
ಪ್ರೀತಿಯಲ್ಲಿ ಬೀಳೋದು ಸುಲಭ. ಆದ್ರೆ ಇದೇ ಪ್ರೀತಿ ಮುಂದುವರೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಅಥವಾ ಇಬ್ಬರು ಒಟ್ಟಿಗೆ ವಾಸಿಸಲು ಶುರುವಾದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಕಾರಣ ಇಬ್ಬರ ನಡುವೆ ಹೆಚ್ಚಾಗುವ ಜವಾಬ್ದಾರಿ. ಒಟ್ಟಿಗೆ ವಾಸಿಸಲು ಶುರು ಮಾಡಿದಾಗ ಪರಸ್ಪರರ ಆಸಕ್ತಿ, ಸ್ವಭಾವ ತಿಳಿಯಲು ಶುರುವಾಗುತ್ತದೆ. ಪ್ರೀತಿಸುವಾಗಿದ್ದ ವ್ಯಕ್ತಿಯ ಸ್ವಭಾವ ಆಗ ಸಂಪೂರ್ಣ ಬದಲಾಗಬಹುದು. ಅಥವಾ ನಿಮ್ಮಿಷ್ಟದಂತೆ ವ್ಯಕ್ತಿ ಇಲ್ಲ ಎಂಬ ಕಾರಣಕ್ಕೆ ನಿಮ್ಮ ಮನಸ್ಸು ಮುರಿಯಬಹುದು. ಕೆಲ ಸಂದರ್ಭದಲ್ಲಿ ಅವಮಾನ ಎದುರಿಸುವ ಪರಿಸ್ಥಿತಿ ನಿಮಗೆ ಬರಬಹುದು. ಮೊದಲು ತೋರಿಸಿದ್ದ ಪ್ರೀತಿ ಸುಳ್ಳಾಗಿರಬಹುದು. ಹಾಗಾಗಿ ಪ್ರೀತಿಯನ್ನು ಮುಂದುವರೆಸುವ ಮೊದಲು ಕೆಲ ವಿಷ್ಯಗಳನ್ನು ತಿಳಿಬೇಕಾಗುತ್ತದೆ. ಬರೀ ಹುಡುಗಿ ಮಾತ್ರವಲ್ಲ ಹುಡುಗ ಕೂಡ ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಕೆಲವೊಂದು ಸಂಗತಿ ತಿಳಿದಿರಬೇಕು. ಆಕೆ ಕೆಲ ಅರ್ಹತೆ ಹೊಂದಿದ್ದಾಳಾ? ಇಲ್ಲವಾ ಎಂಬುದನ್ನು ಪರೀಕ್ಷಿಸಬೇಕು. ಮದುವೆಗೆ ಮುನ್ನ ಗರ್ಲ್ ಫ್ರೆಂಡ್ ನ ಯಾವ ಗುಣವನ್ನು ನೋಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮದುವೆ (Marriage) ಗೆ ಮುನ್ನ ಹುಡುಗ್ರಿಗೆ ನೆನಪಿರಲಿ ಈ ಸಂಗತಿ :
ಸಮಯ (Time) ನೀಡುವ ಹುಡುಗಿ : ಇತ್ತೀಚಿನ ದಿನಗಳಲ್ಲಿ ಹುಡುಗ – ಹುಡುಗಿ ಇಬ್ಬರೂ ದುಡಿಯುತ್ತಿದ್ದಾರೆ. ಇಬ್ಬರಿಗೂ ಕೆಲಸ (work) ದ ಒತ್ತಡ (stress) ವಿರುತ್ತದೆ. ಮಹಿಳೆಯರು ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲು ಸ್ವಭಾವ ಹೊಂದಿರುತ್ತಾರೆ. ಸಂಗಾತಿಗಿಂತ ಕೆಲಸ ಅವರಿಗೆ ಮುಖ್ಯವಾಗುತ್ತದೆ. ಉತ್ತಮ ಗೆಳತಿಯಾದವಳು ಕೆಲಸ ಮಾಡುತ್ತಿದ್ದರೂ ತನ್ನ ಬಾಯ್‌ಫ್ರೆಂಡ್‌ಗೆ ಸಾಕಷ್ಟು ಸಮಯವನ್ನು ನೀಡಬೇಕು. ನೀವು ಮಹಿಳೆ ಎಂಬ ಕಾರಣಕ್ಕಾಗಿ ಸಮಯ ನೀಡ್ಬೇಕು ಎಂದಲ್ಲ. ದಾಂಪತ್ಯದಲ್ಲಿ ಸಮಯ ಮೀಸಲಿಡುವುದು ಮುಖ್ಯವಾಗುತ್ತದೆ. ಆದ್ದರಿಂದ ಹುಡುಗಿಯೊಂದಿಗೆ ನಿಮ್ಮ ಸಂಬಂಧವನ್ನು ಪ್ರಾರಂಭಿಸುವ ಮೊದಲು ಅವಳು ನಿಮಗಾಗಿ ಎಷ್ಟು ಸಮಯವನ್ನು ನೀಡ್ತಾಳಾ ಎಂಬುದನ್ನು ಖಂಡಿತವಾಗಿ ತಿಳಿದುಕೊಳ್ಳಿ.
ಹುಡುಗಿ ಪ್ರತಿಕ್ರಿಯೆ : ಪ್ರೀತಿ, ಸಂಬಂಧದಲ್ಲಿ ಗೌರವ ಬಹಳ ಮುಖ್ಯ. ನಾವು ಗೌರವ ನೀಡಿದ್ರೆ ನಮಗೆ ಗೌರವ ಸಿಗುತ್ತದೆ. ಇದು ನೂರಕ್ಕೆ ನೂರು ಸತ್ಯ. ಆದ್ರೆ ಸಂಗಾತಿ ನಿಮಗೆ ಗೌರವ ನೀಡ್ತಾಳಾ ಎಂಬುದನ್ನು ಮೊದಲು ನೋಡಿ. ಕೆಲವೊಮ್ಮೆ ಪ್ರೀತಿಸುವ ಗೆಳತಿಯ ಮಾತಿನ ಧಾಟಿ ಸರಿಯಿರುವುದಿಲ್ಲ. ನಿಮ್ಮ ಯಾವುದೇ ಮಾತಿಗೆ ಮಹತ್ವ ನೀಡದೆ ಪ್ರತಿ ವಿಷ್ಯದಲ್ಲೂ ತನ್ನ ಮಾತೇ ಸರಿ ಎನ್ನುವ ಸ್ವಭಾವದ ಹುಡುಗಿ ಜೊತೆ ಬಾಳ್ವೆ ಕಷ್ಟವಾಗುತ್ತದೆ. ಪುರುಷರು ಕೂಡ ಗೌರವಕ್ಕೆ ಅರ್ಹರು ಎಂಬುದನ್ನು ಮಹಿಳೆ ಅರ್ಥಮಾಡಿಕೊಳ್ಳಬೇಕು. ಸಂಗಾತಿ ಗೌರವಿಸದ ಹುಡುಗಿ ಜೊತೆ ದೂರವಿರುವುದು ಒಳ್ಳೆಯದು.
REAL STORY : ಮಾಜಿ ಜೊತೆ ಸೆಕ್ಸ್ ವಿಷ್ಯ ಕೇಳಿ ನಿದ್ರೆ ಬರ್ತಿಲ್ಲ
ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವ ಸಂಗಾತಿ : ಕಷ್ಟದಲ್ಲಿ ಕೈಹಿಡಿಯುವ ಸಂಗಾತಿ ಮುಖ್ಯ. ಅನೇಕ ಬಾರಿ ಹಣ ನೋಡಿ ಹಿಂದೆ ಬರುವವರಿರುತ್ತಾರೆ. ಅಂಥವರು ಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಿಲ್ಲುವುದಿಲ್ಲ. ಸಂಗಾತಿಗೆ ಸಮಸ್ಯೆ ಕಾಡಿದಾಗ ಅವರ ಬೆನ್ನಿಗೆ ನಿಂತುಮ ಅವರಿಗೆ ಧೈರ್ಯ ಹೇಳುವ ಸಂಗಾತಿ ಬಹಳ ಮುಖ್ಯ. ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ನಿಮ್ಮ ಸಮಸ್ಯೆಗಳಲ್ಲಿ ಎಷ್ಟು ಆಸಕ್ತಿಯನ್ನು ತೋರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಮಸ್ಯೆ ನಿರ್ಲಕ್ಷ್ಯಿಸುವ ಸಂಗಾತಿ ಜೊತೆ ಮುಂದಿನ ಜೀವನ ನರಕವಾಗುತ್ತದೆ ಎಂಬುದು ನೆನಪಿರಲಿ.
ಪುರುಷರಿಗೆ ಯಂಗ್ ಹುಡುಗೀಯರೇ ಇಷ್ಟ ಆಗೋದು ಯಾಕೆ?
ಎಲ್ಲ ಸಮಯದಲ್ಲೂ ನಿಮ್ಮ ಮೇಲೆ ಕಣ್ಣು : ನಿಮ್ಮ ಸಂಗಾತಿ ನಿಮ್ಮ ಮೇಲೆ ಅಪರಿಮಿತ ಪ್ರೀತಿಯನ್ನು ಹೊಂದಿರುವುದು ಒಳ್ಳೆಯದು. ಆದರೆ ಅದು ಅತಿಯಾದ್ರೆ ಸಮಸ್ಯೆಯಾಗುತ್ತದೆ. ಅನೇಕ ಹುಡುಗಿಯರು ತಮ್ಮ ಸಂಗಾತಿಯನ್ನು ಅನುಮಾನಿಸುವ ಅಭ್ಯಾಸವನ್ನು ಹೊಂದಿದ್ದರೆ ಸಮಸ್ಯೆಯಾಗುತ್ತದೆ. ನೀವು ಮಾಡಿದ ಕೆಲಸವನ್ನೆಲ್ಲ ಪ್ರಶ್ನೆ ಮಾಡಿದ್ರೆ, ನಿಮ್ಮ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿದ್ದರೆ ಆ ಸಂಬಂಧ ಉಸಿರುಗಟ್ಟಲು ಶುರುವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.