
ಅಮ್ಮ- ಮಕ್ಕಳ ಬಾಂಧವ್ಯವೇ ಅನೂಹ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಇಂಥದ್ದೊಂದು ಸಂಬಂಧಕ್ಕೆ ಬೆಲೆ ಕಳೆದುಹೋಗುತ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತವೆ, ಜೊತೆಗೆ ಅಲ್ಲಲ್ಲಿ ನಡೆಯುವ ಘಟನೆಗಳನ್ನು ನೋಡಿದರೆ ಅಯ್ಯೋ ಎನ್ನಿಸುವುದು ಉಂಟು. ಅದೇನೇ ಇದ್ದರೂ ಈ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದಂಥದ್ದು. ಮನುಷ್ಯರು ಈ ಮಧುರ ಸಂಬಂಧವನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಾಣಿ- ಪಕ್ಷಿಗಳಲ್ಲಿ ಮಾತ್ರ ಅಮ್ಮ-ಮಗುವಿನ ಸಂಬಂಧ ಸುಂದರ- ಸುಮಧುರವಾಗಿಯೇ ಇದೆ. ಇಂಥದ್ದೇ ಒಂದು ಬಾಂಧವ್ಯದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆದರೆ, ಇದನ್ನು ನೋಡಿದರೆ ಮಾತ್ರ ಕಟುಕರ ಹೃದಯವೂ ಅರೆ ಕ್ಷಣ ಅಯ್ಯೋ ಎನ್ನಿಸುವಂತಿದೆ.
ಈ ವೈರಲ್ ವಿಡಿಯೋ ಆಡು ಮತ್ತು ಅದರ ಮರಿಯದ್ದಾಗಿದೆ. ಮಹಿಳೆಯೊಬ್ಬಳು ಆಡನ್ನು ಕಡಿಯಲು ಮುಂದಾಗಿದ್ದಾಳೆ. ಕೈಯಲ್ಲಿ ಹರಿತವಾದ ಚಾಕು ಹಿಡಿದುಕೊಂಡಿದ್ದಾಳೆ. ಆಡಿನ ತಲೆ ಇನ್ನೇನು ಭಾಗ ಆಗುವುದರಲ್ಲಿತ್ತು. ಅಷ್ಟು ಹೊತ್ತಿಗೆ ಅದರ ಕಂದ ತನ್ನನ್ನು ಬೇಕಿದ್ದರೆ ಕಡಿಯಿರಿ ಎನ್ನುವ ಹಾಗೆ ಅಮ್ಮನ ಮೇಲೆ ಮಲಗಿದೆ. ಅಮ್ಮನ ತಲೆಯ ಬಳಿ ತನ್ನ ತಲೆಯನ್ನು ಇಟ್ಟಿದೆ. ಅರೆ ಕ್ಷಣ ಆ ಮಹಿಳೆ ಕೂಡ ಇದನ್ನು ನೋಡಿ ವಿಚಲಿತಳಾಗಿದ್ದಾಳೆ. ಇದರ ವಿಡಿಯೋ ನೋಡಿದರೆ ಎಂಥವರ ಕರುಳು ಕೂಡ ಚುರುಕ್ ಎನ್ನುತ್ತದೆ. ಮೇಕೆ, ಆಡು, ಕುರಿ, ಕೋಳಿಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಕೂಡ ಒಂದು ಕ್ಷಣ ಅಯ್ಯೋ ಎನ್ನಿಸುವಂತಿದೆ ಈ ವಿಡಿಯೋ.
ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು
ಅಷ್ಟಕ್ಕೂ ಆಹಾರ ಅವರ ಆಯ್ಕೆ. ಆಹಾರದ ವಿಷಯದಲ್ಲಿ ಬಹು ದೊಡ್ಡ ವಾದ, ಪ್ರತಿವಾದಗಳೇ ನಡೆಯುತ್ತವೆ. ಅವರ ಆಹಾರ ಇವರು, ಇವರ ಆಹಾರ ಅವರು ಟೀಕಿಸುವುದು, ದೂಷಿಸುವುದು, ದ್ವೇಷಿಸುವುದು, ಆಹಾರದ ಆಧಾರದ ಮೇಲೆ ಜಾತಿ, ಧರ್ಮ ಎಂದೆಲ್ಲಾ ಬಡಿದಾಡಿಕೊಳ್ಳುವುದು ಎಲ್ಲವೂ ಮಾಮೂಲಾಗಿಬಿಟ್ಟಿದೆ. ಆಹಾರದ ವಿಷಯ ಅವರವರಿಗೆ ಬಿಟ್ಟಿದ್ದು. ಆದರೆ, ಇಂಥ ವಿಡಿಯೋ ನೋಡಿದಾಗ ಮಾತ್ರ ಅಯ್ಯೋ ಎನ್ನಿಸುವುದು ಉಂಟು. ಇದಕ್ಕೆ ಥರಹೇವಾರಿ ಕಮೆಂಟ್ಸ್ ಸುರಿಮಳೆಯಾಗಿದ್ದು, ದಯವಿಟ್ಟು ಯಾರೂ ಇಂಥ ಕ್ರೂರ ಕೃತ್ಯ ಮಾಡಬೇಡಿ ಎಂದು ಹಲವರು ಹೇಳುತ್ತಿದ್ದಾರೆ.
ಕುರಿ, ಕೋಳಿ, ಆಡು, ಮೇಕೆಗಳು ಹುಟ್ಟಿರುವುದೇ ಜನರ ಆಹಾರಕ್ಕಾಗಿ. ದೇವರು ಅದನ್ನು ಸೃಷ್ಟಿಸಿರುವುದೇ ಅದಕ್ಕಾಗಿ ಎಂದು ಕೆಲವರು ವಾದ ಕೂಡ ಮಾಡಿದ್ದಾರೆ. ಅವುಗಳ ಬಳಕೆ ಬೇರೆ ರೀತಿಯಲ್ಲಿಯೂ ಮಾಡಬಹುದು, ಅವುಗಳನ್ನು ಕೊಂದು ತಿನ್ನದೆಯೂ ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಸಾಕಬಹುದು ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಿನ್ನುವುದಕ್ಕೆ ಈ ಭೂಮಿಯ ಮೇಲೆ ಅದೆಷ್ಟೋ ಆಹಾರಗಳು ಇರುವಾಗ ಒಂದು ಜೀವವನ್ನು ಬಲಿಕೊಡುವುದು ಏಕೆ ಎಂದು ಸಸ್ಯಾಹಾರಿಗಳು ಪ್ರಶ್ನಿಸಿದರೆ, ಸಸ್ಯಗಳಿಗೂ ಜೀವ ಇರುತ್ತದೆ, ಅದನ್ನು ಕೊಂದು ನೀವು ತಿನ್ನುವುದಿಲ್ಲವೇ ಎನ್ನುತ್ತಾರೆ ಮಾಂಸಾಹಾರಿಗಳು. ಒಟ್ಟಿನಲ್ಲಿ ಆಹಾರದ ವಿಷಯದ ಬಗ್ಗೆ ಚರ್ಚೆ ಮಾಡಿದಷ್ಟೂ ಇದು ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸುವುದು ಹೌದಾದರೂ ಸದ್ಯ ಈ ವಿಡಿಯೋ ಮಾತ್ರ ಹಲವರ ಕಣ್ಣನ್ನು ತೇವ ಮಾಡಿದ್ದಂತೂ ನಿಜ.
ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.