ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರು ಹರಸಾಹಸ ಮಾಡ್ತಾರೆ. ಅಲ್ಲಿರುವ ದಿ ಬೆಸ್ಟ್ ಸ್ಕೂಲಿಗೆ ಲಕ್ಷಾಂತರ ರೂಪಾಯಿ ನೀಡಿ ಕಳಿಸ್ತಾರೆ. ಮಗು ಓದಿನಲ್ಲಿ ಚುರುಕಾಗಿರಬೇಕು ಅಂತಾ ಹುಟ್ಟುಟ್ತಲೇ ಅ, ಆ ಶುರು ಮಾಡ್ತಾರೆ. ಆದ್ರೆ ಮಗುವಿಗೆ ಬೇಕಾಗಿದ್ದು ಅದಲ್ಲ ಸ್ವಾಮಿ..
ಗರ್ಭಧರಿಸಿದಾಗ್ಲೇ ಸ್ಕೂಲ್ ಅಡ್ಮಿಷನ್ ಗೆ ಅಪ್ಲಿಕೇಷನ್ ತರುವ ಕಾಲ ಇದು. ಈಗಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಚಿಕ್ಕ ಮಕ್ಕಳು ತುಂಬಾ ಚೂಟಿಯಾಗಿರ್ತಾರೆ. ಪಾಲಕರು ಹೇಳಿದ್ದನ್ನು ಕೇಲಿ, ಸುತ್ತಮುತ್ತಲಿನ ಪರಿಸರ ನೋಡಿ ಅವರು ಬೇಗ ವಿಷ್ಯವನ್ನು ಕಲಿಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ನೀವು ಪುಟಾಣಿ ಮಕ್ಕಳ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ನಮ್ಮ ಮಕ್ಕಳು ಹೀಗೆ ಆಗ್ಬೇಕು ಅನ್ನೋದು ಎಲ್ಲ ಪಾಲಕರು ಕನಸು. ಹಾಗಾಗಿಯೇ ಮಕ್ಕಳು ಹುಟ್ಟುತ್ತಲೇ ಅವರಿಗೆ ಅಗತ್ಯವಿರುವ ಕಲಿಕೆ ಶುರು ಮಾಡ್ತಾರೆ. ಇನ್ನೂ ಸರಿಯಾಗಿ ಮಾತನಾಡಲು ಬರದ, ನಿಂತಲ್ಲೇ ಸುಸ್ಸು ಮಾಡಿಕೊಳ್ಳುವ ಮಕ್ಕಳಿಗೆ ಪಾಲಕರು ಎಬಿಸಿಡಿ, ಒಂದು ಎರಡು ಹೇಳಿಕೊಡಲು ಶುರು ಮಾಡ್ತಾರೆ.
ಇರುವ ಒಂದೇ ಒಂದು ಮಗು (Child) ಎಲ್ಲ ಕ್ಷೇತ್ರದಲ್ಲೂ ಇರ್ಬೇಕು ಅಂದ್ರೆ ಹೇಗೆ ಸಾಧ್ಯ ಅನ್ನೋದು ಒಂದು ಪ್ರಶ್ನೆಯಾದ್ರೆ ಇನ್ನೊಂದು ಮುಖ್ಯ ಸವಾಲು, ಮಕ್ಕಳಿಗೆ ಓದಿಗಿಂತ ಅಗತ್ಯವಾಗಿ ಕಲಿಯೋದು ಇನ್ನೂ ಅನೇಕ ವಿಷ್ಯಗಳಿವೆ ಅನ್ನೋದು.
ಮಕ್ಕಳು ಸ್ವಲ್ಪ ದೊಡ್ಡವರಾಗ್ತಿದ್ದಂತೆ ಅವರನ್ನು ಪ್ಲೇ ಸ್ಕೂಲ್ ಗೆ ಕಳುಹಿಸಲು ಪಾಲಕರು ತಯಾರಿ ನಡೆಸ್ತಾರೆ. ಶಾಲೆಗೆ ಹೋಗುವ ಮೊದಲು ಮಕ್ಕಳಿಗೆ ಸ್ವಲ್ಪ ಜ್ಞಾನ (Knowledge) ಬಂದಿರಲಿ ಎನ್ನುವ ಕಾರಣಕ್ಕೆ ಅಕ್ಷರ ಕಲಿಸ್ತಾರೆ. ಶಾಲೆಗೆ ಹೋಗಲು ಏನು ಅಗತ್ಯವಿದೆಯೋ ಅದನ್ನು ಬಿಟ್ಟು ಪಾಲಕರು ಪಾಠ, ಲೆಕ್ಕ ಕಲಿಸಲು ಮುಂದಾಗೋದು ಸೂಕ್ತವಲ್ಲ. ಮಗು ಅತ್ತ ಕೂಡಲೇ ಮಗುವಿಗೆ ಹಸಿವಾಗಿದೆ ಎನ್ನುವ ಕಾರಣಕ್ಕೆ ಮೊಲೆಯನ್ನು ಬಾಯಿಗೆ ಇಡಬೇಡಿ. ಮಕ್ಕಳಿಗೆ ಸ್ವಾತಂತ್ರ್ಯ (Freedom) ನೀಡಿ, ಮಕ್ಕಳು ಬೇರೆ ಕಾರಣಕ್ಕೂ ಅತ್ತಿರಬಹುದು. ಯಾಕೆ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಓಶೋ ಹೇಳಿದ್ದಾರೆ. ಅದರಂತೆ ಮಕ್ಕಳು ಶಾಲೆಗೆ ಹೋಗ್ತಾರೆ ಎಂದ ತಕ್ಷಣ ಓದು ಮಾತ್ರವಲ್ಲ ಮತ್ತೇನು ಬೇಕು ಎಂಬುದನ್ನು ತಿಳಿಯಬೇಕು.
50ನೇ ವಿವಾಹ ವಾರ್ಷಿಕೋತ್ಸವ: 80 ಎಕರೆಯಲ್ಲಿ ಸೂರ್ಯಕಾಂತಿ ಹೂ ಬೆಳೆದು ಪತ್ನಿಗೆ ಸರ್‌ಫ್ರೈಸ್ ನೀಡಿದ ರೈತ
ಮಗು ಶಾಲೆಗೆ ಹೋಗಲು ಸಿದ್ಧವಾಗ್ತಿದೆ ಅಂದ್ರೆ ಕೆಲ ವಿಷ್ಯಗಳನ್ನು ಮಗುವಿಗೆ ಕಲಿಸಿ : ಶಾಲೆಗೆ ಹೋದ್ಮೇಲೆ ಮಕ್ಕಳು ಅಕ್ಷರ, ಅಂಕಿ, ಭಾಷೆಯನ್ನು ಕಲಿತೇ ಕಲಿಯುತ್ತಾರೆ. ಹಾಗಾಗಿ ನೀವು ಅದಕ್ಕೆ ಒತ್ತು ನೀಡುವ ಬದಲು ಮಕ್ಕಳಿಗೆ ಬಾಯಾರಿಕೆಯಾದಾಗ ಏನು ಮಾಡ್ಬೇಕು, ಹಸಿವಾಗಿದೆ ಎಂಬುದನ್ನು ಹೇಗೆ ಹೇಳ್ಬೇಕು, ಅನಾರೋಗ್ಯ, ನೋವು ಕಾಡುತ್ತಿದ್ದರೆ ಅದನ್ನು ಶಿಕ್ಷಕರಿಗೆ ಹೇಗೆ ತಿಳಿಸಬೇಕು, ಮೂತ್ರ ವಿಸರ್ಜನೆ ಮಾಡೋದು ಎಲ್ಲಿ, ಶಿಕ್ಷಕರಿಗೆ ಹೇಗೆ ಹೇಳ್ಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕಾಗುತ್ತದೆ. ಆಹಾರ ಸೇವನೆ ಮೊದಲು ಹಾಗೂ ಆಹಾರ ಸೇವನೆ ನಂತ್ರ ಕೈತೊಳೆಯಬೇಕು ಎಂಬುದನ್ನು ಕೂಡ ನೀವು ಮಕ್ಕಳಿಗೆ ತಿಳಿಸಬೇಕು. ಮಾತುಬರದ ಮಕ್ಕಳಿಗೆ ಸನ್ಹೆ ಮೂಲಕ ಇದನ್ನು ಹೇಗೆ ಹೇಳ್ತಾರೆ ಎಂಬುದನ್ನು ನೀವು ಕಲಿಸಬೇಕಾಗುತ್ತದೆ.
ಫ್ರೀ ಸ್ಕೂಲ್ (Pre School)ಗೆ ಹೋಗುವ ಮಕ್ಕಳಿಗೆ ನೀವು ಕುಳಿತುಕೊಳ್ಳಿ, ನಿಲ್ಲು,ಬನ್ನಿ,ಹೋಗು,ಓಡು,ಮಾಡು,ತೆಗೆದುಕೊಳ್ಳಿ,ಕೊಡು,ತೆರೆಯಿರಿ,ಮುಚ್ಚಿ,ಹೌದು, ಸರಿ ಎಂಬುದರ ಅರ್ಥ ಹಾಗೂ ಹೇಳುವುದನ್ನು ಕಲಿಸಬೇಕು.
ಮಕ್ಕಳು ಅವರ ತಿಂಡಿ ಬಾಕ್ಸ್ ತೆಗೆದು ಆಹಾರ ಸೇವನೆ ಮಾಡಿ ಮತ್ತೆ ಅದನ್ನು ಬ್ಯಾಗ್ ಗೆ ಹಾಕಿಕೊಳ್ಳುವುದನ್ನು ಪಾಲಕರು ಕಲಿಸಬೇಕಾಗುತ್ತದೆ. ಹಾಗೆಯೇ ವಾಟರ್ ಬಾಟಲಿಯಿಂದ ನೀರು ಕುಡಿಯೋದು ಹೇಗೆ ಎಂಬುದನ್ನು ಕೂಡ ಕಲಿಸಬೇಕು.
ದುಡಿಯೋ ಪತ್ನಿ ಅಮ್ಮನಂತೆ ಅಡುಗೆ ಮಾಡ್ಬೇಕು ಅನ್ನೋದು ನ್ಯಾಯವಾ? ಸುಧಾಮೂರ್ತಿ ಹೇಳ್ತೋರೋದ ಕೇಳಿ
ಶಾಲೆಗೆ ಹೋಗುವ ಮಕ್ಕಳಿಗೆ ಪಾಲಕರು ಸಾಕಷ್ಟು ವಿಷ್ಯವನ್ನು ತಿಳಿಸಬೇಕು. ಮನೆಯಲ್ಲಿ ಗಲಾಟೆ ಮಾಡುವ ಮಕ್ಕಳಿಗೆ ಸಾರ್ವಜನಿಕ ಪ್ರದೇಶದಲ್ಲಿ ಹೇಗಿರಬೇಕು, ಸ್ನೇಹಿತರ ಜೊತೆ ಹೇಗೆ ವರ್ತಿಸಬೇಕು, ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬೇಕು, ಶಿಕ್ಷಕರು ಹೇಳಿದ ನಿಯಮಗಳನ್ನು ಹೇಗೆ ಪಾಲನೆ ಮಾಡಬೇಕು ಎಂಬೆಲ್ಲವನ್ನು ತಿಳಿಸುವುದು ಮುಖ್ಯವಾಗುತ್ತದೆ.