₹1.27 ಕೋಟಿ ಸ್ಯಾಲರಿ ಇದ್ರೂ ಸಿಗ್ತಿಲ್ಲ ವಧು, ಸಂಪತ್ತು ಸೌಂದರ್ಯ ಏನೂ ಬೇಡ 2 ಥಿಯರಿ ಸಾಕು ಎಂದ ಯುವಕ

Published : Nov 25, 2026, 03:37 PM IST
Bride

ಸಾರಾಂಶ

ವರ್ಷಕ್ಕೆ 1.27 ಕೋಟಿ ರೂ ಸಂಬಳ, ಐಐಟಿ ಪದವೀಧರ ಆದರೆ ಮದುವೆಗೆ ಹುಡುಗಿ ಸಿಗುತ್ತಿಲ್ಲ. ಸೌಂದರ್ಯ ಬೇಡ, ಆಸ್ತಿ ಸಂಪತ್ತು ಏನೂ ಬೇಡ, ಕೇವಲ 2 ಥಿಯರಿ ಇದ್ದರೆ ಸಾಕು ಎಂದು ಯುವಕ ತನ್ನ ಬೇಡಿಕೆ ಮುಂದಿಟ್ಟಿದ್ದಾನೆ.

ಸಣ್ಣ ವಯಸ್ಸಿಗೆ ಉನ್ನತ ಹುದ್ದೆಗೆ ಏರಿದ ಯುವಕ. ವಾರ್ಷಿಕವಾಗಿ 1.27 ಕೋಟಿ ರೂಪಾಯಿ ಸಂಬಳ. ಐಐಟಿ ಪದವೀಧರ, ಸಾಲ ಇಲ್ಲ, ಹಲವು ಕಡೆ ಹೂಡಿಕೆ ಮಾಡಿದ್ದಾನೆ. ಉಳಿತಾಯ ಎಲ್ಲವೂ ಉತ್ತಮವಾಗಿದೆ. ಆದರೆ ಈತನಿಗೆ ಮದುವೆಯಾಗಲು ಹುಡುಗಿ ಸಿಗುತಿಲ್ಲ. ಆಪ್ತರು, ಕುಟುಂಬಸ್ಥರು, ಪೋಷಕರು ಹುಡುಕಿದ್ದಾರೆ ಸೆಟ್ ಆಗಿಲ್ಲ. ಕೊನೆಗೆ ಮ್ಯಾಟ್ರಿ ಮೋನಿ ಬಳಿ ತನ್ನ ಬೇಡಿಕೆ ಮುಂದಿಟ್ಟು ಹುಡುಗಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. ಮದುವೆಯಾಗುವ ಹುಡುಗಿ ಶ್ರೀಮಂತೆ ಆಗಿರಬೇಕು, ಸಂಪತ್ತು ಇರಬೇಕು ಎಂದಿಲ್ಲ. ಸೌಂದರ್ಯವತಿಯಾಗಿರಬೇಕು ಎಂದಿಲ್ಲ. ಆದರೆ ಯುವಕ ಭಿನ್ನ 2 ಥಿಯರಿ ಮುಂದಿಟ್ಟಿದ್ದಾನೆ.

ನಾಟ್ ಡೇಟಿಂಗ್ ಸಂಸ್ಥೆ ಸಿಇಒ ಜಸ್ವೀರ್ ಸಿಂಗ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಣ, ಆಸ್ತಿ ಸೌಂದರ್ಯ ಯಾವುದು ಬೇಡ ಎಂದಾಗ ಈತನ ಕುರಿತು ಆಸಕ್ತಿ ಮೂಡಿತು. ಮದುವೆಯಾಗುವ ಹುಡುಗಿ ಸ್ಟೇಟಸ್ ಇರಬೇಕು ಎಂದಿಲ್ಲ. ಸರಿ ಆತನ 2 ಥಿಯರಿ ಏನು ಎಂದು ವಿವರಿಸಿದ್ದಾನೆ. ಈ ವಿವರಣೆ ಕೇಳಿದ ಬಳಿಕ ಹೊಂದಿಕೆಯಾಗುವ ಹುಡುಗಿ ಇದ್ದರೆ ನೇರವಾಗಿ 1.27 ಕೋಟಿ ರೂ ಸ್ಯಾಲರಿಯ ವರನ ಸಂಪರ್ಕಿಸಬಹುದು.

ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳದ ಕತೆ

ಈ ಯುವಕ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದಾನೆ. ಶಾಲಾ ವಿದ್ಯಾಭ್ಯಾಸವೂ ಇದೇ ಊರಿನಲ್ಲಿ ನಡೆದಿದೆ. ಎಸ್ಎಸ್ಎಲ್‌ಸಿ, ಪಿಯುಸಿ ವರೆಗೆ ಇಲ್ಲೇ ಓದಿ ಮುಗಿಸಿದ್ದಾನೆ. ಪಿಯುಸಿ ಬಳಿಕ ಮಹಾನಗರಕ್ಕೆ ಬಂದು ಐಐಟಿ ಸೇರಿಕೊಂಡು ಪದವಿ ಮುಗಿಸಿದ್ದಾನೆ. ಪ್ರತಿಭಾನ್ವಿತ ಯುವಕನಿಗೆ ಅತ್ಯುತ್ತಮ ಕಂಪನಿಯಲ್ಲೂ ಕೆಲಸ ಸಿಕ್ಕಿದೆ. ಯಶಸ್ವಿ ವೃತ್ತಿ ಜೀವನದಲ್ಲಿ ಮನೆ, ಕಾರು ಸೇರಿದಂತೆ ಎಲ್ಲವನ್ನೂ ಖರೀದಿಸಿದ್ದಾನೆ. ಆದರೆ ಈತನ ಬೇಡಿಕೆಯಲ್ಲಿ ಥಿಯರಿ ಅಚ್ಚರಿ ಮೂಡಿಸಿತು ಎಂದು ನಾಟ್ ಡೇಟಿಂಗ್ ಮ್ಯಾಟ್ರಿಮೋನಿ ಸಂಸ್ಥಾಪಕ ಹೇಳಿದ್ದಾನೆ.

ಶ್ರೀಮಂತಿಕೆ ಬೇಡ

ಹಲವು ಶ್ರೀಮಂತ ಕುಟುಂಬದಿಂದ ಪ್ರಪೋಸಲ್ ಬಂದಿತ್ತು. ಯುವತಿಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಆದರೆ ನನಗೆ ಯಾರೂ ಕೂಡ ಪರಿಪೂರ್ಣ ಜೋಡಿಯಾಗುತ್ತಾರೆ ಎಂದು ಅನಿಸಿಲ್ಲ. ಅವರ ನಿಜ ಜೀವನದಲ್ಲಿ ಕೊರತೆ ಇದ್ದಂತೆ ಕಾಣುತ್ತಿತ್ತು. ಮಹಾನಗರಗಳಲ್ಲಿ ಬೆಳೆದಿದ್ದರು, ವಿದೇಶದಲ್ಲಿ ಓದಿದಿದ್ದರು, ಆಸ್ತಿ ಸಂಪತ್ತು, ಅಂತಸ್ತು ಇಲ್ಲವೂ ಇತ್ತು. ಆದರೆ ಹಿನ್ನಲೆ ಬೇರೆ ಬೇರೆಯಾಗಿತ್ತು. ನನ್ನ ಹಲವು ಅಭಿರುಚಿಗಳು ಹೊಂದಿಕೆಯಾಗುತ್ತಿರಲಿಲ್ಲ. ಪ್ರಮುಖವಾಗಿ ಸಣ್ಣ ಹಳ್ಳಿಯಿಂದ, ಊರಿನಿಂದ ಬಂದು ಮಹಾನಗರದಲ್ಲಿ ವೃತ್ತಿ ಮಾಡುತ್ತಿರುವ ಜೀವನ ಕಟ್ಟಿಕೊಂಡಿರುವವರು ಬೇಕು. ನಾನು ಅದೇ ರೀತಿ ಬಂದಿದ್ದೇನೆ. ಊರು, ಗ್ರಾಮ, ಮನೆ, ಜೊತೆಗೆ ಕೆಲಸ ಮಾಡುತ್ತಿರುವ ನಗರ ಈ ಟು ನೇಷನ್ ಥಿಯರಿ ಪ್ರೀತಿಸುವ ಹುಡುಗಿಯಾಗಬೇಕು ಎಂದು ಯುವಕ ಬೇಡಿಕೆ ಮುಂದಿಟ್ಟಿದ್ದಾನೆ.

ಇದರ ನಡುವೆ ಶ್ರೀಮಂತ ಹುಡುಗಿಯರ ಬಿಟ್ಟು ಬಡತನದಿಂದ ಬಂದು ನಗರಗಳಲ್ಲಿರುವ ಕೆಲ ಹುಡುಗಿಯರ ಭೇಟಿಯಾಗಿದ್ದಾನೆ. ಆದರೆ ಅವರ ಆಸಕ್ತಿ, ನಿರೀಕ್ಷೆಗಳು ಬದಲಾಗಿತ್ತು. ಮಹಾನಗರಕ್ಕೆ ಹೊಂದಿಕೊಂಡಿತ್ತು ಅಥವಾ ಸೀಮಿತವಾಗಿತ್ತು. ಅವರ ಮನಸ್ಸಿನಲ್ಲಿ ತಮ್ಮ ಊರಿನ ಯಾವ ಪ್ರೀತಿಯೂ ಉಳಿದಿರಲಿಲ್ಲ. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದು ಮಹಾನಗರಕ್ಕೆ ಬಂದ ಸ್ವಂತ ಕಾಲಿನಲ್ಲಿ ನಿಂತಿರುವ ಹುಡುಗಿ ಬೇಕು ಎಂದು ನೇರವಾಗಿ ತನ್ನ ಡಿಮ್ಯಾಂಡ್ ಮುಂದಿಟ್ಟಿದ್ದಾನೆ. ಈ ರೀತಿಯ ವಧು ಇದ್ದರೆ 1.27 ಕೋಟಿ ರೂಪಾಯಿ ಸ್ಯಾಲರಿ ವರ ರೆಡಿ ಇದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇಂಜ್ ಸರ್ಪೈಸ್ ಕೊಟ್ಟ ಸಿಎಂ ವಿಜಯ್; ಅದ್ಯಾಕೋ 'ದಳಪತಿ' ಅಂತರಂಗಕ್ಕೆ ಟಾರ್ಚ್ ಬಿಟ್ಟು ನೋಡುತ್ತಿರುವ ಫ್ಯಾನ್ಸ್!
ಕೊನೆಗೋ ಮದುವೆಗೆ ಮನಸ್ಸು ಮಾಡಿದ ನಿತ್ಯಾ ಮೆನನ್; ಆದ್ರೆ 'ಕಂಡಿಷನ್ಸ್‌ ಅಪ್ಲೈ'.. ಅಂಥ ಹುಡುಗ ಬೇಕಂತೆ!