ಹೆಂಡತಿಗಿನ್ನು ಮದ್ವೆಯಾದ ಹೊಸತನವೇ ಮಾಸಿರೋಲ್ಲ. ಆದರೂ ಕೆಲವು ಗಂಡಸರಿಗೆ ಲೈಂಗಿಕ ನಿರಾಸಕ್ತಿ (Erectile Dysfunction) ಶುರುವಾಗಿ ಬಿಡುತ್ತೆ. ಇದಕ್ಕೆ ಯಾರು ಹೊಣೆ? ದಂಪತಿಗಳೇನು ಮಾಡಿದರೆ ಈ ಸಮಸ್ಯೆಗೆ ಸಿಗುತ್ತೆ ಪರಿಹಾರ?
ಅವಳಿಗಿನ್ನೂ ವಯಸ್ಸು 28. ಗಂಡನಿಗೂ 30 ದಾಟಿದ್ದಷ್ಟೇ. ಅವಳು ಸುರಸುಂದರಿಯೇ. ಕುಟಂಬದವರು, ಫ್ರೆಂಡ್ಸ್ ಎಲ್ಲರೂ ಅವರಿಗೆ ಸುಂದರಾಂಗರು ಎಂಬ ಪಟ್ಟ ಕೊಟ್ಟಾಗಿದೆ. ಅದರಲ್ಲಿ ಅನುಮಾನವೇ ಇಲ್ಲ. ಹಾಗಂತ ಗಂಡನೂ ದೃಢಕಾಯದ ಶರೀರ ಇರೋನು. ಅಟ್ರಾಕ್ಟಿವ್ ಲುಕ್ ಇದೆ. ಈ ಜೋಡಿಗೆ ಯಾರ ಕಣ್ಣೂ ಬೀಳದಿರಲೆಂದೇ ಮದುವೆಗೆ ಬಂದವರು ಶುಭ ಹಾರೈಸಿ ಹೋಗಿದ್ದರು.
ಮೊದಲ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಆರು ತಿಂಗಳಾಗುವುದರೊಳಗೆ ಅವಳಿಗೆ ಏನೋ ಅಸಮಾಧಾನ. ಸೆಕ್ಸ್‌ನಲ್ಲಿ ಸಿಗುತ್ತಿದ್ದ ಖುಷಿ ಕಡಿಮೆಯಾಗಿದೆ. ಗಂಡನಿಗೋ ಏನೋ ನಿಮಿರು ಸಮಸ್ಯೆ ಶುರುವಾಗಿದೆ. ಸರಿ ಮಾಡಲು ಪತ್ನಿ ಯತ್ನಿಸಿದ್ದಾಳೆ. ಆದರೆ, ಏನೂ ಸರಿ ಹೋಗಿಲ್ಲ. ಬರ್ತಾ ಬರ್ತಾ ಗಂಡನಿಗೆ ಸೆಕ್ಸ್‌ನಲ್ಲಿ ಪೂರ್ತಿ ನಿರಾಸಕ್ತಿ ಕಾಣಿಸಲು ಶುರುವಾಗಿದೆ. ಸೆಕ್ಸ್ ಅಂದ್ರೆ ದೂರ ಹೋಗ್ತಾನೆ. ಮೂಡಿಲ್ಲ ಎನ್ನೋ ರೆಡಿಮೇಡ್ ಉತ್ತರ. ಅಷ್ಟಕ್ಕೂ ಮನಸ್ಸಿಗೂ, ಶಿಶ್ನ ನಿಮಿರುವಿಕೆಗೂ ಇದ್ಯಾ ಸಂಬಂಧ?
ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ
ಅದರಲ್ಲಿ ಅನುಮಾನವೇ ಇಲ್ಲವೆನ್ನುತ್ತಾರೆ ಸೆಕ್ಸ್ ಎಕ್ಪ್‌ಪರ್ಟ್ಸ್ (Sex Expert). ಮನಸ್ಸು (Mood), ದೈಹಿಕ ಆರೋಗ್ಯ (Physical Health) ಸರಿ ಇದ್ದಷ್ಟೂ ಲೈಂಗಿಕ ಆರೋಗ್ಯವೂ (Sexual Health) ಚೆನ್ನಾಗಿರುವುದರಲ್ಲಿ ಅನುಮಾನವೇ ಇಲ್ಲ. ಇಲ್ಲದಿದ್ದರೆ ಸಂಭೋಗದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಹೆಣ್ಣಾಗಲಿ, ಗಂಡಾಗಲಿ ಹೆಣಗಾಡಬೇಕು. ಒಮ್ಮೊಮ್ಮೆ ಗಂಡ ಫುಲ್ ಮೂಡಲ್ಲಿದ್ದು, ಹೆಂಡತಿ ಸಹಕರಿಸದೇ ಹೋಗಬಹುದು. ಅಥವಾ ವೈಸಾ ವರ್ಸಾ ಆಗೋ ಸಾಧ್ಯತೆಯೂ ಇರುತ್ತೆ. ಮನಸ್ಸಿನಲ್ಲದ ಮನಸ್ಸಿನಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗೋದು ಎಂಥವರಿಗಾದರೂ ನುಂಗಲಾರದ ತುತ್ತೇ ಸರಿ. ಎಲ್ಲವೂ ಸರಿ ಇದ್ದರೂ, ಬರ್ತಾ ಬರ್ತಾ ಮನಸ್ಸು ಅರಳುತ್ತಿಲ್ಲ, ಸೆಕ್ಸ್‌ನಲ್ಲಿ ಮನಃಪೂರ್ತಿ ತೊಡಗಿಸಿಕೊಳ್ಳಲು ಆಗ್ತಿಲ್ಲವೆಂದರೆ ಏನು ಕಾರಣವೇನೆಂದು ನೋಡಬೇಕು.
ಹೆಂಗಸರಿಗಾಗಲಿ, ಗಂಡಸಿರಿಗಾಗಲಿ ಕಾಮ ಪ್ರಚೋದಕಗಳಿರುವುದು ಮೆದುಳಿನಲ್ಲೇ. ಅಂದರೆ ಕಾಮ ಚಟುವಟಿಕೆಯಲ್ಲಿ (Sexual Activities) ತೊಡಗೋ ಮುನ್ನ, ಮನಸ್ಸು ಅದರಲ್ಲಿ ಭಾಗಿಯಾಗಬೇಕು. ಸಂಗಾತಿಯ ನಗ್ನ ದೇಹವನ್ನು ಮನಸ್ಸಲ್ಲಿ ಕಲ್ಪಿಸಿಕೊಳ್ಳಬೇಕು. ಅಥವಾ ಕಾಮವನ್ನು ಪ್ರಚೋದಿಸುವ ದೃಶ್ಯ ನೋಡಿಯೋ, ಆಡಿಯೋ ಕೇಳಿಯೋ ಮನಸ್ಸನ್ನು ಸನ್ನದ್ಧಗೊಳಿಸಿಕೊಳ್ಳಬೇಕು. ಸಂಗಾತಿಯ ಪಿಸುಮಾತುಗಳೂ ಕಾಮೋತ್ತೇಜಕ ಟಾನಿಕ್‌ನಂತೆ ಕೆಲಸ ಮಾಡಬಹುದು. ಅವೆಲ್ಲವೂ ಕಾಮಕ್ರೀಡೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದಕ್ಕೆ ಸಂಭೋಗದಲ್ಲಿ ದೇಹದ ಪಾತ್ರ ಎಷ್ಟೋ, ಪ್ರಜ್ಞೆ ಅಥವಾ ಮೆದುಳು ಅಥವಾ ಮನಸ್ಸಿನ ಪಾತ್ರವೂ ಅಷ್ಟೇ ಮುಖ್ಯ. ಮನಸ್ಸು ಕಾಮಕ್ರೀಡೆಯ ಪ್ರಚೋದಕಗಳನ್ನು ಸ್ವೀಕರಿಸಿದಾಗ ಮಾತ್ರ ದೇಹದಲ್ಲಿ ಆನಂದೋತ್ತೇಜಕಗಳಾದ ಡೋಪಮೈನ್ ಹಾರ್ಮೋನ್ಸ್ ಸ್ರವಿಸಲು ಶುರುವಾಗುತ್ತದೆ. ಪುರುಷರ ಶಿಶ್ನಕ್ಕೆ ರಕ್ತ ಪೂರೈಕೆ (Blood Circulation) ಸರಿಯಾಗಿ, ಶಿಶ್ನ ನೆಟ್ಟಗಾಗುತ್ತದೆ.
ಮನಸ್ಸು ಒಂದಾದಾಗ ಮಾತ್ರ ದೇಹ ಒಂದಾಗಲು ಸಾಧ್ಯ. ಹಾಗಾಗಿ ವೈಮನಸ್ಸು, ಯಾವುದೋ ಆತಂಕ (Stress), ಕೆಲಸದ ಒತ್ತಡ (Work Pressure) ಇಂಥವು ನಿಮ್ಮನ್ನು ಬೆಂಬಿಡದ ಭೂತದಂತೆ ಕಾಡುತ್ತಿದ್ದರೆ, ಅದಕ್ಕೊಂದು ಪರಿಹಾರ ಕಂಡುಕೊಳ್ಳಿ. ಮನಸ್ಸು ನಿರಾಳವಾಗಿರುವಂತೆ ನೋಡಿಕೊಳ್ಳಿ. ಸೆಕ್ಸ್‌ಗೂ ಮುನ್ನ ಮಾಡಬೇಕಾದ ಅಗತ್ಯ ಫೋರ್‌ಪ್ಲೇ ಸರಿಯಾಗಿರುವಂತೆ ನೋಡಿಕೊಳ್ಳಿ. ಆಗ ಎಲ್ಲವೂ ಸುಸೂತ್ರವಾಗಿ ಆಗುತ್ತೆ. ಒಳಗೆ ಬೆಂಕಿ ಇಟ್ಕೊಂಡು ಹಾಸಿಗೆ ಹತ್ತಿದರೆ ನಿದ್ರೆಯೂ ಬರೋಲ್ಲ. ಆಗ ಬೇಕಾದ ಕೆಲಸವೂ ಆಗೋಲ್ಲ.
ಪ್ರೀತಿ ಕುರುಡು: ಪ್ರೀತಿಸಿದ ಹುಡುಗನಿಗಾಗಿ ನಾಡು ಬಿಟ್ಟು ಕಾಡಿಗೆ ಓಡಿದ ಹುಡುಗಿ!
ಜೊತೆಗೆ ದೈಹಿಕ ಆರೋಗ್ಯವೂ ಸರಿಯಾಗಿರುವಂತೆ ನೋಡಿಕೊಳ್ಳಿ. ಸುಸ್ತು ಫೀಲ್ ಆಗುತ್ತಿದ್ದರೆ ಅಗತ್ಯ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ. ಹೆಲ್ದೀ ಫುಡ್, ಸೂಕ್ತ ನಿದ್ರೆಯಾಗುವಂತೆ ನೋಡಿಕೊಳ್ಳಿ. ಎಲ್ಲವುಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಮೊಬೈಲ್ ಅಡಿಕ್ಷನ್ ಸಹ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಮೊದಲು ಡಿಅಟ್ಯಾಚ್ ಆಗುವಂತೆ ಎಚ್ಚರವಹಿಸಿ. ಆಗ ಎಲ್ಲವೂ ತನ್ನಿಂತಾನೇ ಸರಿ ಹೋಗುವುದರಲ್ಲಿ ಅನುಮಾನವೇ ಇಲ್ಲ.