ಅಪ್ಪನ ಪ್ರೀತಿ... ಆಕಾಶವೇ ಮಿತಿ: ಅಪ್ಪ ಮಗನ ಫೋಟೋ ವೈರಲ್

Published : Dec 15, 2022, 04:38 PM IST
ಅಪ್ಪನ ಪ್ರೀತಿ... ಆಕಾಶವೇ ಮಿತಿ: ಅಪ್ಪ ಮಗನ ಫೋಟೋ ವೈರಲ್

ಸಾರಾಂಶ

ಇಲ್ಲೊಂದು ಕಡೆ ತನ್ನ ಮಗನ ಮೇಲೆ ಕಾಳಜಿ ತೋರಿದ ಅಪ್ಪನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾಮಾನ್ಯವಾಗಿ ಮಕ್ಕಳ ಮೇಲಿನ ಪ್ರೀತಿಗೆ ತಾಯಿ ಹೆಸರುವಾಸಿ. ಆದರೆ ಅಷ್ಟೇ ಪ್ರೀತಿಯನ್ನು ಮಕ್ಕಳ ಮೇಲೆ ಅಪ್ಪನೂ ತೋರಿಸುತ್ತಾನೆ. ಆದರೆ ಅಪ್ಪ ತೋರುವ ಪ್ರೀತಿ ಕಾಳಜಿ ಯಾವಾಗಲೂ ಗಮನಕ್ಕೆ ಬರುವುದಿಲ್ಲ. ಅಲ್ಲದೇ ಅದು ಅಮ್ಮನ ಪ್ರೀತಿಯಂತೆ ಗಮನ ಸೆಳೆಯುವುದಿಲ್ಲ. ಯಾಕೆಂದರೆ ಬಹುತೇಕ ಅಪ್ಪಂದಿರು ನಿರ್ಲಿಪ್ತರು. ಅಮ್ಮ ಮಕ್ಕಳ ಜೊತೆ ಬೆರೆತಂತೆ ಅಪ್ಪ ಹೆಚ್ಚು ಬೆರೆಯುವುದಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಅಪ್ಪ ಕಡೆಗಣನೆಯಾಗುತ್ತಾನೆ. ಕೆಲವೊಮ್ಮೆ ಅಪ್ಪ ಕುಟುಂಬ ಮಕ್ಕಳಿಗಾಗಿ ಮಾಡುವ ತ್ಯಾಗಗಳು ಗಮನಕ್ಕೆ ಬರುವುದೇ ಇಲ್ಲ. ಆದರೆ ಇತ್ತೀಚೆಗೆ ಅಪ್ಪಂದಿರು ಮಕ್ಕಳ ಬಗ್ಗೆ ಕಾಳಜಿ ತೋರುವ ಫೊಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ತನ್ನ ಮಗನ ಮೇಲೆ ಕಾಳಜಿ ತೋರಿದ ಅಪ್ಪನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

@DoctorAjayita ಎಂಬ ಟ್ವಿಟ್ಟರ್ ಬಳಕೆದಾರರು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಹೆಚ್ಚೆನಿಲ್ಲ. ಆತ ಸಾಮಾನ್ಯ ಅಪ್ಪನಂತೆ ತನ್ನ ಮಗ ಮಳೆಯಲ್ಲಿ ಒದ್ದೆಯಾಗಬಾರದು ಎಂಬ ಕಾರಣಕ್ಕೆ ತನ್ನ ಮಗನನ್ನು ರೈನ್ ಕೋಟಿನ ಒಳಗೆ ಮುಚ್ಚಿಟ್ಟುಕೊಂಡಿದ್ದಾನೆ. ಮಗುವೂ ಅಪ್ಪ ಧರಿಸಿದ ರೈನ್‌ಕೋಟ್ ಒಳಗೆ ನುಗ್ಗಿ ಅಪ್ಪನ ಬೆನ್ನಿಗೆ ಒತ್ತಿಕೊಂಡು ಬೈಕ್‌ನ ಹಿಂದೆ ಕುಳಿತಿದೆ. ಅಪ್ಪಂದಿರು ನಿರ್ಲಕ್ಷಿಸಲ್ಪಟ್ಟಿದ್ದಾರೆ ಎಂದು ಬರೆದು ಈ ಫೋಟೋವನ್ನು ಡಾ ಅಜಯಿತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋಗೆ ಅನೇಕರು ಕಾಮೆಂಟ್ ಮಾಡಿದ್ದು, ಹೌದು ಅಪ್ಪಂದಿರು ಯಾವಾಗಲೂ ನಿರ್ಲಕ್ಷಿಸಲ್ಪಡುತ್ತಾರೆ ಹಾಗೂ ಅತೀ ಹೆಚ್ಚು ಟೀಕೆಗೆ ಒಳಗಾಗುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಆತ್ಮೀಯ ಅಪ್ಪ ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ಬುಲೀಮಿಯಾ! ಏನಿದು ಸಮಸ್ಯೆ?

ಅಪ್ಪ ಎಂಬ ಪದವೇ ದೊಡ್ಡದಾದ ಛತ್ರಿಯಿದ್ದಂತೆ, ಅವರಿಗೆ ವಯಸ್ಸಾದರೂ ಅವರು ನಮ್ಮನ್ನು ಎಲ್ಲಾ ತೊಂದರೆಗಳಿಂದ ರಕ್ಷಣೆ ಮಾಡುತ್ತಿರುತ್ತಾರೆ. ನಾಲ್ಕು ವರ್ಷದ ಹಿಂದೆ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ಒಂದು ದಿನವೂ ಅವರನ್ನು ನೆನೆಯದ ದಿನವಿಲ್ಲ. ಅವರನ್ನು ನಾನು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರಿಲ್ಲದ ಕ್ಷಣವೆಲ್ಲವೂ ಶಕ್ತಿಹೀನವೆನಿಸುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಪ್ಪನ ಬೆನ್ನಿಗೆ ಅಂಟಿ ಕೂತಿರುವ ಮಗು ಪಕ್ಕ ಮಗಳಾಗಿರುತ್ತಾಳೆ. ಮಗನಾಗಿದ್ದರೆ ಈ ಚಿತ್ರ ಬೇರೆ ರೀತಿ ಇರುತ್ತಿತ್ತು ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅಂದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮೇಲೆ ಅಪ್ಪನಿಗೆ ತುಸು ಹೆಚ್ಚೆ ಪ್ರೀತಿ ಇರುತ್ತದೆ. ಮಗನಿಗೆ ಎರಡೇಟು ಹಾಕಲು ಹಿಂದೆ ಮುಂದೆ ನೋಡದ ಅಪ್ಪನಿಗೆ ಮಗಳೆಂದ ಕೂಡಲೇ ವಾತ್ಸಲ್ಯ ಉಕ್ಕಿ ಹರಿಯುತ್ತದೆ. ಅಣ್ಣ ತಂಗಿ ಅಕ್ಕ ತಮ್ಮ ಇರುವ ಮನೆಯಲ್ಲಿ ಬೆಳೆದವರಿಗೆ ಇದರ ಅನುಭವ ಇರಬಹುದು. ಒಟ್ಟಿನಲ್ಲಿ ಅಪ್ಪನ ಪ್ರೀತಿ ತೋರುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Zodiac Signs: ಈ ರಾಶಿಗಳ ಮಕ್ಕಳಿಗೆ ಅಪ್ಪ ಅಂದ್ರೆ ಸ್ಟ್ರಾಂಗೆಸ್ಟ್‌ ಮ್ಯಾನ್


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?