ಪುತ್ರಿ ಮದುವೆ ವೇಳೆ ನರ್ತಿಸುತ್ತಲೇ ಕೊನೆಯುಸಿರೆಳೆದ ಅಪ್ಪ! ಸಾವಿನ ಸುದ್ದಿ ಮುಚ್ಚಿಟ್ಟು ವಿವಾಹ- ವಿಡಿಯೋ ವೈರಲ್​

Published : Nov 25, 2026, 06:01 PM IST
Father Dance during wedding

ಸಾರಾಂಶ

ರಾಜಸ್ಥಾನದ ಉದಯಪುರದಲ್ಲಿ ಮಗಳ ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ತಂದೆ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ತಂಗಿಯ ಮದುವೆ ನಿಲ್ಲಬಾರದು ಎಂಬ ಕಾರಣಕ್ಕೆ ಅಣ್ಣ ಈ ವಿಷಯವನ್ನು ಯಾರಿಗೂ ತಿಳಿಸದೆ ಮದುವೆ ಮುಗಿಯುವವರೆಗೂ ಮುಚ್ಚಿಟ್ಟಿದ್ದಾನೆ. ಮದುವೆ ಶಾಸ್ತ್ರಗಳು ಮುಗಿದ ಬಳಿಕವಷ್ಟೇ ತಂದೆಯ ಸಾವಿನ ಕರುಣಾಜನಕ ಸುದ್ದಿಯನ್ನು ಬಹಿರಂಗಪಡಿಸಿದ್ದಾನೆ.

ಉದಯಪುರ (ರಾಜಸ್ಥಾನ): ಸಾವು ಯಾವಾಗ, ಹೇಗೆ, ಯಾವ ಕ್ಷಣದಲ್ಲಿ ಬರುತ್ತದೆ ಎಂದು ಊಹಿಸುವುದೂ ಕಷ್ಟ. ಒಂದು ಕ್ಷಣದ ಹಿಂದೆ ಖುಷಿಯಿಂದ ಇದ್ದ ವ್ಯಕ್ತಿ ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ ಎಂದರೆ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ನಗುತ್ತಾ, ಕುಣಿದಾಡುತ್ತಾ ಆರಾಮಾಗಿ ಇರುವಂತೆ ಕಾಣುವ ಹೃದಯದ ಬಡಿತ ಅದ್ಯಾವ ಮಾಯೆಯಲ್ಲಿ ನಿಂತುಹೋಗುತ್ತೋ ಎನ್ನುವುದು ಮನುಷ್ಯರಿಂದ ಊಹಿಸಲೂ ಸಾಧ್ಯವಿಲ್ಲ. ಯಾವ ಸಮಸ್ಯೆಯೂ ಇಲ್ಲದೇ ಒಂದೇ ಸಲಕ್ಕೆ ಸಾವು ಬರಲಪ್ಪ, ಇದೇ ನೆಮ್ಮದಿಯ ಸಾವು ಎಂದು ಬಹುತೇಕ ಎಲ್ಲರೂ ಬಯಸುವುದು ನಿಜವಾದರೂ, ಹೀಗೆ ಏಕಾಏಕಿ ವ್ಯಕ್ತಿ ಹೋದಾಗ ಇದ್ದವರ ಪಾಡು ಆ ದೇವರಿಗೇ ಪ್ರೀತಿ. ಅದರಲ್ಲಿಯೂ ಮನೆಯಲ್ಲಿ ಯಾವುದೋ ಶುಭ ಕಾರ್ಯವಿದ್ದಾಗ ಹೀಗಾಗಿ ಬಿಟ್ಟರೆ ಆ ಮನೆಯವರ ಸ್ಥಿತಿ ಊಹಿಸಲೂ ಸಾಧ್ಯವಿಲ್ಲ.

ಅಂಥದ್ದೇ ಒಂದು ಘಟನೆ, ರಾಜಸ್ಥಾನದಲ್ಲಿ ನಡೆದಿದೆ. ಇದೇ 21ರಂದು ನಡೆದ ಈ ಘಟನೆಯ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. 51 ವರ್ಷದ ತಂದೆಯೊಬ್ಬರು ತಮ್ಮ ಮಗಳ ಮದುವೆಯ ದಿನ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದರು. ಮದುವೆ ಮೆರವಣಿಗೆ ತರುವಾಗ ಎಲ್ಲರ ಜೊತೆ ಭರ್ಜರಿ ಸ್ಟೆಪ್​ ಕೂಡ ಹಾಕಿದ್ದರು. ತುಂಬಾ ಖುಷಿಯಿಂದ ಮಗಳ ಮದುವೆಯನ್ನು ನೋಡಲು ಉತ್ಸುಕರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದುವೆಯಲ್ಲಿ ಅವರು ನರ್ತಿಸಿದ್ದೇ ಅವರ ಜೀವನದ ಕೊನೆಯ ಕ್ಷಣವಾಗಿತ್ತು. ಅಲ್ಲಿಯೇ ಕುಸಿದು ಬಿಟ್ಟರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಕೊನೆ ಉಸಿರು ಎಳೆದುಬಿಟ್ಟಿದ್ದರು.

ಸತ್ಯ ಮುಚ್ಚಿಟ್ಟು ಮದುವೆ

ಮಗಳ ಮದುವೆಯ ಸಂದರ್ಭದಲ್ಲಿನ ಓಡಾಟದಿಂದ ದಣಿದಿದ್ದರೋ, ಅಷ್ಟೂ ವರ್ಷ ಸಾಕಿ, ಪ್ರೀತಿಯಿಂದ ಸಲುಹಿದ ಮಗಳನ್ನು ಬೇರೆಯವರ ಮನೆಗೆ ಕಳುಹಿಸುವುದನ್ನು ನೆನಪಿಸಿಕೊಂಡು ಆ ಹೃದಯ ಅದೆಷ್ಟು ನೋವನ್ನು ಅನುಭವಿಸಿತ್ತೋ ಆ ದೇವರೇ ಬಲ್ಲ. ಆದರೆ ಮಗಳನ್ನು ಗಂಡನ ಮನೆಗೆ ಕಳುಹಿಸುವುದಕ್ಕೂ ಮುನ್ನವೇ ಕಣ್ಮುಚ್ಚಿಬಿಟ್ಟರು. ಆದರೆ, ಅಪ್ಪನ ಸಾವಿನ ವಿಷಯ ಮಗನಿಗೆ ಮಾತ್ರ ತಿಳಿಯಿತು. ಅತ್ತ ಮನೆಯವರೆಲ್ಲರೂ ಮದುವೆಯಲ್ಲಿ ಬಿಜಿ ಇದ್ದರು. ಆಗಬಾರದ ಅನಾಹುತ ಆಗಿ ಹೋಗಿದೆ. ಆದರೆ, ಈ ವಿಷಯವನ್ನು ಎಲ್ಲರಿಗೂ ಹೇಳಿದರೆ, ತನ್ನ ಸಹೋದರಿಯ ಮದುವೆಯೇ ನಿಂತು ಹೋಗುತ್ತದೆ. ಹೀಗಾದರೆ ಅದು ಇನ್ನೊಂದು ಅಪಶಕುನ, ಮುಂದೆ ಆಕೆಯ ಸ್ಥಿತಿ ಇನ್ನೇನು ಆಗಬಹುದೋ ಎಂದೆಲ್ಲಾ ಯೋಚಿಸಿದ ಸಹೋದರ, ಅಪ್ಪನ ಸಾವಿನ ಸುದ್ದಿಯನ್ನು ಮದುವೆ ಮುಗಿಯುವವರೆಗೂ ಮುಚ್ಚಿಟ್ಟ. ಅತ್ತ ತಂದೆಯ ಶವ ಇರುವುದು ತಿಳಿದಿದ್ದರೂ, ಏನೂ ಆಗದಂತೆ ಹೃದಯವನ್ನು ಗಟ್ಟಿ ಮಾಡಿಕೊಂಡು ತಂಗಿಯ ಮದುವೆಯನ್ನು ಮುಗಿಸಿದ್ದಾನೆ ಅಣ್ಣ.

ಕೊನೆಗೆ ಮದುವೆ ಕಾರ್ಯ ಮುಗಿದ ಮೇಲಷ್ಟೇ ಅಪ್ಪ ಸತ್ತಿರುವ ವಿಷಯವನ್ನು ರಿವೀಲ್​ ಮಾಡಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಉದಯಪುರ ಜಿಲ್ಲೆಯ ಪಾಟಿಯಾ (ಭುಧರ್) ಗ್ರಾಮದಲ್ಲಿ. ಮಗಳ ಮದುವೆ ನೋಡುವ ಮುನ್ನವೇ ಕೊನೆಯುಸಿರು ಎಳೆದವರು ಶಂಕರ್‌ಲಾಲ್ ಮೇಘವಾಲ್. ತಂದೆ ಆರೋಗ್ಯವಾಗಿದ್ದಾರೆ. ಐಸಿಯುನಲ್ಲಿದ್ದಾರೆ, ಅವರಿಗೆ ಏನೂ ಆಗಿಲ್ಲ ಎಂದ ಪುತ್ರ ವರನ ಕುಟುಂಬದ ಸಹಕಾರದೊಂದಿಗೆ, ವಿವಾಹ ವಿಧಿವಿಧಾನಗಳು ಮುಂದುವರೆಸಿ ಕೊನೆಗೆ ಸುದ್ದಿ ತಿಳಿಸಿದ್ದಾನೆ! ಮರುದಿನ ಅಂತ್ಯಕ್ರಿಯೆ ನಡೆಸಲಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಪ್ಪ-ಅಮ್ಮನಾದ Amruthadhaare ಜೀವ, ಶ್ರೀಮಸ್ತು ಶುಭಮಸ್ತು ಪೂರ್ಣಿ: ಕಂದನ ಜೊತೆ ತಾರಾ ಜೋಡಿ
ಚೇಂಜ್ ಸರ್ಪೈಸ್ ಕೊಟ್ಟ ಸಿಎಂ ವಿಜಯ್; ಅದ್ಯಾಕೋ 'ದಳಪತಿ' ಅಂತರಂಗಕ್ಕೆ ಟಾರ್ಚ್ ಬಿಟ್ಟು ನೋಡುತ್ತಿರುವ ಫ್ಯಾನ್ಸ್!