Colleague ಜೊತೆ ತಾಯಿಯ ಅಕ್ರಮ ಸಂಬಂಧ, ಮಗನ ಮೇಲೆ ತಂದೆಗೆ ಕೋಪ

Suvarna News   | Asianet News
Published : Mar 11, 2022, 05:28 PM IST
Colleague ಜೊತೆ ತಾಯಿಯ ಅಕ್ರಮ ಸಂಬಂಧ, ಮಗನ ಮೇಲೆ ತಂದೆಗೆ ಕೋಪ

ಸಾರಾಂಶ

ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಇಬ್ಬರ ಗಲಾಟೆಯಲ್ಲಿ ಯಾರ ಪ್ರೀತಿಯೂ ಸಿಗದೆ ಮಕ್ಕಳು ಹಿಂಸೆ ಅನುಭವಿಸುತ್ತಾರೆ. ತಂದೆ-ತಾಯಿಯ ಮಧ್ಯೆ ಮಗನೊಬ್ಬ ನೊಂದು ಬಳಲಿದ್ದಾನೆ. ತಜ್ಞರಿಂದ ಪರಿಹಾರ ಕೇಳಿದ್ದಾನೆ.  

ಪತಿ (Husband )-ಪತ್ನಿ (Wife) ಸಂಬಂಧ ಬೇರೆ,ತಂದೆ (Father)-ತಾಯಿ (Mother) ಸಂಬಂಧ ಬೇರೆ. ವ್ಯಕ್ತಿಯೊಬ್ಬ ಈ ಎಲ್ಲ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಅನೇಕ ಬಾರಿ ತಂದೆ-ತಾಯಿ ಮಾಡುವ ತಪ್ಪಿಗೆ ಮಕ್ಕಳು ಶಿಕ್ಷೆ (Punishment) ಅನುಭವಿಸುತ್ತಾರೆ. ಪಾಲಕರ ದೋಷಕ್ಕೆ ಮಕ್ಕಳು (Children) ಒಂಟಿಯಾಗ್ತಾರೆ. ಮಕ್ಕಳಿಗೆ ತಂದೆ-ತಾಯಿ ಇಬ್ಬರೂ ಎರಡು ಕಣ್ಣು (eyes)ಗಳಿದ್ದಂತೆ. ಆದ್ರೆ ಅದ್ರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಅವರ ಮಾನಸಿಕ (Mental) ಸ್ಥಿತಿ ಹದಗೆಡುತ್ತದೆ. ಯುವಕನೊಬ್ಬನಿಗೆ ಇಂಥಹದ್ದೇ ಸಮಸ್ಯೆ (Problem)ಕಾಡ್ತಿದೆ. ತನ್ನ ಸಮಸ್ಯೆಯನ್ನು ಎಲ್ಲರ ಮುಂದಿಟ್ಟಿದ್ದಾನೆ ಯುವಕ. ತಜ್ಞ (Expert)ರಿಂದ ಮುಂದೇನು ಮಾಡ್ಬೇಕೆಂದು ಸಲಹೆ (Advice )ಕೇಳಿದ್ದಾನೆ. 
23 ವರ್ಷದ ಯುವಕನಿಗೆ ತಂದೆ-ತಾಯಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಶುರುವಾಗಿದೆ. ಇದಕ್ಕೆ ಕಾರಣ (Reason)ವೇನು ಎಂಬುದನ್ನು ಆತ ಹೇಳಿದ್ದಾನೆ.

ಯುವಕನ ಕಥೆ (Story)ಯೇನು? : ಹೆಸರು ಹೇಳದ ಯುವಕನ ತಂದೆ ಕಳೆದ 10 ವರ್ಷಗಳಿಂದ ವಿದೇಶ (Abroad)ದಲ್ಲಿ ವಾಸವಾಗಿದ್ದಾನಂತೆ. ವರ್ಷದಲ್ಲಿ ಎರಡು ಬಾರಿ ತಂದೆ ಭಾರತ (India)ಕ್ಕೆ ಬರ್ತಾನಂತೆ. ಮನೆಯ ಎಲ್ಲ ಜವಾಬ್ದಾರಿಯನ್ನು ತಾಯಿ ನಿರ್ವಹಿಸ್ತಾಳಂತೆ. ಕಳೆದ ಎರಡು ವರ್ಷಗಳಿಂದ ತಾಯಿ, ಕಚೇರಿ (Office)ಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನ ಜೊತೆ ಸಂಬಂಧದಲ್ಲಿದ್ದಾಳಂತೆ. ಈ ವಿಷ್ಯ ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿರುವ ತಂದೆಗೆ ಗೊತ್ತಾಗಿದೆಯಂತೆ. ಇದ್ರಿಂದ ಕೋಪಗೊಂಡಿರುವ ತಂದೆ,ಮಗನಿಗೆ ಬೈದಿದ್ದಾನೆ.ತಾಯಿ ಪರ ಮಾತನಾಡುವ ನೀನು,ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೋ ಎಂದಿದ್ದಾನಂತೆ ತಂದೆ.

RELATIONSHIP TIPS: ನೀವು ಹೀಗಿದ್ದರೆ ಗಂಡ ಬೇರೆ ಹೆಣ್ಣನ್ನುಕಣ್ಣೆತ್ತಿ ಸಹ ನೋಡಲ್ಲ !

ತಾಯಿಯ ಸಂಬಂಧದ ವಿಷ್ಯ ಗೊತ್ತಾಗ್ತಿದ್ದಂತೆ ನಾನು ತಾಯಿಗೆ ತಿಳಿಸಿ ಹೇಳುವ ಪ್ರಯತ್ನ ನಡೆಸಿದ್ದೆ. ಆದ್ರೆ ಆಕೆ ಕೇಳಲಿಲ್ಲ. ಆಕೆಗೆ ತಂದೆ ಜೊತೆಗಿನ ಸಂಬಂಧದಲ್ಲಿ ಆಸಕ್ತಿಯಿಲ್ಲ ಎನ್ನುತ್ತಾನೆ ಯುವಕ. ತಂದೆಯ ಪ್ರೀತಿ ,ಅಗತ್ಯ ಸಮಯದಲ್ಲಿ ಆತನ ಆಸರೆ ಸಿಗದ ಕಾರಣ ತಾಯಿ ಮತ್ತೊಂದು ಪ್ರೀತಿ ಅರಸಿದ್ದಳು. ಮನೆಯ ಎಲ್ಲ ಜವಾಬ್ದಾರಿಯನ್ನು ಆಕೆ ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ನನಗೆ ಕಷ್ಟ ಎನ್ನುತ್ತಾನೆ ಆತ.

ಯುವಕನ ಸಮಸ್ಯೆಗೆ ತಜ್ಞರು ಹೇಳೋದೇನು ? 
ತಜ್ಞರು ಇದಕ್ಕೆ ಪರಿಹಾರ ಹೇಳುವ ಪ್ರಯತ್ನ ಮಾಡಿದ್ದಾರೆ. ಲಾಂಗ್ ಡಿಸ್ಟೆನ್ಸ್ ಸಂಬಂಧದಲ್ಲಿ ಇದು ಸಾಮಾನ್ಯ ಎನ್ನುತ್ತಾರೆ ತಜ್ಞರು. 10 ವರ್ಷಗಳಿಂದ ತಂದೆ ದೂರವಿದ್ದಾನೆ. ವರ್ಷದಲ್ಲಿ ಎರಡು ಬಾರಿ ಮಾತ್ರ ಬರ್ತಾನೆ. ತಾಯಿಗೆ ತಂದೆ ಮೇಲೆ ಎಷ್ಟೇ ಪ್ರೀತಿಯಿರಬಹುದು. ಆದ್ರೆ ಇಬ್ಬರ ಮಧ್ಯೆ ಪ್ರೀತಿ ಮಾತ್ರ ಸಾಲದು. 

Relationship Tips: ಪ್ರೀತಿ ಮಾಡು ತಪ್ಪೇನಿಲ್ಲ, ಆದ್ರೆ ಮತ್ತೆ ಮತ್ತೆ ಲವ್ವಲ್ಲಿ ಬೀಳೋದು ಸರಿನಾ ?

ಮಕ್ಕಳಿಗೆ ಇಬ್ಬರು ಒಂದೇ. ತಂದೆ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಮೂಲಕ ನಿನಗೆ ಒತ್ತಡ ಹೇರುತ್ತಿರಬಹುದು. ಆದ್ರೆ ಅವರನ್ನು ಚೆನ್ನಾಗಿ ಬಲ್ಲವನು ನೀನು. ಅವರಲ್ಲಿ ಯಾರು ಸರಿ?ಯಾರು ತಪ್ಪು ಎಂಬುದನ್ನು ನೀನು ನೋಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ದಂಪತಿ ಸಮಸ್ಯೆಯಲ್ಲಿ ಮಕ್ಕಳನ್ನು ತರುವುದು ಸರಿಯಲ್ಲ. ದಾಂಪತ್ಯ ಬೇರೆ,ಪಾಲಕರ ಜವಾಬ್ದಾರಿ ಬೇರೆ. ಅವರಿಬ್ಬರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳಬೇಕು. ಅವರಿಬ್ಬರನ್ನು ಒಟ್ಟಿಗೆ ಸೇರಿಸಿ ಇಲ್ಲದೆ ಒಬ್ಬೊಬ್ಬರ ಜೊತೆ ಪ್ರತ್ಯೇಕವಾಗಿ ಮಾತನಾಡು. ನಿನ್ನ ಗೊಂದಲಗಳನ್ನು ಅವರಿಗೆ ತಿಳಿಸು. ಹಾಗೇ ನಿಮ್ಮ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಿ. ನನಗೆ ಇಬ್ಬರೂ ಬೇಕು ಎಂಬ ವಿಷ್ಯವನ್ನು ಸ್ಪಷ್ಟವಾಗಿ ಹೇಳು ಎಂದು ತಜ್ಞರು ಹೇಳಿದ್ದಾರೆ. ತಂದೆ-ತಾಯಿಯನ್ನು ಒಂದು ಮಾಡುವ ಅಥವಾ ತಂದೆ-ತಾಯಿಯಲ್ಲಿ ಒಬ್ಬರನ್ನು ಆಯ್ದುಕೊಳ್ಳುವ ವಯಸ್ಸು ನಿನ್ನದಲ್ಲ. ಇದ್ರ ಬಗ್ಗೆ ಅನಗತ್ಯ ಚಿಂತೆ ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನ ನೀಡುವಂತೆ ತಜ್ಞರು ಸಲಹೆ ನೀಡಿದ್ದಾರೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರೇ ನೀವು ಈ 3 ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಇದು ಖ್ಯಾತಿ ಮತ್ತು ಯಶಸ್ಸನ್ನು ತರುವ ಚಿಹ್ನೆ
ಈ ತಿಂಗಳಲ್ಲಿ ಹುಟ್ಟಿದ ಹುಡುಗಿಗೆ ಈ ರೀತಿಯ ಗಂಡ ಸಿಗುತ್ತಾನೆ