ದೀರಿ. ನನಗೆ ಅನ್ನಿಸುವಂತೆ, ನಿಮಗೆ ದೈಹಿಕ ಸಾಂಗತ್ಯವೂ (Physical Relatinship) ಬೇಕು, ಮಾನಸಿಕ ಸಾಂಗತ್ಯವೂ (Emotional Attachment) ಬೇಕು. ಅವೆರಡರಲ್ಲಿ ಯಾವುದು ಮುಖ್ಯವಾಗಿ ಬೇಕು ಎಂದು ನಿರ್ಧರಿಸಿಕೊಳ್ಳುವ ಕಾಲ ಬಂದಿದೆ. 
 

Tap to resize

Latest Videos

undefined


ಇನ್ನು ಸೆಕ್ಸ್ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಈ ಹಿಂದಿನ ಎರಡು ಸಂಗಾತಿಗಳ ಜೊತೆಗೆ ನೀವು ಏನು ಮಾಡಿದ್ದೀರೋ, ಏನು ಬಿಟ್ಟಿದ್ದೀರೋ, ಅವರು ನಿಮಗೆ ಏನು ಮಾಡಿದ್ದರೋ ಇಲ್ಲವೋ, ಅದನ್ನು ಗತಕಾಲಕ್ಕೆ ಬಿಡೋಣ. ಅದನ್ನು ಚಿಂತಿಸುವುದು ಹಾಗೂ ವರ್ತಮಾನಕ್ಕೆ ಎಳೆದು ತರುವುದರಿಂದ ಏನೂ ಪ್ರಯೋಜನವಿಲ್ಲ. ಈಗಿನ ಬಾಯ್‌ಫ್ರೆಂಡ್ ಜೊತೆಗೆ ನಿಮ್ಮ ವರ್ತನೆ ಹೇಗಿರಬೇಕು ಎಂಬುದನ್ನಷ್ಟೇ ಗಮನಿಸೋಣ.
ನಿಮ್ಮ ಗೆಳೆಯ ನಿಮ್ಮತ್ರ ತ್ರೀಸಮ್‌ಗೆ ಒತ್ತಾಯಿಸುತ್ತಿದ್ದಾನೆ ಎಂದಿರಲ್ಲವೇ? ಆದರೆ ನಿಮಗೆ ಅದು ಇಷ್ಟವಿಲ್ಲ. ಇಷ್ಟವಿಲ್ಲ ಎಂದರೆ ಗೆಳೆಯ ನಿಮ್ಮ ಕೈಬಿಡಬಹುದು ಎಂಬ ಆತಂಕ ನಿಮ್ಮದು. ನೀವು ನಿಮ್ಮ ಒಲವು ಏನು ಎಂಬುದನ್ನು ಆತನಿಗೆ ಸ್ಪಷ್ಟವಾಗಿ ಹೇಳಿ. 

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

ನನಗೆ ನೀನು ಇಷ್ಟ, ನಿನ್ನ ಜೊತೆ ಸೆಕ್ಸ್ ಇಷ್ಟ. ನಿನ್ನ ಜೊತೆಗೆ ಸೆಕ್ಸ್ ಎಂಬುದು ನಿನ್ನ ಜೊತೆಗಿನ ಪ್ರೀತಿಯಿಂದಾಗಿ ನನ್ನಲ್ಲಿ ಉಂಟಾಗುವಂಥದು. ಬೇರೆ ಯಾರೋ ಇನ್ನೊಬ್ಬನ ಜೊತೆಗೆ ಆ ಪ್ರೀತಿ (love) ಮೂಡಲು ಸಾಧ್ಯವಿಲ್ಲ ಹಾಗಾಗಿ ಆತನ ಜೊತೆಗೆ ದೇಹ ಹಂಚಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಬಲವಂತವಾಗಿ ಸೆಕ್ಸ್ ಮಾಡಿದರೆ ಅದರಿಂದ ಮೂವರಿಗೂ ಖುಷಿ ಸಿಗಲು ಸಾಧ್ಯವಿಲ್ಲ. ಸೆಕ್ಸ್ ತೀರಾ ಆಂತರಿಕ ವಿಚಾರ ಆಗಿರುವುದರಿಂದ ಇದರಲ್ಲಿ ನನ್ನನ್ನು ಯಾರೂ ಒತ್ತಾಯಿಸಬೇಕಿಲ್ಲ. ಹೀಗೆಂದರೆ ನಾನು ನಿನ್ನನ್ನು ತಿರಸ್ಕರಿಸುತ್ತಿದ್ದೇನೆ ಎಂದು ಅರ್ಥವಲ್ಲ. ನಿನಗೆ ಸುಖ ಕೊಡಲು, ನಿನ್ನಿಂದ ಸುಖ ಪಡೆಯಲು ನಾನು ಬದ್ಧ- ಇದನ್ನು ಸ್ಪಷ್ಟವಾಗಿ ಹೇಳಿ. ಆತನಿಗೆ ಹೋಮೋಸೆಕ್ಸ್ ಬೇಕು ಅನಿಸಿದ್ದರೆ, ಅದನ್ನು ಪಡೆಯದೇ ನಿರ್ವಾಹವಿಲ್ಲ ಎನಿಸಿದರೆ, ಅದನ್ನು ನೀವು ಅನುಮೋದಿಸುವವರಾದರೆ, ಹಾಗೇ ಹೇಳಿ. ನೀನು ನಿನ್ನ ಗೆಳೆಯನ ಜತೆ ಮಲಗಲು ನನ್ನ ಅಭ್ಯಂತರವಿಲ್ಲ ಎಂದು ತಿಳಿಸಿ. ಆದರೆ ಅದಕ್ಕಾಗಿ ನನ್ನ ಜೊತೆಗಿನ ಸಾಂಗತ್ಯವನ್ನು ಕಡೆಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿ. ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು, ಆತನಿಗೂ ಎಚ್ಚರಿಕೆ ತೆಗೆದುಕೊಳ್ಳಲು ಹೇಳಲು ಮರೆಯಬೇಡಿ. 

ಇನ್ನು ವರ್ಷಕ್ಕೊಮ್ಮೆ ಗೆಳೆಯರನ್ನು ಬದಲಾಯಿಸುವ ಪ್ರವೃತ್ತಿ ಅಷ್ಟು ಒಳ್ಳೆಯದಲ್ಲ. ಇದರಿಂದ ಸಮಾಜದಲ್ಲಿ, ನಿಮ್ಮ ಸುತ್ತಮುತ್ತಲಿನ ಸಮುದಾಯದಲ್ಲಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು. ಒಬ್ಬನೇ ಸಂಗಾತಿಯಲ್ಲಿ ಹೊಸಹೊಸಬರನ್ನು ನೋಡುವ, ಹೊಸಹೊಸ ಲೈಂಗಿಕ ಸಾಹಸ (Sexual Adventures)ಗಳನ್ನು ಜೊತೆಯಾಗಿ ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡರೆ ನಿಮ್ಮ ಜೀವನ ಸದಾ ಹೊಸದಾಗಿರುತ್ತದೆ. 

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತು. ಪ್ರತಿದಿನ ರಾತ್ರಿ ನಿದ್ರೆಯಲ್ಲಿ ಶಿಶ್ನ ನಿಮಿರಿ ಸ್ಖಲನವಾಗುತ್ತದೆ. ಇದರಿಂದ ನಾನು ನಿರ್ವೀರ್ಯನಾಗುತ್ತೇನೆಯೇ? 

ಉತ್ತರ: ಏನೂ ಸಮಸ್ಯೆ ಇಲ್ಲ. ಲೈಂಗಿಕ ಆಲೋಚನೆಗಳು ಬಂದು ಉದ್ರೇಕಗೊಂಡಾಗ ಹಸ್ತಮೈಥುನ ಮಾಡಿಕೊಳ್ಳಿ. ಅದರಿಂದ ಸ್ವಪ್ನಸ್ಖಲನ ಕಡಿಮೆಯಾಗುತ್ತದೆ. ವೀರ್ಯ ದೇಹದಲ್ಲಿ ಪ್ರತಿದಿನ ಉತ್ಪತ್ತಿಯಾಗುತ್ತದೆ. ಆದ್ದರಿಂದ ಅದು ಎಂದೂ ಬರಿದಾಗುವ ಭಯ ಬೇಡ.  

click me!