ಮಕ್ಕಳಾಗಿಲ್ಲ ಎಂದು ಬಂದವರಿಗೆ ಕದ್ದು ತನ್ನದೇ ವೀರ್ಯ ಕೊಡ್ತಿದ್ದ ವೈದ್ಯ, 17 ಮಕ್ಕಳ ತಂದೆ..!

By Suvarna NewsFirst Published Oct 9, 2020, 2:39 PM IST
Highlights

17 ಮಕ್ಕಳಿಗೆ ತಂದೆಯಾದ ಸ್ತ್ರೀರೋಗ ತಜ್ಞ | ಅನಾಮಧೇಯ ಡೋನರ್ ಹೆಸರಲ್ಲಿ ಸ್ಪರ್ಮ್ ಕೊಡ್ತಿದ್ದ ವೈದ್ಯ

ಗೈನಕಾಲಜಿಸ್ಟ್ ಒಬ್ಬ ಸುಮಾರು 17 ಮಕ್ಕಳ ತಂದೆಯಾಗಿದ್ದಾನೆ. ಅನಾಮಧೇಯರ ಹೆಸರಲ್ಲಿ ಈ ವೈದ್ಯ ಸ್ವತಃ ತಾನೇ 17 ಹೆಂಗಳೆಯರಿಗೆ ಸ್ಪಮ್‌ ದಾನ ಮಾಡಿದ್ದಾನೆ ಎಂದು ಡಚ್ ಆಸ್ಪತ್ರೆಯೊಂದು ತಿಳಿಸಿದೆ. ಇದು ದೇಶದ ಲೇಟೆಸ್ಟ್ ಐವಿಎಫ್ ಹಗರಣವಾಗಿದೆ.

ಜಾನ್ ವೈಲ್ಡ್ಸ್‌ಚಟ್ 1981ರಿಂದ 1993ರ ತನಕ ಸೋಫಿಯಾ ಆಸ್ಪತ್ರೆಯ ಫರ್ಟಿಲಿಟಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಝ್ವೆಲ್ಲೆಯಲ್ಲಿರುವ ಈಶಾನ್ಯ ಡಚ್ ಸಿಟಿಯಲ್ಲಿಯಲ್ಲಿರುವ ಸೋಫಿಯಾ ಆಸ್ಪತ್ರೆ ಈಗ ಇಸಾಲಾ ಆಸ್ಪತ್ರೆಯೆಂದು ಕರೆಯಲ್ಪಡುತ್ತದೆ.

ಸೆಕ್ಸ್‌ ಬಗ್ಗೆ ನೀವು ಹೀಗೆಲ್ಲ ಅಂದ್ಕೊಂಡಿದ್ದೀರಾ? ಅಷ್ಟಕ್ಕೂ ವಾಸ್ತವ ಏನು?

ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ 17 ಜನ ಮಹಿಳೆಯರಿಗೆ ಸ್ಪರ್ಮ್ ದಾನ ಮಾಡಿದ್ದ ಎನ್ನಲಾಗಿದೆ. ನೈತಿಕವಾಗಿ ವೈಲ್ಡ್ಸ್‌ಚಟ್ ಮಾಡಿರುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. 

ಆ ಸಮಯದಲ್ಲಿ ಅವರು ಡಚ್‌ನಲ್ಲಿ ಕೆಐಡಿ ಎಂದು ಕರೆಯಲ್ಪಡುವ ವೀರ್ಯ ದಾನಿ ಆಸ್ಪತ್ರೆಯ ಕೃತಕ ಗರ್ಭಧಾರಣೆಯ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಇನ್ನೂ ಹೆಚ್ಚಿನ ಮಕ್ಕಳಿಗೆ ವೈಲ್ಡ್ಸ್‌ಚಟ್ ತಂದೆಯಾಗಿದ್ದಾರಾ ಎಂಬುದು ಇನ್ನೂ ತಿಳಿದುಬಂದಿಲ್ಲ.

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

2019ರಲ್ಲಿ ಈ ವಿಚಾರ ತಿಳಿದುಬಂದಾಗ ಆಸ್ಪತ್ರೆ ವಿಚಾರ ಬಹಿರಂಗಪಡಿಸಲು ನಿರ್ಧರಿಸಿತ್ತು. ವೈದ್ಯನ ಕುಟುಂಬ ಹಾಗೂ ಸ್ಪರ್ಮ್ ಪಡೆದ ಕುಟುಂಬಗಳ ಜೊತೆ ಚರ್ಚಿಸಿ ಹೆಚ್ಚು ಪಾರದರ್ಶಕತೆಯೊಂದಿಗೆ ಈ ವಿಚಾರ ಬಹಿರಂಗಪಡಿಸಲು ನಿರ್ಧರಿಸಲಾಗಿತ್ತು.

ಡೋನರ್ ಮಗುವಿನ ಡಿಎನ್ಎ ವೈದ್ಯನ ಸಂಬಂಧಿ ಜೊತೆ ಮ್ಯಾಚ್ ಆಗುವುದು ವಾಣಿಜ್ಯ ಡಾಟಾ ಬೇಸ್‌ ಒಂದರ ಮೂಲಕ ತಿಳಿದುಬಂದಿತ್ತು. ವೈದ್ಯ ವೈಲ್ಡ್ಸ್‌ಚಟ್ 2009ರಲ್ಲಿ ಮೃತಪಟ್ಟಿದ್ದಾರೆ.

ಯುರೋಪ್‌ನ ಮುದುಕಿಯರು ಸೆಕ್ಸ್‌ಗಾಗಿ ಎಲ್ಲಿ ಹೋಗುತ್ತಾರೆ ಗೊತ್ತೆ?

ಗುರುತು ತಿಳಿಸದ ಪೋಷಕರೊಬ್ಬರು ತಾವು ವೈದ್ಯರೇ ಡೋನರ್ ಎಂದು ಖಂಡಿತಾ ಭಾವಿಸಿರಲಿಲ್ಲ ಎಂದಿದ್ದಾರೆ. ವೈಲ್ಡ್ಸ್‌ಚಟ್ ಆತ್ಮೀಯ ಸ್ವಭಾವದವರಾಗಿದ್ದು, ಕಮಿಟೆಡ್ ಆಗಿ ಪ್ರಾಮಾಣಿಕರಂತೆಯೇ ಕಾಣಿಸಿದ್ದರು ಎಂದಿದ್ದಾರೆ.

ಫರ್ಟಿಲಿಟಿ ಚಿಕಿತ್ಸೆಗೆ ಸಂಬಂಧಿಸಿ ಯಾವುದೇ ನಿಯಮಗಳಿಲ್ಲದ ಸಂದರ್ಭ ಈ ಘಟನೆ ನಡೆದಿದೆ ಎಂದ ಡಚ್ ಆರೋಗ್ಯ ಅಧಿಕಾರಿಗಳು ಕೇಸು ದಾಖಲಿಸಲು ನಿರಾಕರಿಸಿದ್ದಾರೆ. ಕಳೆದ ವರ್ಷ ನೆದರ್‌ಲೆಂಡ್‌ನಲ್ಲಿ  ಡಚ್ ಡಾಕ್ಟರ್ ಒಬ್ಬರು 49 ಮಕ್ಕಳಿಗೆ ತಂದೆಯಾಗಿದ್ದರು.

click me!