ಸರ್ಪ್ರೈಸ್ ನೀಡಿ, ಸಂಗಾತಿಯನ್ನು ಖುಷಿಯಾಗಿಡಿ....

By Web DeskFirst Published Mar 7, 2019, 11:12 AM IST
Highlights

ಗಂಡು ಹೇಗೆ ತನ್ನ ಹೆಂಡತಿ ಇರಬೇಕು ಹಾಗೂ ತನ್ನ ಭಾವನೆಗಳಿಗೆ ಸ್ಪಂದಿಸಬೇಕೆಂದು ಬಯಸುತ್ತಾನೋ, ಹಾಕೆಯೇ ಹೆಣ್ಣಿಗೂ ದಾಂಪತ್ಯದ ಬಗ್ಗೆ ತನ್ನದ ಆದ ಕನಸು, ಭಾವನೆಗಳಿರುತ್ತವೆ. ಅಂಥ ಭಾವನಾಜೀವಿಯನ್ನು ಖುಷಿ ಪಡಿಸೋದು ಹೇಗೆ?

ದಾಂಪತ್ಯದಲ್ಲಿ ರೋಮ್ಯಾನ್ಸ್ ಇದ್ದರೆ ದಮ್ ಇರುತ್ತೆ. ಜೀವನಕ್ಕೊಂದು ಅರ್ಥ ಸೃಷ್ಟಿಯಾಗುತ್ತದೆ. ಈ ಪ್ರೀತಿ ಕಡಿಮೆಯಾದರೆ ಬದುಕು ನರಕ. ಆಗ ಏಕಾಂಗಿತನ ಕಾಡೋದು  ಸಹಜ. ಈ ರೀತಿ ಆಗಬಾದೆಂದಾದರೆ ನಿಮ್ಮೊಳಗಿನ ಪ್ರೀತಿಯನ್ನು ಅಭಿವ್ಯಕ್ತಗೊಳಿಸಿ. ಎಷ್ಟೊತ್ತಿಗೂ I Love You ಹೇಳಬೇಕೆಂದೇನೂ ಇಲ್ಲ. ಬದಲಾಗಿ ಪ್ರೀತಿಯನ್ನು ಬೇರೆ ಬೇರೆ ರೀತಿಯೂ ಅಭಿವ್ಯಕ್ತಗೊಳಿಸಬಹುದು... ಹೇಗೆ?

ರೊಮ್ಯಾಂಟಿಕ್ ಮೆಸೇಜ್: ಕಚೇರಿಯಲ್ಲಿ ಅದೆಷ್ಟು ಬ್ಯುಸಿ ಇದ್ದರೂ, ಫ್ರೀ ಇದ್ದಾಗ ಪತ್ನಿಗೊಂದು ರೊಮ್ಯಾಂಟಿಕ್ ಮೆಸೇಜ್ ಕಳುಹಿಸಿ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. 

ಆಕೆಗೆ ರಿಲ್ಯಾಕ್ಸ್ ಮಾಡಲು ಹೇಳಿ : ಒಮ್ಮೊಮ್ಮೆಯಾದರೂ ಸಂಗಾತಿ ರಿಲ್ಯಾಕ್ಸ್ ಮಾಡಲು ಹೇಳಿ. ಮನೆಯ ಒಂದಿಷ್ಟು ಕೆಲಸ ನೀವೇ ಮಾಡಿ. ಅಂದರೆ ಪಾತ್ರೆ ತೊಳೆಯುವುದು, ಕ್ಲೀನ್ ಮಾಡಲು ಹೆಲ್ಪ್ ಮಾಡಿ. 

ಬಾತ್‌ರೂಮಲ್ಲಿ ILU ಬರೆದಿಡಿ: ಪತ್ನಿಗೆ ಸರ್ಪ್ರೈಸ್ ನೀಡುವ ಇನ್ನೊಂದು ವಿಧಾನ ಎಂದರೆ ಬಾತ್ ರೂಮ್ ಮಿರರ್ ಮೇಲೆ ಐ ಲವ್ ಯೂ ಎಂದು ಬರೆದಿಡಿ. ಹೆಣ್ಣಿಗೆ ಇಷ್ಟು ಸಾಕು, ಖುಷಿಯಾಗರಲು...

ಟೀ ಮಾಡಿ ಕೊಡಿ: ಪ್ರತಿದಿನ ಆಕೆ ಎದ್ದು ಪತಿಗಾಗಿ ಟೀ ತಿಂಡಿ ಮಾಡಿಕೊಡುತ್ತಾಳೆ. ಒಮ್ಮೊಮ್ಮೆಯಾದರೂ ನೀವು ಆ ಹೊಣೆಯನ್ನು ಹೊತ್ತುಕೊಳ್ಳಿ. ತಿಂಡಿ, ಟೀ ಮಾಡಿಕೊಡಿ. ಅವರಿಗೆ ಖುಷಿಯಾಗುವುದಲ್ಲದೆ, ಸಂಬಂಧ ಅಧ್ಯಾತ್ಮದತ್ತ ಹೋಗಲು ಇದು ಸಹಕರಿಸುತ್ತದೆ.

ಸರ್ಪ್ರೈಸ್ ಡೇಟಿಂಗ್: ರಜೆಗೆ ಎಲ್ಲಾದರೂ ಹೋಗಿ ಎಂಜಾಯ್ ಮಾಡುವುದು ಎಂದರೆ ಹೆಣ್ಣಿಗೆ ಎಲ್ಲಿಲ್ಲದ ಸಂಭ್ರಮ. ತಿಂಗಳಿಗೊಮ್ಮೆಯಾದರೂ ಸರ್ಪ್ರೈಸ್ ಡೇಟಿಂಗ್ ಮಾಡಿ. 

click me!