'ಸರ್, ನನ್ನ ಹೆಂಡತಿ ₹5 ಕೋಟಿ ಮತ್ತು BMW ಕಾರು ವಧುದಕ್ಷಿಣೆ ಕೇಳಿದ್ದಾಳೆ' ವಾಯುಪಡೆ ಅಧಿಕಾರಿ ಗಂಡನ ಕಣ್ಣೀರ ಕಥೆ!

Published : May 17, 2025, 11:25 AM ISTUpdated : May 17, 2025, 11:29 AM IST
'ಸರ್, ನನ್ನ ಹೆಂಡತಿ ₹5 ಕೋಟಿ ಮತ್ತು BMW ಕಾರು ವಧುದಕ್ಷಿಣೆ ಕೇಳಿದ್ದಾಳೆ' ವಾಯುಪಡೆ ಅಧಿಕಾರಿ ಗಂಡನ ಕಣ್ಣೀರ ಕಥೆ!

ಸಾರಾಂಶ

ವಾಯುಪಡೆ ಅಧಿಕಾರಿಯನ್ನು ವಿವಾಹವಾದ ನೌಕಾಪಡೆ ಅಧಿಕಾರಿ ಅಭಿನವ್ ಜೈನ್, ಪತ್ನಿ ಮತ್ತು ಅತ್ತೆ-ಮಾವರಿಂದ ಐದು ಕೋಟಿ ಹಣ ಮತ್ತು ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬೇಡಿಕೆ ಈಡೇರದಿದ್ದರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ನ್ಯಾಯಾಲಯವು ವಧುದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ.

ನವದೆಹಲಿ (ಮೇ 17): ಕಳೆದ ಮೂರು ವರ್ಷಗಳ ಹಿಂದೆ ವಾಯುಪಡೆಯಲ್ಲಿ ಕೆಲಸ ಮಾಡುವ ಸುಂದರ ಯುವತಿಯನ್ನು ಹುಡುಕಿ ಮದುವೆ ಮಾಡಿಕೊಂಡ ವ್ಯಾಪಾರಿ ನೌಕಾಪಡೆ ಅಧಿಕಾರಿ ಇದೀಗ ತನ್ನ ಹಂಡತಿ 5 ಕೋಟಿ ರೂ. ಕ್ಯಾಶ್ ಹಾಗೂ ಒಂದು ಬಿಎಂಡಬ್ಲ್ಯೂ ಕಾರನ್ನು ವಧುದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನೀವು ಕೇಳಿದ್ದನ್ನು ಕೊಡಲಿಲ್ಲವೆಂದರೆ ನಿನಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದೀಗ ಮನನೊಂದ ಗಂಡ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾನೆ.

ಜೈಪುರ ಮೆಟ್ರೋ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ವಾಯುಪಡೆಯ ಉನ್ನತ ಮಹಿಳಾ ಅಧಿಕಾರಿ ಮತ್ತು ಅವರ ಪೋಷಕರ ವಿರುದ್ಧ ವಧುದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಿದೆ. ಮರ್ಚೆಂಟ್ ನೇವಿ ಅಧಿಕಾರಿ ಅಭಿನವ್ ಜೈನ್ ಅವರು ತಮ್ಮ ಪತ್ನಿ ಮತ್ತು ಅತ್ತೆ ಮಾವ 5 ಕೋಟಿ ರೂ. ನಗದು ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ಮೇರೆಗೆ ಈ ನಿರ್ದೇಶನ ನೀಡಲಾಗಿದೆ.

ಗಂಡ ಸತ್ತಿದ್ದಾರೆಂದು ಜೀವನ ಕೊಟ್ಟರೆ, ತನ್ನ ಜೀವಕ್ಕೆ ಆಪತ್ತು ಬಂತು:
ರಾಜಸ್ಥಾನ ರಾಜ್ಯದ ಜಗತ್ಪುರ ನಿವಾಸಿ ಅಭಿನವ್ ಜೈನ್, ತನ್ನ ಮೊದಲ ಹೆಂಡತಿಯೊಂದಿಗೆ ಸಂಸಾರದಲ್ಲಿ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದರಿಂದ ಅವರ ಮದುವೆಯಾಗಿ ಕೆಲವೇ ದಿನಗಳಲ್ಲಿ ಮದುವೆ ಮುರಿದುಬಿತ್ತು. ಇದಾದ ನಂತರ, ಅವರು ಸಾಮಾಜಿಕ ಮಾಧ್ಯಮದಲ್ಲಿ ರೂಪದರ್ಶಿಯಂತೆ ಕಾಣಿತ್ತಿದ್ದ ಒಬ್ಬ ಮಹಿಳೆಯನ್ನು ನೋಡಿದರು. ಇಲ್ಲಿ ತನಗೂ ಡಿವೋರ್ಸ್ ಆಗಿರುವ ವಿಚಾರವನ್ನು ಅಭಿನವ್ ಮೊದಲೇ ಬರೆದುಕೊಂಡಿದ್ದನು. ಇನ್ನು ವಾಯುಪಡೆ ಅಧಿಕಾರಿ ಆಗಿದ್ದ ಮೊದಲ ಪತ್ನಿಯನ್ನು 2014ರ ವಿಮಾನ ಅಪಘಾತದಲ್ಲಿ ಕಳೆದುಕೊಂಡಿದ್ದ ಮಹಿಳೆ ಕೂಡ ಅಭಿನವ್ ಪ್ರಪೋಸಲ್ ಅನ್ನು ಒಪ್ಪಿಕೊಂಡಿದ್ದರು. ಕ್ರಮೇಣ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿ, 2022ರ ಫೆಬ್ರವರಿ 10ರಂದು ವಿವಾಹವಾದರು.

ಚೆನ್ನೈನಲ್ಲಿ ನಿಯೋಜನೆ ಮತ್ತು ಜೈಪುರಕ್ಕೆ ವರ್ಗಾವಣೆ
ದೂರುದಾರ ಅಭಿನ್ ಪರ ವಕೀಲ ಸಂದೇಶ್ ಖಂಡೇಲ್ವಾಲ್ ಅವರು ಹೇಳುವ ಪ್ರಕಾರ, ಅಭಿನವ್ ಜೈನ್ ಅವರು ಮದುವೆ ಮಾಡಿಕೊಂಡ ನಂತರ ಹೆಂಡತಿ ಮತ್ತು ಆಕೆಯ ಪೋಷಕರ ನಡವಳಿಕೆ ಬದಲಾಯಿತು. ಅಭಿನವ್ ೌಕಾಪಡೆ ಅಧಿಕಾರಿ ಆಗಿದ್ದರಿಂದ ಅವರನ್ನು ಚೆನ್ನೈ ನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಚನ್ನೈನಲ್ಲಿ ಅಭಿನವ್ ನಿಯೋಜನೆಗೊಂಡಿದ್ದಾಗ, ಅವರ ಪತ್ನಿ ಪ್ರತಿದಿನ ಅವರೊಂದಿಗೆ ಜಗಳ ಮಾಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದ ಅಭಿನವ್ ಮೇಲಧಿಕಾರಿಗಳ ಕೈಕಾಲು ಹಿಡಿದು ಜೈಪುರಕ್ಕೆ ವರ್ಗಾಯಿಸಿಕೊಂಡನು. ಜೈಪುರಕ್ಕೆ ಬಂದ ನಂತರವೂ ಅವರಿಗೆ ಮಾನಸಿಕ ಹಿಂಸೆ ಮುಂದುವರೆಯಿತು. ಅಭಿನವ್ ಹೇಳುವಂತೆ, ಮರ್ಚೆಂಟ್ ನೇವಿಯಲ್ಲಿನ ತನ್ನ ಕೆಲಸದ ಬಗ್ಗೆ ಅವನ ಅತ್ತೆ ಮಾವ ಸುಖಾಸುಮ್ಮನೆ ತಂಟೆ-ತಕರಾರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವು 5 ಕೋಟಿ ಮತ್ತು BMW ನೀಡದಿದ್ದರೆ ಡಿವೋರ್ಸ್ ಕೊಡ್ತೀನಿ:
ದೂರುದಾರ ಅಭಿನವ್ ಅವರು ಸೆಪ್ಟೆಂಬರ್ 2022 ರಲ್ಲಿ ಜೈಪುರಕ್ಕೆ ಬಂದಾಗ, ಅವರ ಅತ್ತೆ-ಮಾವ 5 ಕೋಟಿ ರೂಪಾಯಿ ನಗದು ಮತ್ತು ಬಿಎಂಡಬ್ಲ್ಯು ಕಾರನ್ನು ವಧುದಕ್ಷಿಣೆಯಾಗಿ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ಪತ್ನಿಯಿಂದ ವಿಚ್ಛೇದನ ಕೊಡಿಸುವುದಾಗಿ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ತನ್ನ ನವಜಾತ ಮಗನನ್ನು ಭೇಟಿಯಾಗಲು ಸಹ ಬಿಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ಮೆಟ್ರೋ ನ್ಯಾಯಾಲಯ ಆದೇಶ:
ಮಾರ್ಚ್ 19, 2025ರಂದು, ವಾಯುಪಡೆ ನಿಲ್ದಾಣದಲ್ಲಿ ತನ್ನ ಪುಟ್ಟ ಮಗನನ್ನು ಭೇಟಿಯಾಗಲು ಹೋಗಿದ್ದ ಅಭಿನವ್ ಜೈನ್ ಅವರಿಗೆ ಅತ್ತೆಯ ಮನೆಯವರು ಮತ್ತೆ ಹಣದ ಬೇಡಿಕೆಯನ್ನು ಇಟ್ಟಿದ್ದರು. ಈ ಬಗ್ಗೆ ಅವರು ನ್ಯಾಯಾಲಯದಲ್ಲಿ ದೂರು ನೀಡಿದ್ದು, ಮೆಟ್ರೋ ನ್ಯಾಯಾಲಯವು ಪೊಲೀಸರಿಗೆ ಎಫ್‌ಐಆರ್ ದಾಖಲಿಸಿ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು