
ಝೆನ್ ಜಿ ಜನರೇಶನ್‌ನಲ್ಲಿ ರಿಲೇಶನ್‌ಶಿಪ್, ಡೇಟಿಂಗ್ ಎಲ್ಲವೂ ಭಿನ್ನ. ಹೊಸ ರೂಪ, ಹೊಸ ಅವತಾರ, ಹೊಸ ಅರ್ಥಗಳನ್ನು ಪಡೆದಿರುತ್ತದೆ. ಇದೀಗ ಡೇಟಿಂಗ್ ರಿಲೇಶನ್‌ಶಿಪ್‌ನಲ್ಲಿ ಇದೀಗ ಫ್ಲಡ್‌ಲೈಟಿಂಗ್ ಬಾರಿ ಟ್ರೆಂಡ್ ಆಗಿದೆ. ಇದು ಝೆನ್ ಜಿ ಜಮಾನದ ಡೇಟಿಂಗ್. ಕೊಂಚ ಭಿನ್ನ ವಿಚಿತ್ರವಾದರೂ ಈಗಿನ ಜನರೇಶನ್ ಇದೀಗ ಈ ಫ್ಲಡ್‌ಲೈಟಿಂಗ್ ಡೇಟಿಂಗ್‌ನಲ್ಲಿ ಹೆಚ್ಚು ಸಕ್ರಿಯವಾಗುತ್ತಿದೆ. ಒಂದು ರೀತಿಯಲ್ಲಿ ನೋಡಿದರೆ ವೇಗವಾದ ಡೇಟಿಂಗ್. ಇಲ್ಲಿ ಭಾವನೆಗಳು, ಸಂಬಂಧ ಇವೆಲ್ಲಾ ಗಟ್ಟಿಗೊಳ್ಳುವ ಅಥವಾ ಅರ್ಥ ಮಾಡಿಕೊಳ್ಳಲು ಹೆಚ್ಚು ದಿನವಿಲ್ಲ. ಹಾಗಾದರೆ ಫ್ಲಡ್‌ಲೈಟಿಂಗ್ ಡೇಟಿಂಗ್ ಎಂದರೇನು?
ಫ್ಲಡ್‌ಲೈಟಿಂಗ್ ಡೇಟಿಂಗ್ ಕುರಿತು ಸಿಂಗಲ್ಸ್ ತಿಳಿದಿರಬೇಕು. ಕಾರಣ ಈಗಿನ ಜನರೇಶನ್ ಹೊಸ ಹೊಸ ರಿಲೇಶನ್‌ಶಿಪ್ ನಿಮಗೆ ಸೂಕ್ತವಾಗಿದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಫ್ಲಡ್‌ಲೈಟಿಂಗ್ ಡೇಟಿಂಗ್‌ನಲ್ಲಿ ಮೊದಲ ಭೇಟಿಯಲ್ಲೇ ಭಾವನೆಗಳ ಸುರಿಮಳೆಯಾಗುತ್ತದೆ. ಹಳೆ ಕತೆಗಳು, ಘಟನೆಗಳು ಹಂಚಿಕೊಳ್ಳಲಾಗುತ್ತದೆ. ಆತ್ಮೀಯತೆ, ಸಂಬಂಧ ಮುಂದುವರಿಯುವ ಬಗ್ಗೆ ಎಲ್ಲವೂ ಮೊದಲ ಭೇಟಿ ಅಥವಾ ಎರಡನೇ ಭೇಟಿಯಲ್ಲೇ ನಿರ್ಧಾರವಾಗುತ್ತದೆ. ಸಿಂಪಲ್ ಆಂದರೆ ಡೇಟಿಂಗ್‌ನಲ್ಲಿ ನೀವು ಎಕ್ಸ್ ಅಥವಾ ಮಾಜಿ ಆಗಿದ್ದರೆ ಒಂದು ಕೈ ನೋಡಬಹುದು. ಇಂತವರಿಗೆ ಈ ಫ್ಲಡ್‌ಲೈಟಿಂಗ್ ಟ್ರೆಂಡ್ ಆಗುತ್ತಿದೆ.
ಪ್ರೀತಿಯಲ್ಲಿ ಬೀಳಲು ಹುಡುಗರಿಗೆ 4 ವಾರ, ಹುಡುಗಿಯರಿಗೆ ಎಷ್ಟು ದಿನ? ಅಧ್ಯಯನ ವರದಿ
ಪ್ರಮುಖವಾಗಿ ಈ ಫ್ಲಡ್‌ಲೈಟಿಂಗ್ ಡೇಟಿಂಗ್, ಮೊದಲ ಡೇಟಿಂಗ್‌ನಿಂದ ದೂರವಾಗಿರುವ, ಅಥವಾ ಈ ಹಿಂದಿನ ಡೇಟಿಂಗ್‌ನಿಂದ ನೊಂದು ಬೆಂದಿರುವ ಅಥವಾ ಸ್ವಯಂಪ್ರೇರಿತವಾಗಿ ದೂರ ಸರಿದಿರುವ ಸಿಂಗಲ್ಸ್‌ಗಳಿಗಾಗಿ ಹೆಚ್ಚು ಸೂಕ್ತ. ನಿಮ್ಮ ಭಾವನೆಗಳನ್ನು ಮೊದಲ ಡೇಟ್‌ನಲ್ಲಿ ಹೇಳಿಕೊಳ್ಳಲಾಗುತ್ತದೆ. ಇದರಿಂದ ನಿಮ್ಮ ಭಾವನೆ, ಆಸೆ, ಆಕಾಂಕ್ಷೆಗೆ ತಕ್ಕಂತೆ ಮುಂದುವರಿಯಲು ಸಾಧ್ಯವೋ ಇಲ್ವೋ ಅನ್ನೋದು ಈ ಡೇಟಿಂಗ್‌ನ ಆರಂಭದಲ್ಲೇ ಗೊತ್ತಾಗಲಿದೆ. ಇಲ್ಲಿ ಸಮಯ ವ್ಯರ್ಥ ಮಾಡುವ, ಮರ ಸುತ್ತುವ ಅಭ್ಯಾಸ ಇಲ್ಲ. ಎಲ್ಲವೂ ನೇರಾನೇರ, ಅಷ್ಟೇ ವೇಗ.
ಈ ಫ್ಲಡ್‌ಲೈಟಿಂಗ್ ರಿಲೇಶನ್‌ಶಿಪ್‌ನಲ್ಲಿ ಅನ್ಯೋನ್ಯತೆ ಅತೀ ವೇಗವಾಗಿ ಆಗಲಿದೆ. ಆದರೆ ಇದು ಪ್ರಶ್ನಾರ್ಹವಾಗಿದೆ. ಇಲ್ಲಿ ಸಂಭಾಷಣೆ ಒನ್ ಸೈಡೆಡ್ ಆಗಿರುವ ಸಾಧ್ಯತೆ ಇದೆ. ಅತೀಯಾಗಿ ಭಾವನೆಗಳ ಹಂಚಿಕೊಂಡು ಮರುಳು ಮಾಡುವ ಸಾಧ್ಯತೆಯೂ ಇದೆ. ಆದರೆ ನಿಮಗೆ ಒಕೆ ಎಂದಿದ್ದರೆ ಮುಂದುವರಿಯಬಹುದು. ಹಳೆ ಘಟನೆಗಳು, ಹಳೇ ರಿಲೇಶನ್‌ಶಿಪ್, ಹಳೆ ಸಂಬಂಧದಲ್ಲಿನ ಘಟನೆಗಳು ಸೇರಿದಂತೆ ಹಲವು ವಿಚಾರಗಳು ಇಲ್ಲಿ ಪ್ರಸ್ತಾಪವಾಗಲಿದೆ. ಸರಳವಾಗಿ ಹೇಳುವುದಾದರೆ ಡೇಟಿಂಗ್ ಮಾಡಿ ಎಕ್ಸ್ ಆಗಿದ್ದರೆ, ಇಲ್ಲೊಂದು ಅವಕಾಶವಿದೆ. ಆದರೆ ಎಚ್ಚರ ತಪ್ಪಿದರೂ ಮತ್ತೊಂದು ಅಪಾಯ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.
ಮಾಜಿ ಗರ್ಲ್‌ಫ್ರೆಂಡ್ ಮದುವೆಗೆ ಹಾಜರಾದ ಗೆಳೆಯನ ಭಾವುಕ ಮಾತಿಗೆ ಕಣ್ಣೀರಾದ ಜನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.