Breakup ಆಯ್ತು ಅಂತ ಬೇಜಾರಾಗೋದು ಬೇಡ, ಪಾಸಿಟಿವ್ ಆಗಿ ತಗೊಳ್ಳಿ

Published : May 17, 2025, 04:57 PM IST
Breakup ಆಯ್ತು ಅಂತ ಬೇಜಾರಾಗೋದು ಬೇಡ, ಪಾಸಿಟಿವ್ ಆಗಿ ತಗೊಳ್ಳಿ

ಸಾರಾಂಶ

ಪ್ರೀತಿಯಲ್ಲಿ ಬ್ರೇಕಪ್ ಆಗುವುದು ನೋವಿನಿಂದ ಕೂಡಿದ್ದರೂ, ಅದರಿಂದ ಹಲವಾರು ಪ್ರಯೋಜನಗಳಿವೆ. ಬ್ರೇಕಪ್‌ನಿಂದ ಆತ್ಮವಿಶ್ವಾಸ ಹೆಚ್ಚುವುದು, ಸ್ವಾತಂತ್ರ್ಯ, ಸ್ವ-ಆರೈಕೆ ಮತ್ತು ದೈಹಿಕ ಆರೋಗ್ಯದ ಸುಧಾರಣೆ ಮುಂತಾದ ಲಾಭಗಳನ್ನು ಪಡೆಯಬಹುದು.

ಪ್ರೀತಿ ಪ್ರೇಮ ಎನ್ನುವಂತದ್ದು ಒಂದು ಸುಂದರವಾದ ಭಾವನೆ, ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರು ಈ ಪ್ರೀತಿ ಪ್ರೇಮದ ಅಮಲಿನಲ್ಲಿ ಮುಳುಗಿಯೇ ಮುಳುಗಿರುತ್ತಾನೆ. ಈ ಪ್ರೀತಿ ಪ್ರೇಮದ ಅಮಲಿನಲ್ಲಿ ಮುಳುಗಿದವರಿಗೆ ಪ್ರಪಂಚದ ಅರಿವೇ ಇರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಮರೆಸುವಂತಹ ಶಕ್ತಿ ಪ್ರೀತಿಗಿದೆ. ಪ್ರೀತಿ ಇಲ್ಲದೆಯೆ ವ್ಯಕ್ತಿ ಬದುಕುವುದಕ್ಕೆ ಸಾಧ್ಯವೇ ಇಲ್ಲಾ. ಮನುಷ್ಯನ ಬದುಕಲ್ಲಿ ಪ್ರೀತಿ ಎನ್ನುವಂತದ್ದು ಮೂಲಭೂತವಾದ ಅವಶ್ಯಕತೆಗಳಲ್ಲೊಂದು. ಕೆಲವೊಮ್ಮೆ ನಾವು ಪ್ರೀತಿಯನ್ನ ಪಡೆದುಕೊಂಡಾಗ ಹೇಗೆ ಪ್ರಪಂಚವನ್ನ ಮರೆಯುತ್ತೇವೆಯೋ, ಪ್ರೀತಿಯನ್ನ ಕಳೆದುಕೊಂಡಾಗ ಪ್ರಪಂಚವನ್ನೆ ಬಿಟ್ಟು ಹೋಗುವ ಮನಸ್ಸನ್ನ ಮಾಡುವವರಿದ್ದಾರೆ.
 
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದಂತಹ ಹುಡುಗಿ ಹುಡುಗ ಬಿಟ್ಟು ಹೋದಾಗ ಆಗುವ ನೋವು ಅಷ್ಟಿಷ್ಟಲ್ಲ. ಮನಸ್ತಾಪಗಳು, ತಪ್ಪುಕಲ್ಪನೆಗಳು ಅಥವಾ ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಬ್ರೇಕ್‌ ಆಗುವುದು ಸಾಮಾನ್ಯ. ಹಾಗೇ ಬ್ರೇಕಪ್‌ ಆದಾಗ ಮನಸ್ಸಿಗೆ ಹೆಚ್ಚು ನೋವಾಗುವುದಂತು ಸುಳ್ಳಲ್ಲ. ಕೆಲವರಂತೂ ಬ್ರೇಕಪ್‌ ಆದಾಗ ಹುಚ್ಚರಂತೆ ಆಡುವವರಿದ್ದಾರೆ, ಮಾನಸಿಕ ಖಿನ್ನತೆಗೆ ಒಳಗಾಗುವರಿದ್ದಾರೆ, ಜೀವನವನ್ನೆ ಕೊನೆಗೊಳಿಸಿಕೊಳ್ಳುವವರಿದ್ದಾರೆ. ಒಬ್ಬರು ನಮ್ಮನ್ನ ಬಿಟ್ಟು ಹೋದಾಗ ಜೀವನವನ್ನೆ ಹಾಳುಮಾಡಿಕೊಳ್ಳುವುದು ಖಂಡಿತಾ ಮೂರ್ಖತನ.

ನಮ್ಮ ಜೀವನದಲ್ಲಿ ಏನೇ ಸಂಭವಿಸಿದರೂ ಅದರಲ್ಲಿ ಎರಡು ಅಂಶಗಳು ಇದ್ದೇ ಇರುತ್ತವೆ. ಒಂದು ಧನಾತ್ಮಕ ಅಂಶಗಳು ಇನ್ನೊಂದು ಋಣಾತ್ಮಕ ಅಂಶಗಳು. ಹಾಗೇ ಬ್ರೇಕಪ್‌ ಆದಾಗಲೂ ಹಲವಾರು ಪ್ರಯೋಜನಗಳು ಇವೆ. ಹಾಗಾದ್ರೆ ಬ್ರೇಕಪ್‌ನಿಂದ ಆಗುವಂತಹ ಉಪಯೋಗಗಳೇನು ಎಂಬುದನ್ನ ತಿಳಿಯೋಣ ಬನ್ನಿ. 

ಲವ್‌ ಬ್ರೇಕಪ್‌ನಲ್ಲಿ ನೀವು ಎಷ್ಟೇ ನೋವನ್ನು ಅನುಭವಿಸಿದರೂ ಅದು ಸಾಕಷ್ಟು ಪಾಠವನ್ನು ನಿಮಗೆ ಕಲಿಸುತ್ತದೆ. ನಿಮ್ಮನ್ನ ತಿರಸ್ಕರಿಸಿ ಹೋದವರ ಮುಂದೆ ತಲೆ ಎತ್ತಿ ನಿಲ್ಲುತ್ತೇನೆ ಎಂಬ ನಿಮ್ಮ ವಿಶ್ವಾಸವನ್ನು ವೃದ್ದಿಸುತ್ತದೆ. ಯಾವುದೇ ಸಮಸ್ಯೆಗಳು ನಿಮ್ಮ ಮುಂದೆ ಬಂದರು ಎದುರಿಸಿ ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸವನ್ನ ತುಂಬುತ್ತದೆ, ಒಟ್ಟಾರೆಯಾಗಿ ಬ್ರೇಕಪ್‌ ನೋವಿನಿಂದ ಕೂಡಿದ್ದರೂ ಇದು ನಿಮ್ಮ ಜೀವನದಲ್ಲಿ ಬದುಕುವ ಛಲವನ್ನಂತು ಹೆಚ್ಚಿಸುತ್ತದೆ. 

ನೀವು ಪ್ರೀತಿಯಲ್ಲಿದ್ದಾಗ ಮುಕ್ತವಾಗಿ ಬದುಕುವಂತಹ ಸ್ವಾಂತಂತ್ರ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ನಿಮ್ಮ ಪಾರ್ಟ್ನರ್‌ನ್ನ ಕೇಳಬೇಕಾಗಿರುತ್ತದೆ. ಅವರು ಹೇಳುವ ಪ್ರತಿಯೊಂದನ್ನು ನೀವು ಪಾಲಿಸಲೇಬೇಕಾಗಿರುತ್ತದೆ. ಆದರೆ ಬ್ರೇಕಪ್‌ ಆದ ಬಳಿಕ ನೀವು ಯಾರ ಹಂಗಿಲ್ಲದೆ ಮುಕ್ತವಾಗಿ, ಸ್ವಾತಂತ್ರ್ಯವಾಗಿ ಬದುಕಬಹುದು. ಯಾವ ಮೇಲೂ ಅವಲಂಬಿತವಾಗಿರದೇ ಒಂಟಿಯಾಗಿರುವುದು ಉತ್ತಮ ಎಂಬುದನ್ನ ಮನಗಾಣುತ್ತೀರಿ. ಜೊತೆಗೆ ಯಾವ ಸಹವಾಸಕ್ಕೂ ಹೊಗದೇ ನಿಮ್ಮ ಇಚ್ಚೆಯಂತೆ ಬದುಕನ್ನ ಸಾಗಿಸಲು ಮುಂದಾಗುತ್ತೀರಿ.  

ಪ್ರೀತಿಯಲ್ಲಿ ಇದ್ದ ಸಂದರ್ಭದಲ್ಲಿ ವ್ಯಕ್ತಿ ಹೆಚ್ಚಾಗಿ ತನ್ನನ್ನ ತಾನೂ ಪ್ರೀತಿಸಿಕೊಳ್ಳುವುದನ್ನೇ ಮರೆತು ಬಿಟ್ಟಿರುತ್ತೀರಿ. ತನ್ನ ಬಗ್ಗೆ ಗಮನವನ್ನೆ ಹರಿಸುತ್ತಿರುವುದಿಲ್ಲ. ಅದೇ ಬ್ರೇಕಪ್‌ ಆದ ಬಳಿಕ ತನಗೆ ತಾನು ಹೆಚ್ಚು ಸಮಯವನ್ನ ಕೊಡುವುದಕ್ಕೆ ಶುರು ಮಾಡುತ್ತೀರಿ. ತನ್ನ ಇಷ್ಟ ಕಷ್ಟಗಳ ಬಗ್ಗೆ ಅರಿತುಕೊಂಡು ತನ್ನ ಆರೋಗ್ಯ, ಸೌಂದರ್ಯದ ಬಗ್ಗೆ ಹೆಚ್ಚಿನ ಗಮನವನ್ನ ಹರಿಸುವುದಕ್ಕೆ ಪ್ರಾರಂಭಿಸುತ್ತೀರಿ. ಮುಂಚೆಗಿಂತ ಹೆಚ್ಚಿ ಸಮಯವನ್ನ ನಿಮ್ಮೊಟ್ಟಿಗೆ ನೀವು ಕಳೆಯುತ್ತೀರಿ. ನಿಮ್ಮನ್ನ ನೀವು ಆತ್ಮಾವಲೋಕನವನ್ನ ಮಾಡಿಕೊಳ್ಳಿತ್ತೀರಿ. ನಿಮಗೆ ನೀವು ಸಮಯವನ್ನ ಕೊಟ್ಟುಕೊಳ್ಳುವುದರ ಜೊತೆಗೆ ನಿಮ್ಮ ಕುಟುಂಬಕ್ಕೆ ಸಮಯವನ್ನ ನೀಡುತ್ತೀರಿ, ಅವರ ಇಷ್ಟ ಕಷ್ಟಗಳ ಬಗ್ಗೆ ಆಸಕ್ತಿ ತೋರಿಸುತ್ತೀರಿ. 

ಬ್ರೇಕಪ್‌ನಿಂದ ದೈಹಿಕ ಆರೋಗ್ಯಸಹ ಸುಧಾರಿಸುತ್ತದೆ. ನಿಮ್ಮ ಪಾರ್ಟನರ್‌ ನಿಮ್ಮ ಜೊತೆಗಿದ್ದಾಗ ರಾತ್ರೀ ಇಡೀ ಅವರ ಜೊತೆ ಮಾತನಾಡುತಿರುತ್ತೀರಿ. ಅದರಿಂದ ನಿದ್ದೆ ಸರಿಯಾಗಿ ಆಗಿರುವುದಿಲ್ಲ. ಇದರಿಂದ ಹಲವಾರು ದೈಹಿಕ ರೋಗಗಳಿಗೆ ಬಲಿಯಾಗುತ್ತೀರಿ. ಬ್ರೇಕಪ್‌ ಆದಾಗ ನೀವು ಯಾರೋಟ್ಟಿಗೂ ತಡ ರಾತ್ರಿಯವರೆಗೆ ಮಾತನಾಡುವ ಅಗತ್ಯ ಇರುವುದಿಲ್ಲ. ರಾತ್ರಿ ಇಡೀ ಉತ್ತಮವಾಗಿ ನಿದ್ದೆ ಮಾಡಬಹುದು. ಈ ಮೂಲಕ ನಿಮ್ಮ ದೈಹಿಕ ಆರೋಗ್ಯ ಸುಧಾರಿಸುತ್ತದೆ.  

ಬ್ರೇಕಪ್‌ ಬಳಿಕ  ನೀವು ನಿಮ್ಮ ಇಷ್ಟದಂತೆ ಬದುಕಬಹುದು. ಯಾರ ಅಪ್ಪಣೆಯ ಅಗತ್ಯ ಇರುವುದಿಲ್ಲ. ನಿಮ್ಮಿಷ್ಟದ ಬಟ್ಟೆ ಹಾಕಬಹುದು, ನಿಮ್ಮಿಷ್ಟದ ಊಟ ಮಾಡಬಹುದು, ನೀವು ಇಷ್ಟ ಪಟ್ಟಲ್ಲಿಗೆ ಹೋಗಬಹುದು ಯಾರ ತಂಟೆ ತಕರಾರಿಲ್ಲದೇ ಸ್ವತಂತ್ರ್ಯ ಜೀವನವನ್ನು ನಡೆಸಬಹುದು. ಹಾಗಾಗಿ ಪ್ರೀತಿ ಪ್ರೇಮ ಇವೆಲ್ಲಾ ಜೀವನದ ಒಂದು ಭಾಗವೇ ಹೊರತು ಜೀವನವೇ ಅಲ್ಲ. ಎಲ್ಲದಕ್ಕೂ ಒಂದು ಮಿತಿ ಅನ್ನುವುದು ತುಂಬಾ ಮುಖ್ಯ. ಯಾರು ನಮ್ಮ ಜೀವನದಲ್ಲಿದ್ದರೂ ಇಲ್ಲದಿದ್ದರೂ ನನ್ನ ಜೀವನವನ್ನ ನಾನು ನಡೆಸುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು