ಗಂಡನಿಗೆ ವಿಚ್ಛೇದನ ನೀಡಿದ ಬಳಿಕ 'ಡಿವೋರ್ಸ್‌..' ಹೆಸರಲ್ಲೇ ಪರ್ಫ್ಯೂಮ್‌ ಬ್ರ್ಯಾಂಡ್‌ ಅನಾವರಣ ಮಾಡಿದ ದುಬೈ ರಾಣಿ!

By Santosh Naik  |  First Published Sep 10, 2024, 9:50 PM IST

ದುಬೈ ರಾಜಕುಮಾರಿ ಶೇಖಾ ಮಹ್ರಾ ಅಲ್ ಮಕ್ತೂಮ್ ಅವರು 'ಡಿವೋರ್ಸ್‌' ಎಂಬ ಹೆಸರಿನ ಹೊಸ ಸುಗಂಧ ದ್ರವ್ಯಗಳ ಬ್ರ್ಯಾಂಡ್‌ಅನ್ನು ಬಿಡುಗಡೆ ಮಾಡಲಿದ್ದಾರೆ. ಇದು ಅವರ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಘಟನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಪತಿಗೆ ಸಾರ್ವಜನಿಕವಾಗಿ ವಿಚ್ಛೇದನ ನೀಡಿದ ನಂತರ ಈ ಬ್ರ್ಯಾಂಡ್ ಬಿಡುಗಡೆಯಾಗುತ್ತಿದೆ.


ದುಬೈ (ಸೆ.10): ದುಬೈನ ರಾಜಕುಮಾರಿಯು ತನ್ನ ಬ್ರಾಂಡ್ ಮಹ್ರಾ M1 ಅಡಿಯಲ್ಲಿ "ಡಿವೋರ್ಸ್‌" ಎನ್ನುವ ಹೆಸರಿನ ಹೊಸ ಸುಗಂಧ ದ್ರವ್ಯಗಳ ಬ್ರ್ಯಾಂಡ್‌ಅನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ದುಬೈ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ 30 ವರ್ಷದ ಮಗಳು ಶೇಖಾ ಮಹ್ರಾ ಅಲ್ ಮಕ್ತೂಮ್ ಅವರು ಸೋಮವಾರ ಇನ್ಸ್‌ಟಾಗ್ರಾಮ್‌ನಲ್ಲಿ ಇದರ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಆಕೆಯ ಪೋಸ್ಟ್‌ನಲ್ಲಿ ಕಪ್ಪು ಬಣ್ಣದ ಬಾಟಲ್‌ನ ಮೇಲೆ ಡಿವೋರ್ಸ್‌ ಎನ್ನುವ ಪದಗಳನ್ನು ತೋರಿಸಿದೆ. ಇದು ಆಕೆಯ ವೈಯಕ್ತಿಕ ಜೀವನದ ಸದ್ಯದ ಸ್ಥಿತಿಯನ್ನೂ ತೋರಿಸಿದೆ. ಇದಕ್ಕೂ ಒಂದು ದಿನ ಮುಂಚೆ ಪ್ರಕಟ ಮಾಡಿದ ವಿಡಿಯೋದಲ್ಲಿ ಒಡೆದ ಗಾಜು, ಕಪ್ಪು ದಳಗಳು ಮತ್ತು ಕಪ್ಪು ಪ್ಯಾಂಥರ್ ಅನ್ನು ಒಳಗೊಂಡಿತ್ತು. ಶೇಖಾ ಮಹಾರಾ ತಮ್ಮ ಪತಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿಯೇ ಸಾರ್ವಜನಿಕವಾಗಿ ವಿಚ್ಛೇದನ ನೀಡಿದ ಬೆನ್ನಲ್ಲಿಯೇ 'ಡಿವೋರ್ಸ್‌' ಹೆಸರಿನ ಪರ್ಫ್ಯೂಮ್‌ ಬ್ರ್ಯಾಂಡ್‌ಅನ್ನು ಬಿಡುಗಡೆ ಮಾಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ, 'ಪ್ರೀತಿಯ ಪತಿ, ನೀವು ಇತರ ಸಹಚರರೊಂದಿಗೆ ನಿರತರಾಗಿರುವ ಕಾರಣ, ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತೇನೆ. ನಾನು ನಿನ್ನನ್ನು ವಿಚ್ಛೇದನ ಮಾಡುತ್ತೇನೆ, ನಾನು ನಿನ್ನನ್ನು ವಿಚ್ಛೇದನ ಮಾಡುತ್ತೇನೆ ಮತ್ತು ನಾನು ನಿನ್ನನ್ನು ವಿಚ್ಛೇದನ ಮಾಡುತ್ತೇನೆ. ಕಾಳಜಿ ವಹಿಸಿಕೊಳ್ಳಿ, ನಿಮ್ಮ ಮಾಜಿ ಪತ್ನಿ' ಎಂದು ದುಬೈ ರಾಜಕುಮಾರಿ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಶೇಖ್ ಮಹ್ರಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಎಮಿರಾಟಿ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರನ್ನು ವಿವಾಹವಾಗಿದ್ದರು. ಸಶಿಯಲ್‌ ಮೀಡಿಯಾದಲ್ಲಿ ತ್ರಿವಳಿ ತಲಾಖ್ ಮೂಲಕ ಪತಿಗೆ ವಿಚ್ಛೇದನ ನೀಡುವ ಅವರ ನಿರ್ಧಾರವು ಜಾಗತಿಕ ಗಮನವನ್ನು ಸೆಳೆಯಿತು, ಅವರು ತಮ್ಮ ಮೊದಲ ಮಗುವನ್ನು ಒಟ್ಟಿಗೆ ಸ್ವಾಗತಿಸಿದ ಕೇವಲ ಎರಡು ತಿಂಗಳ ನಂತರ ಪತಿಗೆ ವಿಚ್ಛೇದನ ನೀಡಿದ್ದಾರೆ. ಸುಗಂಧ ದ್ರವ್ಯಗಳ ಹೊಸ ಬ್ರ್ಯಾಂಡ್‌, ಶೇಖಾ ಮಹ್ರಾ ಅವರ ಹಲವಾರು ವ್ಯಾಪಾರ ಉದ್ಯಮಗಳಲ್ಲಿ ಒಂದಾಗಿದೆ.

Tap to resize

Latest Videos

undefined

OUTER SPACE: ಬಾಹ್ಯಾಕಾಶದಲ್ಲಿ ಯಾಕೆ ಯಾವಾಗಲೂ ಕತ್ತಲು?

ಯಾರೀಕೆ ಶೇಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್: ಶೇಖ್ ರಶೀದ್ ಅಲ್ ಮಕ್ತೌಮ್ ಅವರ 26 ಮಕ್ಕಳಲ್ಲಿ ಶೇಖಾ ಮಹ್ರಾ ಕೂಡ ಒಬ್ಬರು, ಅವರು ಯುಎಇಯ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಾಗಿದ್ದಾರೆ. ಅವರು ವಿಶ್ವದ ಶ್ರೀಮಂತ ರಾಜಮನೆತನದವರಲ್ಲಿ ಒಬ್ಬರು, ಅವರ ನಿವ್ವಳ ಮೌಲ್ಯವು $ 14 ರಿಂದ $ 18 ಶತಕೋಟಿ ನಡುವೆ ಇದೆ. ಶೇಖಾ ಮಹರಾ ಗ್ರೀಸ್‌ನ ಜೊಯಿ ಗ್ರಿಗೊರಾಕೋಸ್ ಅವರ ಮಗಳು. ಗ್ರಿಗೊರಾಕೋಸ್ ಮತ್ತು ಶೇಖ್ ರಶೀದ್ ಅಲ್ ಮಕ್ತೌಮ್ ವಿಚ್ಛೇದನ ಪಡೆದಿದ್ದಾರೆ. ದುಬೈನ ರಾಜಕುಮಾರಿ ಇನ್ಸ್‌ಟಾಗ್ರಾಮ್‌ನಲ್ಲಿ ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ನಿಯಮಿತವಾಗಿ ತನ್ನ 9.8 ಲಕ್ಷ ಫಾಲೋವರ್‌ಗಳಿಗೆ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಿನ್ನೆ, ಇಂದು, ನಾಳೆಯ ದರ್ಶನ್‌ ಬಗ್ಗೆ ಚಂದನೆಯ ಮಾತನಾಡಿದ ರಮೇಶ್‌ ಅರವಿಂದ್!

click me!