
ಪ್ರೀತಿ ಮುಂದೆ ಸಂಪತ್ತು ಬೆಲೆ ಕಳೆದುಕೊಳ್ಳುತ್ತದೆ ಎಂದು ಅನೇಕರು ಹೇಳ್ತಾರೆ. ಇದು ನಿಜವೇ ಎಂದು ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಬೇಕು. ಈಗಿನ ಜಗತ್ತಿನಲ್ಲಿ ಹಣವಿಲ್ಲವೆಂದ್ರೆ ಬದುಕು ಸಾಧ್ಯವಿಲ್ಲ. ಸಂಪತ್ತು ಇರುವವರೆಗೆ ಪತಿ – ಪತ್ನಿ ಮಧ್ಯೆ ಪ್ರೀತಿಗೆ ಕೊರತೆ ಬರೋದಿಲ್ಲ. ಯಾವಾಗ ಹಣದ ಕೊರತೆ ಶುರುವಾಗುತ್ತೋ ಆಗ ಇಬ್ಬರ ಮಧ್ಯೆ ಪ್ರೀತಿ ಮಾಯವಾಗುತ್ತದೆ. ಹಣಕ್ಕಾಗಿ ಅವರು ಪ್ರೀತಿ ತೊರೆಯಲು ಸಿದ್ಧವಾಗಿರ್ತಾರೆ. ಹೆಣ್ಮಕ್ಕಳು ಈ ನಿರ್ಧಾರ ತೆಗೆದುಕೊಳ್ಳೋದು ಹೆಚ್ಚು. ಹಣವಿಲ್ಲದ ವ್ಯಕ್ತಿ ಜೊತೆಗಿರಲು ಬಯಸದ ಮಹಿಳೆಯರನ್ನು ನಾವು ತಪ್ಪಾಗಿ ಅರ್ಥೈಸಿಬೇಕಾಗಿಲ್ಲ. ಯಾಕೆಂದ್ರೆ ಅವರು ಅದೆಷ್ಟೋ ಕಷ್ಟಗಳನ್ನು ಎದುರಿಸಿಕೊಂಡು ಬಂದಿರ್ತಾರೆ. ಇನ್ನು ವ್ಯಕ್ತಿ ಜೊತೆ ಜೀವನ ಸಾಧ್ಯವೇ ಇಲ್ಲ ಎಂದಾಗ ಆತನಿಂದ ದೂರವಾಗಲು ಮುಂದಾಗ್ತಾರೆ. ಹಣಕ್ಕಾಗಿ ಪ್ರೀತಿ ಬಿಟ್ಟ ಕೆಲ ಮಹಿಳೆಯರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಬಾಲ್ಯದ ಪ್ರೀತಿ (Love) ಬಿಟ್ಟು ಶ್ರೀಮಂತನನ್ನು ಮದುವೆ (Marriage) ಯಾದ ಮಹಿಳೆ : ಸಂಸಾರ ತೂಗಿಸಿಕೊಂಡು ಹೋಗುವುದು ಪುರುಷನ ಜವಾಬ್ದಾರಿ. ಆತನಿಗೆ ಸಂಸಾರ ನೋಡಿಕೊಳ್ಳುವಷ್ಟು ಹಣ (Money) ವಿಲ್ಲವೆಂದಾಗ ಆತನ ಜೊತೆ ಇದ್ದು ಪ್ರಯೋಜನವಿಲ್ಲ ಎನ್ನಿಸ್ತು. ಪ್ರೀತಿ ಎಂದಿಗೂ ಬಿಲ್ (Bill) ಪಾವತಿಗೆ ಬರುವುದಿಲ್ಲ. ಹಾಗಾಗಿ ಆತನ ಪ್ರೀತಿಗೆ ಗುಡ್ ಬೈ ಹೇಳಿ ಶ್ರೀಮಂತನ ಕೈ ಹಿಡಿದೆ ಎನ್ನುತ್ತಾಳೆ ಮಹಿಳೆ.
Breakup ಬಳಿಕ ಪ್ರತಿಯೊಬ್ಬ ಗಂಡಸ್ರೂ ಮಾಡೋ ಕೆಲಸಾನೇ ಇದು!
ಹಣವಿಲ್ಲ ಎಂದಿದ್ರೆ ಮದುವೆ ಆಗ್ತಿರಲಿಲ್ಲ : ಈ ಮಹಿಳೆ ಪತಿಯ ಹಣ ನೋಡಿ ಮದುವೆಯಾಗಿದ್ದಾಳಂತೆ. ಆತ ಶ್ರೀಮಂತನಲ್ಲ ಎಂದಾಗಿದ್ರೆ ನಾನು ಯಾವತ್ತೂ ಆತನ ಕೈ ಹಿಡಿಯುತ್ತಿರಲಿಲ್ಲ. ಆತ ಸುಂದರವಾಗಿಲ್ಲ, ಆಕರ್ಷಕವಾಗಿಲ್ಲ. ಆದ್ರೆ ಸ್ಪೋರ್ಟಿವ್ ಆಗಿದ್ದಾನೆ. ಒಳ್ಳೆ ಪತಿ ಜೊತೆ ಒಳ್ಳೆ ತಂದೆ ಕೂಡ ಹೌದು. ಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದಿದ್ದಾನೆ. ನಾನು ಈಗ್ಲೂ ಆತನನ್ನು ಪ್ರೀತಿಸೋದಿಲ್ಲ. ಆದ್ರೆ ಆತನ ಜೊತೆ ಖುಷಿಯಾಗಿದ್ದೇನೆ ಎನ್ನುತ್ತಾಳೆ ಇನ್ನೊಬ್ಬ ಮಹಿಳೆ.
ಮದುವೆಗೆ ಕಾರಣವಾಗಿದ್ದೇ ಹಣ : ಈ ಮಹಿಳೆ ಕೂಡ ಹಣಕ್ಕಾಗಿಯೇ ಮದುವೆಯಾಗಿದ್ದಾಳಂತೆ. ಶ್ರೀಮಂತ ಜೀವನ ಬೇಕು, ಐಷಾರಾಮಿ ಬದುಕು ಬೇಕು, ಇಷ್ಟಪಟ್ಟ ವಸ್ತುವನ್ನೆಲ್ಲ ಖರೀದಿ ಮಾಡಬೇಕೆಂದು ಬಹುತೇಕ ಮಹಿಳೆಯರು ಬಯಸ್ತಾರೆ. ನಾನೂ ಅದೇ ಬಯಕೆ ಹೊಂದಿದ್ದೆ. ಅದು ಈಡೇರಿದೆ. ನಾನು ಹಣಕ್ಕಾಗಿಯೇ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ನನಗೆ ನನ್ನ ಪತಿ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ನೀವು ಹಣದ ಮೇಲೆ ಒಲವು ಹೊಂದಿದ್ದರೆ ಪ್ರೀತಿ ಸಿಗಲು ಸಾಧ್ಯವೇ ಇಲ್ಲ ಎನ್ನುತ್ತಾಳೆ ಮಹಿಳೆ.
ಅಗತ್ಯ ಪೂರೈಸಲು ಎರಡನೇ ಮದುವೆ : ಮೊದಲ ಪತಿ ಜೊತೆ ಈಕೆ ಸಂಸಾರ ಚೆನ್ನಾಗಿರಲಿಲ್ಲವಂತೆ. ಹಣಕಾಸಿನ ವಿಷ್ಯಕ್ಕೆ ಸಮಸ್ಯೆ ಎದುರಿಸಿದ್ದಳಂತೆ. ಇದು ತಿಳಿದ ಮೇಲೂ ಎರಡನೇ ಮದುವೆಯಾಗುವ ವೇಳೆ ನಾನು ಪ್ರೀತಿಯೆಂಬ ಮೂರ್ಖತನಕ್ಕೆ ಬಿದ್ದಿಲ್ಲ. ಒಳ್ಳೆಯ ಜೀವನಕೊಡಲು ಸಾಧ್ಯವಾಗದ ವ್ಯಕ್ತಿಯನ್ನು ಪ್ರೀತಿಸುವ ಅವಶ್ಯಕತೆ ನನಗಿಲ್ಲ. ನಾನು ಎರಡನೇ ಬಾರಿ ಮದುವೆಯಾಗುವಾಗ ಆತನ ಹಣ ನೋಡಿದ್ದೆ. ಎರಡನೇ ಪತಿ ಜೊತೆ ಖುಷಿಯಾಗಿದ್ದೇನೆ. ನನ್ನೆಲ್ಲ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಅವನಿಗಿದೆ ಎನ್ನುತ್ತಾಳೆ ಮಹಿಳೆ.
ಗಂಡ ಹೆಂಡತಿ ಅಂದ್ರೆ ಜಗಳ ಆಡದೆಯೂ ಇರ್ತಾರಾ? ಇರಬಹುದಂತೆ!
ಹಣವಿದೆ ಆದ್ರೆ ಪ್ರೀತಿ ಇಲ್ಲ : ಈಕೆ 22ನೇ ವಯಸ್ಸಿನಲ್ಲಿಯೇ ಶ್ರೀಮಂತ ವ್ಯಕ್ತಿ ಕೈಹಿಡಿದಿದ್ದಾಳಂತೆ. ಮದುವೆ ನಂತ್ರ ಕುಟುಂಬ ಯಾವುದೇ ಆರ್ಥಿಕ ಸಮಸ್ಯೆಯನ್ನು ಎದುರಿಸಿಲ್ಲವಂತೆ. ಆದ್ರೆ ನಮ್ಮಿಬ್ಬರ ಮಧ್ಯೆ ಪ್ರೀತಿಯ ಕೊರತೆಯಿದೆ ಎನ್ನುತ್ತಾಳೆ ಆಕೆ. ನಾವೆಂದೂ ಪರಸ್ಪರ ಪ್ರೀತಿಸಲಿಲ್ಲ. ಇಬ್ಬರೂ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ತಿದ್ದೇವೆ ಎನ್ನುತ್ತಾಳೆ ಈ ಮಹಿಳೆ. ಹಣವಿರುವ ಕಾರಣ ಸಂಸಾರದ ದೋಣಿ ಆರಾಮವಾಗಿ ಸಾಗಿದೆ ಎನ್ನುತ್ತಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.