ನಿನ್ನೆ ವರ್ಲ್ಡ್ ಕಿಸ್ ಡೇ ಅಥವಾ ವಿಶ್ವ ಚುಂಬನ ದಿನ ಇತ್ತು. ಮಿಸ್ ಮಾಡ್ಕೊಂಡ್ರಾ? ಪರವಾಗಿಲ್ಲ. ಇಂದು, ನಾಳೆ ಕೂಡ ನೀವು ಕಿಸ್ ಸಂಭ್ರಮ ಅನುಭವಿಸಬಹುದು. ಮುತ್ತಿನ ಬಗ್ಗೆ ನಿಮಗೆ ನಿಜಕ್ಕೂ ಎಷ್ಟು ಗೊತ್ತು?
ನಿನ್ನೆ ವರ್ಲ್ಡ್ ಕಿಸ್ ಡೇ ಅಥವಾ ವಿಶ್ವ ಚುಂಬನ ದಿನ ಇತ್ತು. ಕಿಸ್ಸಿಗೊಂದು ಅಂತಾರಾಷ್ಟ್ರೀಯ ಮಾನ್ಯತೆ ಕಲ್ಪಿಸಿದ ಮಹಾನುಭಾವನಿಗೆ ನಾವು ಸಲಾಮು ಹೇಳಲೇಬೇಕು. ಮಿಸ್ ಮಾಡ್ಕೊಂಡ್ರಾ? ಪರವಾಗಿಲ್ಲ. ಇಂದು, ನಾಳೆ ಕೂಡ ನೀವು ಕಿಸ್ ಸಂಭ್ರಮ ಅನುಭವಿಸಬಹುದು. ಕಿಸ್ಸೇ ಜೀವನ ಸಂಭ್ರಮ. ಚುಂಬನವೇ ಪ್ರೇಮಿಗಳ ಮೊದಲ ಬಂಡವಾಳ. ಮುತ್ತೇ ಪ್ರೇಮ ಜೀವನದ ಗಮ್ಮತ್ತ. ಅದು ನಮಗೂ ನಿಮಗೂ ಗೊತ್ತು. ಅಥವಾ ಗೊತ್ತು ಅಂದುಕೊಂಡಿದ್ದೇವೆ. ಮುತ್ತಿನ ಬಗ್ಗೆ ನಿಮಗೆ ನಿಜಕ್ಕೂ ಎಷ್ಟು ಗೊತ್ತು?
ನಾವಿಲ್ಲಿ ಸದ್ಯಕ್ಕೆ ಪ್ರೇಮಿಗಳ ನಡುವೆ ವಿನಿಮಯ ಆಗೋ ಮುತ್ತಿನ ಬಗ್ಗೆ ಮಾತ್ರ ಮಾತಾಡೋಣ, ಲವರ್ಸ್ ಅಲ್ಲದೇನೂ ಮುತ್ತಿನ ಗಮ್ಮತ್ತನ್ನು ಅನುಭವಿಸಿಯೇ ಇರುತ್ತೀರಿ ನೀವು. ಅಪ್ಪ- ಅಮ್ಮ- ಮಕ್ಕಳ ನಡುವಿನ ಮುತ್ತು, ಸ್ನೇಹಿತರ ನಡುವಿನ ಆತ್ಮೀಯ ಮುತ್ತು ಇವೆಲ್ಲ ಇದ್ದದ್ದೇ. ಪ್ರೇಮಿಗಳ ನಡುವೆ ಕೂಡ ವೈವಿಧ್ಯಮಯ, ವೆರೈಟಿ ಮುತ್ತುಗಳ ವಿನಿಮಯ ಇರುತ್ತೆ. ನಿಮಗಿದು ಗೊತ್ತಿರಲಿ. ನಾವಿಲ್ಲಿ ಹೇಳಿದ್ದಕ್ಕಿಂತ ಹೆಚ್ಚು ವೆರೈಟಿಯ ಕಿಸ್ಸುಗಳನ್ನು ನೀವು ನೀವೇ ಟ್ರೈ ಮಾಡಬಹುದು. ವಿದ್ ಯುವರ್ ಪ್ರೇಮಿಯ ಪರ್ಮಿಷನ್!
undefined
ಫ್ರೆಂಚ್ ಕಿಸ್: ಇದು ತುಂಬ ಪಾಪ್ಯುಲರ್ ಕಿಸ್ಸು. ಹಾಗಂತ ಇದನ್ನು ಮಾಡೋದು ಸುಲಭ ಅಂತೇನಲ್ಲ. ಈ ಕಲೆಯನ್ನು ಕಲಿಯೋಕೆ ಬಹಳ ಪರಿಶ್ರಮ ಹಾಗೂ ಸಂಗಾತಿಯ ಸಹಕಾರ ಬೇಕು. ಫ್ರೆಂಚ್ ಕಿಸ್ ಅಂದರೆ ಗಾಢವಾಗಿ ತುಟಿಗೆ ತುಟಿ ಮುತ್ತಿಡೋದು, ಎಷ್ಟು ಗಾಢ ಅಂದರೆ ಪರಸ್ಪರರ ನಾಲಗೆಗಳು ಇನ್ನೊಬ್ಬರ ಬಾಯಿಯೊಳಗೆ ಇರುತ್ತೆ!
ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹುಡುಗಿ..?
ಬಟರ್‌ಫ್ಲೈ ಕಿಸ್: ಕಿಸ್ ಕೊಡುವ ಸಂದರ್ಭದಲ್ಲಿ ನಿಮ್ಮಿಬ್ಬರ ಕಣ್ಣಿನ ರೆಪ್ಪೆಗಳು ಪಾತರಗಿತ್ತಿಯ ರೆಕ್ಕೆಗಳಂತೆ ಪಟಪಟ ಬಡಿದುಕೊಳ್ಳಬೇಕು, ಏಕಕಾಲದಲ್ಲಿ. ಇದೇ ಬಟರ್‌ಫ್ಲೈ ಅಥವಾ ಚಿಟ್ಟೆ ಚುಂಬನ. ನೀವಿದನ್ನು ಸಂಗಾತಿಯ ಕೆನ್ನೆ ಮೇಲೂ ಕೊಡಬಹುದು. ದೂರದಿಂದಲೂ ಕೊಡಬಹುದು.
ಸಿಂಗಲ್ ಲಿಪ್ ಕಿಸ್: ಇದು ತುಂಬ ರೊಮ್ಯಾಂಟಿಕ್ಕಾದ, ಗಾಢವಾದ ಮುತ್ತು. ಸಂಗಾತಿಯ ಒಂದು ತುಟಿಯನ್ನು, ಸಾಮಾನ್ಯವಾಗಿ ಕೆಳತುಟಿಯನ್ನು ನಿಮ್ಮ ತುಟಿಗಳ ನಡುವೆ ತೆಗೆದುಕೊಂಡು ಚುಂಬಿಸುವುದು ಅಥವಾ ಹಿತವಾಗಿ ಕಚ್ಚುವುದು. ಇದು ಸಂಗಾತಿಯ ಮೈಯಲ್ಲಿ ರೋಮಾಂಚನ ಅಥವಾ ಬಯಕೆಯ ಅನುಭೂತಿ ಸೃಷ್ಟಿಸಲು ಸಹಾಯಕ.
ಸ್ಪೈಡರ್‌ಮ್ಯಾನ್ ಕಿಸ್: ನೀವು ೨೦೦೨ರಲ್ಲಿ ಬಂದ ಸ್ಪೈಡರ್‌ಮ್ಯಾನ್ ಫಿಲಂ ನೋಡಿದ್ದರೆ ಈ ಕಿಸ್ಸಿನ ಬಗ್ಗೆ ನಿಮಗೆ ಗೊತ್ತಿರಬಹುದು. ಇದರಲ್ಲಿ ಸ್ಪೈಡರ್‌ಮ್ಯಾನ್ ಮೇಲಿನಿಂದ ತಲೆಕೆಳಗಾಗಿ ನೇತಾಡುತ್ತ ಬಂದು, ನಿಂತಿರುವ ಗೆಳತಿಯ ತುಟಿಗಳನ್ನು ಚುಂಬಿಸುತ್ತಾನೆ. ಅಂದರೆ ಇದು ತಲೆಕೆಳಗು ಕಿಸ್ಸು. ಇದರಲ್ಲಿ ಸಂಗಾತಿಯ ಕೆಳತುಟಿ ನಿಮ್ಮ ಮೇಲುತುಟಿಯನ್ನೂ, ಮೇಲುತುಟಿ ನಿಮ್ಮ ಕೆಳತುಟಿಯನ್ನೂ ಸ್ಪರ್ಶಿಸುತ್ತಿರುತ್ತದೆ.
ಕಿವಿ ಮೇಲೆ ಮುತ್ತು: ಕಿವಿ ನಿಮ್ಮ ಸಂವೇದನಾಶೀಲ ಅಂಗಗಳಲ್ಲಿ ಒಂದು. ಕಿವಿಯ ಮೇಲೆ ಮೃದುವಾಗಿ ಮುತ್ತಿಡುವುದು, ಹದವಾಗಿ ಕಚ್ಚುವುದು, ಕೆಳಗಿವಿಯನ್ನು ನಿಮ್ಮ ತುಟಿಗಳ ನಡುವೆ ಇಟ್ಟುಕೊಂಡು ಆಟವಾಡುವುದು, ನಿಮಗೂ ಸಂಗಾತಿಗೂ ಹಿತಕಾರಿಯಾದ ರೋಮಾಂಚನಕಾರಿ ಅನುಭವ. ಇದರಿಂದ ಮುಂದಿನ ಘಟ್ಟಗಳಿಗೆ ಸಲೀಸಾಗಿ ತೆರಳಲು ರಹದಾರಿ!
ಕಿಸ್ಸಿನ ಕಿಮ್ಮತ್ತು ಏನ್ ಗಮ್ಮತ್ತು; ಕೊಟ್ಟು ಬಿಡಿ ಮುತ್ತು!
ಲಿಪ್ ಗ್ಲೋಸ್ ಕಿಸ್: ತುಟಿಯ ಮೇಲೆ ಒಂದಿಷ್ಟು ಲಿಪ್‌ಗ್ಲೋಸ್ ಸವರಿಕೊಂಡು ಮುತ್ತಿಡುವ ರೋಮಾಂಚನವೇ ಬೇರೆ. ಸಂಗಾತಿಯ ಮೈಮೇಲೆ ಮುದ್ರೆಯನ್ನು ಒತ್ತಲು ಇದಕ್ಕಿಂತ ರೋಚಕವಾದ ಸಾಧನ ಬೇರೆ ಏನಿದೆ? ಇದರಲ್ಲಿ ನೀವು ನಿಮ್ಮ ಸಂಗಾತಿಗೆ ಇಷ್ಟವಾದ ಫ್ಲೇವರ್‌ನ ಲಿಪ್ ಗ್ಲೋಸ್ ಅನ್ನು ಸವರಿಕೊಂಡರೆ ಅದು ಇನ್ನೂ ಉದ್ರೇಕಕಾರಿ.
ಎಸ್ಕಿಮೋ ಕಿಸ್: ಇದು ಎಸ್ಕಿಮೋ ಜನರು ನೀಡುವ ಬಗೆಯ ಮುತ್ತು. ಅಲ್ಲಿ ತುಂಬಾ ಚಳಿ ಅಲ್ಲವೇ. ಮುಖವೂ ಕವರ್ ಆಗುವ ಹಾಗೆ ಬಟ್ಟೆ ಧರಿಸಿರುತ್ತಾರೆ. ಮೂಗು ಕಣ್ಣುಗಳು ಮಾತ್ರ ಹೊರಗೆ ಕಾಣಿಸುತ್ತ ಇರುತ್ತದೆ. ಸಂಗಾತಿಗಳು ಇಲ್ಲಿ ಪರಸ್ಪರ ಮೂಗು ತಿಕ್ಕಿಕೊಂಡು ತಮ್ಮ ಪ್ರೇಮವನ್ನು ಪ್ರದರ್ಶಿಸುತ್ತಾರೆ. ಇದೇ ಎಸ್ಕಿಮೋ ಕಿಸ್ಸು.
ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!
ಕೆನ್ನೆಯ ಮೇಲೆ ಮುತ್ತು: ಮೊದಮೊದಲ ಪ್ರೇಮಿಗಳು, ಅಥವಾ ತಮ್ಮ ಪ್ರೇಮವನ್ನು ಈಗಷ್ಟೇ ಆರಂಭಿಸಿರುವವರು ಇದನ್ನು ಟ್ರೈ ಮಾಡಿ ಮುಂದೆ ಹೋಗುತ್ತಾರೆ. ಇದು ಕೆನ್ನೆ ಮೇಲೆ ನೀಡುವ ಬೆಚ್ಚಗಿನ, ಸೌಹಾರ್ದದ ಮುತ್ತು. ಇದಕ್ಕೆ ಸಂಗಾತಿ ಒಪ್ಪಿಗೆ ನೀಡಿದರೆ ಇನ್ನೂ ಸ್ವಲ್ಪ ಮುಂದೆ ಹೋಗಬಹುದು ಎಂದರ್ಥ!
ಹಿಕ್ಕೀ ಕಿಸ್: ಇದು ಕತ್ತಿನ ಮೇಲೆ ನೀಡುವ ಚುಂಬನ. ಇದು ಎಷ್ಟು ಬಲವಾದ ಚುಂಬನ ಎಂದರೆ, ಕತ್ತಿನ ಮೇಲೆ ತುಟಿಗಳ ಕೆಂಪು ಗುರುತನ್ನು ಉಳಿಸುವಷ್ಟು. ಇದನ್ನು ಪಡೆದ ನಂತರ ನೀವು ಎಲ್ಲರ ಮುಂದೆ ಓಡಾಡುವುದೇ ತುಸು ಕಷ್ಟ! ಇದರಲ್ಲೇ ವ್ಯಾಂಪೈರ್ ಕಿಸ್ ಎಂದು ಇನ್ನೊಂದು ಬಗೆ. ಇದು ಕಿಸ್ ಕೊಡುವ ಸಂದರ್ಭದಲ್ಲಿ ಬಲವಾಗಿ, ಗುರುತು ಬೀಳುವಷ್ಟು ಜೋರಾಗಿ ಕಚ್ಚುವುದನ್ನೂ ಸೇರಿಸಿರುತ್ತದೆ.
ಪ್ರೀತಿಸುತ್ತಾನೋ ಇಲ್ಲವೋ? ಗೊಂದಲ ದೂರ ಮಾಡ್ಕೊಳ್ಳಿ..
ಏಂಜೆಲ್ ಕಿಸ್: ಇದು ಭಾವನಾತ್ಮಕವಾದ ಚುಂಬನ. ಯಾವುದಾದರೂ ಭಾವನಾತ್ಮಕ ಕ್ಷಣದಲ್ಲಿ, ವಿದಾಯದ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ರೆಪ್ಪೆ ಮೇಲೆ ಅಥವಾ ಕಣ್ಣಿನ ಸಮೀಪ ಮೃದುವಾಗಿ ಮುತ್ತಿಡುವುದು ಇದು. ನಿಮ್ಮ ಭಾವನೆಯನ್ನು ದಾಟಿಸಲು ಇರುವುದು.