
ಭಾರತೀಯರು ಅತಿಥಿಗಳನ್ನು ದೇವರಂತೆ ಕಾಣುತ್ತಾರೆ ಎಂದು ಹೇಳಲಾಗುತ್ತದೆ. ಭಾರತೀಯರ ಆತಿಥ್ಯವು ತುಂಬಾ ಪ್ರಸಿದ್ಧವಾಗಿದೆ. ಭಾರತೀಯ ಸಂಸ್ಕೃತಿಯು ಹೆಚ್ಚಾಗಿ ಅಪರಿಚಿತರನ್ನು ಸಹ ತಮ್ಮ ಆಚರಣೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳುವ ರೀತಿಯಲ್ಲಿದೆ. ಆದಾಗ್ಯೂ, ವಿದೇಶದಲ್ಲಿರುವವರಿಗೆ ಭಾರತೀಯರ ಸಂಸ್ಕೃತಿ ಅಥವಾ ಪದ್ಧತಿಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಇತ್ತೀಚೆಗೆ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರೊಬ್ಬರು ಹಂಚಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅದರಲ್ಲಿ ಭಾರತೀಯರ ಆತಿಥ್ಯದ ಬಗ್ಗೆ ಹೇಳಲಾಗಿದೆ. ರಷ್ಯಾದಿಂದ ಬಂದ ಪ್ರವಾಸಿಗ ಮತ್ತು ದೆಹಲಿಯ ಕುಟುಂಬದ ನಡುವಿನ ಸಂಭಾಷಣೆಯು ವಿಡಿಯೋದಲ್ಲಿದೆ. ದೆಹಲಿಯ ದೇವಾಲಯದ ಹೊರಗೆ ಭಾರತೀಯ ಕುಟುಂಬವು ಯುವಕನನ್ನು ತಮ್ಮೊಂದಿಗೆ ಊಟ ಮಾಡಲು ಕರೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಮೊದಲು ಯುವಕನಿಗೆ ಯಾವ ದೇಶದವರು ಎಂದು ಕೇಳುತ್ತಾರೆ. ಯುವಕ ರಷ್ಯಾದಿಂದ ಬಂದಿದ್ದೇನೆ ಎಂದು ಹೇಳುತ್ತಾನೆ. ನಂತರ ಕುಟುಂಬವು ಯುವಕನನ್ನು ಅವರೊಂದಿಗೆ ಊಟ ಮಾಡಲು ಆಹ್ವಾನಿಸುತ್ತದೆ. ಒಂದು ತಟ್ಟೆಯಲ್ಲಿ ರೊಟ್ಟಿ ಮತ್ತು ತರಕಾರಿಗಳನ್ನು ಬಡಿಸಿರುವುದನ್ನು ಕಾಣಬಹುದು. ಅದರ ನಡುವೆ ಹಪ್ಪಳವನ್ನು ಸಹ ನೀಡುತ್ತಾರೆ. ರಷ್ಯಾದ ಯುವಕ ಇದು ಏನು ಎಂದು ಕೇಳಿದಾಗ, ಅದು ಹಪ್ಪಳ ಎಂದು ಹೇಳುತ್ತಾರೆ. ತುಂಬಾ ರುಚಿಯಾಗಿದೆ ಎಂದು ಯುವಕ ಹೇಳುತ್ತಾನೆ.
ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಭಾರತದಲ್ಲಿ ಹುಡುಗಿ ಸಿಗಲಿಲ್ವಾ? ಪಾಕ್ ನಟಿ ಮದುವೆಯಾಗುವ ರಹಸ್ಯ ರಿವೀಲ್ ಮಾಡಿದ ಬಾಲಿವುಡ್ ನಟಿ!
ಏನೇ ಆಗಲಿ, ವಿಡಿಯೋದ ಕೊನೆಯಲ್ಲಿ ಯುವಕ ಹೇಳುವುದು, ನೀವು ಭಾರತಕ್ಕೆ ಬನ್ನಿ. ಆಧ್ಯಾತ್ಮಿಕತೆ ಎಂದರೇನು ಎಂಬುದರ ನಿಜವಾದ ಅರ್ಥವನ್ನು ಭಾರತ ನಿಮಗೆ ತೋರಿಸುತ್ತದೆ. @MeghUpdates ಎಂಬ ಬಳಕೆದಾರರು ಈ ವಿಡಿಯೋವನ್ನು ಎಕ್ಸ್‌ನಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ. ಅನೇಕ ಜನರು ವಿಡಿಯೋವನ್ನು ನೋಡಿದ್ದಾರೆ ಮತ್ತು ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇದರಲ್ಲಿ ಒಬ್ಬ ನೆಟ್ಟಿಗರು ಭಾರತೀಯ ಆತಿಥ್ಯ ಮತ್ತೊಮ್ಮೆ ಹೃದಯಗಳನ್ನು ಗೆದ್ದಿದೆ! ಇಂಡಿಯಾ ಲವ್ಸ್ ರಷ್ಯಾ ಎಂದು ಸಿಂಬಲ್ ಹಾಕಿಕೊಂಡಿದ್ದು, ಸರಳವಾದ ನಡವಳಿಕೆ, ಜೀವಮಾನದ ಸ್ನೇಹ ಇದು ಭಾರತದ ಮ್ಯಾಜಿಕ್ ಎಂದು ಹೇಳಿದ್ದಾರೆ. ಮತ್ತೊಬ್ಬರು ನಮ್ಮ ಗೌರವ, ಸೇವೆ ಮತ್ತು ಅತಿಥಿಗಳ ಮೇಲಿನ ಅಪಾರ ಪ್ರೀತಿ ನಮ್ಮ ಭಾರತೀಯರ ಗುರುತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಅತಿಥಿ ದೇವೋ ಭವ' ಎಂದು ಸುಮ್ಮನೆ ಹೇಳಲಾಗುವುದಿಲ್ಲ. ಕೆಲವು ಜನರ ಮೂರ್ಖತನದಿಂದಾಗಿ, ಹೆಸರು ಆಗಾಗ ಹಾಳಾಗುತ್ತದೆ ಅಷ್ಟೇ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಸ್ಟ್ 1 ಸಾವಿರ ಹಾಕಿ, ಮನೆಯಿಂದಲೇ ಕೆಲಸ ಆರಂಭಿಸಿ ಲಕ್ಷಾಂತರ ರೂಪಾಯಿ ಸಂಪಾದಿಸಿ; ಸೂಪರ್ ಬ್ಯುಸಿನೆಸ್ ಐಡಿಯಾ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.