Alcohol Addiction: ಮದ್ಯ ಕುಡಿಯೋರಿಗೆ ಕೋಪ ಮೂಗಿನ ತುದಿಯಲ್ಲಿರುತ್ತಾ?

Published : Mar 18, 2023, 01:15 PM IST
Alcohol Addiction: ಮದ್ಯ ಕುಡಿಯೋರಿಗೆ ಕೋಪ ಮೂಗಿನ ತುದಿಯಲ್ಲಿರುತ್ತಾ?

ಸಾರಾಂಶ

ಆಲ್ಕೋಹಾಲ್ ಸೇವನೆ ನಂತ್ರ ಜನರು ಪ್ರಜ್ಞೆ ಕಳೆದುಕೊಳ್ತಾರೆ. ಏನು ಮಾಡ್ತಾರೆ ಅನ್ನೋದು ಅವರಿಗೆ ಅರಿವಿರೋದಿಲ್ಲ. ಹಾಗಾಗಿ ಪತಿ ಮನೆಗೆ ಕುಡಿದು ಬಂದ್ರೆ ಗಲಾಟೆ ಗ್ಯಾರಂಟಿ. ಇದ್ರ ಬಗ್ಗೆ ಸ್ಟಡಿ ಏನು ಹೇಳುತ್ತೆ ಗೊತ್ತಾ?   

ಮದ್ಯಪಾನ ಮಾಡೋದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕಾಲೇಜಿಗೆ ಹೋಗುವ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮದ್ಯಪಾನ ಮಾಡ್ತಿದ್ದಾರೆ.  ಆಲ್ಕೋಹಾಲ್ ಇಲ್ಲವೆಂದ್ರೆ ಪಾರ್ಟಿಗಳೇ ನಡೆಯೋದಿಲ್ಲ. ವೀಕೆಂಡ್ ಬಂತು ಅಂದ್ರೆ ಬಾರ್ ಗಳು ತುಂಬು ತುಳುಕುತ್ತಿರುತ್ತವೆ. ಎಲ್ಲಿಲ್ಲದ ವ್ಯಾಪಾರ ನಡೆಯೋದು ಮದ್ಯದಂಗಡಿಯಲ್ಲಿ ಮಾತ್ರ ಅಂದ್ರೆ ತಪ್ಪಾಗೋದಿಲ್ಲ. ಮದ್ಯಪಾನ ಆರೋಗ್ಯಕ್ಕೆ ಮಾತ್ರವಲ್ಲ ಸಂಸಾರಕ್ಕೂ ಹಾನಿಕರ. 

ಕುಟುಂಬ (Family) ದಲ್ಲಿ ಯಾವುದೇ ವ್ಯಕ್ತಿ ಮದ್ಯಪಾನ (Alcohol) ಮಾಡಿ ಮನೆಗೆ ಬಂದ್ರೆ ಗಲಾಟೆ ನಿಶ್ಚಿತ. ಕುಡಿದು ಬರುವ ವ್ಯಕ್ತಿಗಳು ಸಣ್ಣ ವಿಷ್ಯಕ್ಕೆ ಕಿರಿಕ್ ಮಾಡಿ ದೊಡ್ಡ ರಂಪಾಟ ಮಾಡ್ತಾರೆ. ಕುಡಿದು ಬಂದು ಪ್ರತಿ ದಿನ ಗಲಾಟೆ ಮಾಡ್ತಾನೆ ಎಂಬ ಮಾತನ್ನು ನಾವು ಕೇಳಿರ್ತೇವೆ ಇಲ್ಲವೇ ನೋಡಿರ್ತೇವೆ. ಹಾಗಾದರೆ ಸಾಮಾನ್ಯ ಜನರಿಗಿಂತ ಮದ್ಯಪಾನ ಮಾಡುವವರೇ ಹೆಚ್ಚು ಜಗಳ ಮಾಡ್ತಾರಾ, ಅವರಿಗೇ ಹೆಚ್ಚು ಸಿಟ್ಟು ಬರುತ್ತಾ ಎಂಬ ಪ್ರಶ್ನೆ ನಮ್ಮನ್ನು ಕಾಡೋದು ಸಹಜ.

ಮಗ ಕುಡಿಯುತ್ತಿದ್ದಾನೆಂದರೆ ಮುಚ್ಚಿಡಬೇಡಿ, ಔಷಧಿ ಕೊಡಿಸಿ

ರಿಸರ್ಚ್ (Research) ಏನು ಹೇಳುತ್ತೆ? :  ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ಅವರು ಪ್ರಕಟಿಸಿದ ವರದಿಯ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಮದ್ಯಪಾನ ಸೇವನೆಗೂ ಕೋಪಕ್ಕೂ ನಡುವೆ ಸಂಬಂಧವಿದೆ. ಹಾಗಂತ ಕುಡಿದ ವ್ಯಕ್ತಿಗಳೆಲ್ಲರೂ ಕೋಪದಿಂದ ಜಗಳ (Fight) ವಾಡುತ್ತಾರೆ ಎಂದೇನಿಲ್ಲ. ಕುಡಿತದ ನಂತರದ ವರ್ತನೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ ಜಗತ್ತಿನೆಲ್ಲೆಡೆ ನಡೆದ ಹಿಂಸೆ, ಅಪರಾಧ ಮತ್ತು ಲೈಂಗಿಕ ದೌರ್ಜನ್ಯಗಳಲ್ಲಿ ಮದ್ಯಪಾನದ ಪಾಲು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಮದ್ಯ ಸೇವಿಸಿದ ನಂತರ ಜನರು ಹೆಚ್ಚು ಹಿಂಸಾತ್ಮಕವಾಗುತ್ತಾರಾ? : ಮದ್ಯಪಾನದ ಕುರಿತಾಗಿ ಒಂದೊಂದು ವರದಿಗಳು ಒಂದೊಂದು ರೀತಿ ಹೇಳುತ್ತೆ. ಶರಾಬು ಸೇವನೆಯ ನಂತರ ಜನರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡು ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಆಲ್ಕೋಹಾಲ್ ಸೇವನೆ ಮಾಡುವವರೆಲ್ಲರೂ ಹಿಂಸೆ ಮಾಡುವುದಿಲ್ಲ. ಕೆಲವರು ಮದ್ಯಪಾನ ಮಾಡಿದ ನಂತ್ರ ಮೊದಲಿಗಿಂತ ಮೌನಿಯಾಗ್ತಾರೆ. ಅದು ಒಳ್ಳೆಯದೆ. ಆದರೆ ಮದ್ಯಪಾನ ಸೇವನೆ ಮಾಡದೇ ಇದ್ದಾಗ ಒಳ್ಳೆಯವನಾಗಿರುವ ವ್ಯಕ್ತಿ ಕುಡಿದಾಗ ಹಿಂಸಾತ್ಮಕವಾಗಿ ವರ್ತಿಸುವುದು ಶೋಚನೀಯ.

ಕುಡಿತದ ಚಟವೊಂದು ರೋಗ, ಬೇಗೆ ಔಷಧಿ ಕೊಡಿಸಿದರೆ ಗುಣವಾಗುತ್ತೆ

ಆಲ್ಕೋಹಾಲ್ ಸೇವನೆಯಿಂದ ಮನೆಯಲ್ಲಿ ವಿವಾದಗಳು ಹೆಚ್ಚುತ್ತೆ : ಗಂಡ ಕುಡಿದು ಮನೆಗೆ ಬಂದಾಗ ಹೆಂಡತಿ ಸಿಟ್ಟಿಗೇಳುವುದು ಸರ್ವೇ ಸಾಮಾನ್ಯ. ಮನೆ (Home ) ಯ ಗಂಡಸರು ಕುಡಿದು ಬಂದಾಗ ಹೆಂಗಸರಿಗೆ ಅವಮಾನವಾಗುವುದು ಸಹಜವೇ. ಕೆಲವು ಮಹಿಳೆಯರ ಆರೋಗ್ಯ ಹಾಗೂ ಮನೆಯ ವಾತಾವರಣ ಹದಗೆಡುವುದು ಕೂಡ ಈ ಕುಡಿತದಿಂದಲೆ. ಅದೆಷ್ಟೋ ಸಂಸಾರ ಬೀದಿಗೆ ಬರಲು ಈ ಕುಡಿತ ಕಾರಣವಾಗ್ತಿದೆ. ದುಡಿದ ಹಣವನ್ನೆಲ್ಲ ಬಾರ್ ಗೆ ಸುರಿದುಬರುವ ಪತಿ ಬೀದಿ ಬದಿಯಲ್ಲಿ ಬಿದ್ದಿದ್ರೆ ಪತ್ನಿಯಾದವಳು ಏನು ಮಾಡಲು ಸಾಧ್ಯ. ಈ ಆಲ್ಕೋಹಾಲ್ ಚಟ ಕೇವಲ ವಿವಾದಕ್ಕೆ ಮಾತ್ರ ಕಾರಣವಾಗೋದಿಲ್ಲ ಪ್ರಾಣ ಹಾನಿಗೂ ಕಾರಣವಾಗುತ್ತದೆ. ಗಂಡ ಕುಡಿದು ಬಂದ ಎಂಬ ಕಾರಣಕ್ಕೆ ಪತ್ನಿ ಆತನ ಹತ್ಯೆ ಮಾಡಿದ್ದಿದೆ. ಕೋಪದಲ್ಲಿ ಗಂಡ, ಪತ್ನಿಯನ್ನು ಹತ್ಯೆ ಮಾಡಿದ ಘಟನೆಯೂ ಸಾಕಷ್ಟಿದೆ. ಕುಡಿದು ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿದ ವಿದ್ಯಾವಂತರೇ ಕುಡಿದು ಡ್ರೈವ್ (Drive) ಮಾಡುತ್ತಾರೆ. ಇಂತಹ ವರ್ತನೆಗಳಿಂದಲೇ ಅದೆಷ್ಟು ಅಮಾಯಕರ ಪ್ರಾಣಕ್ಕೆ ಕುತ್ತು ಬಂದಿದೆ.

ಕುಡಿದ ನಂತರ ಸಿಟ್ಟು ಏಕೆ ಬರುತ್ತೆ?  : ಮಿತಿಮೀರಿದ ಕುಡಿತದಿಂದ ವ್ಯಕ್ತಿಯ ಅರಿವಿನ ಮೇಲೆ ಪ್ರಭಾವ ಬೀರುತ್ತೆ. ತನ್ನ ಹಿಡಿತವನ್ನು ತಾನು ಸಾಧಿಸಿಕೊಳ್ಳಲಾಗದ ವ್ಯಕ್ತಿಯ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ. ಆಗ ವ್ಯಕ್ತಿಯಲ್ಲಿ ಸಿಟ್ಟು, ಹಿಂಸೆಯ ಮನೋಭಾವ ಹುಟ್ಟುತ್ತದೆ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!