ಅವಳಿಗೆ ನೀವು ಇಷ್ಟವಾಗಿದ್ದೀರಾ? ಕಂಡು ಕೊಳ್ಳೋದು ಹೇಗೆ?

Published : Jan 01, 2023, 05:45 PM IST
ಅವಳಿಗೆ ನೀವು ಇಷ್ಟವಾಗಿದ್ದೀರಾ? ಕಂಡು ಕೊಳ್ಳೋದು ಹೇಗೆ?

ಸಾರಾಂಶ

ಹುಡುಗಿ ನಿಮ್ಮನ್ನು ಪ್ರೀತಿಸುತ್ತಾಳೆಯೇ ಇಲ್ಲವೇ ಎನ್ನುವ ಗೊಂದಲದಲ್ಲಿದ್ದೀರಾ? ಆಕೆಯ ಕೆಲವು ವರ್ತನೆ, ಹಾವಭಾವಗಳ ಮೂಲಕ ಇದನ್ನು ಅರ್ಥೈಸಿಕೊಳ್ಳಬಹುದು. ಸಾಮಾನ್ಯವಾಗಿ ಪ್ರತಿ ಮಹಿಳೆಯರು ಪ್ರೀತಿಯಲ್ಲಿರುವಾಗ ಇಂತಹ ವರ್ತನೆ ತೋರುತ್ತಾರೆ. 

“ಅವಳು ನನ್ನ ಪ್ರೀತಿಸ್ತಾಳೆ, ಅವಳು ನನ್ನನ್ನ ಪ್ರೀತಿಸಲ್ಲʼ…. ಕಾಯಿನ್‌ ಮೇಲೆ ಕೆಳಗೆ ಹಾಕಿದ್ದೇ ಬಂತು, ಉತ್ತರ ಮಾತ್ರ ನಿಖರವಾಗಿ ತಿಳಿಯುವುದಿಲ್ಲ. ಗೊಂದಲ ಮುಂದುವರಿದು ತಲೆ ಚಿತ್ರಾನ್ನವಾಗುವುದು ಗ್ಯಾರೆಂಟಿ. ಅದರ ಬದಲು ಆಕೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವಳು ನಿಮ್ಮನ್ನು ಪ್ರೀತಿಸ್ತಿರೋದೇ ನಿಜವಾದಲ್ಲಿ ಆಕೆಯ ಹಲವು ವರ್ತನೆಗಳ ಮೂಲಕ ಅದನ್ನು ಪತ್ತೆ ಮಾಡಬಹುದು. ಮಹಿಳೆಯರು ಸಾಮಾನ್ಯವಾಗಿ ತಾವು ಪ್ರೀತಿಯಲ್ಲಿರುವಾಗ ಕೆಲವು ಸಹಜವಾದ ವರ್ತನೆ ತೋರುತ್ತಾರೆ. ಕೆಲವೊಮ್ಮೆ ನೀವು ಒಳ್ಳೆಯ ಸ್ನೇಹಿತರಾಗಿರುವ ಸಮಯದಲ್ಲಿ ಅವಳು ನಿಮ್ಮೊಂದಿಗೆ ಉತ್ತಮ ಸ್ನೇಹವನ್ನಷ್ಟೇ ಹೊಂದಿದ್ದಾಳಾ ಅಥವಾ ಪ್ರೀತಿಸುತ್ತಿದ್ದಾಳಾ ಎನ್ನುವ ಸಂದೇಹ ಮೂಡಬಹುದು. ಇಂತಹ ಸಮಯದಲ್ಲಿ ಆಕೆಯ ಮಾತುಗಳು, ಕ್ರಿಯೆ ಹಾಗೂ ದೇಹಭಾಷೆಗಳ ಮೂಲಕ ಅವಳಲ್ಲಿರುವ ಪ್ರೀತಿಯನ್ನು ಸುಲಭವಾಗಿ ಅರಿತುಕೊಳ್ಳಬಹುದು. ತನ್ನ ಪ್ರೀತಿಪಾತ್ರರ ಕುರಿತಾಗಿ ಮಹಿಳೆ ಏನು ಯೋಚಿಸುತ್ತಿದ್ದಾಳೆ ಎನ್ನುವುದನ್ನು ತಿಳಿಯುವುದು ಸುಲಭ. ಕೆಲವು ಹಾವಭಾವಗಳು ಆಕೆಯ ಪ್ರೀತಿಯನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತವೆ. ನೀವು ಉತ್ತಮ ಸ್ನೇಹಿತರಾಗಿದ್ದು, ಎಂದಾದರೊಮ್ಮೆ “ಐ ಲವ್‌ ಯುʼ ಎಂದು ಆಕೆ ಹೇಳುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಆಕೆ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೊಂದೇ ಅಲ್ಲ, ಇನ್ನೂ ಹಲವು ವರ್ತನೆಗಳ ಮೂಲಕ ಆಕೆಯಲ್ಲಿರುವ ಪ್ರೀತಿಯನ್ನು ಅರಿಯಲು ಸಾಧ್ಯ.

•    ನಿಮಗೇ ಅವಳ ಆದ್ಯತೆ (Priority)
ಒಂದೊಮ್ಮೆ ಆಕೆ ನಿಮ್ಮನ್ನು ಪ್ರೀತಿಸುತ್ತಿರುವುದು (Love) ನಿಜವಾದರೆ ನೀವೇ ಆಕೆಯ ಸರ್ವಸ್ವವಾಗಿರುತ್ತೀರಿ. ನಿಮಗೆ ಎಲ್ಲಿಲ್ಲದ ಆದ್ಯತೆ ನೀಡುತ್ತಾಳೆ. ತನ್ನೆಲ್ಲ ಕೆಲಸ (Work) ಕಾರ್ಯಗಳಲ್ಲೂ ನಿಮ್ಮನ್ನು ಭಾಗಿಯಾಗಿಸಲು ಯತ್ನಿಸಬಹುದು. ನಿಮ್ಮ ಸಲಹೆಗಳನ್ನು (Suggestion) ಪದೇ ಪದೆ ಕೇಳಬಹುದು, ನಿಮಗಾಗಿ ಸಮಯ (Time) ನೀಡಲು ಹಿಂದೇಟು ಹಾಕುವುದಿಲ್ಲ. ಅಲ್ಲದೆ, ನಿಮ್ಮ ಸಂಪರ್ಕದಲ್ಲಿ (Contact) ಇದ್ದೇ ಇರುತ್ತಾಳೆ. 

Relationship Tips: ಹುಡುಗರ ಇಂಥಾ ಲುಕ್‌ಗೆ ಹುಡುಗೀರು ಬೇಗ ಅಟ್ರ್ಯಾಕ್ಟ್‌ ಆಗ್ತಾರೆ

•    ಅವಳಿದ್ದಾಗ ಹಾಯಾಗಿರ್ತೀರಿ (Comfort)
ನೀವು ಅವಳಿದ್ದಾಗ ಸಾಕಷ್ಟು ಕಂಫರ್ಟ್‌ ಆಗಿರ್ತೀರಿ ಅಥವಾ ಅವಳೊಂದಿಗೆ ಅತ್ಯುತ್ತಮ ಸ್ನೇಹಭಾವ (Friendship), ಯಾವುದೇ ಕಿರಿಕಿರಿ, ಮುಚ್ಚುಮರೆಯಿಲ್ಲದ ಆತ್ಮೀಯತೆ ಹೊಂದಬಲ್ಲಿರಿ ಎಂದಾದರೆ ಅವಳಿಗೆ ನಿಮ್ಮ ಬಗ್ಗೆ ಪ್ರೀತಿ (Love) ಇರಲು ಸಾಧ್ಯ. ಮಹಿಳೆ ಪ್ರೀತಿಯಲ್ಲಿರುವಾಗ ವಿನೋದದಿಂದ ವರ್ತಿಸುತ್ತಾಳೆ ಹಾಗೂ ನಿಮ್ಮನ್ನು ಪದೇ ಪದೆ ಛೇಡಿಸಬಹುದು. 

•    ನಿಮ್ಮ ಚಿಕ್ಕ ಮಾಹಿತಿಯೂ (Information) ನೆನಪಿನಲ್ಲಿ ಇರುತ್ತೆ
ಆಕೆ ನಿಮ್ಮತ್ತ ಆಕರ್ಷಿತಳಾಗಿದ್ದಾಳೆ (Attract) ಎಂದರೆ ಅವಳು ನಿಮ್ಮ ಕುರಿತಾದ ಚಿಕ್ಕದೊಂದು ಮಾಹಿತಿಯನ್ನೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ. ನೀವು ಏನು ಹೇಳಿದರೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾಳೆ. ಅವಳೊಂದಿಗೆ ಹಂಚಿಕೊಂಡ ಯಾವುದೇ ಮಾಹಿತಿಯನ್ನು ನೆನಪಿನಲ್ಲಿ (Memory) ಇಟ್ಟುಕೊಳ್ಳುತ್ತಾಳೆ. ಅದನ್ನು ಯಾವಾಗಲಾದರೂ ಹೇಳಿ ತೋರ್ಪಡಿಸಿಕೊಳ್ಳುತ್ತಾಳೆ. 

Love Life: ಹೀಗೆಲ್ಲ ಅನಿಸ್ತಿದ್ರೆ ಅವರ ಬಗ್ಗೆ ನಿಮ್ಮಲ್ಲಿ ಪ್ರೀತಿ ಇರೋದು ಗ್ಯಾರೆಂಟಿ!

•    ನಂಬಿಕೆಗೆ (Reliable) ಅರ್ಹಳು
ನಿಮ್ಮ ಕೆಟ್ಟ ಅಥವಾ ಒಳ್ಳೆಯ ಸಮಯದಲ್ಲಿ ಜತೆಗಿರುತ್ತಾಳೆ ಎಂದರೆ ಆಕೆ ನಂಬಿಕೆಗೆ (Loyal) ಅರ್ಹಳಾಗಿದ್ದಾಳೆ. ಅಲ್ಲದೇ, ನಿಮ್ಮ ಬಗ್ಗೆ ಆಳವಾದ ಪ್ರೀತಿ ಹೊಂದಿದ್ದಾಳೆ ಎಂದರ್ಥ. ನಿಮಗೆ ಅಗತ್ಯವಿರುವಾಗ ಆಕೆ ಜತೆಗಿದ್ದು “ನಿನ್ನೊಂದಿಗಿದ್ದೇನೆʼ ಎನ್ನುವ ಸಂದೇಶ ನೀಡುತ್ತಾಳೆ. ಅಲ್ಲದೆ, ನಿಮ್ಮನ್ನು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾಳೆ. 

•    ನಿಮ್ಮ ಬಗ್ಗೆ ಗೌರವ, ಕಾಳಜಿ (Care)
ಮಹಿಳೆಯರು (Women) ನಿಜವಾಗಿಯೂ ಒಬ್ಬರ ಬಗ್ಗೆ ಪ್ರೀತಿ ಹೊಂದಿದ್ದಾಗ ಅವರನ್ನು ಸಾಕಷ್ಟು ಗೌರವದಿಂದ (Respect) ಕಾಣುತ್ತಾರೆ ಹಾಗೂ ಕಾಳಜಿ ಹೊಂದುತ್ತಾರೆ. ನಿಮ್ಮ ಸಮಸ್ಯೆಗಳ ನಿವಾರಣೆಗೆ ಯತ್ನಿಸುತ್ತಾರೆ. ನಿಮ್ಮನ್ನು ಬಾಧಿಸುತ್ತಿರುವ ವಿಚಾರಗಳ ಬಗ್ಗೆ ಹೆಚ್ಚು ವಿಚಾರ ವಿನಿಮಯ ಮಾಡುತ್ತ ನಿಮ್ಮನ್ನು ಹಗುರವಾಗಿಡಲು ಬಯಸುತ್ತಾರೆ. 

•    ಸ್ವಲ್ಪ ಅಸೂಯೆಯೂ (Jealous) ಇಣುಕುತ್ತೆ
ನಿಮ್ಮ ಬಗ್ಗೆ ಆಕೆಗೆ ಪ್ರೀತಿ ಇದೆ ಎಂದಾದಲ್ಲಿ ನೀವು ಬೇರೊಬ್ಬರ ಜತೆ ಹೆಚ್ಚು ಆತ್ಮೀಯವಾಗಿರುವುದನ್ನು ಕಂಡಾಗ ಅಸೂಯೆ ಪಡುತ್ತಾಳೆ. ತೀರ ಗಲಾಟೆ ಮಾಡಿ, ಹೆಚ್ಚುಕಡಿಮೆ ಮಾತಾಡದೆ ಇದ್ದರೂ ಸಣ್ಣ ಪ್ರಮಾಣದಲ್ಲಿ ಜಲಸಿ ಹೊಂದುತ್ತಾಳೆ ಎಂದರೆ ಆಕೆಯದ್ದು ಪ್ರಬುದ್ಧ ಪ್ರೀತಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?