ಮಳೆಯಲಿ ಜೊತೆಯಲಿ..ಅಜ್ಜ-ಅಜ್ಜಿಯ ಗೋಲ್‌ಗಪ್ಪಾ ಡೇಟ್‌; ಕ್ಯೂಟ್ ವಿಡಿಯೋ ವೈರಲ್

By Vinutha Perla  |  First Published Aug 6, 2023, 10:01 AM IST

ಈಗಿನ ಕಪಲ್ಸ್ ಲಕ್ಸುರಿಯಸ್ ರೆಸ್ಟೋರೆಂಟ್‌ಗೆ ಕ್ಯಾಂಡಲ್‌ ಲೈಟ್ ಡಿನ್ನರ್, ರೋಮ್ಯಾಂಟಿಕ್‌ ಡೇಟ್‌ ಅಂತೆಲ್ಲಾ ಹೋಗೋದು ಕಾಮನ್‌. ಆದ್ರೆ ಇಲ್ಲೊಂದು ಹಿರಿಯ ಜೋಡಿ ಗೋಲ್‌ಗಪ್ಪಾ ಡೇಟ್ ಹೋಗಿದ್ದು, ಜೊತೆಯಾಗಿ ಗೋಲ್‌ಗಪ್ಪಾ ಸವಿಯುತ್ತಿರುವ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮಳೆಯಲ್ಲಿ ಕೊಡೆ ಹಿಡಿದುಕೊಂಡಿರೋ ಅಜ್ಜ-ಅಜ್ಜಿ ಬೊಚ್ಚು ಬಾಯಲ್ಲಿ ಗೋಲ್‌ಗಪ್ಪಾ ಸವಿಯುತ್ತಾರೆ.


ಪ್ರೀತಿ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಕೇವಲ ಟೈಂ ಪಾಸ್ ಎಂಬಂತಾಗಿ ಬಿಟ್ಟಿದೆ. ಇವತ್ತಿನ ಯೂತ್ಸ್‌ ದಿನಕ್ಕೊಬ್ಬರು ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್ ಮಾಡಿಕೊಂಡು ತಿರುಗಾಡ್ತಿರ್ತಾರೆ. ಶಾಪಿಂಗ್‌, ಮಾಲ್‌, ಪಾರ್ಕ್‌, ಥಿಯೇಟರ್ ಅಂತ ಸುಮ್‌ ಸುಮ್ನೆ ಸುತ್ತಾಡೋದನ್ನೇ ಪ್ರೀತಿ ಅಂದ್ಕೊಂಡು ಬಿಡ್ತಾರೆ. ಇವತ್ತಿನ ಪ್ರೀತಿಗೆ ಪ್ರೀತಿಗೆ ಮಾಡೋಕೆ ನಿರ್ಧಿಷ್ಟ ರೂಲ್ಸ್ ಕೂಡಾ ಇದೆ. ಹುಡುಗರಿಗಾದರೆ ಬೈಕ್, ಕಾರು, ಸಿಕ್ಸ್‌ ಪಾಕ್, ಲಕ್ಷದಲ್ಲಿ ಸಂಬಳ ಇರ್ಲೇಬೇಕು. ಹುಡುಗಿರಾದ್ರೆ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿದ್ದು, ಬೋಲ್ಡ್ ಆಗಿದ್ರಷ್ಟೇ ಹುಡುಗರು ಹಿಂದೆ ಬೀಳ್ತಾರೆ. ಆದ್ರೆ ಅಸಲಿಗೆ ನಿಜವಾದ ಪ್ರೀತಿ ಇದು ಅಲ್ವೇ ಅಲ್ಲ.

ಅಪ್ಪಟ ಪರಿಶುದ್ಧ ಪ್ರೀತಿ (Love) ಹಣ, ಒಡವೆ, ಶ್ರೀಮಂತಿಕೆಯನ್ನು ಕೇಳುವುದೇ ಇಲ್ಲ. ಅಲ್ಲಿ ಬೇಕಿರುವುದು ಪ್ರೀತಿ ಮಾತ್ರ. ಕಷ್ಟಸುಖದಲ್ಲಿ ಜೊತೆಯಾಗಿ ನಡೆಯುವ ಜೀವ. ಎಂಥಾ ಕಷ್ಟದ ಸಂದರ್ಭದಲ್ಲೂ ಜೊತೆಯಾಗಿ ಸಾಥ್ ನೀಡುವ ವ್ಯಕ್ತಿ. ಸುಂದರವಾದ ಮುಖವನ್ನು ಪ್ರೀತಿಸುವಂತೆಯೇ ಮನಸ್ಸನ್ನು ಪ್ರೀತಿಸುವ ಗುಣ. ಚರ್ಮ ಸುಕ್ಕಾದರೂ, ಹಲ್ಲು ಬಿದ್ದು ಹೋಗಿ ಹಣ್ಣು ಹಣ್ಣು ಮುದುಕ-ಮುದುಕಿಯಾದರೂ ನಿರಂತರವಾಗಿ ಅಪರಂಜಿಯಂತೆ ಜೋಪಾನವಾಗಿ ಕಾಪಾಡಿಕೊಳ್ಳುವ ಗುಣ. ಇಂಥಾ ಉತ್ತಮ ನಡವಳಿಕೆಯನ್ನು ಇವತ್ತಿನ ಕಾಲದ ಯಾರಲ್ಲಾದರೂ ನೋಡಲು ಸಿಗುವುದು ತುಂಬಾ ಅಪರೂಪ. ಹೀಗಿರುವಾಗ ಇಲ್ಲೊಂದು ಹಿರಿಯ ಜೋಡಿ (Elderly couple) ಗೋಲ್‌ಗಪ್ಪಾ ಡೇಟ್ ಹೋಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

Tap to resize

Latest Videos

ರಿಮ್‌ಜಿಮ್ ಗಿರೇ ಸಾವನ್: ಮಳೆ ಮಧ್ಯೆ ಹಿರಿಯ ಜೋಡಿಯ ಡ್ಯುಯೆಟ್ : ವೀಡಿಯೋ ವೈರಲ್

ಮಳೆಯಲ್ಲಿ ಜೊತೆಯಾಗಿ ಗೋಲ್‌ಗಪ್ಪಾ ಸವೀತಿರೋ ಹಿರಿಯ ಜೋಡಿ
ಹಿರಿಯ ಜೋಡಿ ಜೊತೆಯಾಗಿ ಗೋಲ್‌ಗಪ್ಪಾ ಸವಿಯುತ್ತಿರುವ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.  ಸಣ್ಣಗೆ ಮಳೆ ಹನೀತಿದೆ. ಅಜ್ಜ-ಅಜ್ಜಿ ಕೊಡೆ ಹಿಡಿದುಕೊಂಡು ನಿಂತಿದ್ದಾರೆ. ಮಳೆಯಲ್ಲಿ (Rain) ಕೊಡೆ ಹಿಡಿದುಕೊಂಡು ಬೊಚ್ಚು ಬಾಯಲ್ಲಿ ಗೋಲ್‌ಗಪ್ಪಾ ಸವಿಯುತ್ತಿದ್ದಾರೆ. 

ಬಹುತೇಕ ಪ್ರತಿಯೊಬ್ಬ ಭಾರತೀಯರು ಗೋಲ್‌ಗಪ್ಪಾ ಅಥವಾ ಪಾನಿ ಪುರಿಯನ್ನು ಇಷ್ಟಪಡುತ್ತಾರೆ. ಗೋಲ್‌ಗಪ್ಪಾ ಭಾರತದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಮಳೆಗಾಲದ ದಿನಗಳಲ್ಲಿ ಈ ಖಾರ ಖಾರವಾದ ಗೋಲ್‌ಗಪ್ಪಾ ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ರಸ್ತೆ ಬದಿಗಳಲ್ಲಿ ಜನರು ಕಿಕ್ಕಿರಿದು ನಿಂತು ಗೋಲ್‌ಗಪ್ಪಾ ಸವಿಯುವುದನ್ನು ನೋಡಬಹುದು. ಆದರೆ ಈ ಗುಂಪಿನಲ್ಲಿ ಸಾಮಾನ್ಯವಾಗಿ ಹಿರಿಯರು ಇರುವುದಿಲ್ಲ. ಸಾಮಾನ್ಯವಾಗಿ ಅಜ್ಜ-ಅಜ್ಜಿಯೆಲ್ಲಾ ರಸ್ತೆ ಬದಿಯೆಲ್ಲಾ ಇಂಥಾ ಆಹಾರ (Food) ತಿನ್ಬಾರ್ದು ಆರೋಗ್ಯ ಕೆಡುತ್ತೆ ಅಂತ ಬುದ್ಧಿ ಮಾತು ಹೇಳೋದೆ ಹೆಚ್ಚು. ಹೀಗಿರುವಾಗ ಇಲ್ಲೊಂದು ಹಿರಿಯ ಜೋಡಿ ಜಿಟಿ ಜಿಟಿ ಮಳೆಯಲ್ಲಿ ಗೋಲ್‌ಗಪ್ಪಾ ಸವೀತಿರೋ ವಿಡಿಯೋ ಸಖತ್ತು ಮುದ್ದಾಗಿದೆ.

ನಿನಗೆ ನಾನು ನನಗೆ ನೀನು... ವೃದ್ಧ ಜೋಡಿಯ ಬಾಂಧವ್ಯದ ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಅಜೀಮ್ ಅಫ್ತಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯವನ್ನು ಗೆದ್ದಿದೆ. ಕಾಮೆಂಟ್‌ಗಳ ವಿಭಾಗವು ವೀವ್ಸ್ ಮತ್ತು ಲೈಕ್ಸ್‌ಗಳನ್ನು ಸಂಗ್ರಹಿಸುವುದರ ಹೊರತಾಗಿ ಪ್ರೀತಿ ಮತ್ತು ಮೆಚ್ಚುಗೆಯಿಂದ ತುಂಬಿದೆ. ಹಿರಿಯ ಜೋಡಿಯ ವಿಡಿಯೋವನ್ನು ನೆಚ್ಚಿಕೊಂಡಿರುವ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಜೀವನದ ಅತ್ಯುತ್ತಮ ಕ್ಷಣಗಳು. ಅವರಿಬ್ಬರು ಎಂದಿಗೂ ದೂರವಾಗಬಾರದು ಎಂದು ನಾನು ಬಯಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಇದು ನಿಜವಾದ ಪ್ರೀತಿ. ಇಂಥಾ ಪ್ರೀತಿ ಇವತ್ತಿನ ದಿನಗಳಲ್ಲಿ ಅಪರೂಪ' ಎಂದು ತಿಳಿಸಿದ್ದಾರೆ.

ಅದೇನೆ ಇರ್ಲಿ, ಪ್ರೀತಿ ಮಾಯೆ, ಪ್ರೀತಿ ಮೋಸ ಎಂದು ಜನರು ಅಂದುಕೊಳ್ಳುತ್ತಿರುವ ಈ ದಿನಗಳಲ್ಲಿ ವಯಸ್ಸಾದರೂ ಜೊತೆಯಾಗಿದ್ದು, ಸುಂದರವಾಗಿ ಜೀವನ ನಡೆಸುತ್ತಾ, ಜೀವನದ ಪುಟ್ಟ ಪುಟ್ಟ ಕ್ಷಣಗಳನ್ನು ಆಸ್ವಾದಿಸುತ್ತಿರುವ ಹಿರಿಯ ಜೋಡಿಗೆ ಯಾರ ದೃಷ್ಟಿಯೂ ತಾಕದಿರಲಿ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ದಿ ಬೆಸ್ಟ್ ಥಿಂಗ್‌ ಎಂದರೆ ತಪ್ಪಾಗಲಾರದು.

 
 
 
 
 
 
 
 
 
 
 
 
 
 
 

A post shared by 𝐊 🐙 (@kajol11_)

click me!