ಮಗ ಕುಡಿತಿದ್ದಾನೆಂದರೆ ಮುಚ್ಚಿಡಬೇಡಿ, ಸೂಕ್ತ ಚಿಕಿತ್ಸೆ ಕೊಡಿಸಿ...
ಕುಡಿತ ಸಮಾಜಕ್ಕೆ ಅಂಟಿದ ಕಳಂಕ. ಕುಡಿತಕ್ಕೆ ದಾಸನಾಗುವ ವ್ಯಕ್ತಿ ವೈಯಕ್ತಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕುಸಿಯುತ್ತಾ ಹೋಗುತ್ತಾನೆ. ಕ್ರಮೇಣ ದೈಹಿಕ ಹಾಗೂ ಮಾನಸಿಕ ಸ್ಥಿತಿಯೂ ವಿಷಮಗೊಳ್ಳುತ್ತದೆ. ನಂತರ ಅಪರಾಧ ಕೃತ್ಯಗಳನ್ನೆಸಗಲೂ ಅವನು ಹಿಂದೇಟು ಹಾಕುವುದಿಲ್ಲ. ಇಂಥ ಪರಿಸ್ಥಿತಿಗೆ ತಲುಪುವ ಮುನ್ನವೇ ವ್ಯಸನಿಗೆ ಅಗತ್ಯ ಚಿಕಿತ್ಸೆ ಕೊಡಿಸಿದರೆ ವ್ಯಕ್ತಿಯ ಹಿತದೃಷ್ಟಿಯಿಂದ ಹಾಗೂ ಸಮಾಜಕ್ಕೆ ಒಳ್ಳೆಯದು. ಕುಡಿತವೊಂದು ರೋಗ. ಇದಕ್ಕೆ ಚಿಕಿತ್ಸೆ ಕೊಡಿಸಿ, ಕುಡಿತ ಮುಕ್ತ ಸಮಾಜ ಸೃಷ್ಟಿಸಬಹುದು.
ಮೋಜಿಗೆಂದು ಆರಂಭಿಸುವ ಕುಡಿತಕ್ಕೆ ಮನುಷ್ಯ ಕ್ರಮೇಣ ದಾಸನಾಗುತ್ತಾನೆ.
ಸ್ವಲ್ಪ ಸ್ವಲ್ಪ ಕುಡಿಯುವ ವ್ಯಕ್ತಿ ಕ್ರಮೇಣ ಎಷ್ಟೂ ಕುಡಿದರೂ ಸಾಲದೆಂಬ ಮಟ್ಟ ತಲುಪುತ್ತಾನೆ.
ಅಡಿಕ್ಷನ್ ಒಂದು ರೋಗ. ಅದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬೇಕು.
ವೈಜ್ಞಾನಿಕವಾಗಿ ಚಿಕಿತ್ಸೆ ನೀಡುವ ಮಾನಸಿಕ ತಜ್ಞರನ್ನು ತಕ್ಷಣವೇ ಭೇಟಿಯಾದರೊಳಿತು.
ನಿಧಾನವಾಗಿ ಹಣ ಸಿಗದಿದ್ದಾಗ ಕೊಲೆ, ಸುಲಿಗೆಯಂತ ಅಪರಾಧ ಕೃತ್ಯಗಳನ್ನು ಎಸಗಲೂ ಹಿಂಜರಿಯುವುದಿಲ್ಲ.
ಪ್ರತಿಷ್ಠೆಗೆ ಅಂಜಿ ಕುಡಿತ ಎಂಬ ರೋಗವನ್ನು ಸಮಾಜದಿಂದ ಮುಚ್ಚಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ.
ಸ್ವಲ್ಪ ಸ್ವಲ್ಪ ಕುಡಿಯುವ ವ್ಯಕ್ತಿ ಕ್ರಮೇಣ ಎಷ್ಟೂ ಕುಡಿದರೂ ಸಾಲದೆಂಬ ಮಟ್ಟ ತಲುಪುತ್ತಾನೆ.
ಸಮಾಜದಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳಿಗೆ ಈ ಕುಡಿತವೆಂಬ ದುಶ್ಚಟವೇ ಕಾರಣ.
ವ್ಯಸನಿಯ ಮನವೊಲಿಸಿ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ, ಅನುಕೂಲ.
ವ್ಯಸನಿಯ ಮನ ಪರಿವರ್ತಿಸಿ, ಅಗತ್ಯ ಔಷಧಿಗಳನ್ನು ನೀಡುವ ಮೂಲಕ ಕುಡಿಯುವ ಚಟದಿಂದ ದೂರವಾಗಲು ತಜ್ಞರು ಯತ್ನಿಸುತ್ತಾರೆ.