ತಾನು ಬಯಸಿದ ಹೆಣ್ಣನ್ನು ಮೊದಲು ಭೇಟಿಯಾಗಲು ಹೊರಟ ಗಂಡಿಗೆ ಎಲ್ಲಿಲ್ಲದ ಕುತೂಹಲವಿರುತ್ತದೆ. ಆದರೆ, ಅವನು ಅವಳಿಗೆ ಇಷ್ಟವಾಗಬೇಕೆಂದೇನೂ ಇಲ್ಲ. ಹೆಣ್ಣನ್ನು ಒಲಿಸಿಕೊಳ್ಳಲು ಸೌಂದರ್ಯವಿದ್ದರೆ ಸಾಲದು, ಬದಲಾಗಿ ಇನ್ನೇನು ಬೇಕು?
ಪ್ರೀತಿ ಮಾಡಿರೋರೆಲ್ಲ ತಮ್ಮ ಹುಡುಗಿಯನ್ನು ಭೇಟಿಯಾಗಬೇಕು, ಎದುರು ಬದುರು ಕೂತು ತುಂಬಾ ಮಾತನಾಡಬೇಕು ಎಂದು ಬಯಸುತ್ತಾರೆ. ಆದರೆ ಈ ಸಮಯದಲ್ಲಿ ಹುಡುಗರು ಮಾಡುವ ತಪ್ಪುಗಳು ಹುಡುಗಿಯರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೊದಲ ಭೇಟಿಯಲ್ಲಿ ಮೂಡ್ ಹಾಳಾಗುವುದು ಖಂಡಿತಾ. ಬದಲಾಗಿ ಹೇಗಿದ್ದರೆ ಒಳಿತು?
ನಾನೇ ಶ್ರೇಷ್ಠನೆಂಬ ಅಹಂಕಾರ ಬೇಡ. ಏಕೆಂದರೆ ಪ್ರೀತಿ ಎಂದರೆ ಅಲ್ಲಿ ಇಬ್ಬರೂ ಸಮ. ಆದುದರಿಂದ ಯಾವತ್ತೂ ಸಂಗತಿಯನ್ನು ಕೀಳಾಗಿ ನೋಡಬೇಡಿ.
ಪ್ರೀತಿಸುತ್ತಿದ್ದರೆ ಆಕೆಯ ಸಾಮಿಪ್ಯ ಸುಖಕ್ಕಾಗಿ ಮನಸು ಬಯಸುತ್ತಿರುತ್ತದೆ. ಆದರೆ ಮೊದಲ ಭೇಟಿಯಲ್ಲಿಯೇ ಆಕೆಯನ್ನು ಟಚ್ ಮಾಡಲು, ಕಿಸ್ ಮಾಡಲು ಬಯಸಬೇಡಿ. ಇದರಿಂದ ಮೊದಲ ಇಂಪ್ರೆಷನ್ ಕೆಟ್ಟದಾಗಿರುತ್ತದೆ. ಜೊತೆಗೆ ಹುಡುಗಿ ಮೂಡ್ ಕೂಡ ಹಾಳಾಗುತ್ತದೆ.
ಪ್ರೇಮಿಯನ್ನು ಭೇಟಿಯಾಗಲು ಹೋದಾಗ ಯಾವತ್ತೂ ಏನೇನೋ ಡ್ರೆಸ್ ಮಾಡಿಕೊಂಡು ಹೋಗಬೇಡಿ. ಬದಲಾಗಿ ನೀಟ್ ಆಗಿ ಡ್ರೆಸ್ ಮಾಡಿಕೊಳ್ಳಿ.
ಹಿಂದಿನ ಪ್ರೀತಿಯ ಬಗ್ಗೆ, ಅದ್ರಲ್ಲೂ ಹಿಂದಿನ ಗರ್ಲ್ ಫ್ರೆಂಡ್ ಬಗ್ಗೆ ಆಕೆಯ ಬಳಿ ಮಾತನಾಡುವುದೇ ಬೇಡ. ಇದರಿಂದ ಹೊಸ ಸಂಬಂಧ ಹಾಳಾಗೋದು ಖಂಡಿತಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.