ನಿಮ್ಮದು ಹೆಲಿಕಾಪ್ಟರ್ ಪೇರೆಂಟಿಂಗಾ? ಚೆಕ್ ಮಾಡಿ!

By Suvarna NewsFirst Published Aug 24, 2022, 11:46 AM IST
Highlights

ಹೆಲಿಕಾಪ್ಟರ್ ಪೇರೆಂಟಿಂಗ್ ಅನ್ನೋ ಪದ ವಿಚಿತ್ರವಾಗಿ ಸೌಂಡ್ ಮಾಡುತ್ತಲ್ವಾ, ಈ ಪೇರೆಂಟಿಗೂ ಮಕ್ಕಳ ಮೇಲೆ ವಿಚಿತ್ರ ಪರಿಣಾಮವನ್ನೇ ಬೀರುತ್ತೆ. ಅಷ್ಟಕ್ಕೂ ಹೆಲಿಕಾಪ್ಟರ್ ಪೇರೆಂಟಿಂಗ್ ಅಂದರೇನು, ನೀವೂ ಈ ಥರ ಪೇರೆಂಟಿಂಗ್ ಮಾಡ್ತೀರಾ, ಚೆಕ್‌ ಮಾಡಿ.

ಮಕ್ಕಳ ಬಗ್ಗೆ ಹೆತ್ತವರಿಗೆ ಅತೀವ ಮಮತೆ, ಪ್ರೀತಿ, ಕಾಳಜಿ. ಆದರೆ ಪೋಷಕರ ಕೆಲವು ವರ್ತನೆ, ಮನಸ್ಥಿತಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಾರದಲ್ವಾ? ಮಕ್ಕಳು ಚೆನ್ನಾಗಿರಬೇಕೆಂದು ಮಾಡುವ ನಮ್ಮ ಕೆಲವು ಕೆಲಸಗಳು ಅವರ ಭವಿಷ್ಯವನ್ನೇ ಮಸುಕಾಗಿಸಬಾರದಲ್ವಾ? ಮಗು ಸಣ್ಣದಿರುವಾಗಲೇ ಅವರ ಬಗ್ಗೆ ಕನಸು ಕಾಣಲು ಪೋಷಕರು ಆರಂಭಿಸುತ್ತಾರೆ. ಅನೇಕ ವಿಚಾರಗಳಲ್ಲಿ ಪೋಷಕರು ಮೂಗು ತುರಿಸುವುದುಂಟು. ಈ ರೀತಿ ಮಾಡುವುದು ತಪ್ಪು ಇದು ನಿಮ್ಮ ಮಕ್ಕಳ ಭವಿಷ್ಯವನ್ನೇ ಹಾಳು ಮಾಡುತ್ತದೆ.

ಮಕ್ಕಳು ಯಾವುದೇ ಕೆಲಸವನ್ನು ಮಾಡಲು ಮುಂದಾದಾಗ ನೀವು ಅವರನ್ನು ತಡೆಯುತ್ತೀರಾ? ಎಲ್ಲಾ ಸಮಯದಲ್ಲೂ ಅವರನ್ನು ರಕ್ಷಿಸುತ್ತೀರಾ? ಅವರ ಸ್ವಂತ ನಡವಳಿಕೆ, ಕ್ರಿಯೆಗಳ ಮೇಲೆ ನೀವು ಮೂಗುತೂರಿಸುತ್ತೀರಾ? ಈಗಷ್ಟೇ ನಡೆಯಲು ಕಲಿಯುತ್ತಿರುವ ಮಗು ನಡೆಯಲು ಪ್ರಯತ್ನಿಸುವಾಗ ಬೀಳಬಹುದು. ಹಾಗೆಂದು ಅದು ನಡೆಯುವುದನ್ನೇ ತಡೆಯುವುದಕ್ಕಾಗೋದಿಲ್ವಲ್ಲಾ? ಈ ವಿಚಾರವೂ ಹಾಗೇ. ಮಗುವಿನ ಸೋಲು-ಗೆಲುವಿನ ಬಗ್ಗೆ, ಜೀವನದ ಬಗ್ಗೆ ಪೋಷಕರು ಮಧ್ಯ ಹೆಚ್ಚು ಮೂಗು ತೂರಿಸಿದರೆ ಅದು ಅವರ ಜೀವನಕ್ಕೆ ಮುಳ್ಳಾಗಬಹುದು. ಅಷ್ಟಕ್ಕೂ ಹೆಲಿಕಾಪ್ಟರ್ ಪೇರೆಂಟಿಂಗ್ ಎಂದರೇನು? ನೀವು ಕೂಡ ಹೆಲಿಕಾಪ್ಟರ್ ಪೇರೆಂಟಿಂಗ್ ಮಾಡುತ್ತಿದ್ದೀರಾ ಇಲ್ವಾ ಎಂದು ತಿಳಿಯುವುದು ಹೇಗೆ? ಇದಕ್ಕೆ ಇಲ್ಲಿದೆ ಕೆಲವೊಂದು ಟಿಪ್ಸ್.

ಇದನ್ನೂ ಓದಿ: ಅಬ್ಬಬ್ಬಾ..ಈಕೆಗೆ ಬರೋಬ್ಬರಿ 105 ಮಕ್ಕಳನ್ನು ಹೆರಬೇಕಂತೆ !

ಹೆಲಿಕಾಪ್ಟರ್ ಪೇರೆಂಟಿಂಗ್ ಎಂದರೇನು?

ನೀವು ಹೆಲಿಕಾಪ್ಟರ್ ನೋಡಿರಬಹುದು. ತಲೆ ಮೇಲೆ ತಿರುತ್ತಲೇ ಇರುತ್ತದೆ. ಅದೇ ಥರ ಹೆಲಿಕಾಪ್ಟರ್ ಪೇರೆಂಟಿಂಗ್. ಇಲ್ಲಿ ಪೋಷಕರು ಮಕ್ಕಳ ತಲೆ ಮೇಲೆ ಸದಾ ಕಣ್ಣಿಡುತ್ತಾ ಅವರೊಂದು ತಪ್ಪೂ ಮಾಡದಂತೆ ತಡೆಯುತ್ತಾರೆ. ಮಗುವಿನ ಬಗ್ಗೆ ವಿಪರೀತ ಕಾಳಜಿ ಮಾಡುತ್ತಾರೆ, ಅತೀ ಗಮನ ಹರಿಸುತ್ತಾರೆ. ಮಕ್ಕಳ ಜೀವನ, ಅವರ ಆಯ್ಕೆಗಳು, ನಿರ್ಧಾರಗಳು ಮತ್ತು ಅವರ ನಡವಳಿಕೆ ಮತ್ತು ಕ್ರಿಯೆಗಳ ಮೇಲೆ ಪೋಷಕರ ಹಿಡಿತವಿರುತ್ತದೆ. ತಮ್ಮ ಮಕ್ಕಳಿಗೆ ನೋವು ಆಗುವುದು, ಅವರು ಸೋಲುವುದು ಅಥವಾ ಅಥವಾ ಅವರು ತಪ್ಪು ಮಾಡುವುದನ್ನು ನೋಡಲು ಇಷ್ಟಪಡುವುದಿಲ್ಲ. ಹೀಗೆ ಮಕ್ಕಳ ಮೇಲೆ ಭಾರೀ ವಾತ್ಸಲ್ಯ ಹಾಗೂ ವ್ಯಾಮೋಹವೇ ಹೆಲಿಕಾಪ್ಟರ್ ಆಗಿದೆ. ಇದು ನಿಮ್ಮ ಆಸೆ, ಕನಸು ನುಚ್ಚು ನೂರು ಮಾಡುವುದಲ್ಲದೇ ಮಕ್ಕಳ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ಮೇಲೆ ಏನೇನೆಲ್ಲ ಸಮಸ್ಯೆ ಉಂಟಾಗುತ್ತದೆ.

- ಮಕ್ಕಳು ಸ್ವಾವಲಂಬಿ ಗುಣವನ್ನು ಮರೆಯಬಹುದು. ನಿಮ್ಮ ನಡೆಗಳು ನಿಮ್ಮ ಮಕ್ಕಳ ಜೀವನ ಹಾಳು ಮಾಡಬಹುದು. ಮಗು ಹೆತ್ತವರ ಮೇಲೆ ಅತಿಯಾಗಿ ಅವಲಂಬಿತವಾಗಬಹುದು, ವಿಶೇಷವಾಗಿ ಮೂಲಭೂತ ವಿಷಯಗಳಿಗಾಗಿ ಅವರು ಸ್ವತಂತ್ರ ಮತ್ತು ಸ್ವಾವಲಂಬಿಗಳಾಗಿದ್ದೇವೆ ಎನ್ನುವುದನ್ನು ಮರೆಯಬಹುದು.

- ಮಗು ವೈಫಲ್ಯವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಬಹುದು, ವೈಫಲ್ಯಕ್ಕೆ ಕಂಗಾಲಾಗಬಹುದು. ಎದುರಿಸಬೇಕಾದ ಕಷ್ಟಗಳನ್ನು ಎದುರಿಸಲು ಸಾಧ್ಯವಾಗದೆ ಇರಬಹುದು.

- ಪೋಷಕರ ಮಿತಿಮೀರಿದ ರಕ್ಷಣೆಯಿಂದ ಮಗು ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ಧೈರ್ಯದಿಂದ ಹೇಗೆ ನಿಲ್ಲುವುದು ಸಾಧವಾಗದೇ ಹೋಗಬಹುದು.

- ಮಕ್ಕಳು ಸಂಭಾವ್ಯ ಕೌಶಲ್ಯಗಳನ್ನು ಗುರುತಿಸುವುದನ್ನು ಮತ್ತು ತಮ್ಮನ್ನು ಅಭಿವೃದ್ಧಿಪಡಿಸುವುದರಲ್ಲಿ ವಿಫಲರಾಗುತ್ತಾರೆ. ಮಕ್ಕಳು ತಮ್ಮ ಕೆಲಸಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಫಲರಾಗುತ್ತಾರೆ.

ಇದನ್ನೂ ಓದಿ: ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಜೊಮ್ಯಾಟೋ ಬಾಯ್ ವಿಡಿಯೋ ವೈರಲ್

ಹೀಗೆ ಸಾಕಷ್ಟು ಸಮಸ್ಯೆಗಳಿವೆ. ಇವು ಪೋಷಕರ ಮೇಲೆಯೂ ದುಷ್ಪರಿಣಾಮ ಉಂಟು ಮಾಡಬಹುದು. ಅವರು ಸದಾ ಚಿಂತೆಯಲ್ಲಿ ಮುಳುಗಿ ಹೋಗಬಹುದು. ಆತಂಕ, ಡಿಪ್ರೆಶನ್ ಇತ್ಯಾದಿ ಸಮಸ್ಯೆಹೆಲೆಕಾಪ್ಟರ್ ಪೇರೆಂಟಿಂಗ್ ಮಾಡುವವರಿಗೆ ಬರಬಹುದು. ಮಗುವಿನ ಕುರಿತಾದ ನಿಮ್ಮ ವರ್ತನೆ ಕೆಲವೊಮ್ಮೆ ಇತರರಿಗೆ ನೋವು ಕೊಡಬಹುದು. ಶಾಲೆಯಲ್ಲಿ ಮಗುವಿನ ಸಹಪಾಠಿಗಳಿಗೆ, ಶಿಕ್ಷಕರಿಗೆ ತಲೆನೋವಾಗಬಹುದು.

ಹೀಗಾಗಿ ನಿಮ್ಮಲ್ಲಿ ಹೆಲಿಕಾಪ್ಟರ್ ಪೇರೆಂಟಿಂಗ್ ಗುಣಗಳಿದ್ದರೆ ಪ್ರಜ್ಞಾಪೂರ್ವಕವಾಗಿ ಅದರಿಂದ ಹೊರಬನ್ನಿ. ಮಗುವನ್ನು ಕಟ್ಟಿಹಾಕದೇ ಸ್ವತಂತ್ರವಾಗಿ ಬೆಳೆಯಲು ಬಿಡಿ.

click me!