ಪತ್ನಿ ಅತ್ತಿಗೆ ಜೊತೆಗಿತ್ತು ಅಕ್ರಮ ಸಂಬಂಧ, ಸಾಬೀತುಪಡಿಸಲು ವ್ಯಕ್ತಿ ಆತ್ಮಹತ್ಯೆ!

By Roopa Hegde  |  First Published Jun 13, 2024, 12:52 PM IST

ಪ್ರೀತಿಯಲ್ಲಿ ಇಬ್ಬರು ಜೊತೆಗಿರ್ತೇವೆ ಎಂದು ಪ್ರಮಾಣ ಮಾಡಬೇಕೇ ವಿನಃ ಪ್ರಾಣ ಬಿಟ್ಟು ಪ್ರಯೋಜನವಿಲ್ಲ. ಈ ವ್ಯಕ್ತಿ ಪ್ರೀತಿಗಾಗಿ ಪ್ರಾಣ ಬಿಟ್ಟಿದ್ದಾನೆ. ಅದೂ ಪತ್ನಿಗಾಗಿ ಅಲ್ಲ, ಅಕ್ರಮ ಸಂಬಂಧ ಬೆಳೆಸಿದ್ದ ಪ್ರಿಯತಮೆಗಾಗಿ. 
 


ನೀನು ನನ್ನನ್ನೇ ಏಕೆ ಪ್ರೀತಿ ಮಾಡಿದೆ? ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸುತ್ತೀಯಾ? ನನ್ನ ಮೇಲೆ ಪ್ರೀತಿ ಇದೆ ಅಂತಾ ಹೇಗೆ ಸಾಬೀತುಪಡಿಸ್ತೀಯಾ? ಜೀವನ ಪರ್ಯಂತ ನನ್ನ ಜೊತೆಗಿರ್ತಿಯಾ? ಅದನ್ನು ಹೇಗೆ ನಂಬೋದು? ಇದೆಲ್ಲ ಪ್ರೀತಿಸುವ ವ್ಯಕ್ತಿಗಳ ಮಧ್ಯೆ ನಡೆಯುವ ಸಾಮಾನ್ಯ ಮಾತುಗಳು. ಪ್ರೀತಿಯಲ್ಲಿ ಭರವಸೆಯಿಲ್ಲದ ಜನರು ಈ ಮಾತುಗಳನ್ನು ಹೆಚ್ಚಾಗಿ ಆಡ್ತಿರುತ್ತಾರೆ. ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತೇನೆ ಎನ್ನುವ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ನಿನಗಾಗಿ ಜೀವ ಬಿಡಲೂ ಸಿದ್ಧ ಎನ್ನುವವರನ್ನು ಕೂಡ ನೀವು ನೋಡಿರಬಹುದು. ಆದ್ರೆ ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಾಗ ಸಮಸ್ಯೆ ಹೆಚ್ಚಾಗುತ್ತದೆ. ಪ್ರೀತಿಸುವ ವ್ಯಕ್ತಿ ಸಾವಿಗೆ ಶರಣಾಗಬೇಕಾಗುತ್ತೆ. ನಿನಗಾಗಿ ಪ್ರಾಣ ಕೊಡಲೂ ಸಿದ್ಧ ಎಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಅಂದ್ರೆ ಅದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಕೆಲ ಪ್ರೇಮಿಗಳು ಇಂಥ ಮನಸ್ಥಿತಿ ಹೊಂದಿರ್ತಾರೆ. ಆದ್ರೆ ಇದನ್ನು ಪ್ರೀತಿ ಎನ್ನುವುದಕ್ಕಿಂತ ಮೂರ್ಖ ಕೆಲಸ ಎಂದೇ ಪರಿಗಣಿಸಲಾಗುತ್ತದೆ. ಇಲ್ಲೊಬ್ಬ ವ್ಯಕ್ತಿ ಮೂರ್ಖತನ ಮಾಡಿ ಪ್ರಾಣ ಬಿಟ್ಟಿದ್ದಾನೆ. ಪ್ರೀತಿಸುವ ಮಹಿಳೆಯ ಒಂದು ಸಂದೇಶ ಆತನ ಪ್ರಾಣ ತೆಗೆದಿದೆ. ಅಷ್ಟಕ್ಕೂ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಪತ್ನಿಗಾಗಿ ಅಲ್ಲ. ಅಕ್ರಮ ಸಂಬಂಧ ಬೆಳೆಸಿದ್ದ ಪತ್ನಿಯ ಅತ್ತಿಗೆಗಾಗಿ.

ಪತ್ನಿ ಅತ್ತಿಗೆ ಜೊತೆ ಅಕ್ರಮ ಸಂಬಂಧ ಮುಳುವಾಯ್ತು : ಘಟನೆ ನಡೆದಿರೋದು ಉತ್ತರ ಪ್ರದೇಶದ ಬಂಡಾದಲ್ಲಿ. ಇಲ್ಲಿನ ವ್ಯಕ್ತಿಯೊಬ್ಬ ತನ್ನ ಪತ್ನಿಯ ಅತ್ತಿಗೆಯನ್ನು ಪ್ರೀತಿ (love) ಗೆ ಬಿದ್ದಿದ್ದ. ಇಬ್ಬರ ಮಧ್ಯೆ ಅನೇಕ ವರ್ಷಗಳಿಂದ ಸಂಬಂಧವಿತ್ತು. ಈ ವಿಷ್ಯ ಮನೆಯವರಿಗೆ ತಿಳಿದಿದೆ. ಈ ಅಕ್ರಮ ಸಂಬಂಧದಿಂದ ವ್ಯಕ್ತಿಯನ್ನು ಹೊರತರಲು ಮನೆಯವರು ಮುಂದಾಗಿದ್ದಾರೆ. ಆದ್ರೆ ಇಬ್ಬರೂ ಕದ್ದು - ಮುಚ್ಚಿ ಭೇಟಿಯಾಗ್ತಿದ್ದರು ಎನ್ನಲಾಗಿದೆ. ಒಂದು ದಿನ ಪತ್ನಿಯ ಅತ್ತಿಗೆ, ಪ್ರೇಮಿಗೆ ಪರೀಕ್ಷೆ ನೀಡಿದ್ದಾಳೆ. ಆ ಪರೀಕ್ಷೆಯಲ್ಲಿ ಪಾಸ್ ಆಗಲು ವಿವಾಹಿತ ಪುರುಷ ಆತ್ಮಹತ್ಯೆ (Suicide) ಗೆ ಶರಣಾಗಿದ್ದಾನೆ.

Tap to resize

Latest Videos

ಅಲ್ಲು ಅರ್ಜುನ್‌ - ರಾಮ್‌ಚರಣ್‌ ಬ್ಯುಸಿನೆಸ್‌ ಕುಟುಂಬದ ಸುಂದರಿಯರ ವರಿಸಿದ ದಕ್ಷಿಣದ ನಟರು

ಪ್ರೀತಿಗಾಗಿ ಪ್ರಾಣ (Life) ನೀಡಿದ ವ್ಯಕ್ತಿ : ವಾಟ್ಸಾಪ್ ನಲ್ಲಿ ಪತ್ನಿಯ ಅತ್ತಿಗೆ ಪ್ರೇಮಿಗೆ ಸಂದೇಶ ಕಳುಹಿಸಿದ್ದಳು. ಇದೇ ಆತನ ಜೀವ ತೆಗೆದಿದೆ ಎಂದು ಪೊಲೀಸರು ಹೇಳಿದ್ದಾರೆ. ನೀನು ನನ್ನನ್ನು ಪ್ರೀತಿ ಮಾಡ್ತಿಯಾ ಎಂದಾದ್ರೆ ಪ್ರಾಣ ಬಿಟ್ಟು ತೋರಿಸು. ಆಗ ನಾನು ನಿನ್ನನ್ನು ಪ್ರೀತಿಯನ್ನು ನಂಬುತ್ತೇನೆ, ಎಂದು ಅತ್ತಿಗೆ ವಾಟ್ಸಾಪ್ ಮೆಸೇಜ್ (What's App Message) ಮಾಡಿದ್ದಾಳೆ. ಈ ಮೆಸೇಜ್ ನೋಡಿದ ವ್ಯಕ್ತಿ ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದಾನೆ. ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಪ್ರಾಣವನ್ನೇ ನೀಡಿದ್ದಾನೆ. ಪೊಲೀಸ್ ಪ್ರಕಾರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ (Death Note) ಬರೆದಿಟ್ಟಿರುವ ವ್ಯಕ್ತಿ, ಕಾರಣವನ್ನು ಸ್ಪಷ್ಟಪಡಿಸಿದ್ದಾನೆ.

ಅಮೃತಧಾರೆಗೆ 300: ಭೂಮಿಕಾ-ಗೌತಮ್​ ರೀಲ್​ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್​

ಡಿಪ್ರೆಶನ್ (Depression)ನಲ್ಲಿದ್ದ ವ್ಯಕ್ತಿ: ವ್ಯಕ್ತಿ ಸಾವಿನ ನಂತ್ರ ಪ್ರಕರಣ ಹೊಸ ತಿರುವು ಪಡೆದಿದೆ. ಮನೆಯವರು ವ್ಯಕ್ತಿ ಡಿಪ್ರೆಶನ್‌ನಲ್ಲಿದ್ದ ಎಂದಿದ್ದಾರೆ. ಇವರಿಬ್ಬರ ಅಕ್ರಮ ಸಂಬಂಧ ಮನೆಯಲ್ಲಿ ತಿಳಿಯುತ್ತಿದ್ದಂತೆ ಮನೆಯವರು ಕ್ಲಾಸ್ ತೆಗೆದುಕೊಂಡಿದ್ದರು. ಆ ನಂತ್ರ ಪತ್ನಿ ಅತ್ತಿಗೆ, ಈತನ ಜೊತೆ ಮಾತು ಕಡಿಮೆ ಮಾಡಿದ್ದಳು. ಇದ್ರಿಂದ ವ್ಯಕ್ತಿ ಬೇಸರಗೊಂಡಿದ್ದ. ಮನನೊಂದಿದ್ದ ಆತ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಜೊತೆ ಮಾತನಾಡುವ ಪ್ರಯತ್ನ ನಡೆಸಿದ್ದ. ಆದ್ರೆ ಆಕೆ ಮಾತನಾಡದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಂಡಾ ಠಾಣೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. 

click me!