Wedding Cardನಲ್ಲಿ ಪೋರ್ನ್ ವೆಬ್ ಸೈಟ್ ಲಿಂಕ್; ಅತಿಥಿಗಳು ಸುಸ್ತೋ ಸುಸ್ತು!

Published : Aug 23, 2022, 03:41 PM IST
Wedding Cardನಲ್ಲಿ ಪೋರ್ನ್ ವೆಬ್ ಸೈಟ್ ಲಿಂಕ್; ಅತಿಥಿಗಳು ಸುಸ್ತೋ ಸುಸ್ತು!

ಸಾರಾಂಶ

ಮದುವೆ ಅಂದ್ರೆ ಸಿಕ್ಕಾಪಟ್ಟೆ ಖುಷಿ, ಸಂಭ್ರಮ ಇರುವ ಹಾಗೆಯೇ ಕೆಲಸದ ಗಡಿಬಿಡಿ, ಒತ್ತಡವೂ ಇರುತ್ತದೆ. ಈ ಗೊಂದಲದಲ್ಲೇ ಹಲವಾರು ಬಾರಿ ಡೆಕೊರೇಷನ್‌, ಫುಡ್‌ನಲ್ಲಿ ಅವಾಂತರ ಸಹ ಆಗಿಬಿಡುತ್ತದೆ. ಆದ್ರೆ ಇಲ್ಲಿ ಮದ್ವೆ ಕೆಲಸದ ಟೆನ್ಶನ್‌ನಲ್ಲಿ ಆಗಿರೋ ಯಡವಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಷ್ಟಕ್ಕೂ ಆಗಿದ್ದೇನು ? ಇಲ್ಲಿದೆ ಮಾಹಿತಿ. 

ಮದುವೆ ಎಂಬುದು ಬದುಕಿನ ಮಹತ್ತರ ಘಟ್ಟ. ನೂರಾರು ಕನಸಿನೊಂದಿಗೆ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದುವೆ ಹೀಗೇ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯದ್ದು ಪ್ರಮುಖ ಸ್ಥಾನ. ಇತ್ತೀಚಿಗಂತೂ ಡಿಫರೆಂಟ್ ಶೈಲಿಯ ಮದುವೆ ಆಮಂತ್ರಣ ಪತ್ರಿಕೆಗಳು ಸಿದ್ಧಗೊಳ್ಳುತ್ತಿವೆ. ಗ್ರ್ಯಾಂಡ್ ವೆಡ್ಡಿಂಗ್‌ ಕಾರ್ಡ್‌ನಿಂದ ಹಿಡಿದು ಸಿಂಪಲ್ ವೆಡ್ಡಿಂಗ್ ಕಾರ್ಡ್‌ಗಳನ್ನು ತಯಾರಿಸಿ ಜನರ ಮನಸ್ಸು ಸೆಳೆಯಲು ಯತ್ನಿಸ್ತಾರೆ. ಬಾಕ್ಸ್ ಶೇಪ್‌, ಹೂವಿನ ಆಕಾರದಲ್ಲಿಯೂ ಆಮಂತ್ರಣ ಪತ್ರಿಕೆಗಳು ಬರುತ್ತವೆ. ಮಾತ್ರವಲ್ಲ ತಮ್ಮ ಉದ್ಯೋಗವನ್ನು ಆಧರಿಸಿ ವಿಭಿನ್ನ ಶೈಲಿಯಲ್ಲಿ ವೆಡ್ಡಿಂಗ್ ಕಾರ್ಡ್‌ನ್ನು ತಯಾರಿಸುವವರೂ ಇದ್ದಾರೆ. ಆದ್ರೆ ಸುಂದರವಾದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಯಡವಟ್ಟು ಆಗೋದು ಅಂದ್ರೆ ?

ವೆಡ್ಡಿಂಗ್ ಕಾರ್ಡ್‌ನಲ್ಲಿ ಪೋರ್ನ್ ವೆಬ್‌ಸೈಟ್ ಲಿಂಕ್‌
ಇಲ್ಲೊಬ್ಬಳು ಹುಡುಗಿ ಸುಂದರವಾದ ವೆಡ್ಡಿಂಗ್ ಕಾರ್ಡ್ ತಯಾರಿಸಬೇಕು ಅನ್ನೋ ಭರದಲ್ಲಿ ಯಡವಟ್ಟು ಮಾಡ್ಕೊಂಡಿದ್ದಾಳೆ. ಅದು ಸಣ್ಣ ಪುಟ್ಟ ತಪ್ಪು (Mistake) ಕೂಡಾ ಅಲ್ಲ. ಮಹಾ ಯಡವಟ್ಟು. ಯುವತಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತಪ್ಪಾಗಿ ಪೋರ್ನ್ ವೆಬ್‌ಸೈಟ್‌ ನ ಲಿಂಕ್ ಅಚ್ಚಾಗಿದೆ. ಇದನ್ನು ಕಂಡ ಅತಿಥಿಗಳು (Guests) ಶಾಕ್ ಆಗಿದ್ದಾರೆ. ಮಹಿಳೆಯೊಬ್ಬರು ಆಮಂತ್ರಣದಲ್ಲಿ ವೆಬ್‌ಸೈಟ್ ಹೆಸರನ್ನು ತಪ್ಪಾಗಿ ಮುದ್ರಿಸಿರುವುದನ್ನು ಗಮನಿಸಿದ್ದಾರೆ.

Viral Wedding Card: ಪರಿಸರಕ್ಕೆ ಹಾನಿಯಿಲ್ಲ, ಕೋವಿಡ್ ರೂಲ್ಸ್ ಫಾಲೋ ಮಾಡಬೇಕು, ಊಟದ ಮೆನುವಿದು

ಮೋಜಿಗಾಗಿ ಮಾಡಿದ ಕೆಲಸದಿಂದ ಯಡವಟ್ಟಾಯ್ತು !
ಮದುವೆಯ ಕಾರ್ಡ್ (Wedding card) ಮುದ್ರಣದಲ್ಲಿ ತಪ್ಪುಗಳಾಗುವುದು ಸಾಮಾನ್ಯ ಹೆಸರು, ವಿಳಾಸ, ಸಮಯ, ಮಾಹಿತಿ ಹೀಗೆ ಯಾವುದಾದರೊಂದು ವಿಚಾರದಲ್ಲಿ ತಿಳಿಯದೇ ತಪ್ಪಾಗಿಬಿಡುತ್ತದೆ. ಆದ್ರೆ ಈ ಮದುವೆಯ ಕಾರ್ಡ್‌ನಲ್ಲಾಗಿರೋದು ಅಂತಿಂಥಾ ತಪ್ಪಲ್ಲ. ಕುಟುಂಬದವರು, ಬಂಧುಬಳಗ, ನೆರೆಹೊರೆಯವರು, ಫ್ರೆಂಡ್ಸ್ ಎಲ್ಲರಿಗೂ ವಿತರಿಸಿರುವ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪೋರ್ನ್ ವೆಬ್‌ಸೈಟ್‌ ಲಿಂಕ್‌ ಅಚ್ಚಾಗಿದೆ. ಅತಿಥಿಗಳನ್ನು ಅಧಿಕೃತ ವಿವಾಹ ವೆಬ್‌ಸೈಟ್‌ಗೆ ಕರೆದೊಯ್ಯಲು ಲಿಂಕ್ ಒಂದನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿರುತ್ತಾರೆ. ಆದರೆ ಅದು ತಪ್ಪಾಗಿ ಪೋರ್ನ್ ವೆಬ್‌ಸೈಟ್‌ ನ ಲಿಂಕ್ ಆಗಿರುತ್ತದೆ. ಇದನ್ನು ಕಂಡ ಅತಿಥಿಗಳು ಸಹ ಶಾಕ್ ಆಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಧು, 'ಇಂದು ನನಗೆ ನನ್ನ ಮದುವೆಯ ಆಮಂತ್ರಣ ಮೇಲ್‌ನಲ್ಲಿ ಸಿಕ್ಕಿತು. ತುಂಬಾ ರೋಮಾಂಚನಕಾರಿಯಾದೆ. ನಾನು ಒಂದು ದೊಡ್ಡ ತಪ್ಪನ್ನು ಮಾಡಿದ್ದೇನೆ. ಇತರ ವಧುಗಳು ಅದೇ ತಪ್ಪನ್ನು ಮಾಡದಂತೆ ನಾನು ನಿಮ್ಮೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ, ಏಕೆಂದರೆ ಇದು ತುಂಬಾ ಸಾಮಾನ್ಯವಾಗಿದೆ ಎಂದು ನನಗೆ ಖಾತ್ರಿಯಿದೆ' ಎಂದು ಹೇಳಿದ್ದಾರೆ.

ವೆಡ್ಡಿಂಗ್ ಕಾರ್ಡ್ ವೈರಲ್: ಗಿಫ್ಟ್‌ ಕೊಡೋಕೆ ಪರದಾಡ್ಬೇಡಿ, ಪತ್ರಿಕೆಯಲ್ಲೇ QR Code!

ಟಿಕ್‌ಟಾಕ್‌ನಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೊಂಡ ಯುವತಿ
ಯುವತಿ ಮೋಜಿಗಾಗಿ ತನ್ನ ಮದುವೆಯ ಕಾರ್ಡ್ ಟೆಂಪ್ಲೇಟ್‌ನಲ್ಲಿ ಅಶ್ಲೀಲ ಸೈಟ್ URL ಅನ್ನು ಉಲ್ಲೇಖಿಸಿದ್ದಳು. ಆದ್ರೆ ಮುದ್ರಿಸುವ ಮೊದಲು ಅದನ್ನು ತೆಗೆದುಹಾಕಲು ಮರೆತಿದ್ದಾಳೆ. ಯುವತಿ ತನ್ನ ಮದುವೆಯ ಕಾರ್ಡ್ ಅನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಅಲ್ಲಿ ಅವಳು ತನ್ನ ಮದುವೆಯ ಮಾಹಿತಿಯ ವಿವರಗಳನ್ನು ತಿಳಿಯಲು ನೀಡಿರುವ ವೆಬ್‌ಸೈಟ್ ಲಿಂಕ್ ಪೋರ್ನ್‌ ಲಿಂಕ್ ಆಗಿದೆ ಎಂಬುದನ್ನು ತಿಳಿಸಿದ್ದಾಳೆ. ಅದೇನೆ ಇರ್ಲಿ ಸಂಭ್ರಮ-ಸಡಗರದ ಮದುವೆ ಸಮಾರಂಭದಲ್ಲಿ ಇಂಥಾ ಯಡವಟ್ಟು ಆಗಿರೋದು ವಿಪರ್ಯಾಸವೇ ಸರಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ