ಮದುವೆ (Marriage) ಎಲ್ಲರ ಜೀವನ (Life)ದಲ್ಲೂ ತುಂಬಾ ಮುಖ್ಯವಾಗಿದೆ. ಹೀಗಾಗಿಯೇ ಆ ದಿನ ತುಂಬಾ ಖುಷಿ (Happy)ಯಿಂದ ಕಳೆಯಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಮದ್ವೆ ದಿನ ಮಾಡೋ ತಪ್ಪಿನಿಂದ (Mistake) ನೀವು ಜೀವನಪೂರ್ತಿ ತೊಂದ್ರೆ ಅನುಭವಿಸಬೇಕಾದೀತು. ಅಂಥಾ ತಪ್ಪುಗಳು ಯಾವುವು ತಿಳಿಯಿರಿ.
ಪ್ರತಿ ಜೋಡಿಗೆ ಅವರ ಮದುವೆಯ (Marriage) ದಿನ ಬಹಳ ಮುಖ್ಯವಾಗಿರುತ್ತದೆ. ಇಬ್ಬರೂ ಕುಟುಂಬಿಕರ ಸಮ್ಮುಖದಲ್ಲಿ ಸಾಂಪ್ರದಾಯಿಕಾಗಿ ಒಂದಾಗುವ ಘಳಿಗೆಯಾಗಿದೆ. ಎಲ್ಲರ ಪಾಲಿಗೂ ವೆಡ್ಡಿಂಗ್ ಅನ್ನೋದು ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವುದೇ ತೊಂದರೆ (Problem)ಯಿಲ್ಲದೆ ಖುಷಿಯಿಂದ ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ಮದುವೆ ಎಂದಾಗ ಆಲೋಚನೆಗಳು, ತೊಂದರೆಗಳು ಒಂದೆರಡಲ್ಲ. ಹೀಗಾಗಿ ಕೆಲವೊಂದು ವಿಚಾರಗಳು ಮರೆತುಹೋಗುವುದು ಸಾಮಾನ್ಯವಾಗಿ. ನಿಮ್ಮ ಮದುವೆಯಲ್ಲಿ ಹೀಗಾಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕಾದೀತು,
ಮದುವೆಯಲ್ಲಿ ಜನಸಂದಣಿ ಕಡಿಮೆಯಿರುವಂತೆ ನೋಡಿಕೊಳ್ಳಿ: ಭಾರತೀಯ ವಿವಾಹಗಳು ಯಾವಾಗಲೂ ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಂದ ತುಂಬಿರುತ್ತವೆ, 500 ರಿಂದ 1000 ಜನರು ಭಾಗವಹಿಸುತ್ತಾರೆ. ಆದಾಗ್ಯೂ, ನಿಮ್ಮ ಅತಿಥಿಗಳ (Guests) ಕಿರು ಪಟ್ಟಿಯನ್ನು ಮಾಡುವ ಬಗ್ಗೆ ನೀವು ಸ್ವಲ್ಪ ಗಂಭೀರವಾಗಿರಬಹುದು. ನಿಮಗೆ ತುಂಬಾ ಹತ್ತಿರವಿರುವ ಜನರನ್ನು ಮಾತ್ರ ಮದುವೆಗೆ ಆಹ್ವಾನಿಸಿ, ಇದರಿಂದ ನೀವು ಮದುವೆಯ ದಿನ ಹೆಚ್ಚು ಜನಸಂದಣಿಯಿಂದ ಕಿರಿಕಿರಿಯಾಗುವುದನ್ನು ತಪ್ಪಿಸಬಹುದು. ಮದುವೆಯಲ್ಲಿ ಹೆಚ್ಚು ಜನರಿದ್ದರೆ, ನಿಭಾಯಿಸಲು ಕಷ್ಟವಾಗಿ ತೊಂದರೆ ಸಹ ಹೆಚ್ಚಾಗುತ್ತದೆ. ಸಂಪೂರ್ಣ ಮದುವೆಯೇ ಗೊಂದಲವಾಗಿ ನಿಮಗೆ ಕೆಟ್ಟ ನೆನಪಾಗಿ ಉಳಿಯುತ್ತದೆ.
ಹುಡುಗಿ ಸಂಬಂಧದಲ್ಲಿ ತಂಗಿಯಾಗಬೇಕು, ಮದ್ವೆ ಆಗ್ಲಾ ಬೇಡ್ವಾಅನ್ನೋದೆ ಕನ್‌ಫ್ಯೂಶನ್ !
ಮದುವೆ ಕೆಲಸಗಳ ಬಗ್ಗೆ ಟೆನ್ಷನ್ ಮಾಡಿಕೊಳ್ಳಬೇಡಿ: ಮದುವೆಯ ದಿನ ಸಣ್ಣಪುಟ್ಟ ತೊಂದರೆಗಳಿರಬಹುದು, ಆದರೆ ನೀವು ಅದರ ಬಗ್ಗೆ ಗಮನ ಹರಿಸಬಾರದು. ನೀವು ಮತ್ತು ನಿಮ್ಮ ಸಂಗಾತಿ (Partner) ಈ ವಿಶೇಷ ದಿನದತ್ತ ಗಮನ ಹರಿಸಬೇಕು. ಉಳಿದ ಸಮಸ್ಯೆಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಬಿಡಿ. ಮದುವೆಯ ದಿನದಂದು ಯಾವಾಗಲೂ ಏನಾದರೂ ಮಿಸ್ ಆಗುವುದು, ಮರೆತು ಹೋಗುವುದು ಆಗುತ್ತದೆ. ಅದನ್ನು ಮನೆ ಮಂದಿ ಸರಿ ಮಾಡುತ್ತಾರೆ. ನೀವು ಅದನ್ನೆಲ್ಲಾ ಯೋಚಿಸುತ್ತಾ ಖುಷಿಯನ್ನು ಹಾಳು ಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಕೆಟ್ಟ ಮನಸ್ಥಿತಿಯು ಈ ವಿಶೇಷ ದಿನವನ್ನು ಸಹ ಹಾಳುಮಾಡುತ್ತದೆ.
ಫೋಟೋಶೂಟ್ ಮಾಡಲು ಮರೆಯಬೇಡಿ: ಅನೇಕ ಬಾರಿ ನೀವು ಮದುವೆಯ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತೀರಿ. ಅತ್ಯಾಕರ್ಷಕ ಫೋಟೋಗಳನ್ನು ತೆಗೆದುಕೊಳ್ಳಬೇಕು ಎಂದು ಛಾಯಾಗ್ರಾಹಕರನ್ನು ಬುಕ್ ಮಾಡಿದರೂ ಅವರಿಗೆ ಸಹ ಸರಿಯಾದ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಸುಂದರವಾಗಿ ಡ್ರೆಸ್ ಮಾಡಿದ್ದರೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಮದುವೆಯ ನಂತರ ಈ ಬಗ್ಗೆ ಬೇಸರಪಟ್ಟುಕೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಯಾವತ್ತೂ ಮದುವೆ ಕಾರ್ಯಕ್ರಮದ ಸಂದರ್ಭ ಫೋಟೋಶೂಟ್ (Photoshoot) ಮಾಡಿಕೊಳ್ಳುವುದನ್ನು ಮರೆಯಬೇಡಿ.
ಪ್ರತಿ ಬಾರಿ ಸಿದ್ಧಗೊಂಡಾಲೂ ಪೋಸ್ ನೀಡಲು ಮರೆಯಬೇಡಿ. ನಿಮ್ಮ ಸಂಗಾತಿಯೊಂದಿಗೆ ಸಹ ನಿಮ್ಮ ವಿಶೇಷ ಕ್ಷಣಗಳನ್ನು ಸ್ಮರಣೀಯವಾಗಿಸಿ. ನಾವು ಇದನ್ನುಯಾಕೆ ಹೇಳುತ್ತಿದ್ದೇವೆಂದರೆ,, ಸಾಮಾನ್ಯವಾಗಿ ಜನರು ಮದುವೆಯ ಕಾರ್ಯಕ್ರಮಗಳ ನಡುವೆ ಫೋಟೋಗಳನ್ನು ಕ್ಲಿಕ್ ಮಾಡುವುದನ್ನು ಮರೆತು ನಂತರ ಮದುವೆಯ ಆಲ್ಬಂ ಅನ್ನು ನೋಡಿ ವಿಷಾದಿಸುತ್ತಾರೆ.
Relationship Tips: ಮದುವೆ ನಂತ್ರ ಬೆಡ್ ರೂಮ್ ವಿಷ್ಯ ಅಮ್ಮಂಗೆ ಹೇಳಕ್ಕೋಗಬೇಡಿ!
ಅತಿಥಿಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ: ಮದುವೆ ಅಂದ್ರೆ ದಿ ಬಿಗ್ ಡೇ ಫಾರ್ ಯು ಅನ್ನೋದು ನೂರಕ್ಕೆ ನೂರು ನಿಜ. ಹಾಗೆಂದು ಸಂಭ್ರಮಪಟ್ಟುಕೊಂಡು ಉಳಿದವರನ್ನು ಕಡೆಗಣಿಸಬೇಡಿ. ನಿಮ್ಮ ಮದುವೆ ಖುಷಿಯಲ್ಲಿ ಪಾಲ್ಗೊಳ್ಳಲೆಂದೇ ಅಷ್ಟೂ ಮಂದಿ ಬಂದಿರುತ್ತಾರೆ. ಹೀಗಾಗಿ ಎಲ್ಲರನ್ನೂ ಸ್ವಾಗತಿಸಿ, ಗೌರವಿಸಿ. ಮದುವೆಗೆ ಆಗಮಿಸಿದ್ದಕ್ಕೆ ಸಂತಸವಾಗಿದೆ ಎಂಬುದನ್ನು ತಿಳಿಸಿ. ಮದುವೆಯ ದಿನ ದಂಪತಿ ಸ್ನೇಹಿತರು ಅಥವಾ ಸಂಬಂಧಿಕರು ಯಾರಿಗೆ ಪ್ರಾಮುಖ್ಯತೆ ನೀಡಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಇಂಥಾ ಕನ್‌ಫ್ಯೂಶನ್ ಬೇಡ, ಎಲ್ಲರಿಗೂ ಸಮಾನ ಪ್ರಾಮುಖ್ಯತೆ ನೀಡಿ, ಯಾಕೆಂದರೆ ಅವರೆಲ್ಲರೂ ನಿಮ್ಮ ಅತಿಥಿಗಳು. ಅತಿಥಿಗಳು ವಿವಾಹದ ಪ್ರಮುಖ ಭಾಗವಾಗಿದ್ದಾರೆ ಮತ್ತು ಅವರನ್ನು ಅಭಿನಂದಿಸುವುದು ನಿಮ್ಮ ಕರ್ತವ್ಯವಾಗಿದೆ.