Relationship Tips: ನಿಮ್ಮ ಸುತ್ತ ಇರೋ ನೆಗೆಟಿವ್ ಜನರಿಂದ ಅಂತರ ಕಾಯ್ಕೊಳ್ಳೋದು ಹೇಗೆ?

By Suvarna News  |  First Published Jan 28, 2023, 4:23 PM IST

ನೆಗೆಟಿವ್ ಮನಸ್ಥಿತಿಯ ಜನರು ಎಲ್ಲೆಲ್ಲೂ ಇರುತ್ತಾರೆ. ಕೆಲವರು ತಮ್ಮೊಳಗೆ ಕೊರಗಿ ತಮ್ಮ ಜೀವನವನ್ನು ದುಃಖಮಯವನ್ನಾಗಿ ಮಾಡಿಕೊಂಡರೆ, ಇನ್ನು ಕೆಲವರು ಇನ್ನೊಬ್ಬರ ಪಾಲಿಗೆ ದುಃಸ್ವಪ್ನವಾಗುತ್ತಾರೆ. ಯಾವುದೇ ಮಾದರಿಯ ನೆಗೆಟಿವ್ ವ್ಯಕ್ತಿಗಳಿಗೆ ಪ್ರತಿಕ್ರಿಯೆ ನೀಡದಿರುವುದು ಮುಖ್ಯ. ಅವರಿಂದ ಸುರಕ್ಷಿತ ಭಾವನಾತ್ಮಕ ಅಂತರ ಕಾಯ್ದುಕೊಳ್ಳುವುದು ಅಗತ್ಯ.
 


ಕೆಲವು ಜನರೊಂದಿಗೆ ಮಾತುಕತೆ ನಡೆಸಿದರೆ ಸಾಕುಸಾಕಾಗುತ್ತದೆ. ಅವರಿಂದ ತಪ್ಪಿಸಿಕೊಂಡು ಈಚೆ ಬಂದರೆ ಏನೋ ಗೊತ್ತಿಲ್ಲದೆ ನಮ್ಮೊಳಗೂ ಒಂದು ರೀತಿಯ ಕೋಪ, ಉದ್ವಿಗ್ನತೆ, ಕಿರಿಕಿರಿ ಕಾಡುತ್ತವೆ. ಎಲ್ಲರ ಮೇಲೂ ರೇಗುವಂತಾಗಬಹುದು. ಅಂಥವರೊಂದಿಗೆ ಮಾತುಕತೆ ನಡೆಸುವುದನ್ನು ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದರೂ ಕೆಲವೊಮ್ಮೆ ಸಾಧ್ಯವೇ ಆಗದಿರಬಹುದು. ಅಥವಾ ಅವರೊಂದಿಗೇ ಪ್ರತಿದಿನ ಏಗುವ ಸಂದರ್ಭವೂ ಬರಬಹುದು. ಅವರು ಕೇವಲ ಕಿರಿಕಿರಿಯ ವ್ಯಕ್ತಿಯಾಗಿರುವುದಿಲ್ಲ. ಇನ್ನೊಬ್ಬರಲ್ಲೂ ತಮ್ಮ ನಕಾರಾತ್ಮಕ ಭಾವನೆಗಳನ್ನು ಮೂಡಿಸುವಂಥವರಾಗಿರುತ್ತಾರೆ. ನೀವು ಸಕಾರಾತ್ಮಕವಾಗಿ ಇರುವವರಾಗಿದ್ದರೆ ಅಂತಹ ನಕಾರಾತ್ಮಕ ಮನಸ್ಥಿತಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಭಾರೀ ಕಷ್ಟವಾಗುತ್ತದೆ. ಎಷ್ಟೋ ಬಾರಿ ಈ ಕಾರಣಕ್ಕೇ ದಂಪತಿಗಳು ದೂರವಾಗುತ್ತಾರೆ. ಆದರೆ, ದೂರವಾಗಲೂ ಸಾಧ್ಯವಾಗದೆ, ಅವರೊಂದಿಗೆ ಸಹಜವಾಗಿರಲೂ ಸಾಧ್ಯವಾಗದೆ ಒದ್ದಾಡುವ ಸ್ಥಿತಿ ಬರಬಹುದು.

ಏಕೆಂದರೆ, ಅವರು ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿರಬಹುದು. ಆಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅಗತ್ಯ. ನಕಾರಾತ್ಮಕ ಮನಸ್ಥಿತಿಯವರು ಎಲ್ಲ ಅರ್ಥದಲ್ಲೂ ಕೆಟ್ಟ ಮನುಷ್ಯರೆಂದು ಅರ್ಥವಲ್ಲ. ಆದರೆ, ಅವರು ತಮ್ಮ ಜೀವನಕ್ಕೆ ಮೌಲ್ಯಗಳನ್ನು ತುಂಬಿಕೊಳ್ಳಲು ವಿಫಲರಾಗುತ್ತಾರೆ, ಅಂತಹ ಪ್ರಜ್ಞೆಯೇ ಅವರಿಗೆ ಇರುವುದಿಲ್ಲ. ಕೆಲವರಿಗಂತೂ ಇನ್ನೊಬ್ಬರ ಮುಖ ನೋಡಿ ಚೆಂದನೆಯ ನಗು ನಗಲೂ ಬರುವುದಿಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮೊಳಗೆ ತಾವು ಅಶಾಂತವಾದ, ಎಲ್ಲದರಲ್ಲೂ ಹುಳುಕನ್ನೇ ಕಾಣುವ ಬುದ್ಧಿ ಹೊಂದಿರುತ್ತಾರೆ. ಹೀಗಾಗಿ, ಅವರಿಂದ ನಮ್ಮನ್ನು ಬಚಾವು ಮಾಡಿಕೊಳ್ಳುವ ಅಗತ್ಯ ಖಂಡಿತವಾಗಿರುತ್ತದೆ.

Tap to resize

Latest Videos

ವಿಚಿತ್ರವೆಂದರೆ, ನಕಾರಾತ್ಮಕ ಮನಸ್ಥಿತಿ (Negative Mentality) ಉಂಟುಮಾಡಿಸುವ ಅಂಶ ಯಾವುದು ಎನ್ನುವುದಕ್ಕೆ ಕಾರಣ ಸ್ಪಷ್ಟವಿಲ್ಲ. ಕೆಲವರು ಹುಟ್ಟಾ ನಿರಾಶಾವಾದಿ(Pessimistic) ಆಗಿರುತ್ತಾರೆ. ಬಾಲ್ಯಕಾಲದ ಮನೆಯ ವಾತಾವರಣ ಮಕ್ಕಳ (Children) ಮೇಲೆ ಪರಿಣಾಮ ಬೀರುತ್ತದೆ. ಕೆಲವು ಅನುಭವಗಳಿಂದಲೂ ಜನ ನಕಾರಾತ್ಮಕ ಮನೋಧರ್ಮ ಬೆಳೆಸಿಕೊಳ್ಳಬಹುದು. ನೋವು, ನಿಂದನೆ, ನಿರ್ಲಕ್ಷ್ಯಕ್ಕೆ ಒಳಗಾದವರು ಈ ಗುಣವನ್ನು ಹೆಚ್ಚಾಗಿ ಹೊಂದಿರುವುದು ಕಂಡುಬರುತ್ತದೆ. ಒಟ್ಟಾರೆ, ನಕಾರಾತ್ಮಕತೆ ಎನ್ನುವುದು ಅವರ ವ್ಯಕ್ತಿತ್ವದ (Personality) ಭಾಗವೇ ಆಗಿಬಿಡುತ್ತದೆ. ಅದು ಹೇಗೆ ಆಗಿದ್ದರೂ ಅಂಥವರಿಂದ ನೀವು ಸುರಕ್ಷಿತವಾಗಿರುವುದು (Safe) ಮುಖ್ಯ.

ಮೂಡ್ ಹಾಳಾಗಿದ್ಯಾ? ಈ ಕೆಲ್ಸ ಮಾಡಿದ್ರೆ ನಿಮಿಷದಲ್ಲಿ ಖುಷಿಯಾಗ್ತೀರಿ ನೋಡಿ

•    ನಕಾರಾತ್ಮಕ ಮಾತುಗಳಲ್ಲಿ ಸಿಲುಕಬೇಡಿ: ನಕಾರಾತ್ಮಕ ಮಾತುಗಳಿಗೆ (Speech) ಸಿಲುಕದಿರುವುದು, ಅವರ ಮಾತಿಗೆ ಮಾತು ಬೆಳೆಸದಿರುವುದು ಅತಿ ಅಗತ್ಯ. ಅವರು ಏನೇ ಹೇಳಿಕೊಳ್ಳಲಿ, ಅವರು ಯಾವುದೇ ರೀತಿಯ ಮಾತುಗಳನ್ನಾಡಲೀ ಅವುಗಳಿಗೆ ನೀವು ಬಲಿಯಾಗಬಾರದು. ಹಲವು ರೀತಿಯ ನೆಗಟಿವ್ ಜನರಿರುತ್ತಾರೆ. ಆದರೆ, ಮುಖ್ಯವಾಗಿ ಎರಡು ಅಂಶಗಳ ಬಗ್ಗೆ ಎಚ್ಚರ ಬೇಕು. ಒಂದು, ನೆಗೆಟಿವ್ ಜನರು ನಿಮ್ಮ ಬಗ್ಗೆ ಕೆಟ್ಟದಾಗಿ (Bad) ಮಾತನಾಡಿದರೆ ಅವುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಕೋಪಕ್ಕೆ (Angry) ಒಳಗಾಗಿ ಅವರು ಹೇಳುತ್ತಿರುವ ಕೆಲಸಕ್ಕೆ ಸಿಲುಕಿಕೊಳ್ಳಬೇಡಿ. ಅವರಿಂದ ಭಾವನಾತ್ಮಕ ಅಂತರ (Emotional Distance) ಕಾಯ್ದುಕೊಳ್ಳುವುದು ಅತೀ ಮುಖ್ಯ. ತರ್ಕಬದ್ಧ (Logical) ವಿಚಾರವನ್ನು ಬಯಸದವರೊಂದಿಗೆ ವಾದ ಅನಗತ್ಯ. ಎರಡನೆಯದಾಗಿ, ಅವರು ತಮ್ಮನ್ನು ತಾವು ಹಳಿದುಕೊಳ್ಳಬಹುದು. ಅವರಲ್ಲಿ ಆಶಾವಾದ (Optimistic) ತುಂಬುವ ಯತ್ನ ಮಾಡಬಹುದು. ಆದರೆ, ಅದಕ್ಕೂ ಒಂದು ಮಿತಿ ಇರಲಿ. ಅವರೊಂದಿಗೆ ಮಾನಸಿಕವಾಗಿ ಅಂತರವಿರಲಿ. 

Health Tips : ಬೇರೆಯವರ ಮಾತು ಕೇಳಿ ಮನಸ್ಸು ನೋಯಿಸ್ಕೊಳ್ಳೋರು ನೀವಾ?

•    ಆಂತರಿಕ ಖುಷಿಯತ್ತ (Inner Happiness) ಫೋಕಸ್ ಮಾಡಿ: ನೆಗೆಟಿವ್ ಜನರೊಂದಿಗೆ ಒಡನಾಡುತ್ತಿದ್ದರೂ ನಿಮ್ಮ ಆಂತರಿಕ ಖುಷಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ. ಅವರ ವಿಚಾರಧಾರೆ ನಿಮ್ಮನ್ನು ಕೊಚ್ಚಿಕೊಂಡು ಹೋಗದಿರಲಿ. ನಿಮ್ಮ ಮಕ್ಕಳನ್ನು ಹೊರತುಪಡಿಸಿ ಬೇರ್ಯಾವುದೇ ಮನುಷ್ಯರ ಬಗ್ಗೆ ನಿಮಗೆ ಜವಾಬ್ದಾರಿ ಇರುವುದಿಲ್ಲ ಎನ್ನುವ ಸತ್ಯ ಅರಿತುಕೊಳ್ಳಿ. ಮಕ್ಕಳು ದೊಡ್ಡವರಾಗಿದ್ದರಂತೂ ಅವರ ಜವಾಬ್ದಾರಿ ಅವರಿಗೇ ಇರುತ್ತದೆ. ನೀವು ನೆಗೆಟಿವ್ ವ್ಯಕ್ತಿಗಳಿಗೆ ಸಹಾಯ (Help) ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ನಿಮ್ಮ ಮನಸ್ಥಿತಿ ಹಾಳಾಗದಂತೆ ನೋಡಿಕೊಳ್ಳಬೇಕು. ಆಂತರಿಕ ಖುಷಿ ಬೇರೆ ಯಾರಿಂದಲೋ ದೊರೆಯುವಂಥದ್ದಲ್ಲ. ಧ್ಯಾನ (Meditation), ಮೈಂಡ್ ಫುಲ್ ನೆಸ್ (Mindfulness), ಸ್ವ ಕಾಳಜಿ (Self Care) ಹಾಗೂ ಹೊಸ ಹವ್ಯಾಸಗಳ (Hobbies) ಮೂಲಕ ಅದನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ. 

click me!