Bigg Boss ಐಶ್ವರ್ಯ ಸಿಂಧೋಗಿಗೆ ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ಮದ್ವೆ ಮಾಡಿಸ್ತಿದ್ದಾರೆ ಡಾಲಿ ರಾಜೇಶ್​ ದಂಪತಿ

Published : Nov 19, 2026, 07:59 PM IST
Bigg Boss Aishwarya Sindhogi and Shishir Shastri

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ನಿಶ್ಚಿತಾರ್ಥ ಇದೇ 22ರಂದು ನಡೆಯಲಿದೆ. ತಂದೆ-ತಾಯಿಯನ್ನು ಕಳೆದುಕೊಂಡಿರುವ ಐಶ್ವರ್ಯಗೆ ಡಾಲಿ ರಾಜೇಶ್ ದಂಪತಿ ಕನ್ಯಾದಾನ ಮಾಡುವ ನಿರೀಕ್ಷೆ ಇದೆ.

ಬೆಂಗಳೂರು: ಬಿಗ್​ಬಾಸ್​ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್​ ಶಾಸ್ತ್ರಿ (Bigg Boss Aishwarya Sindhogi and Shishir Shastri) ಅವರ ಎಂಗೇಜ್​ಮೆಂಟ್​ ಇದೇ 22ರಂದು ನಡೆಯಲಿದ್ದು, ಮದುವೆ ಕೂಡ ಶೀಘ್ರದಲ್ಲಿ ನಡೆಯಲಿದೆ. ಇದಕ್ಕೆ ಇದಾಗಲೇ ಜೋಡಿ ಹಲವರಿಗೆ ಆಮಂತ್ರಣ ಪತ್ರಿಕೆ ನೀಡುವ ಕಾರ್ಯದಲ್ಲಿ ತೊಡಗಿದೆ. ಇದೀಗ ನಟ ಡಾಲಿ ರಾಜೇಶ್​ ದಂಪತಿಯಿಂದ ಜೋಡಿ ಆಶೀರ್ವಾದ ಪಡೆದುಕೊಂಡಿದ್ದು, ಮದುವೆಯನ್ನು ನೀವೇ ಮುಂದೆ ನಿಂತು ನಡೆಸಿಕೊಡುವಂತೆ ಐಶ್ವರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ಡಾಲಿ ರಾಜೇಶ್​ ದಂಪತಿ ಐಶ್ವರ್ಯ ಅವರಿಗೆ ಕನ್ಯಾದಾನ ಮಾಡುವ ನಿರೀಕ್ಷೆ ಇದೆ.

ಅಷ್ಟಕ್ಕೂ ಬಿಗ್​ಬಾಸ್​​ ವೀಕ್ಷಕರಿಗೆ ತಿಳಿದಿರುವಂತೆ, ಐಶ್ವರ್ಯಾ ಸಿಂಧೋಗಿ ಅವರಿಗೆ ಅಮ್ಮ-ಅಪ್ಪ ಇಲ್ಲ. ಇಬ್ಬರು ಕೂಡ ಎರಡು ವರ್ಷಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. 2018ರಲ್ಲಿ ಐಶ್ವರ್ಯಾ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಂತರ 2020ರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಐಶ್ವರ್ಯಾ ಅವರ ತಾಯಿ ಕೂಡ ಸಾವನ್ನಪ್ಪಿದ್ದರು. ಬಳಿಕ ಒಬ್ಬಂಟಿಯಾಗಿ ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ ಐಶ್ವರ್ಯ. ಇದೇ ಕಾರಣಕ್ಕೆ ಬಿಗ್​ಬಾಸ್​ನಲ್ಲಿ ಕೂಡ ಐಶ್ವರ್ಯ ಅವರನ್ನು ಕಿಚ್ಚ ಸುದೀಪ್​ ಅವರು ಮನೆ ಮಗಳು ಎಂದು ಹೇಳಿ ಆಶೀರ್ವಾದ ಮಾಡಿ ಬೀಳ್ಕೊಟ್ಟಿದ್ದರು. ಮದುವೆಯ ಸಂದರ್ಭದಲ್ಲಿ ಅಪ್ಪ-ಅಮ್ಮ ಮಗಳನ್ನು ಕನ್ಯಾದಾನ ಮಾಡಬೇಕು. ಆದರೆ ಈ ಸುಂದರ ಕ್ಷಣವನ್ನು ಐಶ್ವರ್ಯ ಮಿಸ್​ ಮಾಡಿಕೊಳ್ಳುತ್ತಿದ್ದು, ಡಾಲಿ ರಾಜೇಶ್​ ದಂಪತಿ ಈ ಕಾರ್ಯ ಮಾಡುವ ನಿರೀಕ್ಷೆ ಇದೆ.

ರಾಜೇಶ್​ ಆಶೀರ್ವಾದ

ಆಮಂತ್ರಣ ಪತ್ರಿಕೆ ಕೊಡುವಾಗ ರಾಜೇಶ್​ ಅವರು, ನಮ್ಮ ಮಗು ಒಳ್ಳೆಯ ಮನೆ ಸೇರಿದ್ದು, ಒಳ್ಳೆಯವನ ಕೈ ಸೇರಿದೆ. ಅದಕ್ಕಿಂತ ಹೆಚ್ಚು ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಅದು ನನ್ನ ಭಾಗ್ಯ ಎಂದಿದ್ದಾರೆ. ಇನ್ನು ಐಶ್ವರ್ಯ ಅವರ ಕುರಿತು ಹೇಳುವುದಾದರೆ, ಐಶ್ವರ್ಯ ತಂದೆಯ ಸಾವಿನ ಬಳಿಕ ಕಷ್ಟದಲ್ಲಿ ದಿನದೂಡಿದ್ದರು ಐಶ್ವರ್ಯ. ಅವರ ಬ್ಯುಸಿನೆಸ್ ನಲ್ಲೂ ಹಲವರು ಮೋಸ ಮಾಡಿದ್ದರಂತೆ. ಆದರೆ ಎಲ್ಲಾ ಕಷ್ಟವನ್ನು ಮೆಟ್ಟಿ ನಿಂತು ಐಶ್ವರ್ಯ ನಟನೆಯಲ್ಲಿ ತೊಡಗಿದರು, ಬಳಿಕ ಅಮ್ಮನನ್ನು ಸಹ ಕಳೆದುಕೊಂಡರು. ಆದರೆ ಕಲೆ, ನಟನಾ ಲೋಕ ಕೈ ಬಿಟ್ಟಿಲ್ಲ ಎನ್ನುತ್ತಾರೆ ಐಶ್ವರ್ಯ.

ಬಳಿಕ ಸೀರಿಯಲ್, ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದ ಐಶ್ವರ್ಯ, ಹೆಚ್ಚು ಸುದ್ದಿಯಲ್ಲಿರುವುದು ಶಿಶಿರ್ ಜೊತೆಗಿನ ಗೆಳತನದಿಂದ. ಇಬ್ಬರೂ ಬಿಗ್ ಬಾಸ್ ಬಳಿಕ ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾ, ಟ್ರಾವೆಲ್ ಮಾಡುತ್ತಲೇ ಇದ್ದಾರೆ. ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಏನೋ ಇದೆ ಎನ್ನುವ ಗುಸು ಗುಸು ಕೇಳಿ ಬಂದಿದ್ದರೂ ಜೋಡಿ ಮಾತ್ರ ಏನಿಲ್ಲ, ಏನಿಲ್ಲ ಎನ್ನುತ್ತಿತ್ತು. ಈಗ ಮದುವೆಯ ವಿಷಯವನ್ನು ರಿವೀಲ್​ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅನನ್ಯಾ ಬಿರ್ಲಾಗೆ ಒಂದೇ ವ್ಯಕ್ತಿಯಿಂದ ಪದೇ ಪದೇ ಮದುವೆ ಪ್ರಸ್ತಾಪ..! ಕಾಫಿ ವಿತ್ ಕರಣ್‌ನಲ್ಲಿ ವೆಡ್ಡಿಂಗ್ ಗುಟ್ಟು ಬಿಚ್ಚಿಟ್ಟ ಆರ್‌ಸಿಬಿ ಓನರ್
ಒಂದೇ ಒಂದು ಚಾಟ್‌ಜಿಪಿಟಿ ಪ್ರಾಂಪ್ಟ್.. ಬ್ರೇಕಪ್ ಎಂದ ಗೆಳೆಯನಿಗೆ ಹೆದರಿಸಲು ಹೋಗಿ ಪೊಲೀಸ್ ಬಲೆಗೆ ಬಿದ್ದ ವಿದ್ಯಾರ್ಥಿನಿ!