ಸೆಕ್ಸ್ ಮಾಡಿದ್ರೆ ಹೆಣ್ಮಕ್ಕಳಿಗೂ ಗಂಡಸರಂಥಾ ಫೀಲ್ ಸಿಗುತ್ತಾ? ಈಗ ನನಗಾಗಿರೋದು ದೊಡ್ಡ ಸಮಸ್ಯೆಯಾ? ಇದಕ್ಕೆ ಔಷಧ ಏನಾದ್ರೂ ಸಿಗುತ್ತಾ? ಮತ್ತೊಂದು ವಿಷಯ. ಸೆಕ್ಸ್ ಬಗ್ಗೆ ನನಗೆ ಆಸಕ್ತಿ ಇಲ್ಲದಿದ್ದರೆ ನನಗೆ ಮಕ್ಕಳಾಗುವ ಸಾಧ್ಯತೆ ಇಲ್ಲವಾ?
ಪ್ರಶ್ನೆ : ನನ್ನ ವಯಸ್ಸು ಇಪ್ಪತ್ತೆಂಟು ವರ್ಷ. ಮದುವೆಯಾಗಿ ನಾಲ್ಕು ತಿಂಗಳಾಗಿದೆ. ನಮ್ಮದು ಅರೇಂಜ್ ಮ್ಯಾರೇಜ್. ಮದುವೆಯಾದ ಹೊಸತರಲ್ಲಿ ರಾತ್ರಿ ಆಯ್ತು ಅಂದರೆ ಜೀವ ಬಾಯಿಗೆ ಬರ್ತಿತ್ತು. ಆ ಭಾಗದಲ್ಲಿ ಬಹಳ ನೋವಾಗ್ತಾ ಇತ್ತು. ಈ ಬಗ್ಗೆ ಗೆಳತಿಯರಲ್ಲಿ ಹೇಳಿದರೆ ಅವರು ಅದೆಲ್ಲ ಕಾಮನ್ ಅಂದರು. ನಮ್ಮೆಜಮಾನರ ಹತ್ರ ಹೇಳಿದ್ರೆ ಅವರು ಏನೂ ಹೇಳಲ್ಲ. ನಿಂಗಿಷ್ಟ ಇಲ್ಲ ಅಂದರೆ ಬೇಡ ಬಿಡು ಅಂತಾರೆ. ಆದರೆ ಅವರಿಗೆ ಬೇಜಾರಾಗೋದು ನನಗೆ ಇಷ್ಟ ಇಲ್ಲ. ಹಾಗಾಗಿ ನೋವು ಸಹಿಸಿಕೊಳ್ತಾ ಇದ್ದೆ. ಈಗ ನೋವು ಆಗ್ತಾ ಇಲ್ಲ. ಆದರೆ ಸೆಕ್ಸ್ ಅಂದರೆ ಅಸಹ್ಯ ಅನಿಸುತ್ತೆ. ಬೆಳಗ್ಗೆದ್ದ ಕೂಡಲೇ ಸ್ನಾನ ಮಾಡಿ ಬಿಡುತ್ತೇನೆ. ನನ್ನ ಪ್ರಶ್ನೆ ಸೆಕ್ಸ್ ಮಾಡಿದ್ರೆ ಹೆಣ್ಮಕ್ಕಳಿಗೂ ಗಂಡಸರಂಥಾ ಫೀಲ್ ಸಿಗುತ್ತಾ? ಈಗ ನನಗಾಗಿರೋದು ದೊಡ್ಡ ಸಮಸ್ಯೆಯಾ? ಇದಕ್ಕೆ ಔಷಧ ಏನಾದ್ರೂ ಸಿಗುತ್ತಾ? ಮತ್ತೊಂದು ವಿಷಯ. ಸೆಕ್ಸ್ ಬಗ್ಗೆ ನನಗೆ ಆಸಕ್ತಿ ಇಲ್ಲದಿದ್ದರೆ ನನಗೆ ಮಕ್ಕಳಾಗುವ ಸಾಧ್ಯತೆ ಇಲ್ಲವಾ?
ಉತ್ತರ : ನಿಮ್ಮ ಪ್ರಶ್ನೆ ಬಹಳ ಮುಗ್ಧವಾಗಿದೆ. ನಮ್ಮಲ್ಲಿ ಹೆಚ್ಚಿನ ಹೆಣ್ಮಕ್ಕಳಿಗೂ ಸೆಕ್ಸ್ ಬಗ್ಗೆ ಅಸಹ್ಯ ಫೀಲೇ ಇದೆ. ಇದಕ್ಕೆ ಅವರು ಬೆಳೆದುಬಂದ ಪರಿಸರ ಕಾರಣ ಆಗಿರಬಹುದು. ಸೆಕ್ಸ್ ಅಂದರೆ ಅಸಹ್ಯ ಅನ್ನುವ ಭಾವನೆಯೇ ಎಷ್ಟೋ ಆ ಬಗ್ಗೆ ಆಸಕ್ತಿ ಮೊಳೆಯದಂತೆ ತಡೆಯುತ್ತದೆ. ನಿಮ್ಮ ವಿಷಯಕ್ಕೆ ಬಂದರೆ ನಿಮಗೆ ಮದುವೆಯಾದ ಹೊಸತರಲ್ಲಿ ಬಹಳ ನೋವಿತ್ತು. ನಿಮ್ಮ ಗೆಳತಿಯರು ಹೇಳಿದಂತೆ ಹೆಚ್ಚಿನ ಹೆಣ್ಮಕ್ಕಳು ಆ ನೋವು ಅನುಭವಿಸುತ್ತಾರೆ. ಆದರೆ ಆ ಭಾಗಕ್ಕೆ ಹಚ್ಚಿಕೊಳ್ಳುವ ಜೆಲ್ ಗಳು ಸಿಗುತ್ತವೆ. ಅದನ್ನು ಹಚ್ಚಿದರೆ ನೋವಿರುವುದಿಲ್ಲ. ಆದರೆ ನಿಮಗೂ, ನಿಮ್ಮ ಪತಿ ಅವರಿಗೂ ಈ ಬಗ್ಗೆ ತಿಳುವಳಿಕೆ ಇರಲಿಲ್ಲವೇನೋ. ಇರಲಿ, ಈಗ ನೋವಿಲ್ಲ, ಅಸಹ್ಯ ಅನ್ನುವ ಭಾವನೆ ಇದೆ. ಈ ಭಾವನೆಗೆ ನೀವು ಬೆಳೆದುಬಂದ ಪರಿಸರ ಕಾರಣ ಇರಬಹುದು, ಶುರುವಿನಲ್ಲಿ ಆದ ನೋವು ನಿಮಗೆ ಲೈಂಗಿಕತೆ ಬಗ್ಗೆ ಭಯ ಮೂಡಿಸಿರಬಹುದು. ಆ ಭಯದಿಂದ ಸೆಕ್ಸ್ ಬಗ್ಗೆ ಜಿಗುಪ್ಸೆ ಮೂಡಿರಬಹುದು. ಹೆಚ್ಚಿನ ಸಲ ಹೆಣ್ಣುಮಕ್ಕಳಿಗೆ ಲೈಂಗಿಕತೆಯಲ್ಲಿ ಮುಕ್ತತೆ, ಸ್ವಾತಂತ್ರ್ಯ ಸಿಗದೇ ಇರುವುದೂ ನಿಮ್ಮಂಥವರಲ್ಲಿ ಈ ಥರದ ಭಾವನೆ ಹುಟ್ಟಲು ಕಾರಣವಾಗುತ್ತದೆ. ಮೊದಲು ಸೆಕ್ಸ್ ಅನ್ನೋದು ಅಸಹ್ಯ ಅನ್ನುವ ಭಾವನೆ ಮನಸ್ಸಿಂದ ತೆಗೆದುಹಾಕಿ. ಗಂಡನ ಜೊತೆಗೆ ಹೆಚ್ಚು ಆಪ್ತವಾಗಿರಿ. ಪ್ರೀತಿ ಹೆಚ್ಚಾದಂತೆ ಕಾಮ ಸಹಜವಾಗಿ ಬರುತ್ತದೆ. ಹಾಗಿದ್ದೂ ಪ್ರಯೋಜನವಾಗಲಿಲ್ಲ ಅಂದರೆ ಗೈನಕಾಲಜಿಸ್ಟ್ ನ ಭೇಟಿ ಮಾಡಿ, ಹೆಚ್ಚಿನ ಪ್ರಕರಣಗಳಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಮಕ್ಕಳಾಗುತ್ತವೆ.
ಪ್ರಶ್ನೆ : ನನಗೆ ಮೂವತ್ತೈದು ವರ್ಷ. ಪತ್ನಿಗೆ ಮೂವತ್ತು ವರ್ಷ ವಯಸ್ಸು. ಮದುವೆಯಾಗಿ ಐದಾರು ವರ್ಷ ಕಳೆದಿದೆ. ಒಬ್ಬ ಮಗನಿದ್ದಾನೆ. ಮಗ ಹುಟ್ಟಿದ ಮೇಲೆ ಅವಳು ದಪ್ಪಗಾಗಿದ್ದಾಳೆ. ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಬಂದಿದೆ. ಕೆಳಹೊಟ್ಟೆ ಸ್ವಲ್ಪ ದಪ್ಪಗಿದೆ. ಹಾಗಂತ ವಿಪರೀತ ದಪ್ಪ ಏನಲ್ಲ. ಆದರೆ ಆಕೆಗೆ ತನ್ನ ದೇಹದ ಬಗ್ಗೆ ಜಿಗುಪ್ಸೆ. ನನ್ನೆದುರು ಬೆತ್ತಲಾಗಲು ಹಿಂಜರಿಯುತ್ತಾಳೆ. ಸೆಕ್ಸ್ ಮಾಡುವಾಗಲೂ ಗಮನ ಎಲ್ಲೆಲ್ಲೋ ಇರುತ್ತದೆ. ನಾನು ಬಹಳಷ್ಟು ಸಲ ಹೇಳಿದ್ದಾನೆ. ನಿನ್ನ ದೇಹದ ಬಗ್ಗೆ, ನಿನ್ನ ಮನಸ್ಸಿನ ಬಗ್ಗೆ ನನಗೆ ಬಹಳ ಪ್ರೀತಿ ಇದೆ ಅಂತ. ಆದರೆ ಅವಳು ಅದನ್ನೆಲ್ಲ ಮುಖಸ್ತುತಿ ಅಂತ ಭಾವಿಸುತ್ತಾಳೆ. ಅವಳು ಹಿಂದಿನಂತಾಗಲು ಏನು ಮಾಡಬೇಕು?
#Feelfree: ಅವಳು ಸೆಕ್ಸ್‌ನಲ್ಲಿ ಅನುಭವಿಯಂತೆ ಕಾಣ್ತಾಳೆ, ನಂಗೆ ಮೋಸ ಆಗಬಹುದಾ?
ಉತ್ತರ : ನಿಮ್ಮ ಸಕಾರಾತ್ಮಕ ಭಾವನೆಗೆ ನಮಸ್ಕಾರ. ನಿಮ್ಮ ಮಡದಿಯಲ್ಲಿ ದೇಹದ ಬಗ್ಗೆ ಬಹಳ ಕೀಳರಿಮೆ ಇದೆ ಅನಿಸುತ್ತದೆ. ಆಕೆಯ ಬಗ್ಗೆ ನಿಮ್ಮ ಕಾಳಜಿ ಹೀಗೆಯೇ ಮುಂದುವರಿಯಲಿ. ಆಪ್ತ ಸಲಹೆಗಾರರ ಬಳಿ ಆಕೆಯನ್ನು ಕರೆದೊಯ್ದು ಕೌನ್ಸಿಲಿಂಗ್ ಮಾಡಿಸಿ, ಸಾಧ್ಯವಾದಷ್ಟು ನೀವೇ ಸೆಕ್ಸ್ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಮನಸ್ಸಿಗೂ ಸಂಬಂಧಿಸಿದ್ದು. ಮಗುವಾದ ಮೇಲಿನ ಹೆಣ್ಣಿನ ದೇಹಕ್ಕೆ ಮತ್ತೊಂದು ಬಗೆಯ ಚೆಲುವು ಬರುತ್ತದೆ ಅನ್ನುವುದನ್ನು ಮನದಟ್ಟು ಮಾಡಲು ಪ್ರಯತ್ನಿಸಿ